5th June: ಒಂದೇ ದಿನದಲ್ಲಿ Nothing, Moto ಮತ್ತು Lava ಸ್ಮಾರ್ಟ್ಫೋನ್ಗಳ ಮೊದಲ ಸೇಲ್! ಬೆಲೆ ಮತ್ತು ಆಫರ್‌ಗಳು?
5ನೇ ಜೂನ್ 2024 ರಂದು ಮೊದಲ ಮಾರಾಟದಲ್ಲಿ Nothing, Moto ಮತ್ತು Lava ಸ್ಮಾರ್ಟ್ಫೋನ್ಗಳ ಭಾರಿ ಡಿಸ್ಕೌಂಟ್
ಬಿಡುಗಡೆಯ ಕೊಡುಗೆಯಾಗಿ ಆಯ್ದ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೇಲೆ 2000 ರೂಗಳ ಡಿಸ್ಕೌಂಟ್
5th June 2024 Sale: ನೀವೊಂದು ಲೇಟೆಸ್ಟ್ 5G ಸ್ಮಾರ್ಟ್ಫೋನ್ ಅನ್ನು ಖರೀದಿಸಲು ಯೋಚಿಸುತ್ತಿದ್ದರೆ ನೀವು ಸರಿಯಾದ ಸ್ಥಳದಲ್ಲಿದ್ದೀರಿ. ಇನ್ನೆರಡು ದಿನಗಳಲ್ಲಿ ಅಂದ್ರೆ 5ನೇ ಜೂನ್ 2024 ರಂದು ಈ ಜನಪ್ರಿಯ ನಥಿಂಗ್, ಮೊಟೊರೊಲಾ ಮತ್ತು ಲಾವಾ ಸ್ಮಾರ್ಟ್ಫೋನ್ ಬ್ರಾಂಡ್ಗಳ ಲೇಟೆಸ್ಟ್ ಆಗಿ ಬಿಡುಗಡೆಯಾದ 5G ಸ್ಮಾರ್ಟ್ಫೋನ್ಗಳಲ್ಲಿ ಆಸಕ್ತಿ ಹೊಂದಿದ್ದರೆ ಅದ್ದೂರಿಯ ಆಫರ್ಗಳೊಂದಿಗೆ ಬೆಸ್ಟ್ ಫೀಚರ್ಗಳನ್ನು ಹೊಂದಿರುವ ಈ Nothing Phone (2a) Special Edition, Moto Edge 50 Fusion, Moto G04s ಮತ್ತು Lava Yuva 5G ಸ್ಮಾರ್ಟ್ಫೋನ್ಗಳು ಒಂದೇ ದಿನದಲ್ಲಿ ಅಂದ್ರೆ 5ನೇ ಜೂನ್ 2024 ರಂದು ಮೊದಲ ಮಾರಾಟಕ್ಕೆ ಬರಲು ಸಿದ್ಧವಾಗಿವೆ. ಇವುಗಳ ಬೆಲೆ ಮತ್ತು ಬಿಡುಗಡೆಯ ಆಫರ್ಗಳೊಂದಿಗೆ ಒಂದಿಷ್ಟು ಹೈಲೈಟ್ ಫೀಚರ್ ಮತ್ತು ವಿಶೇಷಣಗಳನ್ನು ಈ ಕೆಳಗೆ ತಿಳಿಯಿರಿ.
5th June Sale: Nothing Phone (2a) Special Edition
ನಥಿಂಗ್ ಸ್ಮಾರ್ಟ್ಫೋನ್ ಬ್ರಾಂಡ್ ಇತ್ತೀಚೆಗೆ ತನ್ನ Nothing Phone (2a) Special Edition ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು ಈ ಸ್ಮಾರ್ಟ್ಫೋನ್ ಪ್ರಸ್ತುತ 2 ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಈ ನಥಿಂಗ್ ಫೋನ್ 8GB RAM ಮತ್ತು 128GB ಸ್ಟೋರೇಜ್ ರೂಪಾಂತರಗಳಿಗೆ 23,999 ರೂಗಳಾಗಿದ್ದು ಇದರ ಮತ್ತೊಂದು 12GB RAM ಮತ್ತು 256GB ಸ್ಟೋರೇಜ್ ರೂಪಾಂತರಕ್ಕೆ 27,999 ರೂಗಳಾಗಿದೆ. ಅಲ್ಲದೆ ಇದರ ಮೊದಲ ಸೇಲ್ 5ನೇ ಜೂನ್ 2024 ರಂದು ಮೊದಲ ಮಾರಾಟ ಶುರುವಾಗಲಿದ್ದು Axis Bank ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸಿ ಖರೀದಿಸುವವರಿಗೆ 1000 ತ್ವರಿತ ಡಿಸ್ಕೌಂಟ್ ಪಡೆಯುವ ಅವಕಾಶವಿದೆ.
Moto Edge 50 Fusion
ಮೊಟೊರೊಲಾದ ಈ ಲೇಟೆಸ್ಟ್ ಪ್ರೀಮಿಯಂ 5G ಸ್ಮಾರ್ಟ್ ಫೋನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಮಾರಾಟ ವಾಗುತ್ತಿದ್ದು 5th June ಸಹ ಇದರ ಮಾರಾಟಕ್ಕೆ ಸಿದ್ದವಾಗಿದೆ. ಈ ಫೋನ್ ಸಹ ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ. ಇದರ ಮೂಲ ಮಾದರಿ 8GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆಯನ್ನು 22,999 ರುಗಳಾಗಿದ್ದು ಇದರ ಮತ್ತೊಂದು 12GB RAM ಮತ್ತು 256GB ಸ್ಟೋರೇಜ್ ರೂಪಾಂತರಕ್ಕೆ 24,999 ರೂಗಳಾಗಿದೆ. ಇದರ ಬಿಡುಗಡೆಯ ಕೊಡುಗೆಯಾಗಿ ಆಯ್ದ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೇಲೆ 2000 ರೂಗಳ ಡಿಸ್ಕೌಂಟ್ ಪಡೆಯುವ ಅವಕಾಶವಿದೆ.
Moto G04s
ಭಾರತದಲ್ಲಿ Moto G04s ಸ್ಮಾರ್ಟ್ಫೋನ್ 4GB RAM ಮತ್ತು 64GB ಸ್ಟೋರೇಜ್ ರೂಪಾಂತರಕ್ಕೆ 6,999 ರೂಗಳಿಗೆ ಲಭ್ಯವಿದೆ. ಇದು 5ನೇ ಜೂನ್ 2024 ರಿಂದ ಫ್ಲಿಪ್‌ಕಾರ್ಟ್, ಮೊಟೊರೊಲಾ ಇಂಡಿಯಾ ವೆಬ್‌ಸೈಟ್ ಮತ್ತು ಆಯ್ದ ಚಿಲ್ಲರೆ ಅಂಗಡಿಗಳ ಮೂಲಕ ಮಾರಾಟವಾಗಲಿದೆ. ಫೋನ್ ಅನ್ನು ನಾಲ್ಕು ಬಣ್ಣದ ಆಯ್ಕೆಗಳಲ್ಲಿ ನೀಡಲಾಗುತ್ತದೆ – ಕಾನ್ಕಾರ್ಡ್ ಬ್ಲಾಕ್, ಸೀ ಗ್ರೀನ್, ಸ್ಯಾಟಿನ್ ಬ್ಲೂ ಮತ್ತು ಸನ್‌ರೈಸ್ ಆರೆಂಜ್ ಬಣ್ಣಗಳಲ್ಲಿ ಲಭ್ಯವಿದೆ.
Lava Yuva 5G
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile