ಭಾರತದಲ್ಲಿ Samsung ಇಂದು ತನ್ನ ಹೊಚ್ಚ ಹೊಸ Samsung Galaxy S10 Lite ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ. ಈ ಫೋನ್ ಅನ್ನು ಇದೇ ತಿಂಗಳ ಆರಂಭದಿಂದಲೇ ಘೋಷಿಸಲಾಯಿತು. ತಡವಾಗಿ ಬಿಡುಗಡೆಗೆ ಕಾರಣವೆಂದರೆ ಕಂಪನಿಯು ಇತ್ತೀಚೆಗಷ್ಟೇ ಭಾರತದಲ್ಲಿ ತಮ್ಮ Samsung Galaxy 10 Lite ಸ್ಮಾರ್ಟ್ಫೋನನ್ನು ಬಿಡುಗಡೆಗೊಳಿಸಿತ್ತು. ಆದ್ದರಿಂದ ಕಂಪನಿ ಈ ನಿರೀಕ್ಷಿತ Samsung Galaxy S10 Lite ಅನ್ನು ಇಂದು ಮಧ್ಯಾಹ್ನ 12:00pm ಗಂಟೆಗೆ ವೆಬ್‌ಕಾಸ್ಟ್‌ನಲ್ಲಿ ಬಿಡುಗಡೆಗೊಳಿಸಲಿದೆ. ಈ ಸ್ಮಾರ್ಟ್‌ಫೋನ್‌ನ ಲೈವ್ ವೆಬ್‌ಕಾಸ್ಟ್‌ಗಳನ್ನು ಕಂಪನಿಯ ಅಧಿಕೃತ ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್‌ಗಳಲ್ಲಿ ನೀವು ವೀಕ್ಷಿಸಬಹುದು. ಅಲ್ಲದೆ ಈಗಾಗಲೇ ಸ್ಯಾಮ್‌ಸಂಗ್‌ನ ಈ ಹೊಸ ಸ್ಮಾರ್ಟ್‌ಫೋನ್ Galaxy S10 Lite ಫ್ಲಿಪ್ಕಾರ್ಟ್ ಅಲ್ಲಿ ಪ್ರತ್ಯೇಕವಾಗಿ ಲಭ್ಯವಾಗಲಿದೆ ಎಂದು ಕಂಪನಿ ಖಚಿತಪಡಿಸಿದೆ.
ಭಾರತದಲ್ಲಿ ಈ ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 10 ಲೈಟ್‌ನ ಬೆಲೆ ಇನ್ನೂ ಬಹಿರಂಗಗೊಂಡಿಲ್ಲ. ಆದಾಗ್ಯೂ ಸ್ಯಾಮ್‌ಸಂಗ್‌ನ ಇತ್ತೀಚಿನ ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಮಾರ್ಟ್‌ಫೋನ್ ಬೆಲೆ ಸುಮಾರು 40,000 ರಿಂದ 45,000 ರೂಪಾಯಿ ವ್ಯಾಪ್ತಿಯಲ್ಲಿರಬಹುದು ಎಂದು ಕೆಲವು ವರದಿಗಳು ತಿಳಿಸಿವೆ. ಇತ್ತೀಚಿನ ವರದಿಯ ಪ್ರಕಾರ ಈ ಸ್ಮಾರ್ಟ್‌ಫೋನ್ ಸಿಂಗಲ್ ವೇರಿಯಂಟ್‌ನಲ್ಲಿ ಬರಲಿದ್ದು ಇದರ ಬೆಲೆ 39,999 ರೂಗಳಲ್ಲಿ ನಿರೀಕ್ಷಿಸಲಾಗಿದೆ. ಈ ವರದಿಯ ಪ್ರಕಾರ ಈ ಸ್ಮಾರ್ಟ್‌ಫೋನ್ ಮುಂದಿನ ಫೆಬ್ರವರಿ ಮೊದಲ ವಾರದಲ್ಲಿ ಮಾರಾಟಕ್ಕೆ ಲಭ್ಯವಾಗುವ ನಿರೀಕ್ಷೆಗಳಿವೆ. ಈ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ನೇರವಾಗಿ OnePlus 7T ಫೋನಿನ ಸೈಡ್ ಹೊಡೆಯುವ ಗುರಿ ಹೊಂದಿರುವುದಾಗಿ ಕೆಲವು ವರದಿಗಳು ತಿಳಿಸಿವೆ.
ಈ ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 10 ಲೈಟ್ ಸ್ಮಾರ್ಟ್‌ಫೋನ್ 6.7 ಇಂಚಿನ FHD+ ಇನ್ಫಿನಿಟಿ ಒ ಸೂಪರ್ ಅಮೋಲೆಡ್ ಡಿಸ್ಪ್ಲೇಯೊಂದಿಗೆ ಬರಬಹುದು. ಇದರ ರೆಸಲ್ಯೂಶನ್ 1080×2400 ಪಿಕ್ಸೆಲ್‌ಗಳು 20: 9 ಅಸ್ಪೆಟ್ ರೇಷುವಿನೊಂದಿಗೆ ಬರಲಿದೆ. ಇದು 6GB / 8GB RAM ನೊಂದಿಗೆ ಬರಬಹುದು. ಮತ್ತು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 855 ಪ್ರೊಸೆಸರ್ ಹೊಂದಿರುತ್ತದೆ. ಈ ಹೊಸ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ 128GB ಒಂದೇ ಒಂದು ROM ವೇರಿಯಂಟ್ ಆಯ್ಕೆಯಲ್ಲಿ ಮಾತ್ರ ಬರಲಿದೆ. ಇದರಲ್ಲಿ ಮೈಕ್ರೊ SD ಕಾರ್ಡ್ ಮೂಲಕ ಫೋನ್ ಸ್ಟೋರೇಜ್ ಹೆಚ್ಚಿಸಬಹುದು. ಈ ಫೋನ್ ಸೂಪರ್ ಫಾಸ್ಟ್ ಚಾರ್ಜಿಂಗ್‌ನೊಂದಿಗೆ 4500mAh ಬ್ಯಾಟರಿಯನ್ನು ಹೊಂದಬಹುದು.
ಫೋನಿನ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದ್ದು ಪ್ರೈಮರಿ 48MP ಮೆಗಾಪಿಕ್ಸೆಲ್‌ಗಳಾಗಿರುತ್ತದೆ. ಇದಲ್ಲದೆ ಫೋನ್‌ನ ಹಿಂಭಾಗದಲ್ಲಿ 12MP ಮೆಗಾಪಿಕ್ಸೆಲ್‌ಗಳು ಮತ್ತು 5MP ಮೆಗಾಪಿಕ್ಸೆಲ್ ಕ್ಯಾಮೆರಾಗಳನ್ನು ಹೊಂದಬಹುದು. ಈ ಫೋನ್‌ನ ಮುಂಭಾಗದಲ್ಲಿ ಸೆಲ್ಫಿಗಾಗಿ 32MP ಮೆಗಾಪಿಕ್ಸೆಲ್ ಕ್ಯಾಮೆರಾ ಬರುವ ನಿರೀಕ್ಷೆಯಿದೆ. ಇದಲ್ಲದೆ ಫೋನ್ ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸಾರ್ ಹೊಂದಿರುವುದಾಗಿ ವರದಿಗಳು ತಿಳಿಸಿವೆ. ಸ್ನೇಹಿತರೇ ಇದೇಲ್ಲಾ ಸದ್ಯಕ್ಕೆ ಸೋರಿಕೆಯಾಗಿರುವ ಮತ್ತು ಮೂಲಗಳ ಆಧಾರದ ಮೇರೆಗೆ ತಿಳಿಸಲಾದ ಮಾಹಿತಿಗಳಾಗಿವೆ ಅಷ್ಟೇ. ಕೆಲವೇ ಘಂಟೆಗಳಲ್ಲಿ ಇದರ ನೈಜ ಮತ್ತು ಖಾತ್ರಿ ಮಾಹಿತಿಯನ್ನು ನಿಮ್ಮೊಂದಿಗೆ ನಾನು ಹಂಚಿಕೊಳ್ಳಲಿದ್ದೇನೆ.