Vivo T3 Lite 5G Price Cut
Vivo T3 Lite 5G Price Cut: ವಿವೋ ತನ್ನ ಬಜೆಟ್ ಬೆಲೆಯಲ್ಲಿ ಲೇಟೆಸ್ಟ್ ಮತ್ತು ಪ್ರೀಮಿಯಂ ಲುಕ್ ಹೊಂದಿರುವ Vivo T3 Lite 5G ಸ್ಮಾರ್ಟ್ಫೋನ್ ಬೆಲೆಯನ್ನು ಈಗ ಸಿಕ್ಕಾಪಟ್ಟೆ ಕಡಿಮೆಗೊಳಿಸಿದೆ. ನೀವು ಅಥವಾ ನಿಮಗೆ ತಿಳಿದವರು ಈ ಜಬರ್ದಸ್ತ್ ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಪ್ರಸ್ತುತ ಅಮೆಜಾನ್ ಮೂಲಕ ಅತಿ ಕಡಿಮೆ ಬೆಲೆಗೆ ಖರೀದಿಸಬಹುದು. ಪ್ರಸ್ತುತ ಈ ಸ್ಮಾರ್ಟ್ಫೋನ್ 50MP ಕ್ಯಾಮೆರಾ ಮತ್ತು 5000mAh ಬ್ಯಾಟರಿಯೊಂದಿಗೆ ಬರುವ ಆರಂಭಿಕ ಮಾದರಿಯನ್ನು ಬರೋಬ್ಬರಿ ₹10,399 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಬ್ಯಾಂಕ್ ಆಫರ್ ಮತ್ತು ವಿನಿಮಯ ಬೋನಸ್ (Exchange Offer) ಅಡಿಯಲ್ಲಿ ಇನ್ನೂ ಕೊಂಚ ಕಡಿಮೆ ಬೆಲೆಗೆ ಈ ಪ್ರೀಮಿಯಂ ವಿನ್ಯಾಸದ Vivo T3 Lite 5G ಸ್ಮಾರ್ಟ್ಫೋನ್ ಖರೀದಿಸಬಹುದು.
ನಿಮಗಾಗಿ ಅಥಾವ ನಿಮ್ಮ ಪ್ರೀತಿ ಪಾತ್ರರಿಗಾಗಿ ಗಿಫ್ಟ್ ನೀಡಲು ಕೈಗೆಟಕುವ ಬೆಲೆಗೆ ಹೊಚ್ಚ ಹೊಸ 5G ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ Vivo T3 Lite 5G ನಿಮಗೆ ಅತ್ಯುತ್ತಮ ಆಯ್ಕೆಯಾಗಿದೆ. ಈ ಸ್ಮಾರ್ಟ್ಫೋನ್ ಕಳೆದ ಏಪ್ರಿಲ್ನಲ್ಲಿ ಇದರ ಆರಂಭಿಕ ಸುಮಾರು 13,499 ರೂಗಳಿಗೆ ಪರಿಚಯಿಸಲಾಗಿತ್ತು ಆದರೆ ಇಂದು ಅಮೆಜಾನ್ ಮೂಲಕ ಆರಂಭಿಕ 4GB RAM ಮಾದರಿಯನ್ನು 10,399 ರೂಗಳಿಗೆ ಮತ್ತು ಇದರ 6GB RAM ಮಾದರಿಯನ್ನು 11,584 ರೂಗಳಿಗೆ ಪಟ್ಟಿ ಮಾಡಲಾಗಿದೆ.
ಆದರೆ ಬ್ಯಾಂಕ್ ಆಫರ್ ಮತ್ತು ವಿನಿಮಯ ಬೋನಸ್ (Exchange Offer) ಅಡಿಯಲ್ಲಿ ಸುಮಾರು 9850 ರೂಗಳವರೆಗಿನ ಡಿಸ್ಕೌಂಟ್ ಸಹ ಪಡೆಯಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ. ಇನ್ನೂ ಕೊಂಚ ಕಡಿಮೆ ಬೆಲೆಗೆ ಈ ಪ್ರೀಮಿಯಂ ವಿನ್ಯಾಸದ Vivo T3 Lite 5G ಸ್ಮಾರ್ಟ್ಫೋನ್ ಖರೀದಿಸಬಹುದು.
Also Read: OPPO F29 Pro 5G ಸ್ಮಾರ್ಟ್ಫೋನ್ ಬಿಡುಗಡೆ! ಸೇಲ್ ಬೆಲೆಯೊಂದಿಗೆ ಫೀಚರ್ಗಳೇನು ತಿಳಿಯಿರಿ!
ಸ್ಮಾರ್ಟ್ಫೋನ್ 6.56 ಇಂಚಿನ IPS LCD ಡಿಸ್ಪ್ಲೇಯನ್ನು 90Hz ರಿಫ್ರೆಶ್ ದರ ಮತ್ತು 720 x 1612 ಪಿಕ್ಸೆಲ್ಗಳ ರೆಸಲ್ಯೂಶನ್ನೊಂದಿಗೆ ಬರುತ್ತದೆ. ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದ್ದು 50MP ಪ್ರೈಮರಿ ಕ್ಯಾಮೆರಾ ಮತ್ತು 2MP ಡೆಪ್ತ್ ಸೆನ್ಸಾರ್ ಹೊಂದಿದೆ. ಅಲ್ಲದೆ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ ಮುಂಭಾಗದಲ್ಲಿ 8MP ಸೆನ್ಸರ್ ಸಹ ಹೊಂದಿದೆ. ಫೋನ್ ವಾಟರ್ ಮತ್ತು ಡಸ್ಟ್ ಸುರಕ್ಷಿತವಾಗಿರಲು IP64 ರೇಟಿಂಗ್ ಅನ್ನು ಸಹ ಹೊಂದಿದೆ. ಫೋನ್ ಸಂಪರ್ಕಕ್ಕಾಗಿ ಇದು ಬ್ಲೂಟೂತ್ 5.4, USB 2.0 ಪೋರ್ಟ್, Wi-Fi ಮತ್ತು GPS ಬೆಂಬಲವನ್ನು ಹೊಂದಿದೆ.
Vivo T3 Lite 5G ಸ್ಮಾರ್ಟ್ಫೋನ್ MediaTek Dimension 6300 ಪ್ರೊಸೆಸರ್‌ನಲ್ಲಿ ಫೋನ್ ಕಾರ್ಯನಿರ್ವಹಿಸುತ್ತದೆ. ಆಕ್ಟಾ-ಕೋರ್ ಚಿಪ್‌ಸೆಟ್ ಅನ್ನು Mali-G57 MC2 GPU ನೊಂದಿಗೆ ಜೋಡಿಸಲಾಗಿದೆ. ಇದು Funtouch 14 ಆಧಾರಿತ Android 14 ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿದ್ದು ಇದು ಅಪ್‌ಗ್ರೇಡ್ ಮಾಡಬಹುದಾಗಿದೆ. Vivo T3 Lite 5G ಫೋನ್‌ಗೆ ಶಕ್ತಿಯನ್ನು ಒದಗಿಸಲು 15W ಚಾರ್ಜಿಂಗ್ ಅನ್ನು ಬೆಂಬಲಿಸುವ ದೊಡ್ಡ 5,000mAh ಬ್ಯಾಟರಿಯನ್ನು ಒದಗಿಸಲಾಗಿದೆ.