Samsung Galaxy M14 4G: ಕೈಗೆಟಕುವ ಬೆಲೆಗೆ ಸ್ಯಾಮ್‌ಸಂಗ್ 4G ಫೋನ್ ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು?

Updated on 07-Mar-2024
HIGHLIGHTS

Samsung Galaxy M14 4G ಸ್ಮಾರ್ಟ್ಫೋನ್ ಅನ್ನು ಸುಮಾರು 9000 ರೂಗಳೊಳಗೆ ಅಧಿಕೃತವಾಗಿ ಬಿಡುಗಡೆಗೊಳಿಸಿದೆ.

Galaxy M14 4G ಸ್ಮಾರ್ಟ್ಫೋನ್ 50MP ಪ್ರೈಮರಿ ಕ್ಯಾಮೆರಾ ಮತ್ತು 5000mAh ಬ್ಯಾಟರಿಯೊಂದಿಗೆ ಅನಾವರಣಗೊಂಡಿದೆ.

Samsung Galaxy M14 4G ಸ್ಮಾರ್ಟ್ಫೋನ್ 25W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5000 mAh ಬ್ಯಾಟರಿಯನ್ನು ಹೊಂದಿದೆ.

ಭಾರತದಲ್ಲಿ ಸ್ಯಾಮ್‌ಸಂಗ್ ಸದ್ದಿಲ್ಲದೆ ತನ್ನ ಲೇಟೆಸ್ಟ್ Samsung Galaxy M14 4G ಸ್ಮಾರ್ಟ್ಫೋನ್ ಅನ್ನು ಸುಮಾರು 9000 ರೂಗಳೊಳಗೆ ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಈ ಸ್ಮಾರ್ಟ್ಫೋನ್ ಅನ್ನು ನವೀಕರಿಸಿದ ಆವೃತ್ತಿ ಎಂದರೆ ತಪ್ಪೇನಿಲ್ಲ ಏಕೆಂದರೆ ಈ ಫೋನ್ Samsung Galaxy M13 ಫೋನ್‌ಗಿಂತ ಕೊಂಚ ಲೇಟೆಸ್ಟ್ ಅಪ್‌ಡೇಟ್‌ಗಳನ್ನು ಹೊಂದಿದೆ. ಈ ಹೊಸ ಸ್ಮಾರ್ಟ್‌ಫೋನ್‌ನಲ್ಲಿ ಕಂಪನಿ Qualcomm Snapdragon ಪ್ರೊಸೆಸರ್ ಮತ್ತು 5000mAh ಬ್ಯಾಟರಿಯೊಂದಿಗೆ ಅತ್ಯುತ್ತಮ ಡಿಸ್ಪ್ಲೇಯನ್ನು Samsung Galaxy M14 4G ಸ್ಮಾರ್ಟ್ಫೋನ್ ಹೊಂದಿದೆ. ಇದನ್ನು ಖರೀದಿಸಲು ಯೋಚಿಸುತ್ತಿದ್ದರೆ ಇದರ ಒಂದಿಷ್ಟು ಮಾಹಿತಿಯನ್ನು ಈ ಈ ಕೆಳಗೆ ತಿಳಿಯಿರಿ.

Also Read: Traffic Fines: ಇನ್ಮೇಲೆ ನೀವು ಸಂಚಾರ ನಿಯಮ‌ ಉಲ್ಲಂಘಿಸಿದರೆ ನೋಟಿಸ್​ ಜೊತೆಗೆ QR ​​ಕೋಡ್ ಮನೆಗೆ ಬರುತ್ತೆ!

ಭಾರತದಲ್ಲಿ Samsung Galaxy M14 4G ವಿಶೇಷತೆಗಳೇನು?

ಸ್ಯಾಮ್‌ಸಂಗ್ ಈ ಫೋನ್ 6.7 ಇಂಚಿನ ಪೂರ್ಣ HD+ IPS LCD ಡಿಸ್ಪ್ಲೇಯೊಂದಿಗೆ 90Hz ರಿಫ್ರೆಶ್ ದರ ನೀಡುವ ಮತ್ತು 16 ಮಿಲಿಯನ್ ಬಣ್ಣಗಳೊಂದಿಗೆ 391 ಪಿಕ್ಸೆಲ್ ಡೆನ್ಸಿಟಿಯನ್ನು ಹೊಂದಿದೆ. ಸ್ಮಾರ್ಟ್ಫೋನ್ 1080×2400 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಬೆಂಬಲಿಸುತ್ತ ಫೋನ್ Qualcomm Snapdragon 680 ಪ್ರೊಸೆಸರ್ ಅನ್ನು ಸಪೋರ್ಟ್ ಮಾಡುತ್ತದೆ. ಈಗಾಗಲೇ ಮೇಲೆ ತಿಳಿಸಿರುವಂತೆ ಫೋನ್ ಎರಡು ರೂಪಾಂತರಗಳಲ್ಲಿ ಬರುತ್ತದೆ. ಸ್ಮಾರ್ಟ್ಫೋನ್ ಆರಂಭಿಕ 4GB RAM ಮತ್ತು 64GB ವರೆಗೆ ಸ್ಟೋರೇಜ್ ಹೊಂದಿದೆ. ಫೋನ್ ಆಂಡ್ರಾಯ್ಡ್ 13 ಆಧಾರಿತ One UI 5.0 ಕಸ್ಟಮ್ ಸ್ಕಿನ್‌ನಲ್ಲಿ ಫೋನ್ ಕಾರ್ಯನಿರ್ವಹಿಸುತ್ತದೆ.

Samsung Galaxy M14 4G launched in India

Samsung Galaxy M14 4G ಕ್ಯಾಮೆರಾ ಮತ್ತು ಬ್ಯಾಟರಿ ಡೀಟೇಲ್ಸ್

ಸ್ಮಾರ್ಟ್ಫೋನ್ ಫೋನ್ ಹಿಂಭಾಗದಲ್ಲಿ ಟ್ರಿಪಲ್ ರೇರ್ ಕ್ಯಾಮೆರಾ ಸೆಟಪ್ ಹೊಂದಿದ್ದು 50MP ಮೆಗಾಪಿಕ್ಸೆಲ್ ಪ್ರೈಮರಿ ಜೊತೆಗೆ 2MP ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಮತ್ತು 2MP ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ ಲೆನ್ಸ್ ಹೊಂದಿದೆ. ಇದರೊಂದಿಗೆ ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ ಫೋನ್ 13MP ಮೆಗಾಪಿಕ್ಸೆಲ್ ಲೆನ್ಸ್ ಅನ್ನು ಹೊಂದಿದೆ. ಫೋನ್ 25W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5000 mAh ಬ್ಯಾಟರಿಯನ್ನು ಹೊಂದಿದೆ. ಫೋನ್‌ನಲ್ಲಿ ಲಭ್ಯವಿರುವ ಸಂಪರ್ಕ ಆಯ್ಕೆಗಳು 4G VoLTE, Wi-Fi 802.11 b/g/n/ac, Bluetooth v5.2, GPS ಮತ್ತು ಚಾರ್ಜಿಂಗ್‌ಗಾಗಿ USB ಪ್ರಕಾರವನ್ನು ಒಳಗೊಂಡಿವೆ. ಸ್ಮಾರ್ಟ್ಫೋನ್ ಟೈಪ್ C ಪೋರ್ಟ್ ಒಳಗೊಂಡಿತ್ತು. ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಸಹ ಹೊಂದಿದೆ.

ಸ್ಯಾಮ್‌ಸಂಗ್ Galaxy M14 4G ಬೆಲೆ ಮತ್ತು ಲಭ್ಯತೆ

ಸ್ಯಾಮ್‌ಸಂಗ್‌ನ ಈ ಲೇಟೆಸ್ಟ್ Samsung Galaxy M14 4G ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಎರಡು ರೂಪಾಂತರಗಳಲ್ಲಿ ಬಿಡುಗಡೆಯಾಗಿದ್ದು ಮೊದಲನೆಯದು 4GB RAM ಮತ್ತು 64GB ಸ್ಟೋರೇಜ್ ಬೆಲೆ 8,499 ರೂಗಳಾಗಿದ್ದು ಇದರ 6GB RAM ಮತ್ತು 128GB ಸ್ಟೋರೇಜ್ ಆವೃತ್ತಿಗೆ 11,499 ರೂಗಳಿಗೆ ಲಭ್ಯವಿದೆ. ಸ್ಮಾರ್ಟ್ರ್ಫೋನ್ ಅನ್ನು ಆಸಕ್ತರು ಆರ್ಕ್ಟಿಕ್ ಬ್ಲೂ ಮತ್ತು ಸಫೈರ್ ಬ್ಲೂ ಎಂಬ ಬಣ್ಣಗಳಲ್ಲಿ ಖರೀದಿಸಬಹುದು. ಈ ಸ್ಮಾರ್ಟ್ಫೋನ್ ಭಾರತದಲ್ಲಿ ಅಮೆಜಾನ್ ಮೂಲಕ ಫೋನ್ ಈಗಾಗಲೇ ಮಾರಾಟಕ್ಕೆ ಲಭ್ಯವಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :