digit zero1 awards

ಇತ್ತೀಚೆಗೆ ಬಿಡುಗಡೆಯಾದ 6GB RAM ಹೊಂದಿರುವ ಸ್ಮಾರ್ಟ್‌ಫೋನ್ ₹8000 ಕ್ಕಿಂತ ಕಡಿಮೆ ಬೆಲೆಯಲ್ಲಿ ಪಡೆಯಬವುದು

ಇತ್ತೀಚೆಗೆ ಬಿಡುಗಡೆಯಾದ 6GB RAM ಹೊಂದಿರುವ ಸ್ಮಾರ್ಟ್‌ಫೋನ್ ₹8000 ಕ್ಕಿಂತ ಕಡಿಮೆ ಬೆಲೆಯಲ್ಲಿ ಪಡೆಯಬವುದು
HIGHLIGHTS

6GB RAM ಹೊಂದಿರುವ ಹೊಸ ಕೈಗೆಟುಕುವ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ

ಮುಂಬರುವ Tecno Spark ಸರಣಿಯ ಹ್ಯಾಂಡ್‌ಸೆಟ್ ಈ ತಿಂಗಳು ಭಾರತದಲ್ಲಿ ಬಿಡುಗಡೆಯಾಗಲಿದೆ.

ಇತ್ತೀಚೆಗೆ ಘೋಷಿಸಲಾದ ಮತ್ತೊಂದು ಸ್ಪಾರ್ಕ್ ಸರಣಿಯ ಸ್ಮಾರ್ಟ್‌ಫೋನ್, Tecno Spark 8C

Tecno ತನ್ನ ಸ್ಪಾರ್ಕ್ ಸ್ಮಾರ್ಟ್‌ಫೋನ್ ಶ್ರೇಣಿಯ ಭಾಗವಾಗಿ ಈ ತಿಂಗಳ ಕೊನೆಯಲ್ಲಿ 6GB RAM ಹೊಂದಿರುವ ಹೊಸ ಕೈಗೆಟುಕುವ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ ಎಂದು ಕಂಪನಿಯು ಶುಕ್ರವಾರ ದೃಢಪಡಿಸಿದೆ. ಸ್ಮಾರ್ಟ್‌ಫೋನ್‌ನ ವಿಶೇಷಣಗಳನ್ನು ಕಂಪನಿಯು ಇನ್ನೂ ಪ್ರಕಟಿಸಿಲ್ಲ. ಮುಂಬರುವ ಹ್ಯಾಂಡ್‌ಸೆಟ್ "ಫ್ಲ್ಯಾಗ್‌ಶಿಪ್-ಗ್ರೇಡ್" ವಿಶೇಷಣಗಳನ್ನು ಹೊಂದಿರುತ್ತದೆ. ಮತ್ತು ಇದರ ಬೆಲೆ ರೂ 8000 ಕ್ಕಿಂತ ಕಡಿಮೆ ಇರುತ್ತದೆ ಎಂದು ಟೆಕ್ನೋ ಹೇಳುತ್ತದೆ.

ಅಮೆಜಾನ್‌ನಲ್ಲಿ ಮಾರಾಟಕ್ಕೆ ಲಭ್ಯ

ಮುಂಬರುವ Tecno Spark ಸರಣಿಯ ಹ್ಯಾಂಡ್‌ಸೆಟ್ ಈ ತಿಂಗಳು ಭಾರತದಲ್ಲಿ ಬಿಡುಗಡೆಯಾಗಲಿದೆ. ಮತ್ತು Amazon ನಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ. ಗ್ಯಾಜೆಟ್ಸ್ 360 ತನ್ನ ವರದಿಯಲ್ಲಿ ಇದನ್ನು ದೃಢಪಡಿಸಿದೆ. ಸ್ಮಾರ್ಟ್‌ಫೋನ್ 6GB RAM ಅನ್ನು ಹೊಂದಿರುತ್ತದೆ. ಆದರೆ Tecno ಹ್ಯಾಂಡ್‌ಸೆಟ್‌ನ ಪ್ರೊಸೆಸರ್, ಸ್ಕ್ರೀನ್ ಸೈಜ್ ಮತ್ತು ರೆಸಲ್ಯೂಶನ್, ಕ್ಯಾಮೆರಾ ಮತ್ತು ಬ್ಯಾಟರಿ ವಿಶೇಷಣಗಳು ಸೇರಿದಂತೆ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ. ಇತ್ತೀಚೆಗೆ ಘೋಷಿಸಲಾದ ಮತ್ತೊಂದು ಸ್ಪಾರ್ಕ್ ಸರಣಿಯ ಸ್ಮಾರ್ಟ್‌ಫೋನ್ Tecno Spark 8C ಭಾರತದಲ್ಲಿ ಇನ್ನೂ ಬಿಡುಗಡೆಯಾಗಿಲ್ಲ.

ಮೂರು ಟೆಕ್ನೋ ಸ್ಮಾರ್ಟ್‌ಫೋನ್‌ ಬಿಡುಗಡೆ

ಕಳೆದ ತಿಂಗಳು ಕಂಪನಿಯು ಭಾರತದಲ್ಲಿ ಅನುಕ್ರಮವಾಗಿ 12 ಜನವರಿ 19 ಮತ್ತು ಜನವರಿ 20 ರಂದು Tecno Pop 5 LTE, Tecno Pop 5 Pro ಮತ್ತು Tecno Pova Neo ಅನ್ನು ಬಿಡುಗಡೆ ಮಾಡಿತು. Tecno Pop 5 LTE ಮತ್ತು Tecno Pop 5 Pro Android 11 (Go Edition) ನಲ್ಲಿ ರನ್ ಆಗುತ್ತದೆ ಮತ್ತು 6.52-ಇಂಚಿನ HD+ LCD ಡಿಸ್ಪ್ಲೇಯನ್ನು ಹೊಂದಿದೆ. ಆದರೆ Tecno Powa Neo ಒಂದು MediaTek Helio G25 ಚಿಪ್‌ಸೆಟ್ ಅನ್ನು ಹೊಂದಿದೆ. ಮತ್ತು 6.8-ಇಂಚಿನ HD+ ಡಾಟ್‌ನಾಚ್ ಡಿಸ್ಪ್ಲೇಯನ್ನು ಹೊಂದಿದೆ. Tecno Pop 5 LTE 5000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಆದರೆ Tecno Pop 5 Pro ಮತ್ತು Tecno Powa Neo 6000mAh ಬ್ಯಾಟರಿಯೊಂದಿಗೆ ಬರುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo