32MP ಸೆಲ್ಫಿಯೊಂದಿಗೆ Unique ಲುಕ್‌ನಲ್ಲಿ Tecno Spark 10 Pro ಮತ್ತೊಮ್ಮೆ ಬಿಡುಗಡೆ | Tech News

32MP ಸೆಲ್ಫಿಯೊಂದಿಗೆ Unique ಲುಕ್‌ನಲ್ಲಿ Tecno Spark 10 Pro ಮತ್ತೊಮ್ಮೆ ಬಿಡುಗಡೆ | Tech News
HIGHLIGHTS

Tecno Spark 10 Pro Moon Explorer Edition ಚಂದ್ರಯಾನ-3 ಅನ್ನು ಗೌರವ ಸಲ್ಲಿಸಲು ಈ ವಿಶೇಷ ಆವೃತ್ತಿ ಬಿಡುಗಡೆ

ಹೊಸ Tecno Spark 10 Pro Moon Explorer Edition ಫೋನ್ ವಿಶಿಷ್ಟವಾದ ಕಪ್ಪು ಮತ್ತು ಬಿಳಿ ಚರ್ಮದ ವಿನ್ಯಾಸದೊಂದಿಗೆ ಬರುತ್ತದೆ

Tecno Spark 10 Pro Moon Explorer Edition ಫೋನ್ 32MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮತ್ತು 50MP ಮೆಗಾಪಿಕ್ಸೆಲ್ ಬ್ಯಾಕ್ ಪ್ರೈಮರಿ ಕ್ಯಾಮೆರಾವನ್ನು ಹೊಂದಿದೆ.

Tecno Spark 10 Pro Moon Explorer Edition ಫೋನ್ 8GB RAM ಮತ್ತು 128GB ಸ್ಟೋರೇಜ್ ಬರುತ್ತದೆ. ಮತ್ತು ಇದರ ಬೆಲೆ 11,999 ರೂಗಳಾಗಿದೆ.

ಟೆಕ್ನೋ ತನ್ನ ಹೊಸ ಸ್ಮಾರ್ಟ್‌ಫೋನ್ Tecno Spark 10 Pro Moon Explorer Edition ಅನ್ನು ದೇಶದಿಂದ ಇತಿಹಾಸ ರಚಿಸಿದ ಚಂದ್ರಯಾನ-3 ಅನ್ನು ಸ್ಮಾರ್ಟ್ಫೋನ್ ವಲಯದ ಮೂಲಕ ಗೌರವ ಸಲ್ಲಿಸಲು ಈ ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಹೊಸ ಫೋನ್ ವಿಶಿಷ್ಟವಾದ ಕಪ್ಪು ಮತ್ತು ಬಿಳಿ ಚರ್ಮದ ವಿನ್ಯಾಸದೊಂದಿಗೆ ಬರುತ್ತದೆ. ಇದನ್ನು ಪರಿಸರ ಸ್ನೇಹಿ ಸಿಲಿಕೋನ್ ಚರ್ಮದಿಂದ ತಯಾರಿಸಲಾಗುತ್ತದೆ. ಫೋನ್ ಶಕ್ತಿಯುತ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು 32MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮತ್ತು 50MP ಮೆಗಾಪಿಕ್ಸೆಲ್ ಬ್ಯಾಕ್ ಪ್ರೈಮರಿ ಕ್ಯಾಮೆರಾವನ್ನು ಹೊಂದಿದೆ. 

Tecno Spark 10 Pro Moon Explorer Edition ಬೆಲೆ ಮತ್ತು ಮಾರಾಟ

ಈ ಸ್ಮಾರ್ಟ್ಫೋನ್ ಈಗಾಗಲೇ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದರೂ ಕಂಪನಿ ಚಂದ್ರಯಾನ-3 ಅನ್ನು ಗೌರವ ಸಲ್ಲಿಸಲು ಈ ವಿಶೇಷ ಆವೃತ್ತಿಯ ಸ್ಮಾರ್ಟ್‌ಫೋನ್ ಅನ್ನು ಒಂದೇ ರೂಪಾಂತರದಲ್ಲಿ ಬಿಡುಗಡೆ ಮಾಡಿದೆ. ಕಂಪನಿಯು ಮಾರ್ಚ್‌ನಲ್ಲಿ ಭಾರತದಲ್ಲಿ ಟೆಕ್ನೋ ಸ್ಪಾರ್ಕ್ 10 ಪ್ರೊ (Tecno Spark 10 Pro) ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ ಮತ್ತು ಈಗ ಕಂಪನಿಯು ತನ್ನ ಮೂನ್ ಎಕ್ಸ್‌ಪ್ಲೋರರ್ ಆವೃತ್ತಿಯನ್ನು ತಂದಿದೆ. ಇದು 8GB RAM ಮತ್ತು 128GB ಸ್ಟೋರೇಜ್ ಬರುತ್ತದೆ. ಮತ್ತು ಇದರ ಬೆಲೆ 11,999 ರೂಗಳಾಗಿದೆ. ಇಂದಿನಿಂದ ಫೋನ್‌ನ ಪ್ರೀ-ಬುಕಿಂಗ್ ಪ್ರಾರಂಭವಾಗಿದೆ ಮತ್ತು ಇದರ ಮಾರಾಟ ಸೆಪ್ಟೆಂಬರ್ 15 ರಿಂದ ಪ್ರಾರಂಭವಾಗಲಿದೆ.

 Tecno Spark 10 Pro Moon Explorer Edition

Tecno Spark 10 Pro Moon Explorer Edition ವಿಶೇಷತೆಗಳೇನು?

ಹೊಸ Tecno Spark 10 Pro ಮೂನ್ ಎಕ್ಸ್‌ಪ್ಲೋರರ್ ಆವೃತ್ತಿಯ ಸ್ಮಾರ್ಟ್‌ಫೋನ್ 6.78 ಇಂಚಿನ ಪೂರ್ಣ HD ಪ್ಲಸ್ ಡಾಟ್-ಇನ್ ಡಿಸ್ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್, 270Hz ಟಚ್ ಸ್ಯಾಂಪ್ಲಿಂಗ್ ರೇಟ್ ಮತ್ತು 580 nits ಪೀಕ್ ಬ್ರೈಟ್‌ನೆಸ್ ಹೊಂದಿದೆ. ಫೋನ್ MediaTek Helio G88 ಪ್ರೊಸೆಸರ್ ಅನ್ನು ಹೊಂದಿದೆ ಮತ್ತು Android 13 ಆಧಾರಿತ HiOS 12.6 OS ನಲ್ಲಿ ಕಾರ್ಯನಿರ್ವಹಿಸುತ್ತದೆ. ಫೋನ್ ಒಟ್ಟು 16GB RAM (8GB RAM ಮತ್ತು 8GB ವರ್ಚುವಲ್ RAM) ಮತ್ತು 128GB ಸ್ಟೋರೇಜ್ ಹೊಂದಿದೆ. 

ಈ Tecno Spark 10 Pro Moon Explorer Edition ಫೋನ್ ಮೈಕ್ರೋ SD ಕಾರ್ಡ್‌ನೊಂದಿಗೆ 1TB ವರೆಗೆ ಸ್ಟೋರೇಜ್ ಅನ್ನು ವಿಸ್ತರಿಸಬಹುದು. ಫೋನ್ 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ. 27 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ ಮತ್ತು 27 ದಿನಗಳ ಸ್ಟ್ಯಾಂಡ್‌ಬೈ ಸಮಯವನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಫೋನ್ 4G ಬೆಂಬಲದೊಂದಿಗೆ ಬರುತ್ತದೆ ಮತ್ತು Wi-Fi, Bluetooth 5.0, GPS ಮತ್ತು NFC ನಂತಹ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo