ಈ ಮೊದಲು ಈಗಾಗಲೇ ತನ್ನ ಲುಕ್ ಅನ್ನು ಕಳೆದ ಫೆಬ್ರವರಿಯಲ್ಲಿ ತೋರಿಸಿದ Tecno Camon 30 Premier 5G ಈಗ ಜಾಗತಿಕವಾಗಿ ನೆನ್ನೆ ಅಂದ್ರೆ 17ನೇ ಏಪ್ರಿಲ್ 2024 ರಂದು ಅಧಿಕೃತವಾಗಿ ಬಿಡುಗಡೆಯಾಗಿದೆ. ಈ ಸ್ಮಾರ್ಟ್ಫೋನ್ ಬಾರ್ಸಿಲೋನಾದಲ್ಲಿ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC 2024) ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಅನಾವರಣಗೊಳಿಸಲಾಗಿತ್ತು ಇದು ಸ್ವತಂತ್ರ ಇಮೇಜಿಂಗ್ ಚಿಪ್ ಮತ್ತು ಟ್ರಿಪಲ್ ರಿಯರ್ ಕ್ಯಾಮೆರಾ ಘಟಕವನ್ನು ಒಳಗೊಂಡಿರುವ ಕಂಪನಿಯ ಪೋಲಾರ್‌ಏಸ್ ಇಮೇಜಿಂಗ್ ಸಿಸ್ಟಮ್‌ನೊಂದಿಗೆ ಬರುತ್ತದೆ. ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8200 ಪ್ರೊಸೆಸರ್ನಿಂದ ಬೆಂಬಲಿತವಾಗಿದೆ.
ಈ ಸ್ಮಾರ್ಟ್ಫೋನ್ ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಇದು Dolby Atmos ಬೆಂಬಲದೊಂದಿಗೆ ಡ್ಯುಯಲ್ ಸ್ಪೀಕರ್‌ಗಳನ್ನು ಸಹ ಹೊಂದಿದೆ. ಈ Tecno Camon 30 Premier 5G ಬೆಲೆ ಇನ್ನೂ ಬಹಿರಂಗಗೊಂಡಿಲ್ಲ. ಅಲ್ಲದೆ ಫೋನ್ ಪ್ರತ್ಯೇಕ ಮಾರುಕಟ್ಟೆಗಳಲ್ಲಿ ಬಿಡುಗಡೆಯಾದಾಗ ಮಾದರಿಯ ಬೆಲೆಯನ್ನು ಬಹಿರಂಗಪಡಿಸುವ ನಿರೀಕ್ಷೆಯಿದೆ. ಈ ವರ್ಷದ ಮೇ ತಿಂಗಳಿನಿಂದ ಫೋನ್ ಮಾರಾಟವಾಗಲಿದೆ ಎಂದು ವರದಿಯಾಗಿದೆ. ಪ್ರಸ್ತುತ ಈ ಹ್ಯಾಂಡ್‌ಸೆಟ್‌ನ ಭಾರತ ಬಿಡುಗಡೆ ಮತ್ತು ಬೆಲೆಯನ್ನು Tecno ಇನ್ನೂ ಖಚಿತಪಡಿಸಿಲ್ಲ.
Tecno Camon 30 Premier 5G ಸ್ಮಾರ್ಟ್ಫೋನ್ 120Hz LTPO ರಿಫ್ರೆಶ್ ದರ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆಯೊಂದಿಗೆ 6.77 ಇಂಚಿನ 1.5K+AMOLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಮೂಲಕ ಬಳಕೆದಾರರಿಗೆ ಅತ್ಯುತ್ತಮವಾದ ವೀಕ್ಷಣಾ ಅನುಭವವನ್ನು ನೀಡಲು ಪ್ರಯತ್ನಿಸುತ್ತಿದೆ. ಅಲ್ಲದೆ ಇದರಲ್ಲಿ ನಿಮಗೆ ಪಂಚ್ ಹೋಲ್ ಅನ್ನು ಸಹ ಡಿಸ್ಪ್ಲೇಯಲ್ಲಿ ಸೆಲ್ಫಿ ಕ್ಯಾಮೆರಾಕ್ಕಾಗಿ ನೀಡಲಾಗಿದೆ.
ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 8200 ಚಿಪ್‌ಸೆಟ್‌ನಿಂದ 12GB RAM ಮತ್ತು 512GB ಇಂಟರ್ನಲ್ ಸ್ಟೋರೇಜ್ ಜೊತೆಗೆ ಜೋಡಿಸಲ್ಪಟ್ಟಿದೆ. ಫೋನ್ ಒಟ್ಟು 24GB ವರೆಗೆ ವರ್ಚುಯಲ್ 12GB ವರೆಗೆ ಹೆಚ್ಚುವರಿಯಾಗಿ ವಿಸ್ತರಿಸಬಹುದು. Tecno Camon 30 Premier 5G ಆಂಡ್ರಾಯ್ಡ್ 14-ಆಧಾರಿತ HiOS 14 ನೊಂದಿಗೆ ಹ್ಯಾಂಡ್‌ಸೆಟ್ ರವಾನೆಯಾಗುತ್ತದೆ. ಇದು ಜಾಗತಿಕ ಸೈಟ್‌ನಲ್ಲಿ 12GB RAM ಮತ್ತು 512GB ಆನ್‌ಬೋರ್ಡ್ ಸ್ಟೋರೇಜ್ ಮತ್ತು ಆಲ್ಪ್ಸ್ ಸ್ನೋವಿ ಸಿಲ್ವರ್ ಮತ್ತು ಹವಾಯಿ ಲಾವಾ ಬ್ಲಾಕ್ ಎಂಬ 2 ಬಣ್ಣದ ಆಯ್ಕೆಗಳೊಂದಿಗೆ ಪಟ್ಟಿಮಾಡಲಾಗಿದೆ. ಫೋನ್ ಡುಯಲ್ ಸ್ಪೀಕರ್ ಜೊತೆಗೆ Dolby Atmos ಅನ್ನು ಸಪೋರ್ಟ್ ಮಾಡುತ್ತದೆ.
ಕ್ಯಾಮೆರಾ ವಿಭಾಗದಲ್ಲಿ Tecno Camon 30 ಪ್ರೀಮಿಯರ್ 5G ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ನೊಂದಿಗೆ 50MP ಮೆಗಾಪಿಕ್ಸೆಲ್ ಪ್ರೈಮರಿ ಸಂವೇದಕದೊಂದಿಗೆ ಟ್ರಿಪಲ್ ಹಿಂಬದಿಯ ಕ್ಯಾಮೆರಾ ವ್ಯವಸ್ಥೆಯನ್ನು ಒಳಗೊಂಡಿದೆ. ಅಲ್ಲದೆ ಇದರಲ್ಲಿ 3x ಆಪ್ಟಿಕಲ್ ಜೂಮ್‌ನೊಂದಿಗೆ ಮತ್ತೊಂದು 50MP ಮೆಗಾಪಿಕ್ಸೆಲ್ ಸೆನ್ಸರ್ ಮತ್ತು ಮೂರನೇ 50MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್‌ನೊಂದಿಗೆ ಸೆನ್ಸರ್ ಕ್ವಾಡ್ ಫ್ಲ್ಯಾಷ್ ಘಟಕದೊಂದಿಗೆ ಇರುತ್ತವೆ. ಫೋನ್‌ನ ಮುಂಭಾಗದ ಕ್ಯಾಮೆರಾವು ಆಟೋಫೋಕಸ್ ಬೆಂಬಲದೊಂದಿಗೆ 50MP ಮೆಗಾಪಿಕ್ಸೆಲ್ ಸೆನ್ಸರ್ ಅನ್ನು ಹೊಂದಿದೆ.
Tecno Camon 30 Premier 5G ಸ್ಮಾರ್ಟ್ಫೋನ್ 70W ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ Tecno Camon 30 Premier 5G ಸ್ಮಾರ್ಟ್ಫೋನ್ 5000mAh ಬ್ಯಾಟರಿಯನ್ನು ಪ್ಯಾಕ್ ಮಾಡಿದೆ. ಇದು ಸುಮಾರು 45 ನಿಮಿಷಗಳಲ್ಲಿ ಫೋನ್ ಅನ್ನು 0% ಶೂನ್ಯದಿಂದ 100% ಪ್ರತಿಶತದವರೆಗೆ ಚಾರ್ಜ್ ಮಾಡುತ್ತದೆ ಎಂದು ಹೇಳಲಾಗುತ್ತದೆ. ಇದು 5G, 4G, GNSS, Wi-Fi, OTG ಮತ್ತು USB ಟೈಪ್-C ಚಾರ್ಜಿಂಗ್ ಪೋರ್ಟ್ ಸಪೋರ್ಟ್ ಮಾಡುತ್ತದೆ.