50MP ಸೆಲ್ಫಿ ಕ್ಯಾಮೆರಾ ಮತ್ತು sAMOLED ಡಿಸ್ಪ್ಲೇಯ Samsung Galaxy M55 5G ಬಿಡುಗಡೆ! ಟಾಪ್ 5 ಫೀಚರ್ ತಿಳಿಯಿರಿ

50MP ಸೆಲ್ಫಿ ಕ್ಯಾಮೆರಾ ಮತ್ತು sAMOLED ಡಿಸ್ಪ್ಲೇಯ Samsung Galaxy M55 5G ಬಿಡುಗಡೆ! ಟಾಪ್ 5 ಫೀಚರ್ ತಿಳಿಯಿರಿ
HIGHLIGHTS

ಭಾರತದಲ್ಲಿ ಸ್ಯಾಮ್‌ಸಂಗ್‌ ತನ್ನ M ಸರಣಿಯ ಎರಡು ಲೇಟೆಸ್ಟ್ ಸ್ಮಾರ್ಟ್‌ಫೋನ್‌ಗಳು ಅಧಿಕೃತವಾಗಿ ಬಿಡುಗಡೆ

ಈ ಲೇಖನದಲ್ಲಿ Samsung Galaxy M55 5G ಸ್ಮಾರ್ಟ್ಫೋನ್ ಬೆಲೆ ಮತ್ತು ಇದರ ಟಾಪ್ 5 ಫೀಚರ್ಗಳನ್ನು ತಿಳಿಸಲಿದ್ದೇವೆ.

ಸ್ಯಾಮ್‌ಸಂಗ್‌ ಇವನ್ನು Samsung Galaxy M55 5G ಮತ್ತು Samsung Galaxy M15 5G ಈ ಸ್ಮಾರ್ಟ್‌ಫೋನ್‌ಗಳೆಂದು ಹೆಸರಿಸಿದೆ.

ಭಾರತದಲ್ಲಿ ಸ್ಯಾಮ್‌ಸಂಗ್‌ ತನ್ನ M ಸರಣಿಯ ಎರಡು ಲೇಟೆಸ್ಟ್ ಸ್ಮಾರ್ಟ್‌ಫೋನ್‌ಗಳನ್ನು ಇಂದು ಅಂದ್ರೆ 8ನೇ ಏಪ್ರಿಲ್ 2024 ರಂದು ಬೆಸ್ಟ್ ಫೀಚರ್ಗಳೊಂದಿಗೆ ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಸ್ಯಾಮ್‌ಸಂಗ್‌ ಈ ಸ್ಮಾರ್ಟ್‌ಫೋನ್‌ಗಳನ್ನು Samsung Galaxy M55 5G ಮತ್ತು Samsung Galaxy M15 5G ಎಂದು ಹೆಸರಿಸಿದೆ. ಆದರೆ ಈ ಲೇಖನದಲ್ಲಿ ಕೇವಲ Galaxy M55 5G ಬಗ್ಗೆ ಮಾತ್ರ ತಿಳಿಸಲಿದ್ದು ಫೋನ್ 50MP ಸೆಲ್ಫಿ ಕ್ಯಾಮೆರಾದೊಂದಿಗೆ ದೊಡ್ಡ ಬ್ಯಾಟರಿ ಮತ್ತು ಉತ್ತಮವಾದ Qualcomm Snapdragon ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಈ Samsung Galaxy M55 5G ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಬೆಲೆ ಮತ್ತು ಟಾಪ್ 5 ಫೀಚರ್ಗಳನ್ನು ತಿಳಿಯಿರಿ.

ಸ್ಯಾಮ್‌ಸಂಗ್‌ Galaxy M55 5G ಡಿಸ್ಪ್ಲೇ ಮಾಹಿತಿ

ಸ್ಯಾಮ್‌ಸಂಗ್‌ ತನ್ನ ಈ ಲೇಟೆಸ್ಟ್ Samsung Galaxy M55 5G ಸ್ಮಾರ್ಟ್ರ್ಫೋನ್ ಒಳಗೆ ಅತ್ಯುತ್ತಮವಾದ ಡಿಸ್ಪ್ಲೇಯನ್ನು ನೀಡಿದ್ದು 6.7 ಇಂಚಿನ ದೊಡ್ಡದಾದ ಡಿಸ್ಪ್ಲೇ FHD+ (2400 x 1080) ಪಿಕ್ಸೆಲ್‌ ರೆಸಲ್ಯೂಷನ್ ಜೊತೆಗೆ Super AMOLED+ ಜೊತೆಗೆ 120Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ನಿಮಗೆ ವೀಕ್ಷಣಾ ಅನುಭವವನ್ನು ಹೆಚ್ಚಿಸಲು ಮತ್ತು 1,000 nits ಗರಿಷ್ಠ ಬ್ರೈಟ್‌ನೆಸ್ ಮಟ್ಟವನ್ನು ಸಹ ಒಳಗೊಂಡಿದೆ.


Samsung Galaxy M55 5G launched in India 2024
Samsung Galaxy M55 5G launched in India 2024

Samsung Galaxy M55 5G ಕ್ಯಾಮೆರಾ ಹೇಗಿದೆ

ಈ Samsung Galaxy M55 5G ಸ್ಮಾರ್ಟ್ಫೋನ್ ಆಪ್ಟಿಕ್ಸ್‌ಗಳ ಬಗ್ಗೆ ಮಾತನಾಡುವುದಾದರೆ Samsung Galaxy M55 5G ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. 50MP ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಮತ್ತು ವೈಡ್-ಆಂಗಲ್ ಲೆನ್ಸ್, 2MP ಮೆಗಾಪಿಕ್ಸೆಲ್ ಜೊತೆಗೆ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್‌ನೊಂದಿಗೆ ಜೋಡಿಸಲಾದ 8MP ಮೆಗಾಪಿಕ್ಸೆಲ್ ಸೆನ್ಸರ್ ಅನ್ನು ಒಳಗೊಂಡಿದೆ. ಕೊನೆಯದಾಗಿ ಫೋನ್ ಹಿಂಭಾಗದಲ್ಲಿ 2MP ಮ್ಯಾಕ್ರೋ ಶೂಟರ್ ಅನ್ನು ಸಹ ನೀಡಲಾಗಿದೆ. ಈ ಸ್ಮಾರ್ಟ್ಫೋ ವಿಶೇಷತೆ ಅಂದ್ರೆ ಇದರ ಮುಂಭಾಗದಲ್ಲಿ ನೀಡಲಾಗಿರುವ 50MP ಮೆಗಾಪಿಕ್ಸೆಲ್ ಸೆನ್ಸರ್ ವೈಡ್ ಲೆನ್ಸ್ ಅನ್ನು ಹೊಂದಿದೆ.

Samsung Galaxy M55 5G launched in India 2024
Samsung Galaxy M55 5G launched in India 2024

Samsung Galaxy M55 5G ಹಾರ್ಡ್ವೇರ್ ಡೀಟೇಲ್ಸ್

ಈ ಸ್ಮಾರ್ಟ್ಫೋನ್ ಹಾರ್ಡ್ವೇರ್ ಬಗ್ಗೆ ಮಾತನಾಡುವುದರೆ ನಿಮಗೆ ಇದರಲ್ಲಿ ಅತ್ಯುತ್ತುತ್ತಮವಾದ Qualcomm Snapdragon 7 Gen1 ಪ್ರೊಸೆಸರ್ ಅನ್ನು ಹೊಂದಿದ್ದು ಒಟ್ಟಾರೆಯಾಗಿ ಎರಡು ವೇರಿಯೆಂಟ್ಗಳಲ್ಲಿ ಸ್ಮಾರ್ಟ್ಫೋನ್ ಬಿಡುಗಡೆಯಾಗಿದೆ. ಅವೆಂದರೆ 8GB ಮತ್ತು 12GB RAM ಇದರೊಂದಿಗೆ 128GB ಮತ್ತು 256GB ಸ್ಟೋರೇಜ್ ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಜೋಡಿಸಲ್ಪಟ್ಟಿದೆ. ಅಲ್ಲದೆ ಇದು ಆಂಡ್ರಾಯ್ಡ್ 14 ಆಧಾರಿತ One UI 6.1 ನೊಂದಿಗೆ ರವಾನೆಯಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಫೋನ್ ನಿಮಗೆ 4 ವರ್ಷಗಳ ಅಪಾಟಿಂಗ್ ಸಿಸ್ಟಮ್ ಅಪ್‌ಗ್ರೇಡ್‌ಗಳು ಮತ್ತು 5 ವರ್ಷಗಳ ಸೆಕ್ಯುಟಿರಿ ಅಪ್ಡೇಟ್ ಅನ್ನು ಬೆಂಬಲಿಸುತ್ತದೆ.

ಸ್ಯಾಮ್‌ಸಂಗ್‌ Galaxy M55 5G ಬ್ಯಾಟರಿ ಮತ್ತು ಸೆನ್ಸರ್

ಈ ಲೇಟೆಸ್ಟ್ Samsung Galaxy M55 5G ಸ್ಮಾರ್ಟ್ಫೋನ್ ಬ್ಯಾಟರಿಯ ಬಗ್ಗೆ ಮಾತನಾಡುವುದಾದರೆ ಇದು 45W ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5000mAh ಬ್ಯಾಟರಿಯ ಪವರ್ ಸಾಮರ್ಥ್ಯವನ್ನು ಬೆಂಬಲಿತವಾಗಿದೆ. ಅಲ್ಲದೆ Samsung Galaxy M55 5G ಸ್ಮಾರ್ಟ್ಪೋನ್ 5G, Wi-Fi, GPS, ಬ್ಲೂಟೂತ್ 5.2, NFC ಮತ್ತು USB ಟೈಪ್-C ಸಂಪರ್ಕವನ್ನು ಸಹ ಬೆಂಬಲಿಸುತ್ತದೆ.

Samsung Galaxy M55 5G launched in India 2024
Samsung Galaxy M55 5G launched in India 2024

Samsung Galaxy M55 5G ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ Samsung Galaxy M55 5G ಸ್ಮಾರ್ಟ್ಫೋನ್ ಬೆಲೆ ಮತ್ತು ಲಭ್ಯತೆ ಬಗ್ಗೆ ಮಾತನಾಡುವುದಾದರೆ ಇದರ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ಆಯ್ಕೆಯನ್ನು ನೀವು 26,999 ರೂಗಳಿಗೆ ಖರೀದಿಸಬಹುದು. ಇದರ ಕ್ರಮವಾಗಿ 8GB ಮತ್ತು 256GB ಆಯ್ಕೆಯನ್ನು ನೀವು 29,999 ರೂಗಳಿಗೆ ಖರೀದಿಸಬಹುದು. ಕೊನೆಯದಾಗಿ 12GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು 32,999 ಋಗಳಿಗೆ ಅಮೆಜಾನ್ ಮತ್ತು ಸ್ಯಾಮ್‌ಸಂಗ್ ಇಂಡಿಯಾ ವೆಬ್‌ಸೈಟ್ ಮೂಲಕ ಡೆನಿಮ್ ಕಪ್ಪು ಮತ್ತು ತಿಳಿ ಹಸಿರು ಎಂಬ ಎರಡು ಬಣ್ಣಗಳಲ್ಲಿ ಖರೀದಿಸಬಹುದು.

ಇದನ್ನೂ ಓದಿ: BSNL ಬಳಕೆದಾರರೆ ನಿಮಗೊಂದು ಹೆಚ್ಚುವರಿ ವ್ಯಾಲಿಡಿಟಿ ಪ್ಲಾನ್ ಬೇಕಿದ್ದರೆ ಒಮ್ಮೆ ಈ ಯೋಜನೆಗಳನ್ನು ಪರಿಶೀಲಿಸಿ!

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo