Samsung Galaxy S23 FE 5G: ಅತಿ ಕಡಿಮೆ ಬೆಲೆ ಮಾರಾಟವಾಗುತ್ತಿರುವ ಸ್ಯಾಮ್‌ಸಂಗ್ ಸ್ಮಾರ್ಟ್ ಫೋನ್!
ಅಮೆಜಾನ್ ಈಗ ಸ್ಯಾಮ್‌ಸಂಗ್ ಪ್ರೀಮಿಯಂ ಸ್ಮಾರ್ಟ್ಫೋನ್ ಮೇಲೆ ಸಿಕ್ಕಾಪಟ್ಟೆ ಡೀಲ್ ಅನ್ನು ನೀಡುತ್ತಿದೆ.
Samsung Galaxy S23 FE 5G ಸ್ಮಾರ್ಟ್ ಫೋನ್ ಪ್ರಸ್ತುತ 50% ಅಂದ್ರೆ ಅರ್ಧದಷ್ಟು ಬೆಲೆಗೆ ನೀಡುತ್ತಿದೆ.
Samsung Galaxy S23 FE 5G ಫೋನ್ ಭರ್ಜರಿ ರಿಯಾಯಿತಿ ಮತ್ತು ಬ್ಯಾಂಕ್ ಆಫರ್ ಜೊತೆಗೆ ಕೇವಲ ₹31,249 ರೂಗಳಿಗೆ ಖರೀದಿಸುವ ಅವಕಾಶ.
Samsung Galaxy S23 FE 5G Price Drop: ಅಮೆಜಾನ್ ಈಗ ಸ್ಯಾಮ್‌ಸಂಗ್ ಪ್ರೀಮಿಯಂ ಸ್ಮಾರ್ಟ್ಫೋನ್ ಮೇಲೆ ಸಿಕ್ಕಾಪಟ್ಟೆ ಡೀಲ್ ಅನ್ನು ನೀಡುತ್ತಿದೆ. ಅಮೆಜಾನ್ ಈಗಷ್ಟೇ ತನ್ನ ಮಾರಾಟವನ್ನು ಮುಗಿಸಿದರೂ ಬಿಗ್ ಬಚಾತ್ ಅಡಿಯಲ್ಲಿ ಸದ್ದಿಲ್ಲದೆ ಇನ್ನೂ ಅನೇಕ ಗ್ಯಾಜೆಟ್‌ಗಳ ಮೇಲೆ ಬಂಪರ್ ರಿಯಾಯಿತಿಗಳನ್ನು ನೀಡುತ್ತಿದೆ. Samsung Galaxy S23 FE 5G ಸ್ಮಾರ್ಟ್ ಫೋನ್ ಪ್ರಸ್ತುತ 50% ಅಂದ್ರೆ ಅರ್ಧದಷ್ಟು ಬೆಲೆಗೆ ಅತಿ ಕಡಿಮೆ ಬೆಲೆ ಮಾರಾಟವಾಗುತ್ತಿರುವ ಸ್ಯಾಮ್‌ಸಂಗ್ ಸ್ಮಾರ್ಟ್ ಫೋನ್ ಮೇಲೆ ಬರೋಬ್ಬರಿ 40,000 ರಿಂದ 45,000 ರೂಗಳ ಭರ್ಜರಿ ರಿಯಾಯಿತಿ ಮತ್ತು ಬ್ಯಾಂಕ್ ಆಫರ್ ಜೊತೆಗೆ ಕೇವಲ ₹31,249 ರೂಗಳಿಗೆ ಖರೀದಿಸುವ ಅವಕಾಶವಿದೆ.
Samsung Galaxy S23 FE 5G ಆಫರ್ ಬೆಲೆ
ಈ ಸ್ಮಾರ್ಟ್ಫೋನ್ ಮೇಲೆ ಬರೋಬ್ಬರಿ 40,000 ರಿಂದ 45,000 ರೂಗಳ ಭರ್ಜರಿ ರಿಯಾಯಿತಿಯೊಂದಿಗೆ ಲಭ್ಯವಿದ್ದು ಪ್ರಸ್ತುತ ಅಮೆಜಾನ್ ಮೂಲಕ ಈ ಲೇಟೆಸ್ಟ್ Samsung Galaxy S23 FE ಅನ್ನು ಇದರ 8GB RAM ಮತ್ತು 128GBಸ್ಟೋರೇಜ್ ₹32,999 ರೂಗಳಿಗೆ ಪಟ್ಟಿ ಮಾಡಲಾಗಿದ್ದು ಇದರ 8GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ರೂ 37,000 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಬ್ಯಾಂಕ್ ಆಫರ್ ಜೊತೆಗೆ ಕೇವಲ ₹31,249 ರೂಗಳಿಗೆ ಖರೀದಿಸುವ ಅವಕಾಶವಿದೆ. ಈ Samsung Galaxy S23 FE ಸ್ಮಾರ್ಟ್ ಫೋನ್ ಕ್ರೀಮ್, ಪರ್ಪಲ್, ಗ್ರ್ಯಾಫೈಟ್ ಮತ್ತು ಮಿಂಟ್ ಎಂಬ ನಾಲ್ಕು ಬಣ್ಣ ಆಯ್ಕೆಗಳಲ್ಲಿ ಪಟ್ಟಿ ಮಾಡಲಾಗಿದೆ.
ಅಮೆಜಾನ್ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿದಾರರು ಫೋನ್‌ನಲ್ಲಿ ಹೆಚ್ಚುವರಿ 5% ರಿಯಾಯಿತಿಯನ್ನು ಪಡೆಯಬಹುದು. ಕಂಪನಿಯು Samsung Galaxy S23 FE ಸ್ಮಾರ್ಟ್ ಫೋನ್ ಮೇಲೆ ಒಟ್ಟು 1750 ರೂಪಾಯಿಗಳ ಬ್ಯಾಂಕ್ ಆಫರ್ ಪಡೆಯುವುದರೊಂದಿಗೆ ಸುಮಾರು 25,700 ರೂಗಳವೆರೆಗೆ ವಿನಿಮಯ ರಿಯಾಯಿತಿಯನ್ನು ನೀಡುತ್ತಿದೆ. ಈ ಡೀಲ್ ಅನ್ನು ಸುಲಭಗೊಳಿಸಲು ನೀವು ಯಾವುದೇ ವೆಚ್ಚವಿಲ್ಲದ EMI ಕೊಡುಗೆಗಳನ್ನು ಸಹ ನೋಡಬಹುದು.
Also Read: Traffic Challan: ನಿಮ್ಮ ಸ್ಮಾರ್ಟ್ ಫೋನಲ್ಲಿ ಈ ಅಪ್ಲಿಕೇಶನ್ ಇದ್ರೆ ಸಾಕು, ನೋ ಚಲನ್ ನೋ ಟೆಕ್ಷನ್!
Samsung Galaxy S23 FE 5G ವಿಶೇಷಣಗಳು:
Samsung Galaxy S23 FE ಸ್ಮಾರ್ಟ್ ಫೋನ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯೊಂದಿಗೆ 6.4 ಇಂಚಿನ FHD+ ಡೈನಾಮಿಕ್ AMOLED 2X 120Hz ಡಿಸ್ಪ್ಲೇ ಹೊಂದಿದೆ. Samsung Galaxy S23 FE ಸ್ಮಾರ್ಟ್ ಫೋನ್ ಆಕ್ಟಾ-ಕೋರ್ Samsung Exynos 2200 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಬಿಡುಗಡೆಯ ಸಮಯದಲ್ಲಿ Samsung Galaxy S23 FE ಸ್ಮಾರ್ಟ್ ಫೋನ್ ಆಂಡ್ರಾಯ್ಡ್ 13 ಅನ್ನು ಹೊಂದಿದ್ದರೂ ಫೋನ್ ಪ್ರಸ್ತುತ ಆಂಡ್ರಾಯ್ಡ್ 14 ನಲ್ಲಿ One UI 6.1 ಅಪ್‌ಡೇಟ್‌ನೊಂದಿಗೆ ಚಾಲನೆಯಲ್ಲಿದೆ.
Samsung Galaxy S23 FE ಸ್ಮಾರ್ಟ್ ಫೋನ್ IP68-ರೇಟೆಡ್ ಸ್ಮಾರ್ಟ್‌ಫೋನ್ 25W ವೈರ್ಡ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್‌ನೊಂದಿಗೆ 4500mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಕ್ಯಾಮೆರಾದ ಕುರಿತು ಮಾತನಾಡುವುದಾದರೆ Samsung Galaxy S23 FE ಸ್ಮಾರ್ಟ್ ಫೋನ್ 50MP OIS ಪ್ರೈಮರಿ ಮತ್ತು 12MP ಅಲ್ಟ್ರಾ ವೈಡ್ ಜೊತೆಗೆ 8MP ಟೆಲಿಫೋಟೋ ಹಿಂಭಾಗ ಹೊಂದಿದೆ. ಅಲ್ಲದೆ ಈ ಫೋನ್ ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 10MP ಕ್ಯಾಮೆರಾವನ್ನು ಸಹ ಹೊಂದಿದೆ. ಅಲ್ಲದೆ ಸಂಪರ್ಕದ ಬಗ್ಗೆ ಮಾತನಾಡುವುದಾದರೆ ಹ್ಯಾಂಡ್‌ಸೆಟ್ Wi-Fi 6, ಬ್ಲೂಟೂತ್ 5.3, NFC ಮತ್ತು USB 3.2 Gen 1 ಟೈಪ್-C ಪೋರ್ಟ್ ಅನ್ನು ನೀಡುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile