108MP+48MP+12MP ಕ್ಯಾಮೆರಾ ಜೊತೆ ಸ್ಯಾಮ್ಸಂಗ್ S20 ಸರಣಿಯ ಫೋನ್ಗಳನ್ನು ಅನಾವರಣಗೊಳಿಸಿದೆ

Updated on 12-Feb-2020
HIGHLIGHTS

ಈ ಹೊಸ ಫೋನ್‌ಗಳು 120Hz ರಿಫ್ರೆಶ್ ರೇಟ್ ಡಿಸ್ಪ್ಲೇ ಕನಿಷ್ಠ 8GB RAM ಮತ್ತು 8K ವಿಡಿಯೋ ರೆಕಾರ್ಡಿಂಗ್ ಮತ್ತು 5G ನಂತಹ ಮುಂತಾದ ಅದ್ದೂರಿಯ ಫೀಚರ್ಗಳೊಂದಿಗೆ ಬರುತ್ತವೆ

ಈಗ ಸ್ಯಾಮ್‌ಸಂಗ್ ತನ್ನ ಪ್ರಮುಖ S ಸರಣಿಯ ಮೂರು ಹೊಚ್ಚ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇವನ್ನು Samsung Galaxy S20, S20+ ಮತ್ತು S20 Ultra ಎಂದು ಗುರುತಿಸಲಾಗಿದೆ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವುಗಳನ್ನು ಪ್ರಾರಂಭಿಸಲಾಯಿತು. ಇವುಗಳಲ್ಲಿನ ಕ್ಯಾಮೆರಾ, ಡಿಸ್ಪ್ಲೇ ಮತ್ತು ಬ್ಯಾಟರಿಯಂತಹ ವೈಶಿಷ್ಟ್ಯಗಳ ವಿಷಯದಲ್ಲಿ ಅವು ಪರಸ್ಪರ ಭಿನ್ನವಾಗಿದ್ದರೂ ಒಂದೇ ಮೂರು ಪ್ರೊಸೆಸರ್ ಅನ್ನು ಎಲ್ಲಾ ಮೂರು ಸ್ಮಾರ್ಟ್ಫೋನ್ಗಳಲ್ಲಿ ಬಳಸಲಾಗುತ್ತದೆ. ಇದರಲ್ಲಿ Galaxy S20 ಈ ಸರಣಿಯ ಅತಿ ಕಡಿಮೆ ಫೋನ್ ಆಗಿದ್ದರೆ Galaxy S20 Ultra ಈ ಸರಣಿಯ ಉನ್ನತ ಮಾದರಿಯಾಗಿದ್ದು ಈ ಹೊಸ ಫೋನ್‌ಗಳು 120Hz ರಿಫ್ರೆಶ್ ರೇಟ್ ಡಿಸ್ಪ್ಲೇ ಕನಿಷ್ಠ 8GB RAM ಮತ್ತು 8K ವಿಡಿಯೋ ರೆಕಾರ್ಡಿಂಗ್ ಮತ್ತು 5G ನಂತಹ ಮುಂತಾದ ಅದ್ದೂರಿಯ ಫೀಚರ್ಗಳೊಂದಿಗೆ ಬರುತ್ತವೆ.

Display

ಈ ಎಲ್ಲಾ ಮೂರು ಸ್ಮಾರ್ಟ್‌ಫೋನ್‌ಗಳು ಇನ್ಫಿನಿಟಿ ಒ ಡಿಸ್ಪ್ಲೇಯನ್ನು ಹೊಂದಿವೆ. ಆದರೂ ಅವುಗಳ ಗಾತ್ರಗಳು ವಿಭಿನ್ನವಾಗಿವೆ. Galaxy S20 ಫೋನ್ 6.2 ಇಂಚಿನ ಕ್ವಾಡ್ HD+ ಡಿಸ್ಪ್ಲೇ ನೀಡುತ್ತದೆ. ಇದು 3200×1440 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರವನ್ನು ಹೊಂದಿದೆ. ಅದೇ ಡಿಸ್ಪ್ಲೇಯನ್ನು Galaxy S20+ ನಲ್ಲಿ 6.7 ಇಂಚು ಗಾತ್ರದಲ್ಲಿ ಮತ್ತು Galaxy S20 Ultra ಫೋನಲ್ಲಿ 6.9 ಇಂಚಿನ ಗಾತ್ರದಲ್ಲಿ HD+ ಡಿಸ್ಪ್ಲೇ ಕಂಡುಬರುತ್ತದೆ.

Processor

ಎಲ್ಲಾ ಮೂರು ಫೋನ್‌ಗಳಲ್ಲಿ ಒಂದೇ ಪ್ರೊಸೆಸರ್ ನೀಡಲಾಗಿದೆ. ಇದು 7nm 64-bit ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದೆ. ಈ ಸ್ಮಾರ್ಟ್‌ಫೋನ್‌ಗಳು ಎರಡು ರೀತಿಯ ಪ್ರೊಸೆಸರ್‌ಗಳೊಂದಿಗೆ ಬರಲಿದ್ದು ಒಂದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 865 ಪ್ರೊಸೆಸರ್ ಪಡೆಯಲಿದ್ದು ಮತ್ತೊಂದು Exynos 990 ಪ್ರೊಸೆಸರ್ ನೀಡಲಾಗುವುದು. ಆದರೆ ಭಾರತಕ್ಕೆ ಬರಲಿರುವ ಸಾಧನಗಳಲ್ಲಿ Exynos 990 ಪ್ರೊಸೆಸರ್ ನೀಡಬಹುದು. Galaxy S20 ಮತ್ತು Galaxy S20+ ಸ್ಮಾರ್ಟ್‌ಫೋನ್‌ಗಳು 8GB ಯ RAM ಮತ್ತು 128GB ಸ್ಟೋರೇಜ್ ಜೊತೆಗೆ ಬರುತ್ತವೆ. ಅದೇ ಸಮಯದಲ್ಲಿ Galaxy S20 Ultra ಸ್ಮಾರ್ಟ್‌ಫೋನ್‌ 12GB/16GB  ಯ RAM ಮತ್ತು 128/512GB ಸ್ಟೋರೇಜ್ ಹೊಂದಿವೆ.

Camera

ಮೊದಲಿಗೆ Galaxy S20 ಸ್ಮಾರ್ಟ್ಫೋನ್ ಟ್ರಿಪಲ್ ಬ್ಯಾಕ್ ಕ್ಯಾಮೆರಾ ಮತ್ತೇರಡರಲ್ಲಿ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. Galaxy S20 ಫೋನಲ್ಲಿ 64MP ಪ್ರೈಮರಿ ಕ್ಯಾಮೆರಾದೊಂದಿಗೆ ಟೆಲಿಫೋಟೋ ಲೆನ್ಸ್ ಸಪೋರ್ಟ್ ಮಾಡಿದರೆ 12MP + 12MP ಮೆಗಾಪಿಕ್ಸೆಲ್ ವೈಡ್-ಆಂಗಲ್ ಲೆನ್ಸ್ ಮತ್ತು ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಇದೆ. ಈ ಕ್ಯಾಮೆರಾ 3x ಹೈಬ್ರಿಡ್ ಜೂಮ್ ಮತ್ತು 30x ಡಿಜಿಟಲ್ ಜೂಮ್ ನೀಡುತ್ತದೆ. Galaxy S20+ ಫೋನ್ 64MP ಟೆಲಿಫೋಟೋ ಲೆನ್ಸ್ ಮತ್ತು 12MP ಮೆಗಾಪಿಕ್ಸೆಲ್ ವೈಡ್-ಆಂಗಲ್ ಲೆನ್ಸ್ ಮತ್ತು 12MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು ಕೊನೆಯದಾಗಿ ಡೆಪ್ತ್ ಸೆನ್ಸಾರ್ ನೀಡುತ್ತದೆ. ಈ ಕ್ಯಾಮೆರಾ 3x ಹೈಬ್ರಿಡ್ ಜೂಮ್ ಮತ್ತು 30x ಡಿಜಿಟಲ್ ಜೂಮ್ ಸಹ ಹೊಂದಿದೆ. ಅತ್ಯಂತ ಶಕ್ತಿಶಾಲಿ ಕ್ಯಾಮೆರಾ Galaxy S20 Ultra ಹೊಂದಿದ್ದು 48MP ಟೆಲಿಫೋಟೋ ಲೆನ್ಸ್, 108MP ವೈಡ್ ಆಂಗಲ್ ಲೆನ್ಸ್ 12MP ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು ಡೆಪ್ತ್ ಸೆನ್ಸಾರ್ ಅನ್ನು ಪಡೆಯುತ್ತದೆ. ಇದು 10x  ಹೈಬ್ರಿಡ್ ಜೂಮ್ ಮತ್ತು 100x ಡಿಜಿಟಲ್ ಜೂಮ್ ನೀಡುತ್ತದೆ. 

Battery

ಕೊನೆಯದಾಗಿ ಮೊದಲಿಗೆ Galaxy S20 ಸ್ಮಾರ್ಟ್ಫೋನ್ ಬ್ಯಾಟರಿಯಲ್ಲಿ 25W ಫಾಸ್ಟ್ ಚಾರ್ಜಿಂಗ್‌ನೊಂದಿಗೆ 4000mAh ಬ್ಯಾಟರಿಯನ್ನು ಹೊಂದಿದೆ. ಮತ್ತು Galaxy S20 ಸ್ಮಾರ್ಟ್ಫೋನ್ ಬ್ಯಾಟರಿ 5000mAH ಬ್ಯಾಟರಿಯನ್ನು ಅದೇ 25w ಫಾಸ್ಟ್ ಚಾರ್ಜಿಂಗ್ ಹೊಂದಿದೆ. ಅದೇ ಸಮಯದಲ್ಲಿ Galaxy S20 Ultra  ಸ್ಮಾರ್ಟ್ಫೋನ್ 5000mAh ಬ್ಯಾಟರಿಯನ್ನು 45W ಫಾಸ್ಟ್ ಚಾರ್ಜಿಂಗ್ ಹೊಂದಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :