Tecno Phantom V2 Series ಮೊದಲ ಮಾರಾಟ ನಾಳೆಯಿಂದ ಶುರ! ಆಫರ್ ಬೆಲೆ ಮತ್ತು ಫೀಚರ್ಗಳೇನು?
Tecno Phantom V2 Series ಮೊದಲ ಮಾರಾಟವನ್ನು ಪ್ರತ್ಯೇಕವಾಗಿ ಅಮೆಜಾನ್ ಮೂಲಕ ಆರಂಭಿಸಲು ಸಿದ್ಧವಾಗಿದೆ.
ಈ ಸರಣಿಯಲ್ಲಿ Tecno Phantom V Fold 2 5G ಮತ್ತು Phantom V Flip 2 5G ಫೋನ್ಗಳನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ.
Tecno Phantom V2 Series First Sale: ಭಾರತದಲ್ಲಿ ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ತಯಾರಕರಾಗಿರುವ ಟೆಕ್ನೋ (Tecno) ನಾಳೆ ಅಂದ್ರೆ 13ನೇ ಡಿಸೆಂಬರ್ 2024 ತನ್ನ ಲೇಟೆಸ್ಟ್ Tecno Phantom V2 Series ಮೊದಲ ಮಾರಾಟವನ್ನು ಪ್ರತ್ಯೇಕವಾಗಿ ಅಮೆಜಾನ್ ಮೂಲಕ ಆರಂಭಿಸಲು ಸಿದ್ಧವಾಗಿದೆ. ಈ ಸರಣಿಯಲ್ಲಿ Tecno Phantom V Fold 2 5G ಮತ್ತು Phantom V Flip 2 5G ಫೋನ್ಗಳನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಇದರ ಆಫರ್ ಬೆಲೆ ಮತ್ತು ಲಭ್ಯತೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.
Tecno Phantom V2 Series ಆಫರ್ ಬೆಲೆ ಮತ್ತು ಲಭ್ಯತೆಯ ಮಾಹಿತಿ:
ಈ ಸ್ಮಾರ್ಟ್ಫೋನ್ ಈಗಾಗಲೇ ಭಾರತದಲ್ಲಿ ಬಿಡುಗಡೆಯಾಗಿ ಅತ್ಯುತ್ತಮವಾಗಿ ನಿರೀಕ್ಷೆಯನ್ನು ಹೊಂದಿದ್ದು ಇದರ ಡಿಸೈನಿಂಗ್ ಮತ್ತು ಲೇಟೆಸ್ಟ್ ಫೀಚರ್ಗಳೊಂದಿಗೆ ನಾಳೆ ಮಾರುಕಟ್ಟೆಯನ್ನು ಕಾಲಿಡಲು ಸಜ್ಜಾಗಿದೆ. ಈ Tecno Phantom V Fold 2 5G ಬೆಲೆ ರೂ 79,999 ಆಗಿದ್ದು ಇದರ ಕ್ರಮವಾಗಿ Phantom V Flip 2 5G ಕೇವಲ ರೂ 34,999 ರಿಂದ ಪ್ರಾರಂಭವಾಗುತ್ತದೆ. ಕಂಪನಿಯು ಸೂಚಿಸಿದಂತೆ ಈ ಪರಿಚಯಾತ್ಮಕ ಬೆಲೆಗಳು ಸೀಮಿತ ಅವಧಿಗೆ ವಿಶೇಷ ಬ್ಯಾಂಕ್ ಕೊಡುಗೆಗಳೊಂದಿಗೆ ಇರಬಹುದು. 13ನೇ ಡಿಸೆಂಬರ್ ರಿಂದ ಅಮೆಜಾನ್‌ನಲ್ಲಿ ಮಧ್ಯಾಹ್ನ 12 ಗಂಟೆಗೆ ಮೊದಲ ಮಾರಾಟದಲ್ಲಿ ಸ್ಮಾರ್ಟ್‌ಫೋನ್‌ಗಳು ಖರೀದಿಗೆ ಲಭ್ಯವಿರುತ್ತವೆ.
Also Read: 200MP ಕ್ಯಾಮೆರಾವುಳ್ಳ Vivo X200 Series ಭಾರತದಲ್ಲಿ ಬಿಡುಗಡೆ! ಬೆಲೆ ಮತ್ತು ಟಾಪ್ ಹೈಲೈಟ್‌ಗಳೇನು?
Tecno Phantom V2 Series ಫೀಚರ್ ಮತ್ತು ವಿಶೇಷತೆಗಳೇನು?
Phantom V Fold 2 ಸ್ಮಾರ್ಟ್ಫೊನ್ 2K+ 120 Hz LTPO AMOLED ಡಿಸ್ಪ್ಲೇಯಲ್ಲಿ 7.85 ಮತ್ತು FHD+ 120 Hz LTPO AMOLED ಡಿಸ್ಪ್ಲೇಯಲ್ಲಿ 6.42 ಹೊಂದಿದೆ. ಅದೇ Phantom V Flip 2 ಸ್ಮಾರ್ಟ್ಫೊನ್ ಪೂರ್ಣ-HD+ (1080 x 2640 ಪಿಕ್ಸೆಲ್‌ಗಳು) LTPO AMOLED ಪ್ರೈಮರಿ ಡಿಸ್ಪ್ಲೇಯಲ್ಲಿ 6.9 ಮತ್ತು AMOLED ಮತ್ತು 3.64 (1066 x 1056 ಪಿಕ್ಸೆಲ್‌ಗಳು) ಹೊಂದಿದೆ. Phantom V Fold 2 ಸ್ಮಾರ್ಟ್ಫೊನ್ ಟ್ರಿಪಲ್ 50 ಎಂಪಿ ಹಿಂಬದಿಯ ಕ್ಯಾಮೆರಾ ಮತ್ತು 32MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಆದರೆ Phantom V Flip 2 ಸ್ಮಾರ್ಟ್ಫೊನ್ ಡ್ಯುಯಲ್ 50 ಎಂಪಿ ಹಿಂಬದಿಯ ಕ್ಯಾಮೆರಾಗಳು ಮತ್ತು 32MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.
Phantom V Fold 2 ಸ್ಮಾರ್ಟ್ಫೊನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9000+ ಪ್ರೊಸೆಸರ್ ಹೊಂದಿದ್ದರೆ Phantom V Fold 2 ಸ್ಮಾರ್ಟ್ಫೊನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8020 ಪ್ರೊಸೆಸರ್ ಹೊಂದಿದೆ. Phantom V Fold 2 ಫೋನ್ 12GB RAM ಮತ್ತು 512GB ಸ್ಟೋರೇಜ್ ಹೊಂದಿದೆ. ಆದರೆ Phantom V Flip 2 ಫೋನ್ 8GB RAM ಮತ್ತು 256GB ಸ್ಟೋರೇಜ್ ಹೊಂದಿದೆ. ಈ ಎರಡೂ ಫೋನ್‌ಗಳು HiOS UI ಆಧಾರಿತ Android 14 OS ನಲ್ಲಿ ಕಾರ್ಯನಿರ್ವಹಿಸುತ್ತವೆ. Phantom V Fold 2 ಫೋನ್ 5750mAh ಬ್ಯಾಟರಿಯನ್ನು ಹೊಂದಿದ್ದರೆ Phantom V Flip 2 ಫೋನ್ 4720mAh ಬ್ಯಾಟರಿಯನ್ನು ಹೊಂದಿದೆ. ಈ ಎರಡೂ ಫೋನ್‌ಗಳು ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತವೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile