ಭಾರತದಲ್ಲಿ ಸ್ಯಾಮ್‌ಸಂಗ್ ತನ್ನ ಜನಪ್ರಿಯ ಮತ್ತು ಹೆಚ್ಚು ಮಾರಾಟವಾಗುತ್ತಿರುವ ಹೊಸ Samsung Galaxy M34 5G ಸ್ಮಾರ್ಟ್ಫೋನ್ ಮೇಲೆ ಸದ್ದಿಲ್ಲದೆ ಇದ್ದಕ್ಕಿದ್ದಂತೆ ಉತ್ತಮ ಬೆಲೆಯನ್ನು ಕಡಿತಗೊಳಿಸಿದೆ. ಈ ಸ್ಮಾರ್ಟ್ಫೋನ್ ನಿಮಗೆ ಖರೀದಿಸಲು ಒಟ್ಟು ಎರಡು ದೊಡ್ಡ ರೂಪಾಂತರಗಳಲ್ಲಿ ಲಭ್ಯವಿದೆ. ಈ ಎರಡು ರೂಪಾಂತರಗಳಲ್ಲಿ ಸ್ಯಾಮ್‌ಸಂಗ್ ನೇರವಾಗಿ 3000 ರೂಗಳ ಬೆಲೆಯನ್ನು ಇಳಿಸಿದೆ. ಇದರ ಹೈಲೈಟ್ ಅಂದರೆ 6000mAh ಬ್ಯಾಟರಿ, ಸ್ಟೋರೇಜ್ ಮತ್ತು ಡಿಸ್ಪ್ಲೇಯಾಗಿದೆ. Samsung Galaxy M34 5G ಹೊಸ ಬೆಲೆ ಆಫರ್ ಮತ್ತು ಫೀಚರ್‌ಗಳನ್ನು ಈ ಕೆಳಗೆ ತಿಳಿಯಿರಿ.
Also Read: ಸೋಶಿಯಲ್ ಮೀಡಿಯಾದಲ್ಲಿ ಮಕ್ಕಳ ಫೋಟೋ ವಿಡಿಯೋ ಪೋಸ್ಟ್ ಮಾಡ್ತೀರಾ? ಇದು ಎಷ್ಟು ಅಪಾಯಕಾರಿ?
ಸ್ಯಾಮ್‌ಸಂಗ್‌ನ ಈ ಅತ್ಯುತ್ತಮ 5G ಸ್ಮಾರ್ಟ್ಫೋನ್ ಕಳೆದ ವರ್ಷ ಅಂದರೆ 2023 ರಂದು ಅದ್ದೂರಿಯಾಗಿ ಬಿಡುಗಡೆಯಾಗಿ ಈವರೆಗೆ ಮಾರಾಟವಾಗುತ್ತಿದೆ. ಇದನ್ನು ಆಸಕ್ತರು 6GB RAM ಮತ್ತು 128GB ಸ್ಟೋರೇಜ್ ಮತ್ತು 8GB RAM ಮತ್ತು 128GB ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್ಫೋನ್ಗಳ ಸಾಮಾನ್ಯ ಬೆಲೆಗಳ ಬಗ್ಗೆ ಮಾತನಾಡುವುದಾದರೆ ಆರಂಭಿಕ 18,999 ರೂಗಳು ಮತ್ತೊಂದು 20,000 ರೂಗಳಾಗಿವೆ. ಆದರೆ ಇಂದು Samsung Galaxy M34 5G ಸ್ಮಾರ್ಟ್ಫೋನ್ ಭಾರಿ ಬೆಲೆ ಕಡಿತಗೊಂಡಿದ್ದು ಇದರ ಆರಂಭಿಕ ರೂಪಾಂತರವನ್ನು ನೀವು ಕೇವಲ 15,999 ರೂಗಳಿಗೆ ಮತ್ತೊಂದನ್ನು ಸುಮಾರು 17,999 ರೂಗಳಿಗೆ ಅಮೆಜಾನ್‌ನಲ್ಲಿ ಪೂರ್ತಿ 3000 ರೂಗಳ ಡಿಸ್ಕೌಂಟ್‍ನೊಂದಿಗೆ ಖರೀದಿಸಬಹುದು. ಅಲ್ಲದೆ Samsung Galaxy M34 5G ಫೋನ್ ಅನ್ನು ನೀವು Waterfall Blue, Prism Silver ಮತ್ತು Midnight Blue ಎಂಬ ಮೂರೂ ಬಣ್ಣಗಳಲ್ಲಿ ಲಭ್ಯವಿದ್ದು ನೀವು ಖರೀದಿಸಬಹದು.
ಸ್ಮಾರ್ಟ್ಫೋನ್ 6.5 ಇಂಚಿನ AMOLED ಡಿಸ್‌ಪ್ಲೇಯೊಂದಿಗೆ 1080×2340 ಪಿಕ್ಸೆಲ್‌ಗಳ ರೆಸಲ್ಯೂಶನ್ ಜೊತೆಗೆ ಬರುತ್ತದೆ. ಫೋನ್ 120Hz ಡಿಸ್ಪ್ಲೇ ರಿಫ್ರೆಶ್ ರೇಟ್ ಮತ್ತು 1000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹೊಂದಿದ್ದು ಫೋನ್ ದಿನದಲ್ಲಿ ಹೊರಗಿನ ಸೂರ್ಯನ ಬೆಳಕಿನಲ್ಲೂ ಉತ್ತಮವಾಗಿ ಡಿಸ್ಪ್ಲೇ ಗೋಚರಿಸುತ್ತದೆ. ಕ್ಯಾಮೆರಾ ವಿಭಾಗದಲ್ಲಿ ಟ್ರಿಪಲ್ ಬ್ಯಾಕ್ ಕ್ಯಾಮೆರಾ ಸಿಸ್ಟಮ್ ಅನ್ನು ಒದಗಿಸಲಾಗಿದೆ. ಇದರಲ್ಲಿ ಮೊದಲನೆಯದು 50MP ಪ್ರೈಮರಿ ಸೆನ್ಸರ್ ಮತ್ತೊಂದು 8MP ಅಲ್ಟ್ರಾವೈಡ್ ಆಂಗಲ್ ಲೆನ್ಸ್ ಮತ್ತು ಕೊನೆಯದಾಗಿ 2MP ಮ್ಯಾಕ್ರೋ ಶೂಟರ್ ಸೆನ್ಸರ್ ನೀಡಲಾಗಿದೆ. Samsung Galaxy M34 5G ಸ್ಮಾರ್ಟ್ಫೋನ್ ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 13MP ಕ್ಯಾಮೆರಾ ಸೆನ್ಸರ್ ಅನ್ನು ಸಹ ಸೇರಿಸಲಾಗಿದೆ.
Samsung Galaxy M34 5G ಸ್ಮಾರ್ಟ್ಫೋನ್ 6GB RAM ಮತ್ತು 128GB ಸ್ಟೋರೇಜ್ ಮತ್ತು 8GB RAM ಮತ್ತು 128GB ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯವಿದೆ. ಕಾರ್ಯಕ್ಷಮತೆಗಾಗಿ ಇದು ಆಕ್ಟಾ-ಕೋರ್ Exynos 1280 ಚಿಪ್‌ಸೆಟ್‌ನೊಂದಿಗೆ ಸಜ್ಜುಗೊಂಡಿದೆ. ಇದರ 128GB ಇಂಟರ್ನಲ್ ಸ್ಟೋರೇಜ್ ಮೈಕ್ರೋ SD ಕಾರ್ಡ್ ಮೂಲಕ 1TB ವರೆಗೆ ವಿಸ್ತರಿಸಬಹುದು. ಈ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್ ಆಧಾರಿತ OneUI ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ ಈ ಹ್ಯಾಂಡ್‌ಸೆಟ್ 6000mAh ಬ್ಯಾಟರಿಯೊಂದಿಗೆ 25W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದಲ್ಲದೆ ಇದು ಸುರಕ್ಷತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಸಹ ಒಳಗೊಂಡಿದೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ ವಾಟ್ಸಾಪ್ Channel View ಮಾಡಿ ಸೇರಿಕೊಳ್ಳಿ!