8GB RAM ಮತ್ತು 5000mAh ಬ್ಯಾಟರಿಯ TECNO SPARK Go 2024 ಬಿಡುಗಡೆ! ಬೆಲೆ ಮತ್ತು ಫೀಚರ್‌ಗಳೇನು?

8GB RAM ಮತ್ತು 5000mAh ಬ್ಯಾಟರಿಯ TECNO SPARK Go 2024 ಬಿಡುಗಡೆ! ಬೆಲೆ ಮತ್ತು ಫೀಚರ್‌ಗಳೇನು?
HIGHLIGHTS

ಅತಿ ಕಡಿಮೆ ಬೆಲೆಯ TECNO SPARK Go 2024 ಎಂಬ ಲೇಟೆಸ್ಟ್ 4G ಸ್ಮಾರ್ಟ್ಫೋನ್ ಅನ್ನು ಬಿಡುಗಡೆಗೊಳಿಸಿದೆ.

ಪ್ರಸ್ತುತ ಈ TECNO SPARK Go 2024 ಸ್ಮಾರ್ಟ್ಫೋನ್ ಕೇವಲ ಮಲೇಷಿಯಾ ಮತ್ತು ಫಿಲಿಪೈನ್ಸ್‌ನಲ್ಲಿ ಮಾತ್ರ ಲಭ್ಯವಿದೆ.

ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಟೆಕ್ನೋ (Tecno) ಬಗ್ಗೆ ನಿಮಗೆ ತಿಳಿದಿಲ್ಲದಿದ್ದರೆ ಕಂಪನಿಯು ಮುಖ್ಯವಾಗಿ ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ಹೆಸರುವಾಸಿಯಾಗಿದೆ. ಈ ಕಂಪನಿಯು ಬಜೆಟ್ ಖರೀದಿದಾರರನ್ನು ಗುರಿಯಾಗಿಸಿಕೊಂಡು ಈಗ ಅತಿ ಕಡಿಮೆ ಬೆಲೆಯ TECNO SPARK Go 2024 ಎಂಬ ಲೇಟೆಸ್ಟ್ 4G ಸ್ಮಾರ್ಟ್ಫೋನ್ ಅನ್ನು ಬಿಡುಗಡೆಗೊಳಿಸಿದೆ. ನೀವು ಬಜೆಟ್ ವಿಭಾಗದ ಸ್ಮಾರ್ಟ್‌ಫೋನ್‌ಗಾಗಿ ಹುಡುಕುತ್ತಿದ್ದರೆ ಈ ಸ್ಮಾರ್ಟ್‌ಫೋನ್ ಅನ್ನು ಚೆಕ್‌ಔಟ್ ಮಾಡಲು ನಾವು ನಿಮಗೆ ಶಿಫಾರಸು ಮಾಡುತ್ತೇವೆ.

Also Read: OnePlus AI Music Studio: ಕೆಲವೇ ನಿಮಿಷಗಳಲ್ಲಿ ನಿಮ್ಮದೇ ಹಾಡನ್ನು ರಚಿಸಿ ಅತ್ಯಾಕರ್ಷಕ ಬಹುಮಾನ ಗೆಲ್ಲಿ!

ಕೈಗೆಟಕುವ ಬೆಲೆಗೆ TECNO SPARK Go 2024 ಬಿಡುಗಡೆ

ನಾವು ಈಗಾಗಲೇ ಮೇಲೆ ಹೇಳಿದಂತೆ ಈ ಟೆಕ್ನೋ ತನ್ನ ಇತ್ತೀಚಿನ ಮಾದರಿಯನ್ನು ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲೂ ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಕಂಪನಿಯು ಈ ಮಾದರಿಯನ್ನು TECNO SPARK Go 2024 ಹೆಸರಿನಲ್ಲಿ ಪರಿಚಯಿಸುವ ನಿರೀಕ್ಷೆಗಳಿವೆ. ಮಾಧ್ಯಮ ವರದಿಗಳನ್ನು ನಂಬುವುದಾದರೆ ಇದು ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ ಆಗಿದ್ದು ಇದನ್ನು ಎಂಟ್ರಿ ಲೆವೆಲ್ ಸ್ಪೆಕ್ಸ್‌ನೊಂದಿಗೆ ಮಾತ್ರ ಪರಿಚಯಿಸಲಾಗಿದೆ. ಪ್ರಸ್ತುತ ಈ ಸ್ಮಾರ್ಟ್ಫೋನ್ ಕೇವಲ ಮಲೇಷಿಯಾ ಮತ್ತು ಫಿಲಿಪೈನ್ಸ್‌ನಲ್ಲಿ ಮಾತ್ರ ಲಭ್ಯವಿದೆ.

TECNO SPARK Go 2024 ವಿಶೇಷಣಗಳು:

ನೀವು ಸ್ಪೆಕ್ಸ್ ಶೀಟ್ ಅನ್ನು ನೋಡಿದರೆ ನೀವು ಈ ಸ್ಮಾರ್ಟ್‌ಫೋನ್‌ನಲ್ಲಿ 6.6 ಇಂಚಿನ LCD ಡಿಸ್ಪ್ಲೇಯೊಂದಿಗೆ UniSoC T606 ಚಿಪ್‌ಸೆಟ್ ಅನ್ನು ನೋಡುತ್ತೀರಿ. ಈ ಡಿಸ್ಪ್ಲೇ 90Hz ವೇಗದ ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ ಮತ್ತು ಇದರಲ್ಲಿ ನೀವು Apple 14 ಸರಣಿಯ ಮಾದರಿಯಲ್ಲಿ ನೀಡಿರುವಂತೆ ಡೈನಾಮಿಕ್ ಐಲ್ಯಾಂಡ್‌ನಂತಹ ವೈಶಿಷ್ಟ್ಯವನ್ನು ಸಹ ಪಡೆಯುತ್ತೀರ.

TECNO SPARK Go 2024

TECNO SPARK Go 2024 ಸ್ಟೋರೇಜ್ ಮತ್ತು ಕ್ಯಾಮೆರಾ:

ನಾವು ಸ್ಟೋರೇಜ್ ಸೆಟಪ್ ಅನ್ನು ನೋಡಿದರೆ ಕಂಪನಿಯು ಈ ಸ್ಮಾರ್ಟ್‌ಫೋನ್‌ನಲ್ಲಿ 8GB RAM ಜೊತೆಗೆ 128GB ಇಂಟರ್ನಲ್ ಸ್ಟೋರೇಜ್ ಅನ್ನು ಬೆಂಬಲಿಸಿದೆ. ನೀವು ಬಯಸಿದರೆ ನೀವು ವಾಸ್ತವಿಕವಾಗಿ ಅದರ RAM ಅನ್ನು 8GB ವರೆಗೆ ವಿಸ್ತರಿಸಬಹುದು. ಅದೇ ಸಮಯದಲ್ಲಿ ನೀವು ಅದರ ಕ್ಯಾಮೆರಾ ಸೆಟಪ್ ಅನ್ನು ನೋಡಿದರೆ ನಿಮಗೆ ಅದರ ಹಿಂಭಾಗದಲ್ಲಿ 13MP ಪ್ರೈಮರಿ ಕ್ಯಾಮೆರಾವನ್ನು ನೀಡಲಾಗಿದೆ. ಅಲ್ಲದೆ ಇದರ ಮುಂಭಾಗದಲ್ಲಿ ಸೆಲ್ಫಿಗಳಿಗಾಗಿ 8MP ಶೂಟರ್ ಅನ್ನು ನೀಡಲಾಗಿದೆ.

TECNO SPARK Go 2024 ಬ್ಯಾಟರಿ ಮತ್ತು ಫೀಚರ್ಗಳು:

ಈ ಸ್ಮಾರ್ಟ್‌ಫೋನ್‌ನಲ್ಲಿ ನಿಮಗೆ Tecno Spark Go 2024 ಸ್ಮಾರ್ಟ್ಫೋನ್ 10W ವೈರ್ಡ್ ಚಾರ್ಜಿಂಗ್‌ನೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ. ಇದು USB ಟೈಪ್-C ಪೋರ್ಟ್ ಅನ್ನು ಪಡೆಯುತ್ತದೆ. ಇದರಲ್ಲಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್‌ನೊಂದಿಗೆ ಹೊಂದಿದೆ. ಡ್ಯುಯಲ್-ಸಿಮ್-ಬೆಂಬಲಿತ ಫೋನ್ 4G, ವೈಫೈ, ಬ್ಲೂಟೂತ್ ಮತ್ತು GPS ಸಂಪರ್ಕವನ್ನು ಸಹ ನೀಡುತ್ತದೆ. ಇದರಲ್ಲಿ ಸ್ಟಿರಿಯೊ ಸ್ಪೀಕರ್‌ಗಳ ಬೆಂಬಲವನ್ನು ಸಹ ಪಡೆಯುತ್ತೀರಿ.

TECNO SPARK Go 2024 ಬೆಲೆ ಮತ್ತು ಲಭ್ಯತೆ:

ಟೆಕ್ನೋ ಕಂಪನಿಯ ಈ ಲೇಟೆಸ್ಟ್ 4G ಸ್ಮಾರ್ಟ್‌ಫೋನ್‌ನ ಬೆಲೆಯನ್ನು ನೋಡುವುದುದಾದರೆ ಇದರ ಫಿಲಿಪೈನ್ಸ್‌ ವೆಬ್‍ಸೈಟ್‍ನಲ್ಲಿ ಅದೇ ಆಯ್ಕೆಯನ್ನು PHP 3,899 (ಸುಮಾರು ರೂ. 5,900) ನಿಂದ ಆರಂಭವಾಗಲಿದೆ. ಈ ಲೇಟೆಸ್ಟ್ ಫೋನ್ 25ನೇ ನವೆಂಬರ್ 2023 ರಿಂದ ಪ್ರಸ್ತುತ ಈ ಸ್ಮಾರ್ಟ್ಫೋನ್ ಕೇವಲ ಮಲೇಷಿಯಾ ಮತ್ತು ಫಿಲಿಪೈನ್ಸ್‌ನಲ್ಲಿ ಮಾತ್ರ ಲಭ್ಯವಿದೆ. ಸದ್ಯಕ್ಕೆ ಸ್ಮಾರ್ಟ್ಫೋನ್ ಭಾರತದಲ್ಲಿ ಲಭ್ಯವಿಲ್ಲ ಅಲ್ಲದೆ ಇದರ ಬಗ್ಗೆ ಇನ್ನು ಯಾವುದೇ ಅಧಿಕೃತವಾಗಿ ಮಾಹಿತಿಗಳಿಲ್ಲ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo