108MP ಕ್ಯಾಮೆರಾ ಮತ್ತು 16GB RAM ಹೊಂದಿರುವ ಈ Tecno Pova 6 Neo 5G ಮೇಲೆ ಭರ್ಜರಿ ಆಫರ್ಗಳು

108MP ಕ್ಯಾಮೆರಾ ಮತ್ತು 16GB RAM ಹೊಂದಿರುವ ಈ Tecno Pova 6 Neo 5G ಮೇಲೆ ಭರ್ಜರಿ ಆಫರ್ಗಳು
HIGHLIGHTS

ಸ್ಮಾರ್ಟ್ಫೋನ್ ಪ್ರಸ್ತುತ 8GB RAM ಮತ್ತು 256GB ಸ್ಟೋರೇಜ್ ಮಾದರಿಗೆ ₹13,999 ರೂಗಳಿಗೆ ಪಟ್ಟಿ ಮಾಡಲಾಗಿದೆ.

ಇದರೊಂದಿಗೆ ನೀವು HSBC ಮತ್ತು BOB ಬ್ಯಾಂಕ್ ಕಾರ್ಡ್ ಬಳಸಿಕೊಂಡು ಸುಮಾರು 1750 ರೂಗಳ ಡಿಸ್ಕೌಂಟ್ ಸಹ ಪಡೆಯಬಹುದು.

ಟೆಕ್ನೋ ಕಂಪನಿಯ ತನ್ನ ಲೇಟೆಸ್ಟ್ Tecno Pova 6 Neo 5G ಸ್ಮಾರ್ಟ್ಫೋನ್ ನೀವು ಎಂದು ಕಾಣದ ಅತ್ಯುತ್ತಮ ಬೆಲೆ ಆಫರ್ನೊಂದಿಗೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದಲ್ಲಿ ಖರೀದಿಗೆ ಲಭ್ಯವಿದೆ. ಬಜೆಟ್ ಸ್ನೇಹಿ ಸ್ಮಾರ್ಟ್‌ಫೋನ್‌ಗಳ ಶ್ರೇಣಿಯನ್ನು ವಿಸ್ತರಿಸಿದ್ದು ಕೈಗೆಟುಕುವ ಬೆಲೆಯಲ್ಲಿ ಆಕರ್ಷಕ ಫೀಚರ್ಗಳೊಂದಿಗೆ ಉತ್ತನ ಶ್ರೇಣಿಯಲ್ಲಿ ಬರುವ ಈ ಫೋನ್ ಪ್ರಸ್ತುತ 8GB RAM ಮತ್ತು 256GB ಸ್ಟೋರೇಜ್ ರೂಪಾಂತರದ ಮೇಲೆ ಅತ್ಯುತ್ತಮ ಡೀಲ್ ಮತ್ತು ಡಿಸ್ಕೌಂಟ್ ನೀಡುತ್ತಿದೆ. ನೀವು ಒಟ್ಟು ಮೂರು ಸೊಗಸಾದ ಅರೋರಾ ಕ್ಲೌಡ್, ಅಜುರೆ ಸ್ಕೈ ಮತ್ತು ಮಿಡ್‌ನೈಟ್ ಶಾಡೋ ಎಂಬ ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ.

ಭಾರತದಲ್ಲಿ Tecno Pova 6 Neo 5G ಆಫರ್ ಬೆಲೆ ಮತ್ತು ಲಭ್ಯತೆಗಳು

ಈ Tecno Pova 6 Neo 5G ಈಗಾಗಲೇ ಮೇಲ ಹೇಳಿರುವಂತೆ ಅಮೆಜಾನ್ ಮಾರಾಟದಲ್ಲಿ ಅತ್ಯುತ್ತಮವಾದ ಡೀಲ್ ಮತ್ತು ಡಿಸ್ಕೌಂಟ್ ಜೊತೆಗೆ ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿದೆ. ಸ್ಮಾರ್ಟ್ಫೋನ್ ಪ್ರಸ್ತುತ 8GB RAM ಮತ್ತು 256GB ಸ್ಟೋರೇಜ್ ಮಾದರಿಗೆ ₹13,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಖರೀದಿದಾರರು ಇದರ ಮೇಲೆ ಮಾರಾಟದ ಕೊಡುಗೆಯಾಗಿ ಉಚಿತ 500 ರೂಗಳನ್ನು ನೀಡುತ್ತಿದೆ. ಇದರೊಂದಿಗೆ ನೀವು HSBC ಮತ್ತು BOB ಬ್ಯಾಂಕ್ ಕಾರ್ಡ್ ಬಳಸಿಕೊಂಡು ಸುಮಾರು 1750 ರೂಗಳ ಡಿಸ್ಕೌಂಟ್ ಸಹ ಪಡೆಯಬಹುದು. Tecno Pova 6 Neo 5G ಇದೊಂದಿಗೆ ಕೇವಲ ₹11,749 ರೂಗಳಿಗೆ ಖರೀದಿಸಬಹುದು.

Tecno Pova 6 Neo 5G with 108MP camera

Tecno Pova 6 Neo 5G ವಿಶೇಷಣಗಳು

Tecno Pova 6 Neo 5G ಸ್ಮಾರ್ಟ್ಫೋನ್ 6.67 ಇಂಚಿನ HD+ IPS LCD ಡಿಸ್ಪ್ಲೇ ಜೊತೆಗೆ ಮೃದುವಾದ 120Hz ರಿಫ್ರೆಶ್ ದರವನ್ನು ಹೊಂದಿದೆ. ಈ ಬೆಲೆ ಶ್ರೇಣಿಯಲ್ಲಿ ಹ್ಯಾಂಡ್‌ಸೆಟ್‌ಗೆ ಯೋಗ್ಯವಾದ ದೃಶ್ಯಗಳನ್ನು ನೀಡುತ್ತದೆ. Pova 6 Neo 5G ಪ್ರೈಮರಿ 108MP ಹಿಂಬದಿಯ ಕ್ಯಾಮೆರಾದೊಂದಿಗೆ ಬರುತ್ತದೆ. ಇದರಲ್ಲಿ AI ವರ್ಧನೆಗಳು ಮತ್ತು 3x ಇನ್-ಸೆನ್ಸರ್ ಜೂಮ್ ಸೇರಿವೆ. ಕ್ಯಾಮರಾ ವ್ಯವಸ್ಥೆಯು ಸೂಪರ್ ನೈಟ್ ಮೋಡ್, ಟೈಮ್-ಲ್ಯಾಪ್ಸ್ ಮತ್ತು ಡ್ಯುಯಲ್ ವೀಡಿಯೋಗಳಂತಹ ವಿವಿಧ ಶೂಟಿಂಗ್ ಮೋಡ್‌ಗಳನ್ನು ಬೆಂಬಲಿಸುತ್ತದೆ. ಇದು ವಿಭಿನ್ನ ಸನ್ನಿವೇಶಗಳಿಗೆ ಬಹುಮುಖವಾಗಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಫ್ಲ್ಯಾಷ್‌ನೊಂದಿಗೆ 8MP ಮುಂಭಾಗದ ಕ್ಯಾಮೆರಾವನ್ನು ಸೇರಿಸಲಾಗಿದೆ.

Also Read: 5G Recharge Plans: ಅನ್ಲಿಮಿಟೆಡ್ ಕರೆ ಮತ್ತು ಡೇಟಾದೊಂದಿಗೆ ಉಚಿತ Swiggy ಮತ್ತು Prime Video ನೀಡುವ ಬೆಸ್ಟ್ ಪ್ಲಾನ್!

Tecno Pova 6 Neo 5G ಸ್ಮಾರ್ಟ್ಫೋನ್ ಜನಪ್ರಿಯ MediaTek Dimensity 6300 ಚಿಪ್‌ಸೆಟ್ ಹೊಂದಿದ್ದು 6nm ಪ್ರಕ್ರಿಯೆಯಲ್ಲಿ ನಿರ್ಮಿಸಲಾಗಿದೆ. ಸ್ಮಾರ್ಟ್ಫೋನ್ 8GB RAM ಜೋಡಿಸಲಾದ ಈ ಪ್ರೊಸೆಸರ್ ದೈನಂದಿನ ಕಾರ್ಯಗಳನ್ನು ಮತ್ತು ಮಧ್ಯಮ ಗೇಮಿಂಗ್ ಅನ್ನು ಸುಲಭವಾಗಿ ನಿಭಾಯಿಸುತ್ತದೆ. ಯಾಕೆಂದರೆ ಇದರೊಂದಿಗೆ 8GB ಹೆಚ್ಚುವರಿಯ ವರ್ಚುವಲ್ RAM ಅನ್ನು ಸಹ ಬೆಂಬಲಿಸುತ್ತದೆ. ಸ್ಮಾರ್ಟ್ಫೋನ್ ಆಂಡ್ರಾಯ್ಡ್ 14 ಆಧಾರಿತ HiOS 14.5 ನಲ್ಲಿ ಕಾರ್ಯನಿರ್ವಹಿಸುತ್ತದೆ.

Tecno Pova 6 Neo 5G with 108MP camera

ಆನ್‌ಬೋರ್ಡ್ ಸಂಗ್ರಹಣೆಯನ್ನು ಹೆಚ್ಚಿಸಲು ನೀವು ಮೈಕ್ರೊ SD ಬಳಸುವ ಮೂಲಕ 1TB ವರೆಗೆ ವಿಸ್ತರಿಸಬಹುದು. ಅದರ ವೈಶಿಷ್ಟ್ಯಗಳಿಗೆ ಪವರ್ ನೀಡಲು Tecno Pova 6 Neo 5G ಸ್ಮಾರ್ಟ್ಫೋನ್ 5,000mAh ಬ್ಯಾಟರಿಯೊಂದಿಗೆ ಬರುತ್ತದೆ. ಇದು 18W ವೇಗದ ಚಾರ್ಜಿಂಗ್‌ನಿಂದ ಬೆಂಬಲಿತವಾಗಿದೆ. ಹೆಚ್ಚುವರಿಯಾಗಿ ಹ್ಯಾಂಡ್‌ಸೆಟ್ ಡಾಲ್ಬಿ ಅಟ್ಮಾಸ್ ಅನ್ನು ಒಳಗೊಂಡ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದೆ. ಫೋನ್‌ನ IP54 ರೇಟಿಂಗ್ ಸ್ಪ್ಲಾಶ್ ಮತ್ತು ಬೆವರು ಪ್ರತಿರೋಧವನ್ನು ಒದಗಿಸುತ್ತದೆ, ಇದು ಬಾಳಿಕೆಯ ಪದರವನ್ನು ಸೇರಿಸುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo