Samsung Galaxy S10 ಫೋನ್ ಭಾರತದಲ್ಲಿ ನಾಳೆಯಿಂದ ಪ್ರೀ-ಆರ್ಡರೊಂದಿಗೆ ಈ ಆಫರ್ಗಳು ಲಭ್ಯವಾಗಲಿವೆ.

Updated on 22-Feb-2019
HIGHLIGHTS

ಇದು 4500mAh ಬ್ಯಾಟರಿಯೊಂದಿಗೆ 25W ಫಾಸ್ಟ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ.

ಸ್ಯಾಮ್ಸಂಗ್ ಕಂಪನಿಯು ಅಧಿಕೃತವಾಗಿ Samsung Galaxy S10 ಸರಣಿಯನ್ನು ಬಿಡುಗಡೆ ಮಾಡಿದೆ. ಇದರೊಂದಿಗೆ 21ನೇ ಫೆಬ್ರವರಿಯಿಂದ ಆಯ್ದ ಮಾರುಕಟ್ಟೆಗಳಲ್ಲಿ Galaxy S10 ಸರಣಿಯ ಮುಂಗಡ ಆದೇಶ (Pre-Order) ಪ್ರಾರಂಭವಾಗುವುದಾಗಿ ಘೋಷಿಸಲಾಗಿದೆ. ಈ ಮಾಹಿತಿಯನ್ನು ಪ್ರಸ್ತುತ ಯಾವ ಮಾರುಕಟ್ಟೆಯಲ್ಲಿ ಲಭ್ಯ ಎನ್ನುವುದು ಬಹಿರಂಗವಾಗಿಲ್ಲ. ಇದರ ಮಧ್ಯೆ ಇ-ಕಾಮರ್ಸ್ ವೆಬ್ಸೈಟ್ ಆಗಿರುವ ಫ್ಲಿಪ್ಕಾರ್ಟ್ ಈ Samsung Galaxy S10 ಪೋನಿನ ಪ್ರಿ-ಆರ್ಡರ್ ಪುಟವನ್ನು ಭಾರತದಲ್ಲಿ ಲೈವ್ ಮಾಡಿದ್ದು ನಾಳೆ ಆರಂಭವಾಗಲಿದೆ.

ಈ ಹೊಸ Samsung Galaxy S10 ಪೂರ್ವ ಆದೇಶ ನಾಳೆ ಅಂದ್ರೆ 22ನೇ ಫೆಬ್ರವರಿಯಿಂದ ಆರಂಭವಾಗಲಿದೆ ಬಳಕೆದಾರರು Stay Tuned ಬಟನ್ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ. ಆದಾಗ್ಯೂ ಹೆಚ್ಚಿನ ಮಾಹಿತಿಯು ಇಲ್ಲಿ ಲಭ್ಯವಿಲ್ಲ ಆದರೆ ಪೂರ್ವ ಆದೇಶ ಪ್ರಾರಂಭವಾದ ನಂತರ ಹೆಚ್ಚಿನ ವಿವರಗಳನ್ನು ಪಡೆಯುವ ಸಾಧ್ಯತೆಯಿದೆ. ಅಲ್ಲದೆ ಈ ಕಂಪೆನಿ Samsung Galaxy S10 ಫೋನಿನ ಬಗ್ಗೆ ಭಾರತದಲ್ಲಿ ಇನ್ನು ಬೆಲೆಯ ಬಗ್ಗೆ ಅಧಿಕೃತ  ಮಾಹಿತಿ ನೀಡಿಲ್ಲ.

ಇದು 6.7 ಇಂಚಿನ ಡೈನಾಮಿಕ್ ಅಮೋಲ್ಡ್ ಡಿಸ್ಪ್ಲೇಯನ್ನು ಹೊಂದಿದೆ. ಈ ಕ್ವಾಡ್ HD+ ರೆಸಲ್ಯೂಶನ್ ಜೊತೆಗೆ ಲಭ್ಯವಿರುತ್ತದೆ. ಈ ಫೋನ್ 7nm ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 855 ಪ್ರೊಸೆಸರ್ ಅಥವಾ 8nm ಅಕೋನೋಸ್ 9820 ಆಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ. ಫೋನ್ಗೆ ಪವರ್ ನೀಡಲು 4500mAh ಬ್ಯಾಟರಿಯನ್ನು ಒದಗಿಸಲಾಗಿದೆ. ಅದು 25W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. 

ಈ ರೂಪಾಂತರದಲ್ಲಿ 8GB RAM ಅನ್ನು ಸಹ ನೀಡಲಾಗುವುದು. ಇದು 256 GB ಸಂಗ್ರಹಣೆಯೊಂದಿಗೆ ನೀಡಲಾಗುವುದು. ಅಲ್ಲದೆ ಇದು 5G ಡ್ಯುಯಲ್ ಫ್ರಂಟ್ ಸೆನ್ಸಾರ್ ಮತ್ತು ಕ್ವಾಡ್-ರೇರ್ ಕ್ಯಾಮೆರಾ ಇರುತ್ತದೆ. ಲೈವ್ ಫೋಕಸ್ ಮತ್ತು ಕ್ವಿಕ್ ಮೇಜರ್ಗಳಂತಹ ವೀಡಿಯೊ ವೈಶಿಷ್ಟ್ಯಗಳಿವೆ. ಈ ಫೋನ್ Android 9 ಪೈ ಮಾಡುತ್ತದೆ. ಇದರಲ್ಲಿ ಒಂದು ಕಾರ್ಡ್ ಸ್ಲಾಟ್ ಇದೆ. ಇನ್ ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೇಸ್ನೋರ್  ಅಥವಾ 3D ಫೇಸ್ ಅನ್ಲಾಕ್ ಸಹ ಒಳಗೊಂಡಿದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :