5000mAh ಬ್ಯಾಟರಿ ಮತ್ತು Powerful ಪ್ರೊಸೆಸರ್‌ನೊಂದಿಗೆ Tecno Spark Go 2024 ಬಿಡುಗಡೆ

5000mAh ಬ್ಯಾಟರಿ ಮತ್ತು Powerful ಪ್ರೊಸೆಸರ್‌ನೊಂದಿಗೆ Tecno Spark Go 2024 ಬಿಡುಗಡೆ
HIGHLIGHTS

Tecno Spark Go 2024 ಮೊದಲ ಮಾರಾಟ 7ನೇ ಡಿಸೆಂಬರ್ 2023 ರಂದು ಮಧ್ಯಾಹ್ನ 12:00 ಗಂಟೆಯಿಂದ ಪ್ರಾರಂಭ

Tecno Spark Go 2024 ಫೋನ್‌ನ ಮೊದಲ ಮಾರಾಟದಲ್ಲಿ ಕೇವಲ 6,699 ರೂಗಳಿಗೆ ಖರೀದಿಸಬಹುದು.

ಚೈನೀಸ್ ಸ್ಮಾರ್ಟ್‌ಫೋನ್ ಬ್ರಾಂಡ್ ಟೆಕ್ನೋ ಕಂಪನಿಯ ಹೊಂಚ ಹೊಸ ಸ್ಮಾರ್ಟ್‌ಫೋನ್ Tecno SPARK GO 2024 ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಬಿಡುಗಡೆಗೊಳಿಸಿದೆ. ಫೋನ್ ಬೆಲೆ 7,499 ರೂಗಳೊಂದಿಗೆ 3GB RAM ಮತ್ತು 64GB ಸ್ಟೋರೇಜ್ ರೂಪಾಂತರಗಳಲ್ಲಿ ಬರುತ್ತದೆ. ಆದರೆ ಇದರ ಮೊದಲ ಮಾರಾಟ 7ನೇ ಡಿಸೆಂಬರ್ 2023 ರಂದು ಮಧ್ಯಾಹ್ನ 12:00 ಗಂಟೆಯಿಂದ ಪ್ರಾರಂಭವಾಗಲಿದ್ದು ಫೋನ್‌ನ ಮೊದಲ ಮಾರಾಟದ ಸಲುವಾಗಿ ಇದನ್ನು ಕೇವಲ 6,699 ರೂಗಳಿಗೆ ಖರೀದಿಸಬಹುದು. ಈ Tecno Spark Go 2023 ಅನ್ನು ಗ್ರಾಹಕರು ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್ ಮತ್ತು ಹತ್ತಿರದ ರಿಟೇಲ್ ಸ್ಟೋರ್‌ಗಳಿಂದ ಫೋನ್ ಖರೀದಿಸಲು ಸಾಧ್ಯವಾಗುತ್ತದೆ.

Also Read: 84 ದಿನಗಳ ವ್ಯಾಲಿಡಿಟಿಯೊಂದಿಗೆ ದಿನಕ್ಕೆ 2GB ಡೇಟಾ ಮತ್ತು OTT ನೀಡುವ Reliance Jio ಬೆಸ್ಟ್ ಪ್ಲಾನ್!

TECNO SPARK GO 2024 ವಿಶೇಷಣಗಳು

Tecno Spark GO 2024 ಮಾದರಿಯು 6.56 ಇಂಚಿನ ಡಾಟ್-ಇನ್ ಡಿಸ್ಪ್ಲೇ ಜೊತೆಗೆ ಪಾಂಡ ಸ್ಕ್ರೀನ್ 90Hz ರಿಫ್ರೆಶ್ ರೇಟ್‌ನೊಂದಿಗೆ ಬರುತ್ತದೆ. ಇದರಲ್ಲಿ ಐಫೋನ್ 14 ಪ್ರೊ ಮಾದರಿಗಳು ಹೊಂದಿರುವ ಡೈನಾಮಿಕ್ ಐಲ್ಯಾಂಡ್‌ಗೆ ನಾಚ್ ಅನ್ನು ಹೊಂದಿವೆ. ಈ ಹೊಸ ಫೋನ್‌ನಲ್ಲಿರುವ ಡೈನಾಮಿಕ್ ಪೋರ್ಟ್ ಸಾಫ್ಟ್‌ವೇರ್ ವೈಶಿಷ್ಟ್ಯವು ಸೆಲ್ಫಿ ಕ್ಯಾಮೆರಾ ಕಟೌಟ್‌ನ ಸುತ್ತಲೂ ನೋಟಿಫಿಕೇಶನ್ ಪ್ರದರ್ಶಿಸುತ್ತದೆ. ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಯುನಿಸಾಕ್ T606 ಚಿಪ್‌ಸೆಟ್‌ನಲ್ಲಿ ಗರಿಷ್ಠ 8GB RAM ನೊಂದಿಗೆ ಜೋಡಿಸಲಾಗಿದೆ. ಫೋನ್ DTS ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳೊಂದಿಗೆ ಬರುತ್ತದೆ.

TECNO SPARK GO 2024

ಕ್ಯಾಮೆರಾ ವಿಶೇಷತೆಗಳ ವಿಷಯದಲ್ಲಿ Tecno Spark Go 2024 ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಇದರಲ್ಲಿ 13MP ಪ್ರೈಮರಿ ಸೆನ್ಸರ್ ಮತ್ತು ಡ್ಯುಯಲ್ ಫ್ಲ್ಯಾಷ್ ಜೊತೆಗೆ AI ಲೆನ್ಸ್ ಸೇರಿವೆ. ವೀಡಿಯೊ ಕರೆಗಳು ಮತ್ತು ಸೆಲ್ಫಿಗಳಿಗಾಗಿ 8MP ಮುಂಭಾಗದ ಕ್ಯಾಮೆರಾ ಇದೆ. ಸ್ಮಾರ್ಟ್‌ಫೋನ್ ಬೃಹತ್ 5000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಫೋನ್ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಸಹ ಹೊಂದಿದ್ದು HiOS 13 ಆಧಾರಿತ ಆಂಡ್ರಾಯ್ಡ್ 13 (Go Edition) ನಲ್ಲಿ ಕಾರ್ಯನಿರ್ವಹಿಸುತ್ತದೆ.

TECNO SPARK GO 2024 ಬೆಲೆ ಮತ್ತು ಲಭ್ಯತೆ

Tecno Spark Go 2024 ಹ್ಯಾಂಡ್‌ಸೆಟ್ 3GB RAM ಮತ್ತು 64GB ಸ್ಟೋರೇಜ್ ಹೊಂದಿರುವ ರೂಪಾಂತರಕ್ಕೆ ₹6,699 ರೂಗಳಾಗಿವೆ. ಇದರ 8GB RAM + 64GB ಸ್ಟೋರೇಜ್ ಮತ್ತು 8GB RAM + 128GB ಸ್ಟೋರೇಜ್ ಹೊಂದಿರುವ ಮಾದರಿಗಳ ಬೆಲೆಗಳನ್ನು ಮಾರಾಟದ ನಂತರ ಹೇಳುವ ನಿರೀಕ್ಷೆಗಳಿವೆ. ಪ್ರಸ್ತುತ ಈ ಸ್ಮಾರ್ಟ್ಫೋನ್ ಗ್ರಾವಿಟಿ ಬ್ಲಾಕ್ ಮತ್ತು ಮಿಸ್ಟರಿ ವೈಟ್ ಬಣ್ಣ ಆಯ್ಕೆಗಳಲ್ಲಿ ಬರುತ್ತದೆ. ಮತ್ತು ಅಮೆಜಾನ್ ಮತ್ತು ಇತರ ಪ್ರಮುಖ ಚಿಲ್ಲರೆ ಅಂಗಡಿಗಳ ಮೂಲಕ 7ನೇ ಡಿಸೆಂಬರ್ 2023 ರಿಂದ ಖರೀದಿಗೆ ಲಭ್ಯವಿರುತ್ತದೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo