ಭಾರತದಲ್ಲಿ SAMSUNG ತನ್ನ ಮತ್ತೊಂದು ಹೊಸ ಸ್ಮಾರ್ಟ್ಫೋನ್ ಅನ್ನು ಇದೇ ತಿಂಗಳು ಬಿಡುಗಡೆಯಾಗಲಿದೆ. ಇದನ್ನು Samsung Galaxy M21 ಎನ್ನಲಾಗಿದ್ದು ಇದು 18 ಮಾರ್ಚ್ ರಂದು ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಈ ಕಂಪನಿಯು ಅಮೆಜಾನ್ ಇಂಡಿಯಾ ವೆಬ್‌ಸೈಟ್‌ನಲ್ಲಿ Galaxy M21 ಸ್ಮಾರ್ಟ್ಫೋನಿನ ಬಿಡುಗಡೆಯ ದಿನಾಂಕವನ್ನು ಘೋಷಿಸುವ ಟೀಸರ್ ಅನ್ನು ಸಹ ಬಹಿರಂಗಪಡಿಸಿದೆ. ಇದಕ್ಕೂ ಮೊದಲು ಕಂಪನಿ ಈ ಫೋನನ್ನು ಭಾರತದಲ್ಲಿ 16ನೇ ಮಾರ್ಚ 2020 ರಂದು ಬಿಡುಗಡೆ ಮಾಡುವುದಾಗಿ ಹೇಳಿತ್ತು.
ಆದರೆ ಈಗ ಕಂಪನಿ ಇದಕ್ಕೆ ಮೂಲವಾಗಿ ಕಾರಣಗಳನ್ನು ತೋರಿಸದೆ ನೇರವಾಗಿ ಎರಡು ದಿನದ ನಂತರದ ಅಂದ್ರೆ 18ನೇ ಮಾರ್ಚ 2020 ರಂದು ಈ ಸ್ಮಾರ್ಟ್ಫೋನ್ ಬಿಡುಗಡೆಗೊಳಿಸಲಿದೆಯಂದು ಘೋಷಿಸಿದೆ. ಇದರೊಂದಿಗೆ ಈ ಸ್ಮಾರ್ಟ್ಫೋನ್ ಕೆಲವು ವಿಶೇಷಣಗಳನ್ನು ಸಹ ಕಂಪನಿ ಪ್ರದರ್ಶಿಸಲಾಗಿದೆ. ಅಂದ್ರೆ ಈ ಸ್ಮಾರ್ಟ್ಫೋನ್ ಕರೋನ ವೈರಸ್ ಪರಿಣಾಮವಾಗಿ ಇದರ ಇವೆಂಟ್ ಸಹ ಆನ್ಲೈನ್ ಮೂಲಕವೇ ನಡೆಯುವ ನಿರೀಕ್ಷೆಯಿದೆ.
ಈ ಹೊಸ ಫೋನ್ ಮುಖ್ಯವಾಗಿ 48MP ಪ್ರೈಮರಿ ಕ್ಯಾಮೆರಾ ಮತ್ತು 20MP ಫ್ರಂಟ್ ಫೇಸಿಂಗ್ ಸೆನ್ಸಾರ್ನೊಂದಿಗೆ ಬರಲಿದೆ. ಅದಲ್ಲದೆ ಈ ಸ್ಮಾರ್ಟ್ಫೋನ್ ಸ್ಕ್ರೀನ್ ಮೇಲ್ಭಾಗದಲ್ಲಿ ವಾಟರ್ ಡ್ರಾಪ್ ದರ್ಜೆಯನ್ನು ಸಹ ಪಡೆಯುತ್ತದೆ. ಅಷ್ಟೇಯಲ್ಲದೆ ಈ ಡಿಸ್ಪ್ಲೇ ಸೂಪರ್ ಅಮೋಲೆಡ್ ಡಿಸ್ಪ್ಲೇ ಆಗಿದ್ದು ಇದು 6000mAh ಬ್ಯಾಟರಿಯೊಂದಿಗೆ ನಿಯಂತ್ರಿಸಲ್ಪಡುತ್ತದೆ. ಇದಲ್ಲದೆ ಈ ಸ್ಮಾರ್ಟ್ಫೋನ್ ಪ್ರಚಾರಕ್ಕಾಗಿ ಬಳಸುವ ಚಿತ್ರಗಳನ್ನು ನೋಡಿದಾಗ ಮುಖ್ಯ ಹಿಂಭಾಗದ ಕ್ಯಾಮೆರಾ ಟ್ರಿಪಲ್-ಲೆನ್ಸ್ ಸೆಟಪ್ ಅನ್ನು ಹೊಂದಿದೆ.
ಈ ಮುಂಬರಲಿರುವ Samsung Galaxy M21 ಸ್ಮಾರ್ಟ್ಫೋನ್ ಆಕ್ಟಾ ಕೋರ್ Exynos 9611 SoC ನಿಂದ ನಿಯಂತ್ರಿಸಲ್ಪಡುತ್ತದೆ. ಇದು 6GB ವರೆಗೆ RAM ಮತ್ತು 128GB ಸ್ಟೋರೇಜ್ ಜೊತೆಗೆ ಜೋಡಿಯಾಗಿರುತ್ತದೆ. ಈ Samsung Galaxy M21 ಸ್ಮಾರ್ಟ್ಫೋನ್ ಆಂಡ್ರಾಯ್ಡ್ 10 ಔಟ್ ಆಫ್ ದಿ ಬಾಕ್ಸ್ ಜೊತೆಗೆ ತಮ್ಮದೇಯಾದ OneUI 2.0 ನೊಂದಿಗೆ ಚಾಲನೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಇದರೊಂದಿಗೆ ಈ ಸ್ಮಾರ್ಟ್ಫೋನ್ ಭಾರತದಲ್ಲಿ ನೀಲಿ, ಕಪ್ಪು ಮತ್ತು ನೇರಳೆ ಬಣ್ಣಗಳಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ.