Samsung Galaxy M35 5G Price Cut
Samsung Galaxy M35 5G Price Cut: ನೀವು ಸ್ಯಾಮ್‌ಸಂಗ್ ಫೋನ್ ಫ್ಯಾನ್ ಆಗಿದ್ದು ನಿಮಗೊಂದು ಹೊಸ ಬ್ಯಾಟರಿ ಮತ್ತು ಡಿಸ್ಪ್ಲೇಯ ಫೋನ್ ಹುಡುಕುತ್ತಿದ್ದರೆ Samsung Galaxy M35 5G ಸ್ಮಾರ್ಟ್ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಭಾರಿ ಬೆಲೆ ಕಳೆದುಕೊಂಡು ಮಾರಾಟವಾಗುತ್ತಿದೆ. ನೀವು ಬಹಳ ದಿನಗಳಿಂದ ಈ ಫೋನ್ ಖರೀದಿಸಲು ಅಥವಾ ಬೇರೆಯವರಿಗೆ ಗಿಫ್ಟ್ ನೀಡಲು ಯೋಜಿಸುತ್ತಿದ್ದರೆ ಇದು ಬೆಸ್ಟ್ ಸಮಯವಾಗಿದೆ.
ಬ್ಯಾಂಕ್ ರಿಯಾಯಿತಿಯಲ್ಲಿ ಅತಿ ಕಡಿಮೆ ಬೆಲೆಗೆ ಖರೀದಿಸಬಹುದು ಆದರೆ ನೀವು ಇದನ್ನು ಯಾಕೆ ಖರೀದಿಸಬೇಕು ಎನ್ನೋ ಪ್ರಶ್ನೆ ನಿಮಗಿದ್ದರೆ ಫೋನ್ 6000mAh ಬ್ಯಾಟರಿಯ Samsung Galaxy M35 5G ಅತಿ ಕಡಿಮೆ ಮಾರಾಟವಾಗುತ್ತಿದ್ದು ಈ ಜಬರ್ದಸ್ತ್ ಡೀಲ್ ಮಿಸ್ ಮಾಡಬೇಡಿ ಅನ್ನೋದು ನನ್ನ ಸಲಹೆ.
ಸ್ಯಾಮ್‌ಸಂಗ್ ಈ ಸ್ಮಾರ್ಟ್ಫೋನ್ ಅನ್ನು ಪ್ರಸ್ತುತ ಲಿಮಿಟೆಡ್ ಸಮಯದವರೆಗೆ ಅತಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಫೋನ್ ಆಫರ್ ಬೆಲೆ ಮತ್ತು ಡಿಸ್ಕೌಂಟ್ ಬಗ್ಗೆ ಮಾತನಾಡುವವುದಾದರೆ ಫೋನ್ ಆರಂಭಿಕ 6GB RAM ಮತ್ತು 128GB ಸ್ಟೋರೇಜ್ 40% ರಿಯಾಯಿತಿಯೊಂದಿಗೆ ಕೇವಲ ₹14,416 ರೂಗಳಿಗೆ ಫ್ಲಿಪ್ಕಾರ್ಟ್ ಪಟ್ಟಿ ಮಾಡಿದೆ.
ಆದರೆ ಇದರ ಮತ್ತೊಂದು 8GB RAM ಮತ್ತು 256GB ಸ್ಟೋರೇಜ್ ಕೇವಲ ₹22,999 ರೂಗಳಿಗೆ ಫ್ಲಿಪ್ಕಾರ್ಟ್ ಪಟ್ಟಿ ಮಾಡಿದೆ. ಆದರೆ ಆಸಕ್ತ ಬಳಕೆದಾರರಿಗೆ HDFC ಕಾರ್ಡ್ ಬಳಸಿಕೊಂಡು ಸುಮಾರು 1000 ರೂಗಳವೆರೆಗೆ ಡಿಸ್ಕೌಂಟ್ ಪಡೆಯಬಹುದು. ಅಂದ್ರೆ ಡಿಸ್ಕೌಂಟ್ ನಂತರ ಆರಂಭಿಕ 6GB RAM ಮತ್ತು 128GB ಸ್ಟೋರೇಜ್ ಕೇವಲ 13,416 ರೂಗಳವರೆಗೆ ಖರೀದಿಸಬಹುದು.
Also Read: ಸ್ಯಾಮ್‌ಸಂಗ್‌ನಿಂದ 43 ಇಂಚಿನ 4K Ultra HD ಸ್ಮಾರ್ಟ್ ಟಿವಿ ಭರ್ಜರಿ ಡಿಸ್ಕೌಂಟ್‌ಗಳೊಂದಿಗೆ ಮಾರಾಟವಾಗುತ್ತಿದೆ.
Samsung Galaxy M35 5G ಸ್ಮಾರ್ಟ್ಫೋನ್ 6.6 ಇಂಚು ಗಾತ್ರದ ಸೂಪರ್ AMOLED ಡಿಸ್ಪ್ಲೇಯನ್ನು ಬೆಂಬಲಿಸುತ್ತದೆ. ಇದು 120Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಇದು 1080×2340 ಪಿಕ್ಸೆಲ್‌ಗಳ ರೆಸಲ್ಯೂಶನ್ 1000 nits ನ ಗರಿಷ್ಠ ಹೊಳಪಿನ ಮಟ್ಟವನ್ನು ಸಹ ಹೊಂದಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಡಿಸ್ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆಯೊಂದಿಗೆ ಬರುತ್ತದೆ. ಸ್ಮಾರ್ಟ್ಫೋನ್ ಟ್ರಿಪಲ್ ಕ್ಯಾಮೆರಾದೊಂದಿಗೆ 50MP ಪ್ರೈಮರಿ ಮತ್ತೊಂದು 8MP ಅಲ್ಟ್ರಾ ವೈಡ್ ಮತ್ತು ಕೊನೆಯದಾಗಿ 2MP ಮ್ಯಾಕ್ರೋ ಸೆನ್ಸರ್ ಹೊಂದಿದೆ. ಮುಂಭಾಗದಲ್ಲಿ ಇದು ಸೆಲ್ಫಿಗಳಿಗಾಗಿ 13MP ಕ್ಯಾಮೆರಾವನ್ನು ಹೊಂದಿದೆ.
Samsung Galaxy M35 5G ಸ್ಮಾರ್ಟ್ಫೋನ್ ಆರಂಭಿಕ 6GB RAM ಮತ್ತು 128GB ಸ್ಟೋರೇಜ್ ಜೊತೆಗೆ ಬರುತ್ತದೆ. ಆಂಡ್ರಾಯ್ಡ್ 14 ಅಡಿಯಲ್ಲಿ ನಡೆಯಲಿರುವ ಈ ಸ್ಮಾರ್ಟ್ಫೋನ್ Exynos 1380 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಕ್ಯಾಮೆರಾಕ್ಕಾಗಿ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಇದೆ. Samsung Galaxy M35 5G ಬೃಹತ್ 6000mAh ಬ್ಯಾಟರಿಯನ್ನು ಹೊಂದಿದೆ. ಇದು 25W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಸಂಪರ್ಕ ಆಯ್ಕೆಗಳಲ್ಲಿ ಡ್ಯುಯಲ್-ಸಿಮ್, 5G, 4G LTE, Wi-Fi, ಬ್ಲೂಟೂತ್ ಮತ್ತು GPS ಸೇರಿವೆ.