108MP ಕ್ಯಾಮೆರಾದ Tecno Spark 20 Pro 5G ಬಿಡುಗಡೆ! ಬೆಲೆಯೊಂದಿಗೆ ಇದರ ವಿಶೇಷಣಗಳನ್ನು ಪರಿಶೀಲಿಸಿ!
Tecno Spark 20 Pro 5G ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ.
Tecno Spark 20 Pro 5G ಬಿಡುಗಡೆಯ ರಿಯಾಯಿತಿಯೊಂದಿಗೆ 13,999 ರೂಗಳಾಗಿದೆ.
Tecno Spark 20 Pro 5G ಫೋನ್ 11ನೇ ಜುಲೈ 2024 ರಿಂದ ಅಮೆಜಾನ್‌ನಲ್ಲಿ ಮಾರಾಟವಾಗಲಿದೆ.
ಭಾರತದಲ್ಲಿ ಕೈಗೆಟಕುವ ಬೆಲೆಗೆ ಹೆಸರಾಂತ ಸ್ಮಾರ್ಟ್‌ಫೋನ್ ತಯಾರಕರಾಗಿರುವ ಟೆಕ್ನೋ (Tecno) ಈಗ ಮತ್ತೊಂದು ಲೇಟೆಸ್ಟ್ 5G ಸ್ಮಾರ್ಟ್ಫೋನ್ ಅನ್ನು ಬಿಡುಗಡೆಗೊಳಿಸಿದ್ದಾರೆ. ಇದನ್ನು ಕಂಪನಿ Tecno Spark 20 Pro 5G ಎಂದು ಹೆಸರಿಸಿದ್ದು ಭಾರತೀಯ ಬಿಡುಗಡೆಯು ಟೆಕ್ ಪ್ರಪಂಚದಾದ್ಯಂತ ಸದ್ದು ಮಾಡುತ್ತಿದೆ. ಅಂತಿಮವಾಗಿ ಇಂದು ಈ ಸ್ಮಾರ್ಟ್‌ಫೋನ್ ಪ್ರಬಲ ವೈಶಿಷ್ಟ್ಯಗಳೊಂದಿಗೆ ಭಾರತದಲ್ಲಿ ಬಿಡುಗಡೆಯಾಗಿದೆ. ಈ Tecno Spark 20 Pro 5G ಸ್ಮಾರ್ಟ್ಫೋನ್ 108MP ಪ್ರೈಮರಿ ಕ್ಯಾಮೆರಾವನ್ನು ಹೊಂದಿದೆ. ಆದ್ದರಿಂದ ಮೈಕ್ರೋ SD ಕಾರ್ಡ್ ಸಹಾಯದಿಂದ ಫೋನ್‌ನ 1TB ವರೆಗೆ ಸ್ಟೋರೇಜ್ ವಿಸ್ತರಿಸಬಹುದು. ಈ ಮೂಲಕ Tecno Spark 20 Pro 5G ಸ್ಮಾರ್ಟ್‌ಫೋನ್ ಬೆಲೆಯೊಂದಿಗೆ ಇದರ ವಿಶೇಷಣಗಳನ್ನು ಪರಿಶೀಲಿಸಿ!
Also Read: ಈಗ ಪ್ರೈಮ್ ವಿಡಿಯೋ, ZEE5 ಮತ್ತು SonyLiv ನೀಡುತ್ತಿದ್ದ ಈ ಬೆಸ್ಟ್ Reliance Jio ಯೋಜನೆ ಬಂದ್!
ಭಾರತದಲ್ಲಿ Tecno Spark 20 Pro 5G ಬೆಲೆ ಮತ್ತು ಆಫರ್ಗಳೇನು?
ಭಾರತದಲ್ಲಿ ಇತ್ತೀಚಿನ Tecno Spark 20 Pro 5G ಸ್ಮಾರ್ಟ್‌ಫೋನ್ ಬಿಡುಗಡೆಯ ರಿಯಾಯಿತಿಯೊಂದಿಗೆ 13,999 ರೂ. ಅಂದರೆ ಫೋನ್‌ನ ಆರಂಭಿಕ ಬೆಲೆಯನ್ನು 15,999 ರೂ.ಗಳಿಗೆ ನಿಗದಿಪಡಿಸಲಾಗಿದೆ. ಇದರಲ್ಲಿ ರೂ.2,000 ಬ್ಯಾಂಕ್ ರಿಯಾಯಿತಿ ನೀಡಲಾಗುತ್ತಿದೆ. ಜನಪ್ರಿಯ ಇ-ಕಾಮರ್ಸ್ ವೆಬ್‌ಸೈಟ್ ಅಮೆಜಾನ್‌ನಲ್ಲಿ 11ನೇ ಜುಲೈ 2024 ರಿಂದ ಸ್ಮಾರ್ಟ್‌ಫೋನ್ ಮೊದಲ ಮಾರಾಟವಾಗಲಿದೆ.
ಟೆಕ್ನೋ Spark 20 Pro 5G ಫೀಚರ್ ಮತ್ತು ವಿಶೇಷಣಗಳೇನು?
ಇಂದು ಬಿಡುಗಡೆಯಾದ ಈ Tecno Spark 20 Pro 5G ಮೊಬೈಲ್ ಬಳಕೆದಾರರಿಗೆ 6.78 ಇಂಚಿನ ಪೂರ್ಣ HD + LCD ಡಿಸ್ಪ್ಲೇಯನ್ನು ನೀಡುತ್ತದೆ. ಈ ಡಿಸ್ಪ್ಲೇ 120Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಲಭ್ಯವಿದೆ. ಇದರೊಂದಿಗೆ ಡಿಸ್ಪ್ಲೇ ಬಳಕೆದಾರರಿಗೆ ಮುಂಭಾಗದ ಪ್ಯಾನಲ್ ಪಂಚ್ ಹೋಲ್ ವಿನ್ಯಾಸವನ್ನು ನೀಡುತ್ತದೆ. ಫಾಸ್ಟ್ ಮತ್ತು ಬಹುಕಾರ್ಯಕಕ್ಕಾಗಿ ಫೋನ್ ಮೀಡಿಯಾ ಟೆಕ್ ಡೈಮೆನ್ಶನ್ 6080 ಆಕ್ಟಾ ಕೋರ್ ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಸ್ಮಾರ್ಟ್ಫೋನ್ 8GB RAM ಮತ್ತು 256GB ವರೆಗಿನ ಸ್ಟೋರೇಜ್ ಹೊಂದಿದೆ. ಅಷ್ಟೇಯಲ್ಲ ಇಂಟರ್ನಲ್ ಸ್ಟೋರೇಜ್ ವಿಸ್ತರಿಸಲು ಮೈಕ್ರೊ SD ಕಾರ್ಡ್ ಸ್ಲಾಟ್ ಅನ್ನು ಸಹ ನೀಡಲಾಗಿದೆ.
ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಇದರಲ್ಲಿ 108MP ಅಲ್ಟ್ರಾ ಸೆನ್ಸಿಂಗ್ ಪ್ರೈಮರಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಅದರೊಂದಿಗೆ ಇದು 2MP ಮತ್ತೊಂದು ಲೆನ್ಸ್ ಅನ್ನು ಪಡೆಯುತ್ತದೆ. ಅಲ್ಲದೆ ಬಳಕೆದಾರರು ಬೆರಗುಗೊಳಿಸುವ ಸೆಲ್ಫಿಗಳು ಮತ್ತು ವೀಡಿಯೊ ಕರೆಗಾಗಿ 32MP ಮುಂಭಾಗದ ಕ್ಯಾಮೆರಾ ಲೆನ್ಸ್ ಅನ್ನು ಪಡೆಯುತ್ತಾರೆ. ಫೋನ್ 5000mAh ನ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಇದು ಬಳಕೆದಾರರಿಗೆ ದೀರ್ಘ ಬ್ಯಾಕಪ್ ನೀಡುತ್ತದೆ. ಫೋನ್ ಚಾರ್ಜ್ ಮಾಡಲು 33W ವೇಗದ ಚಾರ್ಜಿಂಗ್ ಬೆಂಬಲವೂ ಇದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile