32MP ಸೆಲ್ಫಿ ಕ್ಯಾಮೆರಾದ Samsung Galaxy S21 FE 5G ಸದ್ದಿಲ್ಲದೆ ಬೆಲೆ ಕಡಿತ! ಹೊಸ ಬೆಲೆ ಎಷ್ಟು ಗೊತ್ತಾ?
Samsung Galaxy S21 FE 5G ಸ್ಮಾರ್ಟ್ಫೋನ್ ಮೇಲೆ ಸದ್ದಿಲ್ಲದೆ ಇದ್ದಕ್ಕಿದ್ದಂತೆ ಬೆಲೆಯನ್ನು ಕಡಿತಗೊಳಿಸಿದೆ.
ಸ್ಯಾಮ್‌ಸಂಗ್ 8GB ರೂಪಾಂತರದಲ್ಲಿ ಬರೋಬ್ಬರಿ 10000 ರೂಗಳ ಬೆಲೆಯನ್ನು ಇಳಿಸಿದೆ.
Samsung Galaxy S21 FE 5G ಹೊಸ ಬೆಲೆ ಆಫರ್ ಮತ್ತು ಫೀಚರ್‌ಗಳನ್ನು ಈ ಕೆಳಗೆ ತಿಳಿಯಿರಿ.
ಭಾರತದಲ್ಲಿ ಸ್ಯಾಮ್‌ಸಂಗ್ ತನ್ನ ಜನಪ್ರಿಯ ಮತ್ತು ಹೆಚ್ಚು ಮಾರಾಟವಾಗುತ್ತಿರುವ ಹೊಸ Samsung Galaxy S21 FE 5G ಸ್ಮಾರ್ಟ್ಫೋನ್ ಅಮೆಜಾನ್ ಮೂಲಕ ಸದ್ದಿಲ್ಲದೆ ಇದ್ದಕ್ಕಿದ್ದಂತೆ ಉತ್ತಮ ಬೆಲೆಯನ್ನು ಕಡಿತಗೊಳಿಸಿದೆ. ಈ ಸ್ಮಾರ್ಟ್ಫೋನ್ ನಿಮಗೆ ಖರೀದಿಸಲು ಪ್ರಸ್ತುತ 8GB RAM ಮತ್ತು 256GB ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಸ್ಯಾಮ್‌ಸಂಗ್ ಈ ರೂಪಾಂತರಗಳಲ್ಲಿ ಸ್ಯಾಮ್‌ಸಂಗ್ ಬರೋಬ್ಬರಿ 10000 ರೂಗಳ ಬೆಲೆಯನ್ನು ಇಳಿಸಿದೆ. ಇದರ ಹೈಲೈಟ್ ಅಂದರೆ 32MP ಸೆಲ್ಫಿ ಕ್ಯಾಮೆರಾ ಮತ್ತು ಉತ್ತಮ ಬ್ಯಾಟರಿ, ಸ್ಟೋರೇಜ್ ಮತ್ತು ಡಿಸ್ಪ್ಲೇಯಾಗಿದೆ. ಈ Samsung Galaxy S21 FE 5G ಹೊಸ ಬೆಲೆ ಆಫರ್ ಮತ್ತು ಫೀಚರ್‌ಗಳನ್ನು ಈ ಕೆಳಗೆ ತಿಳಿಯಿರಿ.
Also Read: OPPO K12x 5G ಭಾರತದಲ್ಲಿ 29ನೇ ಜೂಲೈಗೆ ಬಿಡುಗಡೆಯಾಗಲು ಸಜ್ಜಾಗಿದೆ! ನಿರೀಕ್ಷಿತ ವಿಶೇಷತೆಗಳೇನು?
ಸ್ಯಾಮ್‌ಸಂಗ್ Galaxy S21 FE 5G ಹೊಸ ಬೆಲೆ ಮತ್ತು ಲಭ್ಯತೆ
ಸ್ಯಾಮ್‌ಸಂಗ್‌ನ ಈ ಅತ್ಯುತ್ತಮ 5G ಸ್ಮಾರ್ಟ್ಫೋನ್ ಕಳೆದ ವರ್ಷ ಜೂಲೈ 2023 ರಂದು ಅದ್ದೂರಿಯಾಗಿ ಬಿಡುಗಡೆಯಾಗಿ ಈವರೆಗೆ ಮಾರಾಟವಾಗುತ್ತಿದೆ. ಇದನ್ನು ಆಸಕ್ತರು 8GB RAM ಮತ್ತು 128GB ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯವಿದ್ದು ಈ Samsung Galaxy S21 FE 5G ಸ್ಮಾರ್ಟ್ಫೋನ್ ಆಫರ್ ಬೆಲೆ ಬಗ್ಗೆ ಮಾತನಾಡುವುದಾದರೆ ಸ್ಯಾಮ್‌ಸಂಗ್ (Samsung) ತಮ್ಮ ಸೈಟ್ ಒಳಗೆ ಇನ್ನೂ 39,999 ರೂಗಳಿಗೆ ಮಾರಾಟ ಮಾಡುತ್ತಿದೆ ಆದರೆ ಅಮೆಜಾನ್ ಮೂಲಕ ಇದನ್ನು ಆಸಕ್ತರು ಕೇವಲ 29,999 ರೂಗಳಿಗೆ ಅದ್ದೂರಿಯ ಡಿಸ್ಕೌಂಟ್ ಜೊತೆಗೆ ಅಂದ್ರೆ ಬರೋಬ್ಬರಿ 10000 ರೂಗಳ ಡಿಸ್ಕೌಂಟ್ ಜೊತೆಗೆ ಖರೀದಿಸಬವುದು. Samsung Galaxy S21 FE 5G ನಿಮಗೆ Navy, Graphite ಮತ್ತು Olive ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.
Samsung Galaxy S21 FE 5G ಫೀಚರ್ ಮತ್ತು ವಿಶೇಷಣಗಳೇನು?
ಈ ಲೇಟೆಸ್ಟ್ 6.4-ಇಂಚಿನ AMOLED ಡಿಸ್ಪ್ಲೇ ರೋಮಾಂಚಕವಾಗಿದೆ ಮತ್ತು ತೃಪ್ತಿಕರ ಮಟ್ಟದ ಹೊಳಪನ್ನು ಹೊಂದಿದೆ. ಇದು 120Hz ಪೀಕ್ ರಿಫ್ರೆಶ್ ರೇಟ್ ಮತ್ತು ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಅನ್ನು ಹೊಂದಿದೆ. ಆಪ್ಟಿಕಲ್ ಸ್ಟೆಬಿಲೈಸೇಶನ್ ಮತ್ತು f/1.8 ಅಪರ್ಚರ್ನೊಂದಿಗೆ 12MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ ಜೊತೆಗೆ 8MP ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮರಾದೊಂದಿಗೆ 3X ಆಪ್ಟಿಕಲ್ ಜೂಮ್ ನೀಡುವ 12MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮರಾವನ್ನು ಹಿಂಭಾಗದಲ್ಲಿ ಒಳಗೊಂಡಿದೆ. ಸ್ಮಾರ್ಟ್ಫೋನ್ ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 32MP ಮೆಗಾಪಿಕ್ಸೆಲ್ ಕ್ಯಾಮರಾವನ್ನು ಸಪೋರ್ಟ್ ಮಾಡುತ್ತದೆ.
Samsung Galaxy S21 FE 5G ಪ್ರಮುಖ S21 ಸರಣಿಯಲ್ಲಿ ಕಂಡುಬರುವ ಅದೇ Exynos 2100 ಪ್ರೊಸೆಸರ್ ಜೊತೆಗೆ ಪಡೆಯುತ್ತದೆ. ಮತ್ತು ಇದು Dolby Atmos ಜೊತೆಗೆ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದೆ. ಇದರಲ್ಲಿ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ಪ್ರಮಾಣೀಕರಣ ಮತ್ತು ವೈರ್‌ಲೆಸ್ ಚಾರ್ಜಿಂಗ್. ಫೋನ್ ಆಂಡ್ರಾಯ್ಡ್ 12 ಅನ್ನು ಆಧರಿಸಿದ OneUI 4.0 ಅನ್ನು ರನ್ ಮಾಡುತ್ತದೆ. HDR10 ವೀಡಿಯೊ ಪ್ಲೇಬ್ಯಾಕ್ ಬೆಂಬಲಿತವಾಗಿದೆ. Samsung Galaxy S21 FE 5G ನಿಮಗೆ ಡಿಸೆಂಟ್ 4500mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು ನಿಮ್ಮ ಪೂರ್ತಿ ದಿನವನ್ನು ಆರಾಮಾಗಿ ಕಳೆಸುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile