Amazon GIF ಸೇಲ್‌ನಲ್ಲಿ Samsung Galaxy S24 FE ಸ್ಮಾರ್ಟ್ಫೋನ್ ಮೇಲೆ ಬರೋಬ್ಬರಿ 6000 ರೂಗಳ ಭಾರಿ ಡಿಸ್ಕೌಂಟ್!

Updated on 29-Sep-2024
HIGHLIGHTS

Samsung Galaxy S24 FE ಸ್ಮಾರ್ಟ್ಫೋನ್ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದಲ್ಲಿ ಬಿಡುಗಡೆಯಾಗಿದೆ.

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದಲ್ಲಿ ಬರೋಬ್ಬರಿ 6000 ರೂಗಳ ಭಾರಿ ಡಿಸ್ಕೌಂಟ್ ಜೊತೆಗೆ 59,999 ರೂಗಳಾಗಿವೆ.

ಸ್ಯಾಮ್‌ಸಂಗ್‌ನ ಹೊಸ ಸ್ಮಾರ್ಟ್‌ಫೋನ್ Samsung Galaxy S24 FE ಸ್ಮಾರ್ಟ್ಫೋನ್ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದಲ್ಲಿ ಬಿಡುಗಡೆಯಾಗಿದೆ. ಇದು ಫ್ಯಾನ್ ಆವೃತ್ತಿಯ ಸ್ಮಾರ್ಟ್‌ಫೋನ್ ಆಗಿದ್ದು ಇದನ್ನು Samsung Galaxy S24 Ultra ಸ್ಮಾರ್ಟ್ಫೋ ಖರೀದಿಸಲು ಬಯಸುವ ಬಳಕೆದಾರರಿಗಾಗಿ ವಿಶೇಷವಾಗಿ ಈ ಸ್ಮಾರ್ಟ್‌ಫೋನ್ ಪರಿಚಯಿಸಲಾಗಿದೆ. ಯಾಕೆಂದರೆ ಹೆಚ್ಚಿನ ಬೆಲೆಯಿಂದಾಗಿ ಅದನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ ಅಂತಹ ಅಭಿಮಾನಿಗಳಿಗಾಗಿ ಸ್ಯಾಮ್‌ಸಂಗ್ ಅಲ್ಟ್ರಾದಂತಹ ವೈಶಿಷ್ಟ್ಯಗಳೊಂದಿಗೆ ಫೋನ್ ಪರಿಚಯಿಸಿದೆ. ಅದರ ಬೆಲೆ ಅಲ್ಟ್ರಾಕ್ಕಿಂತ ಕಡಿಮೆಯಾದರೂ Samsung Galaxy S24 Fan Edition ಸ್ಮಾರ್ಟ್‌ಫೋನ್‌ನ ಆರಂಭಿಕ ಬೆಲೆ ಬ್ಯಾಂಕ್ ಆಫರ್ ಜೊತೆಗೆ 59,999 ರೂಗಳಾಗಿವೆ.

Also Read: Amazon GIF Sale 2024: ಕೈಗೆಟಕುವ ಬೆಲೆಗೆ ಈ ಪ್ರೀಮಿಯಂ 5G Smartphone ಮಾರಾಟ! ಯಾರಿಗುಂಟು ಯಾರಿಗಿಲ್ಲ!

Samsung Galaxy S24 FE ಬೆಲೆ ಮತ್ತು ಕೊಡುಗೆಗಳು

Samsung Galaxy S24 FE ಸ್ಮಾರ್ಟ್ಫೋನ್ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದಲ್ಲಿ ಎರಡು ಸ್ಟೋರೇಜ್ ರೂಪಾಂತರಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಇದರ 8GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ 59,999 ರೂ ಆಗಿದ್ದರೆ 8GB RAM ಮತ್ತು 256 GB ಸ್ಟೋರೇಜ್ ರೂಪಾಂತರವು 65,999 ರೂಗಳಲ್ಲಿ ಫೋನ್ ಬ್ಲೂ, ಗ್ರ್ಯಾಫೈಟ್ ಮತ್ತು ಮಿಂಟ್ ಬಣ್ಣದ ರೂಪಾಂತರಗಳಲ್ಲಿ ಬರುತ್ತದೆ. ಅಕ್ಟೋಬರ್ 3 ರಿಂದ ಭಾರತದಲ್ಲಿ ಇದರ ಮಾರಾಟ ಪ್ರಾರಂಭವಾಗಲಿದೆ. ಫೋನ್ ಅನ್ನು ಸ್ಯಾಮ್‌ಸಂಗ್ ವೆಬ್‌ಸೈಟ್ ಮತ್ತು ರಿಟೇಲ್ ಸ್ಟೋರ್‌ಗಳಿಂದ ಖರೀದಿಸಬಹುದು.

Samsung Galaxy S24 FE ಫೀಚರ್ ವಿಶೇಷತೆಗಳು

Samsung Galaxy S24 FE ವಿಶೇಷತೆಗಳು ಫೋನ್ 6.7 ಇಂಚಿನ ಪೂರ್ಣ-HD + ಡೈನಾಮಿಕ್ AMOLED 2X ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇ 120Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಬರುತ್ತದೆ. ಸ್ಯಾಮ್‌ಸಂಗ್‌ನ ಆಂತರಿಕ ಚಿಪ್‌ಸೆಟ್ Exynos 2400e ಅನ್ನು ಫೋನ್‌ನಲ್ಲಿ ನೀಡಲಾಗಿದೆ. ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಇದರ ಮುಖ್ಯ ಕ್ಯಾಮೆರಾ 50MP ಆಗಿದೆ. ಇದು OIS ಬೆಂಬಲದೊಂದಿಗೆ ಬರುತ್ತದೆ. ಅಲ್ಲದೆ 8MP ಟೆಲಿಫೋಟೋ ಲೆನ್ಸ್ ನೀಡಲಾಗಿದೆ. ಫೋನ್ 12MP ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಅನ್ನು ಹೊಂದಿದೆ. ಫೋನ್ ಸೆಲ್ಫಿಗಾಗಿ 10MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.

ಫೋನ್ 4700mAh ಬ್ಯಾಟರಿಯನ್ನು ಹೊಂದಿದೆ. ಇದು 25W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಬರುತ್ತದೆ. ಫೋನ್ IP68 ರೇಟಿಂಗ್‌ನೊಂದಿಗೆ ಬರುತ್ತದೆ. ಫೋನ್ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್ ಆಧಾರಿತ One UI 6.1 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು Google ನ ಸರ್ಕಲ್ ಟು ಸರ್ಚ್, ಲೈವ್ ಟ್ರಾನ್ಸ್‌ಲೇಟ್ ಮತ್ತು ಇಂಟರ್‌ಪ್ರಿಟರ್ ಮೋಡ್, ನೋಟ್ ಅಸಿಸ್ಟ್ ಮತ್ತು ಕಂಪೋಸರ್ ಅನ್ನು ಹೊಂದಿದೆ. ಸ್ಯಾಮ್‌ಸಂಗ್ ಭದ್ರತಾ ವೈಶಿಷ್ಟ್ಯಗಳನ್ನು ಫೋನ್‌ನಲ್ಲಿ ನೀಡಲಾಗಿದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :