ಸ್ಯಾಮ್‌ಸಂಗ್‌ನ ಮುಂಬರಲಿರುವ ಹೊಸ 5G ಸ್ಮಾರ್ಟ್‌ಫೋನ್ Samsung Galaxy M55s 5G ಅನ್ನು ಬಿಡುಗಡೆಯ ದಿನಾಂಕವನ್ನು ಕಂಪನಿ ಘೋಷಿಸಿದೆ. ಪ್ರಸ್ತುತ ಈ 5G ಸ್ಮಾರ್ಟ್‌ಫೋನ್ ಕುರಿತು ಸ್ಯಾಮ್‌ಸಂಗ್ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿಲ್ಲವಾದರೂ ಈ 5G ಸ್ಮಾರ್ಟ್‌ಫೋನ್ ಒಂದಿಷ್ಟು ಹಿಂಟ್ ಅನ್ನು ನೀಡಿ ತನ್ನನ್ನು ಗುರುತಿಸಿಕೊಂಡಿದೆ. Samsung Galaxy M55s 5G ಸ್ಮಾರ್ಟ್‌ಫೋನ್ ಕುರಿತು ಮಾತನಾಡುವುದಾದರೆ ಈ ಸ್ಮಾರ್ಟ್‌ಫೋನ್ ಲೇಟೆಸ್ಟ್ ವಿಶೇಷಣಗಳೊಂದಿಗೆ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಸ್ಮಾರ್ಟ್‌ಫೋನ್ ಅನ್ನು ಸ್ಯಾಮ್‌ಸಂಗ್‌ನ ಬೆಂಬಲ ಪುಟದಲ್ಲಿ ಗುರುತಿಸಲಾಗಿದೆ. ಹಾಗಾದರೆ ಸೋರಿಕೆಯಾದ Samsung Galaxy M55s 5G ವಿಶೇಷತೆಗಳ ಬಗ್ಗೆ ತಿಳಿಯೋಣ.
Also Read: 77 ದಿನಗಳ ವ್ಯಾಲಿಡಿಟಿಯೊಂದಿಗೆ ಅನ್ಲಿಮಿಟೆಡ್ ಕರೆ ಮತ್ತು ಡೇಟಾ ನೀಡುವ ಈ Airtel Recharge ಪ್ಲಾನ್ ಬೆಲೆ ಎಷ್ಟು?
Samsung Galaxy M55s 5G ಲಾಂಚ್ ದಿನಾಂಕದ ಕುರಿತು ಮಾತನಾಡುವುದಾದರೆ Samsung ಇನ್ನೂ ಈ 5G ಸ್ಮಾರ್ಟ್‌ಫೋನ್‌ನ ಬಿಡುಗಡೆ ದಿನಾಂಕ ಮತ್ತು ವಿಶೇಷಣಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಬಹಿರಂಗಪಡಿಸಿದ್ದು ಕೆಲವು ಮಾಧ್ಯಮ ಸುದ್ದಿ ವರದಿಗಳ ಪ್ರಕಾರ ಸ್ಯಾಮ್‌ಸಂಗ್‌ನ ಈ ಮುಂಬರಲಿರುವ Samsung Galaxy M55s 5G ಸ್ಮಾರ್ಟ್‌ಫೋನ್ 23ನೇ ಸೆಪ್ಟೆಂಬರ್ 2024 ರಂದು ಭಾರತದಲ್ಲಿ ಬಿಡುಗಡೆ ಮಾಡಬಹುದು. ಈ ಸ್ಮಾರ್ಟ್‌ಫೋನ್ ಅನ್ನು ಸ್ಯಾಮ್‌ಸಂಗ್‌ನ ಸಪೋರ್ಟ್ ಪುಟದಲ್ಲಿಯೂ ಗುರುತಿಸಲಾಗಿದೆ.
Samsung Galaxy M55s 5G ಡಿಸ್‌ಪ್ಲೇ ಬಗ್ಗೆ ಮಾತನಾಡುವುದಾದರೆ ಈ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ನಲ್ಲಿ ದೊಡ್ಡ 6.7 Full HD+ ಸೂಪರ್ AMOLED ಡಿಸ್ಪ್ಲೇಯನ್ನು ನೀಡಬಹುದು. ಇದು 120Hz ರಿಫ್ರೆಶ್ ದರದೊಂದಿಗೆ ಬರಬಹುದು. Samsung Galaxy M55s 5G ಕ್ಯಾಮೆರಾ ಕುರಿತು ಮಾತನಾಡುವುದಾದರೆ ಈ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾವನ್ನು ಹೊಂದಿರಲಿದೆ. ಇದು 50MP OIS ಕ್ಯಾಮೆರಾ, 8MP ಅಲ್ಟ್ರಾವೈಡ್ ಕ್ಯಾಮೆರಾ, 2MP ಮ್ಯಾಕ್ರೋ ಕ್ಯಾಮೆರಾದೊಂದಿಗೆ ಬರಬಹುದು. ಮುಂಭಾಗದಲ್ಲಿ 50MP ಸೆಲ್ಫಿ ಕ್ಯಾಮೆರಾವನ್ನು ನೀಡಬಹುದಾಗಿದೆ ನಿರೀಕ್ಷಿಸಲಾಗಿದೆ.
ಸ್ಯಾಮ್‌ಸಂಗ್‌ನ ಈ ಮುಂಬರುವ ಸ್ಮಾರ್ಟ್‌ಫೋನ್‌ನಲ್ಲಿ ತುಂಬಾ ಮೃದುವಾದ ಅನುಭವವನ್ನು ಪಡೆಯಬಹುದು. ನಾವು Samsung Galaxy M55s 5G ವಿಶೇಷತೆಗಳ ಬಗ್ಗೆ ಮಾತನಾಡಿದರೆ ಸೋರಿಕೆಯಾದ ವರದಿಯ ಪ್ರಕಾರ ಈ ಸ್ಮಾರ್ಟ್‌ಫೋನ್‌ನಲ್ಲಿ Snapdragon 7 Gen 1 ಪ್ರೊಸೆಸರ್ ಅನ್ನು ನಿರೀಕ್ಷಿಸಬಹುದು. ಇದು 8GB RAM ಮತ್ತು 128GB ವರೆಗಿನ ಇಂಟರ್ನಲ್ ಸ್ಟೋರೇಜ್ ರೂಪಾಂತರಗಳೊಂದಿಗೆ ಪ್ರಾರಂಭಿಸಬಹುದು. Samsung Galaxy M55s 5G ಬ್ಯಾಟರಿ ಬಗ್ಗೆ ಮಾತನಾಡುವುದಾದರೆ ಈ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ನಲ್ಲಿ ಸುಮಾರು 45W ವೇಗದ ಚಾರ್ಜಿಂಗ್‌ನೊಂದಿಗೆ 6000mAh ಬ್ಯಾಟರಿಯನ್ನು ನಿರೀಕ್ಷಿಸಬಹುದು.