ಚೀನಾದ ಸ್ಮಾರ್ಟ್‌ಫೋನ್ ಬ್ರಾಂಡ್ ಟೆಕ್ನೋ ಹೊಸ ಬಜೆಟ್ ಸ್ಮಾರ್ಟ್‌ಫೋನ್ TECNO Spark 20C ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಕೈಗೆಟಕುವ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ಫೋನ್ 8GB ಇನ್‌ಸ್ಟಾಲ್ RAM ಅನ್ನು ಹೊಂದಿದೆ. ಇದನ್ನು ವರ್ಚುವಲ್ RAM ಫೀಚರ್‌ನ ಸಹಾಯದಿಂದ 16GB ವರೆಗೆ ವಿಸ್ತರಿಸಬಹುದು. ಇದರಲ್ಲಿ ಸುಂದರವಾದ ವಿನ್ಯಾಸದ ಹೊರತಾಗಿ ಈ ಸ್ಮಾರ್ಟ್ಫೋನ್ ಪವರ್ಫುಲ್ ಫೀಚರ್‌ಗಳು ಮತ್ತು ವಿಶೇಷಣಗಳನ್ನು ಹೊಂದಿದೆ. TECNO Spark 20C ಮುಂದಿನ ತಿಂಗಳ ಮೊದಲ ವಾರದಿಂದ ಇದರ ಮಾರಾಟ ಆರಂಭವಾಗಲಿದೆ.
Also Read: Best 4K Smart TVs: ಇವೇ ನೋಡಿ ಭಾರತದಲ್ಲಿ ₹25,000 ರೂಗಳ ಟಾಪ್ 5 ಲೇಟೆಸ್ಟ್ ಸ್ಮಾರ್ಟ್ ಟಿವಿಗಳು!
ಕ್ಯಾಮೆರಾ ವಿಶೇಷಣಗಳ ಕುರಿತು ಮಾತನಾಡುವುದಾದರೆ ಅದರ ಹಿಂದಿನ ಪ್ಯಾನೆಲ್‌ನಲ್ಲಿ ಡುಯಲ್ ಕ್ಯಾಮೆರಾದ ಕ್ಯಾಮೆರಾ ಸೆಟಪ್ ಲಭ್ಯವಿದೆ. ಇದರಲ್ಲಿ 50MP ಪ್ರೈಮರಿ ವೈಡ್ ಲೆನ್ಸ್ 1/2.8 ಅಪರ್ಚರ್‌ನೊಂದಿಗೆ 0.08 MP ಲೆನ್ಸ್ ಹೊಂದಿದೆ. ಇದು ನಿಮಗೆ FB, WhatsApp ಮತ್ತು Insta ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಬಹುದಾದ ಅತ್ಯುತ್ತಮ ಇಮೇಜ್ ಮತ್ತು ವಿಡಿಯೋಗಳನ್ನು ನೀಡುತ್ತದೆ. ಸ್ಮಾರ್ಟ್ಫೋನ್ ಮುಂಭಾಗದ ಡಿಸ್ಪ್ಲೇಯಲ್ಲಿ ಡೈನಾಮಿಕ್ ಒಳಗೆ ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 8MP ಡುಯಲ್ ಫ್ಲಾಶ್ ಜೊತೆಗೆ ಕ್ಯಾಮೆರಾವನ್ನು ಹೊಂದಿದೆ.
ಹೊಸ ಬಜೆಟ್ ಫೋನ್‌ನಲ್ಲಿ 6.6 ಇಂಚಿನ IPS LCD ಡಿಸ್ಪ್ಲೇಯನ್ನು ನೀಡಿದೆ. ಇದು 720×1612 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಹೊರತುಪಡಿಸಿ 90Hz ರಿಫ್ರೆಶ್ ದರವನ್ನು ನೀಡುತ್ತದೆ. ಡಿಸ್ಪ್ಲೇ ನಿಮಗೆ ವಿಡಿಯೋ ಮತ್ತು ಸಿನಿಮಾ ನೋಡುವಲ್ಲಿ ಅತ್ಯುತ್ತಮ ಅನುಭವನ್ನು ನೀಡುತ್ತದೆ.
ಈ ಸ್ಮಾರ್ಟ್ಫೋನ್ MediaTek Helio P35 ಪ್ರೊಸೆಸರ್ ಮತ್ತು 128GB ಸ್ಟೋರೇಜ್‌ನೊಂದಿಗೆ ಒಟ್ಟು 16GB RAM (8GB ಇನ್‌ಸ್ಟಾಲ್ + 8GB ವರ್ಚುವಲ್) ಹೊಂದಿದೆ. ಈ ಸ್ಮಾರ್ಟ್‌ಫೋನ್ Android 13 ಆಧಾರಿತ HiOS ಸಾಫ್ಟ್‌ವೇರ್ ಸ್ಕಿನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್ ಮ್ಯಾಜಿಕ್ ಸ್ಕಿನ್ ಗ್ರೀನ್, ಆಲ್ಪೆಂಗ್ಲೋ ಗೋಲ್ಡ್, ಮಿಸ್ಟರಿ ವೈಟ್ ಮತ್ತು ಗ್ರಾವಿಟಿ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.
ಅಲ್ಲದೆ ಅದರ 5000mAh ಸಾಮರ್ಥ್ಯದ ಬ್ಯಾಟರಿಯು 18W ಚಾರ್ಜಿಂಗ್ ಬೆಂಬಲವನ್ನು ಪಡೆಯುತ್ತದೆ. ಇದು ಯುಎಸ್‌ಬಿ ಟೈಪ್-ಸಿ ಕನೆಕ್ಟಿವಿಟಿ ಮತ್ತು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ. ಸ್ಮಾರ್ಟ್ಫೋನ್ FM ಹೊಂದಿದ್ದು ಸೈಡ್ ಮೊಂಟೆಡ್ ಫಿಂಗರ್ ಪ್ರಿಂಟ್ ಸೆನ್ಸರ್ ಅನ್ನು ಸಹ ನೀಡಲಾಗಿದೆ.
ಕಂಪನಿಯು ರೂ 8,999 ಬೆಲೆಯಲ್ಲಿ ಹೊಸ ಸ್ಮಾರ್ಟ್‌ಫೋನ್ ಏಕೈಕ RAM ಮತ್ತು ಸ್ಟೋರೇಜ್ ರೂಪಾಂತರವನ್ನು ತಂದಿದೆ. ಅದರ ಮೇಲೆ 1000 ರೂಪಾಯಿಗಳ ಫ್ಲಾಟ್ ರಿಯಾಯಿತಿಯನ್ನು ನೀಡಲಾಗುತ್ತಿದೆ. ಅದರ ನಂತರ ಅದರ ಬೆಲೆ ಕೇವಲ 7,999 ರೂಪಾಯಿಗಳಿಗೆ ಕಡಿಮೆಯಾಗುತ್ತದೆ. ಮಾರ್ಚ್ 5 ರಿಂದ ಅಮೆಜಾನ್‌ನಲ್ಲಿ ಫೋನ್‌ನ ಮಾರಾಟ ಪ್ರಾರಂಭವಾಗಲಿದೆ. ಗ್ರಾಹಕರು ಹೊಸ Tecno ಫೋನ್ ಖರೀದಿಸಿದರೆ ಅವರು 5,604 ಮೌಲ್ಯದ ಉಚಿತ OTTplay ವಾರ್ಷಿಕ ಚಂದಾದಾರಿಕೆಯನ್ನು ಸಹ ಪಡೆಯುತ್ತಾರೆ ಇದರಿಂದ ಅವರು ಅನೇಕ OTT ಕಂಟೆಂಟ್‌ಗಳನ್ನು ವೀಕ್ಷಿಸಬಹುದು.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ ವಾಟ್ಸಾಪ್ Channel View ಮಾಡಿ ಸೇರಿಕೊಳ್ಳಿ!