ಸ್ಯಾಮ್‌ಸಂಗ್‌ನಿಂದ ಜಬರ್ದಸ್ತ್ ಡೀಲ್! ಈ ಎರಡು 5G Smartphones ಮೇಲೆ ಬರೋಬ್ಬರಿ 11,000 ರೂಗಳ ಡಿಸ್ಕೌಂಟ್!

ಸ್ಯಾಮ್‌ಸಂಗ್‌ನಿಂದ ಜಬರ್ದಸ್ತ್ ಡೀಲ್! ಈ ಎರಡು 5G Smartphones ಮೇಲೆ ಬರೋಬ್ಬರಿ 11,000 ರೂಗಳ ಡಿಸ್ಕೌಂಟ್!
HIGHLIGHTS

ಸ್ಯಾಮ್‌ಸಂಗ್‌ ಸದ್ದಿಲ್ಲದೆ ತನ್ನ ವೆಬ್‌ಸೈಟ್‌ನಲ್ಲಿ ನಿಮಗಾಗಿ ಅದ್ದೂರಿಯ ಡೀಲ್ ಅನ್ನು ಪಟ್ಟಿ ಮಾಡಿದೆ.

Samsung Galaxy S24 5G ಮತ್ತು Samsung Galaxy Z Flip 6 5G ಸ್ಮಾರ್ಟ್ಫೋನ್ ಬೆಲೆ ಭಾರಿ ಡಿಸ್ಕೌಂಟ್.

ಸ್ಯಾಮ್‌ಸಂಗ್‌ ವಿನಿಮಯ ಬೋನಸ್‌ ಜೊತೆಗೆ ಅತಿ ಕಡಿಮೆ ಬೆಲೆಗೆ ಖರೀದಿಸುವ ಸುವರ್ಣಾವಕಾಶವನ್ನು ನೀಡುತ್ತಿದೆ.

Samsung 5G Smartphones: ನೀವು ಸ್ಯಾಮ್‌ಸಂಗ್‌ನ ಹೊಸ ಮತ್ತು ಅದ್ದೂರಿಯ ಫೀಚರ್ಗಳುಳ್ಳ ಲೇಟೆಸ್ಟ್ ಸ್ಮಾರ್ಟ್ಫೋನ್ (5G Smartphones) ಖರೀದಿಸಲು ಯೋಚಿಸುತ್ತಿದ್ದರೆ ಸ್ಯಾಮ್‌ಸಂಗ್‌ ಸದ್ದಿಲ್ಲದೆ ತನ್ನ ವೆಬ್‌ಸೈಟ್‌ನಲ್ಲಿ ನಿಮಗಾಗಿ ಅದ್ದೂರಿಯ ಡೀಲ್ ಅನ್ನು ಪಟ್ಟಿ ಮಾಡಿದೆ. ಈ ಬೆಸ್ಟ್ ಡೀಲ್ ಅಡಿಯಲ್ಲಿ ಜನಪ್ರಿಯವಾಗಿರುವ Samsung Galaxy S24 5G ಮತ್ತು Samsung Galaxy Z Flip 6 5G ಎಂಬ ಸ್ಮಾರ್ಟ್ಫೋನ್ಗಳನ್ನು ಸೇರಿಸಿದ್ದು ಇವುಗಳ ಮೇಲೆ ಬರೋಬ್ಬರಿ 11,000 ಸಾವಿರ ರೂಗಳವರೆಗಿನ ರಿಯಾಯಿತಿಯೊಂದಿಗೆ ಭಾರಿ ಕ್ಯಾಶ್‌ಬ್ಯಾಕ್ ಅನ್ನು ಸಹ ನೀಡಲಾಗುತ್ತಿದೆ. ಅಲ್ಲದೆ ಸ್ಮಾರ್ಟ್ಫೋನ್ ಮೇಲೆ ವಿನಿಮಯ ಬೋನಸ್‌ ಸಹ ನಿಡುತ್ತಿದ್ದು ಅತಿ ಕಡಿಮೆ ಬೆಲೆಗೆ ಖರೀದಿಸುವ ಸುವರ್ಣಾವಕಾಶವನ್ನು ಸ್ಯಾಮ್‌ಸಂಗ್‌ ನೀಡುತ್ತಿದೆ.

Samsung Galaxy S24 5G Smartphones

ಸ್ಯಾಮ್‌ಸಂಗ್‌ ತನ್ನ ಲೇಟೆಸ್ಟ್ 8GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ರೂಪಾಂತರಗಳನ್ನು ಹೊಂದಿರುವ ಫೋನ್ 70,999 ರೂಗಳಾಗಿದ್ದು ಈ ಮಾರಾಟದಲ್ಲಿ ನೀವು ಅದನ್ನು ಸುಮಾರು 10,000 ರೂ.ಗಳ ತ್ವರಿತ ರಿಯಾಯಿತಿಯೊಂದಿಗೆ ಖರೀದಿಸಬಹುದು. ಈ ರಿಯಾಯಿತಿಗಾಗಿ ನೀವು HDFC ಬ್ಯಾಂಕ್ ಕಾರ್ಡ್‌ನೊಂದಿಗೆ ಪಾವತಿಸಬೇಕಾಗುತ್ತದೆ. ಸ್ಯಾಮ್‌ಸಂಗ್ ಆಕ್ಸಿಸ್ ಬ್ಯಾಂಕಿನ ಕಾರ್ಡ್ ಹೊಂದಿರುವವರು ಕಂಪನಿಗೆ 10 % ನಷ್ಟು ಕ್ಯಾಶ್‌ಬ್ಯಾಕ್ ನೀಡುತ್ತಿದ್ದಾರೆ. ವಿನಿಮಯ ಪ್ರಸ್ತಾಪದಲ್ಲಿ ನೀವು 10,000 ರೂಗಳ ಪ್ರಯೋಜನವನ್ನು ಪಡೆಯಬಹುದು.

Samsung 5G Smartphones (1)
Samsung 5G Smartphones

Samsung Galaxy S24 5G ಫೀಚರ್ ಬಗ್ಗೆ ಮಾತನಾಡುವುದಾದರೆ ಸ್ಮಾರ್ಟ್ಫೋನ್ FHD+ ರೆಸಲ್ಯೂಶನ್ ಡಿಸ್ಪ್ಲೇಯೊಂದಿಗೆ ಪಡೆಯುತ್ತೀರಿ. ಇದರ ಪ್ರೈಮರಿ ಕ್ಯಾಮೆರಾ 50MP ಮೆಗಾಪಿಕ್ಸೆಲ್‌ಗಳು. ಅದೇ ಸಮಯದಲ್ಲಿ ಕಂಪನಿಯು ಸೆಲ್ಫಿಗಾಗಿ ಫೋನ್‌ನಲ್ಲಿ 12MP ಮೆಗಾಪಿಕ್ಸೆಲ್ ಮೆಗಾಪಿಕ್ಸೆಲ್ ಕ್ಯಾಮೆರಾದೊಂದಿಗೆ ಕೊನೆಯದಾಗಿ ಇದರಲ್ಲಿ ಪವರ್ ತುಂಬಲು 4000 mAh ಬ್ಯಾಟರಿಯನ್ನು ನೀಡಲಾಗಿದೆ.

Samsung Galaxy Z Flip 6 5G

ಈ ಬೆಸ್ಟ್ Samsung Galaxy Z Flip 6 5G ಸ್ಮಾರ್ಟ್ಫೋನ್ 12GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ರೂಪಾಂತರಗಳನ್ನು ಹೊಂದಿರುವ ಫೋನ್ 10,9999 ರೂಗಳಾಗಿವೆ. ಫೋನ್ ಖರೀದಿಸಲು ನೀವು HDFC ಬ್ಯಾಂಕ್ ಕಾರ್ಡ್‌ನೊಂದಿಗೆ ಪಾವತಿಸಿದರೆ ನೀವು 11,000 ಸಾವಿರ ರೂಪಾಯಿಗಳ ರಿಯಾಯಿತಿಯನ್ನು ಪಡೆಯುತ್ತೀರಿ. 10 % ಹೆಚ್ಚುವರಿ ಕ್ಯಾಶ್‌ಬ್ಯಾಕ್‌ಗಾಗಿ ನೀವು ಸ್ಯಾಮ್‌ಸಂಗ್ ಆಕ್ಸಿಸ್ ಬ್ಯಾಂಕ್ ಕಾರ್ಡ್‌ನೊಂದಿಗೆ ಪಾವತಿಸಬೇಕಾಗುತ್ತದೆ.

Also Read: Ration Card: ನಿಮ್ಮ ಪಡಿತರ ಚೀಟಿಗೆ ಹೊಸ ಸದಸ್ಯರನ್ನು ಸೇರಿಸುವುದು ಹೇಗೆ? ಈ ಹಂತಗಳನ್ನು ಅನುಸರಿಸಿ ಸಾಕು!

ವಿನಿಮಯ ಕೊಡುಗೆಗಳು ಮತ್ತು ತ್ವರಿತ ರಿಯಾಯಿತಿಗಳ ಪ್ರಯೋಜನವನ್ನು ಒಟ್ಟಿಗೆ ತೆಗೆದುಕೊಳ್ಳಲಾಗುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ. ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ ಫೋನ್‌ನಲ್ಲಿ ನೀವು 2640×1080 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ FHD+ ಪ್ರೈಮರಿ ಡಿಸ್ಪ್ಲೇಯನ್ನು ಹೊಂದಿದೆ. ಫೋನ್ 50MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿಗಾಗಿ ನೀವು 10MP ಮೆಗಾಪಿಕ್ಸೆಲ್ ಕ್ಯಾಮೆರಾದೊಂದಿಗೆ ಕೊನೆಯದಾಗಿ ಇದರಲ್ಲಿ ಪವರ್ ತುಂಬಲು ಅದೇ 4000mAh ಬ್ಯಾಟರಿಯನ್ನು ಹೊಂದಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo