Wow Offer: ಎಂದು ಕಾಣದ ಅದ್ದೂರಿಯ ಬೆಲೆ ಕಡಿತ ಕಂಡ Samsung Galaxy S21 FE 5G!

Updated on 01-Oct-2024
HIGHLIGHTS

ಅತಿ ಹೆಚ್ಚು ಮಾರಾಟವಾದ ಮತ್ತು ಇನ್ನೂ ಹೆಚ್ಚು ಆಕರ್ಷಣೆಯಲ್ಲಿರುವ Samsung Galaxy S21 FE 5G ಈಗ ಅದ್ದೂರಿಯ ಬೆಲೆ ಕಡಿತವನ್ನು ಕಂಡಿದೆ.

Samsung Galaxy S21 FE 5G ಸ್ಮಾರ್ಟ್ಫೋನ್ ಕೇವಲ 27,999 ರೂಗಳಿಗೆ ಪಟ್ಟಿಯಾಗಿ ಮಾರಾಟವಾಗುತ್ತಿದೆ.

Amazon ಸೇಲ್ ಪ್ರಯುಕ್ತ SBI ಕಾರ್ಡ್ ಬಳಸಿ EMI ಸೌಲಭ್ಯದೊಂದಿಗೆ ಖರೀದಿಸುವವರಿಗೆ ಸುಮಾರು 1250 ರೂಗಳವರೆಗೆ ತ್ವರಿತ ಡಿಸ್ಕೌಂಟ್ ಸಹ ನೀಡುತ್ತಿದೆ.

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದಲ್ಲಿ (Amazon GIF Sale 2024) ಸ್ಯಾಮ್‌ಸಂಗ್ ಸ್ಮಾರ್ಟ್ಫೋನ್ (Samsung Smartphone) ಎರಡು ವರ್ಷದ ಹಿಂದೆ ಅಂದ್ರೆ ಜನವರಿ 2022 ರಂದು ಬಿಡುಗಡೆಯಾಗಿ ಅತಿ ಹೆಚ್ಚು ಮಾರಾಟವಾದ ಮತ್ತು ಇನ್ನೂ ಹೆಚ್ಚು ಆಕರ್ಷಣೆಯಲ್ಲಿರುವ Samsung Galaxy S21 FE 5G ಈಗ ಅದ್ದೂರಿಯ ಬೆಲೆ ಕಡಿತವನ್ನು ಕಂಡಿದೆ.

Samsung Galaxy S21 FE 5G ಸ್ಮಾರ್ಟ್ಫೋನ್ ತನ್ನ ವೆಬ್‌ಸೈಟ್‌ನಲ್ಲಿ ಇನ್ನೂ ತನ್ನ 8GB RAM ಮತ್ತು 256GB ಸ್ಟೋರೇಜ್ ರೂಪಾಂತರಕ್ಕೆ 35,999 ರೂಗಳಿಗೆ ಪಟ್ಟಿ ಮಾಡಿದೆ. ಆದರೆ ಈ ಸ್ಮಾರ್ಟ್ಫೋನ್ ಅನ್ನು ಈಗ ಅಮೆಜಾನ್‌ನಲ್ಲಿ ಭಾರಿ ರಿಯಾಯಿತಿಯೊಂದಿಗೆ ಮಾರಾಟವಾಗುತ್ತಿರುವ ಈ Samsung Galaxy S21 FE 5G ಸ್ಮಾರ್ಟ್ಫೋನ್ ಕೇವಲ 27,999 ರೂಗಳಿಗೆ ಪಟ್ಟಿಯಾಗಿ ಮಾರಾಟವಾಗುತ್ತಿದೆ ಅಲ್ಲದೆ ಇದರಲ್ಲಿ ಬ್ಯಾಂಕ್ ಆಫರ್ ಸಹ ನೀಡಲಾಗುತ್ತಿರುವ ಕಾರಣ ಮಾರಾಟದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.

Also Read: Bumper Offer: ಕೇವಲ 9 ಸಾವಿರಕ್ಕೆ ಮಾರಾಟವಾಗುತ್ತಿರುವ ಸ್ಯಾಮ್‍ಸಂಗ್‍ನ ಹೊಸ 5G ಸ್ಮಾರ್ಟ್ಫೋನ್!

Samsung Galaxy S21 FE 5G ಹೊಸ ಬೆಲೆ ಮತ್ತು ಆಫರ್ಗಳೇನು?

ಮೊದಲಿಗೆ ಈ ಸ್ಯಾಮ್‌ಸಂಗ್ ಸ್ಮಾರ್ಟ್ಫೋನ್ ಒಟ್ಟಾರೆಯಾಗಿ 4 ಬಣ್ಣಗಳಲ್ಲಿ ಒಂದೇ ಒಂದು ವೆರಿಯಂಟ್ ಮೂಲಕ ಲಭ್ಯವಿದೆ. ಈಗಾಗಲೇ ಹೇಳಿರುವಂತೆ Samsung Galaxy S21 FE 5G ಸ್ಮಾರ್ಟ್ಫೋನ್ ತನ್ನ ವೆಬ್‌ಸೈಟ್‌ನಲ್ಲಿ ಇನ್ನೂ ತನ್ನ 8GB RAM ಮತ್ತು 256GB ಸ್ಟೋರೇಜ್ ರೂಪಾಂತರಕ್ಕೆ 35,999 ರೂಗಳಿಗೆ ಪಟ್ಟಿ ಮಾಡಲಾಗಿದ್ದು ಇದು ಈಗ ಅಮೆಜಾನ್‌ನಲ್ಲಿ ಭಾರಿ ರಿಯಾಯಿತಿಯಲ್ಲಿ ಪಡೆದುಕೊಳ್ಳಲು ಸಿದ್ಧವಾಗಿದೆ.

Samsung Galaxy S21 FE 5G ಸ್ಮಾರ್ಟ್ಫೋನ್ ಅಮೆಜಾನ್ ಮೂಲಕ ಕೇವಲ 27,999 ರೂಗಳಿಗೆ ಮಾರಾಟವಾಗುತ್ತಿದೆ. ಅಲ್ಲದೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಪ್ರಯುಕ್ತ SBI ಕಾರ್ಡ್ ಬಳಸಿ EMI ಸೌಲಭ್ಯದೊಂದಿಗೆ ಖರೀದಿಸುವವರಿಗೆ ಸುಮಾರು 1250 ರೂಗಳವರೆಗೆ ತ್ವರಿತ ಡಿಸ್ಕೌಂಟ್ ಸಹ ನೀಡುತ್ತಿದೆ. ಈ ಮೂಲಕ ಅತಿ ಕಡಿಮೆ ಬೆಲೆಗೆ Samsung Galaxy S21 FE 5G ಸ್ಮಾರ್ಟ್ಫೋನ್ ಖರೀದಿಸಬಹುದು.

Samsung Galaxy S21 FE 5G ಫೀಚರ್ಗಳೇನು?

ಈ ಜನಪ್ರಿಯ Samsung Galaxy S21 FE 5G ಸ್ಮಾರ್ಟ್ಫೋನ್ 120Hz ರಿಫ್ರೆಶ್ ದರದ 6.4 ಇಂಚಿನ Dynamic AMOLED ಡಿಸ್‌ಪ್ಲೇಯನ್ನು 2340 x 1080 ರೆಸಲೂತಿಒಣ ಜೊತೆಗೆ ಬರುತ್ತದೆ. ಅಲ್ಲದೆ Samsung Galaxy S21 FE 5G ಸ್ಮಾರ್ಟ್ಫೋನ್ 12MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ, 12MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 8MP ಟೆಲಿಫೋಟೋ ಕ್ಯಾಮೆರಾವನ್ನು ಒಳಗೊಂಡಿರುವ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಮುಂಭಾಗದಲ್ಲಿ ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 32MP ಸೆಲ್ಫಿ ಕ್ಯಾಮೆರಾವನ್ನು ಸಹ ಪಂಚ್ ಹೋಲ್ ಡಿಸ್ಪ್ಲೇಯಲ್ಲಿ ನೀಡಲಾಗಿದೆ.ಅಲ್ಲದೆ ವಿಶೇಷವಾಗಿ ಈ ಸ್ಮಾರ್ಟ್ಫೋನ್ ಹಿಂಭಾಗದಲ್ಲಿ ಆಪ್ಟಿಕಲ್ ವಿಡಿಯೋ ಮತ್ತು ಇಮೇಜ್ ಸ್ಟೆಬಿಲೈಸೇಶನ್ (OIS) ಫೀಚರ್ ಅನ್ನು ಸಹ ಒಳಗೊಂಡಿದೆ.

Samsung Galaxy S21 FE 5G ಸ್ಮಾರ್ಟ್ಫೋನ್ 8GB RAM ಮತ್ತು ಒಂದೇ ಒಂದು 256GB ಸ್ಟೋರೇಜ್ ಕಾನ್ಫಿಗರೇಶನ್‌ನಲ್ಲಿ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ Snapdragon 888 ಪ್ರೊಸೆಸರ್ ಜೊತೆಗೆ ಆಂಡ್ರಾಯ್ಡ್ 14 ಅನ್ನು ಆಧರಿಸಿದ್ದು ಜೊತೆಗೆ ಪ್ಯಾಕ್ ಮಾಡಲಾಗಿದೆ. Samsung Galaxy S21 FE 5G ಸ್ಮಾರ್ಟ್‌ಫೋನ್ 25W ಚಾರ್ಜಿಂಗ್ ಬೆಂಬಲದೊಂದಿಗೆ 4500mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಇದು ಸ್ಮಾರ್ಟ್‌ಫೋನ್‌ಗೆ ಎರಡು ದಿನಗಳವರೆಗೆ ಪವರ್ ನೀಡುತ್ತದೆ. ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್, 3.5 ಎಂಎಂ ಆಡಿಯೊ ಜ್ಯಾಕ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಇತರ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :