ದೇಶದಲ್ಲಿ Tecno ಹೊಸ ಉನ್ನತ-ಮಟ್ಟದ Phantom X2 Pro ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಪರಿಚಯಿಸಲಾಗಿದೆ. ಈ ಫೋನ್ Phantom X2 ಸರಣಿಯ ಉನ್ನತ-ಶ್ರೇಣಿ ಮಾಡೆಲ್ ಇದಾಗಿದೆ. ಇದು Phantom X2 ಅನ್ನು ಒಳಗೊಂಡಿದ್ದು ಭಾರತದಲ್ಲಿ ಈ ತಿಂಗಳ ಆರಂಭದಲ್ಲಿ ಪರಿಚಯಿಸಿಸಲಾಗಿದೆ. Phantom X2 Pro ರೆಟ್ರಾಕ್ಟ್ಏಬಲ್ ಪೋಟ್ರೇಟ್ ಲೆನ್ಸ್ ಹೊಂದಿರುವ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಇದು 120Hz AMOLED, ಡೈಮೆನ್ಸಿಟಿ 9000 ಚಿಪ್ಸೆಟ್ ಮತ್ತು ಇತರ ಫೀಚರ್ಸ ಅನ್ನು ಒಳಗೊಂಡಿದೆ. Phantom X2 Pro ನ ಫುಲ್ ಡೀಟೇಲ್ಸ್ ಇಲ್ಲಿದೆ ನೋಡಿ.
ಭಾರತದಲ್ಲಿ Tecno Phantom X2 Pro ಬೆಲೆಯನ್ನು 12GB/256GB ಮಾದರಿಗೆ 49,999 ರೂ.ಗಳಿಗೆ ನಿಗದಿಪಡಿಸಲಾಗಿದೆ. ಈ Phantom X2 Pro ಅಮೆಜಾನ್ ಇಂಡಿಯಾ ಮೂಲಕ ಮುಂಗಡ ಬುಕಿಂಗ್‌ಗೆ ಲಭ್ಯವಿದೆ. Tecno Phantom X2 Pro ಸ್ಮಾರ್ಟ್ಫೋನ್ ಜನವರಿ 24 ರಿಂದ ಮಾರಾಟವಾಗಲಿದೆ. Amazon ಗ್ರಾಹಕರಿಗೆ ರೂ 5,000 ಹೆಚ್ಚುವರಿ ವಿನಿಮಯ ಬೋನಸ್ ಮತ್ತು Phantom X2 Pro ಸ್ಮಾರ್ಟ್ಫೋನ್ ಖರೀದಿಯ ಮೇಲೆ 12 ತಿಂಗಳ ಪ್ರೈಮ್ ಸದಸ್ಯತ್ವವನ್ನು ನೀಡುತ್ತಿದೆ.
https://twitter.com/TecnoMobileInd/status/1613121368614391808?ref_src=twsrc%5Etfw
ಈ Phantom X2 Pro ಫೋನ್ 6.8 ಇಂಚಿನ FHD+ AMOLED ಡಿಸ್ಪ್ಲೇ ಜೊತೆಗೆ 120 Hz ನ ರಿಫ್ರೆಶ್ ದರ ಮತ್ತು 360 Hz ಟಚ್ ಸ್ಯಾಂಪ್ಲಿಂಗ್ ರೇಟ್ ಹೊಂದಿದೆ. ಮೇಲ್ಭಾಗದಲ್ಲಿ ವಿಕ್ಟಸ್ ಪ್ರೊಟೆಕ್ಷನ್ ಗಾಗಿ ಗೊರಿಲ್ಲಾ ಗ್ಲಾಸ್ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಸಹ ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ ಮೂರು ಕಲರ್ಸಗಳಲ್ಲಿ ಲಭ್ಯವಿದೆ. ಮೂನ್‌ಲೈಟ್ ಸಿಲ್ವರ್, ಸ್ಟಾರ್‌ಡಸ್ಟ್ ಗ್ರೇ ಮತ್ತು ಮಾರ್ಸ್ ಆರೆಂಜ್. ಮೂರನೇ ಕಲರ್ ಮಾರ್ಸ್ ಆರೆಂಜ್ ರಿನ್ಯೂಏಬಲ್ ಫೈಬರ್‌ನಿಂದ ನಿರ್ಮಿಸಲಾದ ಪ್ರಪಂಚದಲ್ಲಿನ ಮೊದಲನೆ ಕಲರ್ ನ ಫೋನ್ ಆಗಿದೆ. ಮಾರ್ಸ್ ಆರೆಂಜ್ ಕಲರ್ ನ ಬ್ಯಾಕ್ ಪ್ಯಾನೆಲ್ ಅನ್ನು 100% ಮರುಬಳಕೆ ಮಾಡಬಹುದಾಗಿದೆ.
ಇದರಲ್ಲಿ 50MP 1/1.3 ಇಂಚಿನ Samsung GNV ಸೆನ್ಸರ್, 50MP ISOCELL JN1 ಸೆನ್ಸರ್, 13MP ಅಲ್ಟ್ರಾವೈಡ್ ಕ್ಯಾಮೆರಾ ಮತ್ತು f/1.5 65mm ಟೆಲಿಫೋಟೋ ರೆಟ್ರಾಕ್ಟ್ಏಬಲ್ ಕ್ಯಾಮರಾ ಮತ್ತು 2.5x ಆಪ್ಟಿಕಲ್ ಜೂಮ್ ನೊಂದಿಗೆ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ನಿಂದ ರೂಪಿತವಾಗಿದೆ. ಮುಂಭಾಗದಲ್ಲಿ ಪಂಚ್-ಹೋಲ್ ಕಟೌಟ್ ಒಳಗೆ 32MP ಕ್ಯಾಮೆರಾವನ್ನು ಒಳಗೊಂಡಿದೆ. Mediatek ನಿಂದ ಡೈಮೆನ್ಸಿಟಿ 9000 ಚಿಪ್‌ಸೆಟ್ ಅನ್ನು Tecno Phantom X2 Pro ಜೊತೆಗೆ ಸೇರಿಸಲಾಗಿದೆ. ಚಿಪ್‌ಸೆಟ್ 12GB LPDDR5 RAM ಮತ್ತು 256GB ಇನ್‌ಬಿಲ್ಟ್ UFS 3.1 ಸ್ಟೋರೇಜ್ ಅನ್ನು ಒಳಗೊಂಡಿದೆ. Phantom X2 Pro ಅನ್ನು Android ಆಧಾರಿತ HiOS 12 ಅನ್ನು ರನ್ ಮಾಡುತ್ತದೆ. 45W ಫಾಸ್ಟ್ ಚಾರ್ಜಿಂಗ್‌ನೊಂದಿಗೆ 5160mAH ಬ್ಯಾಟರಿಯನ್ನು ಈ ಸ್ಮಾರ್ಟ್‌ಫೋನ್ ಹೊಂದಿದೆ.