Samsung Galaxy M51 vs Galaxy M31s: 32MP ಸೆಲ್ಫಿ ಕ್ಯಾಮೆರಾದೊಂದಿಗೆ ಟಾಪ್ 5 ಫೀಚರ್‌ಗಳಲ್ಲಿ ಯಾವುದು ಬೆಸ್ಟ್?‌

Samsung Galaxy M51 vs Galaxy M31s: 32MP ಸೆಲ್ಫಿ ಕ್ಯಾಮೆರಾದೊಂದಿಗೆ ಟಾಪ್ 5 ಫೀಚರ್‌ಗಳಲ್ಲಿ ಯಾವುದು ಬೆಸ್ಟ್?‌
HIGHLIGHTS

Samsung Galaxy M51 vs Galaxy M31s ಫೋನ್‌ಗಳು ಸೆಲ್ಫಿಗಾಗಿ 32MP ಸೆನ್ಸಾರ್ ಕ್ಯಾಮೆರಾವನ್ನು ಒಳಗೊಂಡಿದವೆ

ಸೆಲ್ಫಿ ಕ್ಯಾಮೆರಾ ಎಷ್ಟು ಮುಖ್ಯವೊ ಆ ಸ್ಮಾರ್ಟ್‌ಫೋನ್‌ನ ಪ್ರೊಸೆಸರ್, ಬ್ಯಾಟರಿ, RAM ಸಹ ಅಷ್ಟೇ ಮುಖ್ಯವಾಗಿರುತ್ತದೆ.

Samsung Galaxy M51 vs Galaxy M31s ಸ್ಮಾರ್ಟ್‌ಫೋನ್‌ಗಳು ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟ್‌ಆಪ್‌ ಅನ್ನು ಹೊಂದಿವೆ.

Samsung Galaxy M51 vs Samsung Galaxy M31s: ಪ್ರತಿಯೊಬ್ಬರೂ ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಹೋದಾಗ ಮುಖ್ಯವಾಗಿ ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ವಿಚಾರದ ಬಗ್ಗೆ ಹೆಚ್ಚು ಕಳಾಜಿವಹಿಸುತ್ತಾರೆ. ಅದರಲ್ಲೂ ಸೋಶಿಯಲ್ ಮೀಡಿಯಾ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂನಲ್ಲಿ ರೀಲ್,  ವಿಡಿಯೋ ಅಥವಾ ಫೋಟೋಗಳನ್ನು ಶೇರ್ ಮಾಡಲು ಅತಿ ಮುಖ್ಯವಾದದ್ದು ಆ ಫೋನಿನ ಸೆಲ್ಫಿ ಕ್ಯಾಮೆರಾ ಎಷ್ಟು ಮುಖ್ಯವೊ ಆ ಸ್ಮಾರ್ಟ್‌ಫೋನ್‌ನ ಪ್ರೊಸೆಸರ್, ಬ್ಯಾಟರಿ, RAM ಸಹ ಅಷ್ಟೇ ಮುಖ್ಯವಾಗಿರುತ್ತದೆ. ಆದ್ದರಿಂದ ನಿಮಗೊಂದು ಅತ್ಯುತ್ತಮ ಒಳೇ ಬಜೆಟ್ ಶ್ರೇಣಿಯಲ್ಲಿ ಹೊಸ ಕ್ಯಾಮೆರಾ ಸ್ಮಾರ್ಟ್‌ಫೋನ್ ಖರೀದಿಸಲು ಹೊರಟಿದ್ದರೆ ಈ ಸ್ಟೋರಿ ಮೂಲಕ Samsung Galaxy M51 ಮತ್ತು Galaxy M31s ಗಳಲ್ಲಿ ಯಾವುದರ ಕ್ಯಾಮೆರಾ ಮತ್ತು ಫೀಚರ್ಗಳ ಮೇರೆಗೆ ಬೆಸ್ಟ್‌ ಎಂದು ಒಂದಕ್ಕೊಂದು ಹೋಲಿಸಿ ನೋಡಿ.

Samsung Galaxy M51 VS Galaxy M31s ಡಿಸ್ಪ್ಲೇ

Samsung Galaxy M51 ಸ್ಮಾರ್ಟ್‌ಫೋನ್‌ 6.7 ಇಂಚಿನ ಸೂಪರ್ AMOLED ಡಿಸ್ಪ್ಲೇಯೊಂದಿಗೆ 1080 x 2400 ಪಿಕ್ಸೆಲ್‌ಗಳ ರೆಸಲ್ಯೂಶನ್ ಹಾಗೂ 60 Hz  ರಿಫ್ರೆಶ್ ದರವನ್ನು ಹೊಂದಿದೆ. 393 PPI ಡೆನ್ಸಿಟಿ ಜೊತೆಗೆ ಡಿಸ್ಪ್ಲೇ ರಕ್ಷಣೆಗಾಗಿ ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3+ ಅನ್ನು ಒಳಗೊಂಡಿದೆ. Samsung Galaxy M31s ಸ್ಮಾರ್ಟ್‌ಫೋನ್‌ ಸ್ಮಾರ್ಟ್‌ಫೋನ್‌ 6.5 ಇಂಚಿನ ಸೂಪರ್ AMOLED ಡಿಸ್ಪ್ಲೇಯೊಂದಿಗೆ 1080 x 2400 ಪಿಕ್ಸೆಲ್‌ಗಳ ರೆಸಲ್ಯೂಶನ್ ಹಾಗೂ 60 Hz  ರಿಫ್ರೆಶ್ ದರವನ್ನು ಹೊಂದಿದೆ. 405 PPI ಡೆನ್ಸಿಟಿ ಜೊತೆಗೆ ಡಿಸ್ಪ್ಲೇ ರಕ್ಷಣೆಗಾಗಿ ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಅನ್ನು ಒಳಗೊಂಡಿದೆ.

Samsung Galaxy M51 VS Galaxy M31s ಕ್ಯಾಮೆರಾ

Samsung Galaxy M51 ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟ್‌ಆಪ್‌ ಹೊಂದಿದ್ದು ಮುಖ್ಯ ಕ್ಯಾಮೆರಾ 64MP ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಸೆಕೆಂಡರಿ ಕ್ಯಾಮೆರಾವು 12MP ಸೆನ್ಸಾರ್ ಸಾಮರ್ಥ್ಯದಲ್ಲಿದ್ದು ಇನ್ನು ಮೂರನೇ ಹಾಗೂ ನಾಲ್ಕನೇ ಕ್ಯಾಮೆರಾವು ಕ್ರಮವಾಗಿ 5MP ಸೆನ್ಸಾರ್ ಬಲವನ್ನು ಪಡೆದಿವೆ. ಇದರೊಂದಿಗೆ ಸೆಲ್ಫಿಗಾಗಿ 32MP ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ. Samsung Galaxy M31s ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಕ್ವಾಡ್-ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದೆ. ಮುಖ್ಯ ಕ್ಯಾಮೆರಾವು 64MP ಸೆನ್ಸಾರ್ ಹೊಂದಿದ್ದು ಸೆಕೆಂಡರಿ ಕ್ಯಾಮೆರಾವು 12MP ಅಲ್ಟ್ರಾ-ವೈಡ್ ಲೆನ್ಸ್ ಪಡೆದಿದೆ. ಮೂರನೇ ಕ್ಯಾಮೆರಾ 5MP ಮ್ಯಾಕ್ರೋ ಲೆನ್ಸ್ ಮತ್ತು ನಾಲ್ಕನೇ ಕ್ಯಾಮೆರಾ 5MP ಡೆಪ್ತ್ ಸೆನ್ಸಾರ್ ಅನ್ನು ಪಡೆದಿದೆ. ಇನ್ನು ಸೆಲ್ಫಿ ಕ್ಯಾಮೆರಾದಲ್ಲಿ 32MP ಸೆನ್ಸಾರ್ ಕ್ಯಾಮೆರಾ ಅನ್ನು ಹೊಂದಿದೆ.

Samsung Galaxy M51 VS Galaxy M31s ಪ್ರೊಸೆಸರ್

Samsung Galaxy M51 ಸ್ಮಾರ್ಟ್‌ಫೋನ್‌ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 730 ಪ್ರೊಸೆಸರ್ ಹೊಂದಿದ್ದು One UI ಜೊತೆ ಆಂಡ್ರಾಯ್ಡ್‌ 10 OS ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಫೋನ್ 6GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದೆ ಹಾಗೂ SD ಕಾರ್ಡ್‌ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸಲು ಅವಕಾಶ ಇದೆ. Samsung Galaxy M31s ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ Exynos 9611  ಪ್ರೊಸೆಸರ್‌ ಹೊಂದಿದ್ದು Mali-G72 MP3 GPU ಸಹ ಪಡೆದಿದೆ. ಈ ಪ್ರೊಸೆಸರ್‌ಗೆ ಪೂರಕವಾಗಿ ಆಂಡ್ರಾಯ್ಡ್‌ 10 OS ಕಾರ್ಯನಿರ್ವಹಿಸಲಿದೆ. ಇದು 6GB RAM ಮತ್ತು 8GB RAM ಆಯ್ಕೆಗಳಲ್ಲಿ ಲಭ್ಯವಿದ್ದು 128GB ಇಂಟರ್ನಲ್ ಸ್ಟೋರೇಜ್ ಅನ್ನು ಪಡೆದಿದೆ. ಇದರಲ್ಲಿ SD ಕಾರ್ಡ್‌ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸಲು ಅವಕಾಶ ಇದೆ.

Samsung Galaxy M51 VS Galaxy M31s ಬ್ಯಾಟರಿ

Samsung Galaxy M51 ಸ್ಮಾರ್ಟ್‌ಫೋನ್‌ 25W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುವ 7000mAh ಬ್ಯಾಟರಿಯಿಂದ ಚಾಲಿತವಾಗಿವೆ. ಇದರೊಂದಿಗೆ ಸೈಡ್‌ ಮೌಂಟ್‌ ಫಿಂಗರ್‌ಪ್ರಿಂಟ್ ಸೆನ್ಸಾರ್‌, ಆಂಡ್ರಾಯ್ಡ್‌ 10 OS, 4G VoLTE, ವೈಫೈ, ಬ್ಲೂಟೂತ್, GPS ಆಡಿಯೊ ಜಾಕ್ ಸೇರಿದಂತೆ ಇತ್ತೀಚಿನ ಅಗತ್ಯ ಫೀಚರ್ಸ್‌ಗಳನ್ನು ಒಳಗೊಂಡಿದೆ. Samsung Galaxy M31s ಸ್ಮಾರ್ಟ್‌ಫೋನ್‌ 25W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುವ 6000 mAh  ಬ್ಯಾಟರಿಯಿಂದ ಚಾಲಿತವಾಗಿವೆ. ಇದರೊಂದಿಗೆ ಸೈಡ್‌ ಮೌಂಟ್‌ ಫಿಂಗರ್‌ಪ್ರಿಂಟ್ ಸೆನ್ಸಾರ್‌, ಆಂಡ್ರಾಯ್ಡ್‌ 10 OS, 4G VoLTE, ವೈಫೈ, ಬ್ಲೂಟೂತ್ 5, GPS ಆಡಿಯೊ ಜಾಕ್ ಇತ್ಯಾದಿ ಫೀಚರ್ಸ್‌ ಹೊಂದಿದೆ.

Samsung Galaxy M51 VS Galaxy M31s ಬೆಲೆ

ಈ ಫೋನ್ಗಳ ಬೆಲೆಯ ಬಗ್ಗೆ ಮಾತನಾಡಬೇಕಂದರೆ ಬಿಡುಗಡೆಯಾಗದ ಇವುಗಳ ಬೆಲೆ ಸುಮಾರು 25000 ಕ್ಕಿಂತ ಮೇಲಿತ್ತು ಆದರೆ ಈಗ ಇವೆರಡು ಸ್ಮಾರ್ಟ್ಫೋನ್ಗಳು ಅತಿ ಕಡಿಮೆ ಬೆಲೆಗೆ ಅಮೆಝೋಬಿನ್ ಅಲ್ಲಿ ಲಭ್ಯವಿದೆ. ಈ ಮೂಲಕ ಮೊದಲಿಗೆ Samsung Galaxy M51 ಸೆಲೆಸ್ಟಿಯಲ್ ಬ್ಲಾಕ್, ಎಲೆಕ್ಟ್ರಿಕ್ ಬ್ಲೂ ಮತ್ತು ವೈಟ್ ಕಲರ್‌ಗಳ ಆಯ್ಕೆಯಲ್ಲಿ ಇದರ ಆರಂಭಿಕ ವೆರಿಯಂಟ್ 6GB RAM ಮತ್ತು 128GB ಸ್ಟೋರೇಜ್ ಕೇವಲ ₹17,990 ರೂಗಳಿಗೆ ಲಭ್ಯವಾಗುತ್ತದೆ. ಇದರ ಕ್ರಮವಾಗಿ Samsung Galaxy M31s ಮಿರಾಜ್ ಬ್ಲ್ಯಾಕ್ ಮತ್ತು ಮಿರಾಜ್ ಬ್ಲೂ ಆಯ್ಕೆಯಲ್ಲಿ ಇದರ ಆರಂಭಿಕ ವೆರಿಯಂಟ್ 6GB RAM ಮತ್ತು 128GB ಸ್ಟೋರೇಜ್ ಕೇವಲ ₹17,499 ರೂಗಳಿಗೆ ಲಭ್ಯವಾಗುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo