ಈ ಹೊಸ ಫೋನ್ Samsung Galaxy M30 ಫೋನ್ ಭಾರತದಲ್ಲಿ ಇದೇ 27ನೇ ಫೆಬ್ರವರಿ 2019 ರಂದು ಅನಾವರಣಗೊಳ್ಳಲಿದೆ ಎಂದು ಸ್ಯಾಮ್ಸಂಗ್ ಇಂಡಿಯಾ ಪ್ರಕಟಿಸಿದೆ. ಈ ತಿಂಗಳು ಕೆಲವು ಕಂಪನಿಗಳು ಈ ಸಾಧನವನ್ನು ಆರಂಭಿಸಲು ಯೋಜಿಸುತ್ತಿದೆ ಎಂದು ವರದಿಗಳು ಹೇಳುತ್ತವೆ. Xiaomi Redmi Note 7 ಭಾರತದಲ್ಲಿ ಪ್ರಾರಂಭವಾಗುವ ಒಂದು ದಿನದ ಮುಂಚೆ ಈ ದಿನಾಂಕವನ್ನು ಘೋಷಿಸಿದೆ.
Xiaomi ತನ್ನ ಬಿಡುಗಡೆ ದಿನಾಂಕ ಬಹಿರಂಗ ನಂತರ ಸ್ಯಾಮ್ಸಂಗ್ ಬಿಡುಗಡೆ ದಿನಾಂಕ ಬಹಿರಂಗ. ಇದರರ್ಥ Samsung Galaxy M ಲೈನ್ಅಪ್ನೊಂದಿಗೆ Xiaomi ವಿರುದ್ಧವಾಗಿ ಹೋರಾಡುವ ಬಗ್ಗೆ ಗಂಭೀರವಾಗಿದೆ. ಹಿಂದಿನ ವರದಿಗಳ ಪ್ರಕಾರ ಸ್ಯಾಮ್ಸಂಗ್ ಕಂಪೆನಿಯು ಭಾರತದಲ್ಲಿ Galaxy A ಸರಣಿಯಲ್ಲಿ ಹೆಚ್ಚು ಹೂಡಿಕೆ ಮಾಡಲು ಯೋಜಿಸುತ್ತಿದೆ.
ಈ ಹೊಸ ಫೋನ್ ಸುಮಾರು 14,990 ರೂಗಳಲಿ ಮಾರಾಟವಾಗುವ ನಿರೀಕ್ಷಿಯಿದೆ. ಈ ಹ್ಯಾಂಡ್ಸೆಟ್ ಬಹು ವೇರಿಯಂಟ್ಗಳಲ್ಲಿ ಅಂದ್ರೆ RAM ಮತ್ತು ಸ್ಟೋರೇಜ್ ಸಾಮರ್ಥ್ಯದ ಆಯ್ಕೆಗಳಲ್ಲಿ ಮಾರಾಟ ಮಾಡಬವುದು. ಇದರಲ್ಲಿ ತನ್ನದೆಯಾದ Exynos 7904 ಪ್ರೊಸೆಸರನ್ನು ಹೊಂದಿದೆ. ಇದಕ್ಕೆ ಸಂಭಧಿಸಿದ ಬೇರೆ ಹೊಸ ಮಾಹಿತಿಗಳು ಲಭ್ಯವಾದರೆ ನಾವು ನಿಮಗೆ ತಿಳಿಸುತ್ತೇವೆ.
ಈ ಹೊಸ Samsung Galaxy M30 ಸ್ಮಾರ್ಟ್ಫೋನ್ ಕ್ಯಾಮೆರಾದ ಬಗ್ಗೆ ಹೇಳಬೇಕೇದರೆ ರೇರ್ ಕ್ಯಾಮೆರಾ 13+5+5MP ಸೆಟಪ್ ಮತ್ತು ಫ್ರಂಟಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16MP ಕ್ಯಾಮೆರಾವನ್ನು ಹೊಂದಿರುವುದಾಗಿ ನಿರೀಕ್ಷಿಸಬವುದು. ಅಲ್ಲದೆ ಇದರ ಹಿಂಭಾಗದಲ್ಲಿ Galaxy M20 ಯಂತೆ ಫಿಂಗರ್ಪ್ರಿಂಟ್ ಸೆನ್ಸರ್ ಮತ್ತು ಫ್ರಂಟಲ್ಲಿ ಫೇಸ್ ಅನ್ಲಾಕಿಂಗ್ ಫೀಚರ್ ನಿರೀಕ್ಷಿಸಬವುದು. ಕೊನೆಯದಾಗಿ ಮೇಲೆ ಹೇಳಿರುವಂತೆ 5000mAh ಬ್ಯಾಟರಿಯೊಂದಿಗೆ ಟೈಪ್ C ಚಾರ್ಜಿಂಗ್ ಪೋರ್ಟ್ ಅನ್ನು ಹೊಂದಿರಬವುದು.