Tecno Phantom V Flip 5G: ಟೆಕ್ನೋದ ಮೊಟ್ಟ ಮೊದಲ Attractive ಫ್ಲಿಪ್ ಫೋನ್ ಬಿಡುಗಡೆಗೆ ಡೇಟ್ ಕಂಫಾರ್ಮ್। Tech News
ಟೆಕ್ನೋ ಮೊಬೈಲ್ ಫೋನ್ (Tecno Mobile) ತಯಾರಕ ಕಂಪನಿ ಈಗ ತನ್ನ ಮುಂಬರಲಿರುವ ಹೊಸ ಮಾದರಿಯ ಫ್ಲಿಫ್ಕ್ ಸ್ಮಾರ್ಟ್ಫೋನ್ ಅನ್ನು ಅನಾವರಣಗೊಳಿಸಲು ಸಜ್ಜಾಗಿದೆ
ಇತರ ಫ್ಲಿಪ್ ಫೋನ್‌ಗಳಿಗಿಂತ ಭಿನ್ನವಾಗಿ ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ (Tecno Phantom V Flip 5G) ಹೊರ ಬರಲಿದೆ.
Tecno Phantom V Flip 5G ಸ್ಮಾರ್ಟ್ಫೋನ್ 4000 ಬ್ಯಾಟರಿಯೊಂದಿಗೆ 66W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯಗಳನ್ನು ಹೊಂದುವ ನಿರೀಕ್ಷೆಗಳಿವೆ.
ಸೆಪ್ಟೆಂಬರ್ 22 ರಂದು ಸಿಂಗಾಪುರದಲ್ಲಿ ನಡೆಯಲಿರುವ ಫ್ಲಿಪ್ ಇನ್ ಸ್ಟೈಲ್ ಟೆಕ್ನೋ ಸಮಾರಂಭದಲ್ಲಿ Tecno Phantom V Flip 5G ಅನ್ನು ಬಿಡುಗಡೆ ಮಾಡುವುದಾಗಿ TENCO ಅಧಿಕೃತವಾಗಿ ಘೋಷಿಸಿದೆ.
ಚೀನಾದ ಶೆನ್‌ಜೆನ್‌ನಲ್ಲಿರುವ ಟೆಕ್ನೋ ಮೊಬೈಲ್ ಫೋನ್ (Tecno Mobile) ತಯಾರಕ ಕಂಪನಿ ಈಗ ತನ್ನ ಮುಂಬರಲಿರುವ ಹೊಸ ಮಾದರಿಯ ಫ್ಲಿಫ್ಕ್ ಸ್ಮಾರ್ಟ್ಫೋನ್ ಅನ್ನು ಅನಾವರಣಗೊಳಿಸಲು ಸಜ್ಜಾಗಿದೆ. ಇದರ ಫೋಟೋ ಮತ್ತು ಮಾಹಿತಿಗಳು ಈಗಾಗಲೇ ಇಂಟರ್‌ನೆಟ್‌ನಲ್ಲಿ ಭಾರಿ ಸದ್ದುಮಾಡುತ್ತಿದ್ದು ಕಂಪನಿ ಇದರ ಅಧಿಕೃತ ಬಿಡುಗಡೆಯ ಮಾಹಿತಿಯನ್ನು ಈಗ ಪೋಸ್ಟ್ ಮಾಡಿದೆ. ಸೆಪ್ಟೆಂಬರ್ 22 ರಂದು ಸಿಂಗಾಪುರದಲ್ಲಿ ನಡೆಯಲಿರುವ ಫ್ಲಿಪ್ ಇನ್ ಸ್ಟೈಲ್ ಟೆಕ್ನೋ ಸಮಾರಂಭದಲ್ಲಿ Tecno Phantom V Flip 5G ಅನ್ನು ಬಿಡುಗಡೆ ಮಾಡುವುದಾಗಿ TENCO ಅಧಿಕೃತವಾಗಿ ಘೋಷಿಸಿದೆ.
Tecno Phantom V Flip 5G ಇತರ ಫ್ಲಿಪ್ ಫೋನ್‌ಗಳಿಗಿಂತ ಭಿನ್ನ!
ಈ ಪ್ರಕಟಣೆಯು ಈ ವರ್ಷದ MWC ನಲ್ಲಿ Tecno Phantom V Fold ಫೋನ್‌ಗಳ ಪರಿಚಯವನ್ನು ಅನುಸರಿಸುತ್ತದೆ. ಇದು ನಂತರ ಸ್ಪರ್ಧಾತ್ಮಕ ಬೆಲೆ ತಂತ್ರದೊಂದಿಗೆ ಭಾರತೀಯ ಮಾರುಕಟ್ಟೆಗೆ ದಾರಿ ಮಾಡಿಕೊಟ್ಟಿತು. ಇದರ ಕವರ್ ಅನ್ನು ಚೈನೀಸ್ ಇ-ಕಾಮರ್ಸ್ ವೆಬ್‌ಸೈಟ್ ಅಲಿಬಾಬಾ ಡಾಟ್ ಕಾಮ್‌ನಲ್ಲಿ ಪಟ್ಟಿ ಮಾಡಲಾಗಿದೆ. ಇದು ವಿನ್ಯಾಸವನ್ನು ಬಹಿರಂಗಪಡಿಸುತ್ತದೆ. ಇತರ ಫ್ಲಿಪ್ ಫೋನ್‌ಗಳಿಗಿಂತ ಭಿನ್ನವಾಗಿ ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ (Tecno Phantom V Flip 5G) ಹೊರ ಬರಲಿದೆ. ಏಕೆಂದರೆ ಅದರ ಹೊರ ಕವರ್‌ನಲ್ಲಿ ವೃತ್ತಾಕಾರದ ಡಿಸ್ಪ್ಲೇಯಲ್ಲಿ ನೀಡಿರುವ ಹೊಸ ಮಾದರಿಯ ಕ್ಯಾಮೆರಾ ಮತ್ತು ಸೆನ್ಸರ್ಗಳು ಇದನ್ನು ಮಾರುಕಟ್ಟೆಯಲ್ಲಿ ಹೊಸ ಲುಕ್ ನೀಡುವ ನಿರೀಕ್ಷೆಗಳಿವೆ.
Tecno Phantom V Flip 5G ನಿರೀಕ್ಷಿತ ವಿಶೇಷಣಗಳು
ಹೊರಹೊಮ್ಮಿದ ಇತ್ತೀಚಿನ ರೆಂಡರ್‌ಗಳು ಡ್ಯುಯಲ್ ಕ್ಯಾಮೆರಾಗಳು ಮತ್ತು ವೃತ್ತಾಕಾರದ ಫ್ಲ್ಯಾಷ್‌ನೊಂದಿಗೆ ವೃತ್ತಾಕಾರದ ಸ್ಕ್ರೀನ್ ಹೊಂದಿದ್ದು ಫ್ಯಾಂಟಮ್ ವಿ ಫ್ಲಿಪ್ ಹೆಚ್ಚಿನ ರಿಫ್ರೆಶ್-ರೇಟ್ 144Hz FHD+ ಡಿಸ್ಪ್ಲೇಯೊಂದಿಗೆ 6.75 ಇಂಚಿನಿಂದ 6.9 ಇಂಚಿನವರೆಗಿನ ಸ್ಕ್ರೀನ್ ಸೈಜ್ ಹೊಂದುವ ನಿರೀಕ್ಷಿಸಲಾಗಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 8050 5G ಚಿಪ್ ಅನ್ನು ಹೊಂದಿದೆ ಎಂದು ವದಂತಿಗಳಿವೆ, ಇದು ಡೈಮೆನ್ಸಿಟಿ 1300 ಚಿಪ್ ಅನ್ನು ಹೋಲುತ್ತದ. ಇದು 64MP ಪ್ರೈಮರಿ ಕ್ಯಾಮೆರಾದೊಂದಿಗೆ 32MP ಸೆಲ್ಫಿ ಕ್ಯಾಮೆರಾವನ್ನು ಹೊಂದುವ ನಿರೀಕ್ಷೆಗಳಿವೆ. ಇದರಲ್ಲಿ 8GB RAM ಜೊತೆಗೆ 128GB ಮತ್ತು 256GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಅಲ್ಲದೆ 4000 ಬ್ಯಾಟರಿಯೊಂದಿಗೆ 66W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯಗಳನ್ನು ಹೊಂದುವ ನಿರೀಕ್ಷೆಗಳಿವೆ.
Tecno Phantom V Flip 5G ಬಿಡುಗಡೆ ಎಲ್ಲಿ ಯಾವಾಗ ಬಿಡುಗಡೆ
ಈಗಾಗಲೇ ಮೇಲೆ ತಿಳಿಸಿರುವಂತೆ ಫ್ಲಿಪ್ ಇನ್ ಸ್ಟೈಲ್ ಟೆಕ್ನೋ ಫ್ಲ್ಯಾಗ್‌ಶಿಪ್ ಪ್ರಾಡಕ್ಟ್ ಲಾಂಚ್ (Flip in Style Tecno Flagship Product Launch 2023) ಸಮಾರಂಭದಲ್ಲಿ Tecno Phantom V Flip 5G ಜೊತೆಗೆ ಹೊಸ ಲ್ಯಾಪ್‌ಟಾಪ್ TECNO MEGABOOK T1 2023 ಅನ್ನು ಸಹ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈ ಲ್ಯಾಪ್‌ಟಾಪ್ 14 ಇಂಚಿನ ಡಿಸ್ಪ್ಲೇಯನ್ನು ಹೊಂದಿದ್ದು ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಈ ಹೊಸ TECNO ಫ್ಯಾಂಟಮ್ V ಫ್ಲಿಪ್ ಬಿಡುಗಡೆಯ ಕಾರ್ಯಕ್ರಮವು ಸೆಪ್ಟೆಂಬರ್ 22 ರಂದು 3 PM ಸಿಂಗಾಪುರ್ ಸಮಯಕ್ಕೆ (12:30 IST) ಪ್ರಾರಂಭವಾಗಲಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ವಿವರವಾದ ಮಾಹಿತಿಯನ್ನು ಬಹಿರಂಗಪಡಿಸುವ ನಿರೀಕ್ಷೆಯಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile