ಭಾರತದಲ್ಲಿ Samsung Galaxy M10 ಮತ್ತು Galaxy M20 ಬೆಲೆ, ಲಭ್ಯತೆ ಹಾಗು ಫೀಚರ್ಗಳ ಮಾಹಿತಿ ಇಲ್ಲಿದೆ.

Updated on 19-Jan-2019
HIGHLIGHTS

Galaxy M10 ಮತ್ತು Galaxy M20 ಬರುವ 5ನೇ ಫೆಬ್ರವರಿ 2019 ರಿಂದ ಆನ್ಲೈನ್ ವೇದಿಕೆಯಲ್ಲಿ ಪ್ರತ್ಯೇಕವಾಗಿ ಮಾರಾಟವಾಗಲಿದೆ.

ಸ್ಯಾಮ್ಸಂಗ್ ತನ್ನ ಮುಂಬರುವ ಬಜೆಟ್ ಸರಣಿಯಲ್ಲಿನ Galaxy M ಶೀಘ್ರದಲ್ಲೇ ಭಾರತದಲ್ಲಿ ಪ್ರಥಮ ಪ್ರವೇಶ ಮಾಡಲಿದೆ. Galaxy M10 ಮತ್ತು Galaxy M20 ಫೋನ್ಗಳ ಬೆಲೆಗಳು ಇತ್ತೀಚಿನ ವರದಿಗಳಲ್ಲಿ ಸೋರಿಕೆಯಾಗಿವೆ. ಭಾರತದಲ್ಲಿ ಸ್ಯಾಮ್ಸಂಗ್ ತಮ್ಮ ಮಾರಾಟದ ದಿನಾಂಕದೊಂದಿಗೆ ಬಹಿರಂಗಗೊಳಿಸುವ ಮುನ್ನ ದಕ್ಷಿಣ ಕೊರಿಯದಲ್ಲಿ 28ನೇ ಜನವರಿ 2019 ರ ಸಾಲಿನಲ್ಲಿ ಮೊದಲೆರಡು ಫೋನ್ಗಳನ್ನು ಅನಾವರಣಗೊಳಿಸುತ್ತಲಿದೆ. 

ಇದರ ಬೆಲೆ ನಿಗದಿಗೆ ಸಂಬಂಧಿಸಿದಂತೆ Galaxy M20 ಮೇಲಿನ 10,000 ರೂಗಳಿಗಿಂತ ಸ್ವಲ್ಪ ಹೆಚ್ಚ್ಚಿರುವ ನಿರೀಕ್ಷೆಯಿದೆ. ಮತ್ತು Galaxy M10 ಉಪ ಮಾದರಿಯಂತೆ 10K  ರೂಗಳಲ್ಲಿ ಬರುವ ನಿರೀಕ್ಷೆಯಿದೆ. ಸ್ಯಾಮ್ಸಂಗ್ ಈಗಾಗಲೇ ಅಮೆಜಾನ್ ಇಂಡಿಯಾದ ಲ್ಯಾಂಡಿಂಗ್ ಪೇಜ್ ಅನ್ನು ಹೊಂದಿದ್ದರಿಂದಾಗಿ ಎರಡೂ ಫೋನ್ಗಳು ಬರುವ 5ನೇ ಫೆಬ್ರವರಿ 2019 ರಿಂದ ವೇದಿಕೆಯಲ್ಲಿ ಪ್ರತ್ಯೇಕವಾಗಿ ಮಾರಾಟವಾಗಲಿದೆ.

Galaxy M10 ಸ್ಮಾರ್ಟ್ಫೋನ್ ನಿಮಗೆ 720 × 1520 ಪಿಕ್ಸೆಲ್ ರೆಸೊಲ್ಯೂಶನ್ನಲ್ಲಿ 6.2 ಇಂಚಿನ ಎಚ್ಡಿ + ಡಿಸ್ಪ್ಲೇ ಹೊಂದಿರುತ್ತದೆ. 2GB / 3GB ರಾಮ್ನೊಂದಿಗೆ 14nm ಆಕ್ಟಾ ಕೋರ್ Exynos 7870 ಪ್ರೊಸೆಸರ್ನಿಂದ ಚಾಲಿತವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇದು 3500mAh ಬ್ಯಾಟರಿಗಾಗಿ ನೆಲೆಗೊಳ್ಳಲು ಹೊಂದಿರುವ ನಿರೀಕ್ಷೆಯಿದೆ. 

Galaxy M20 ಸ್ಮಾರ್ಟ್ಫೋನ್ ನಿಮಗೆ 6.80 ಇಂಚಿನ ಎಲ್ಸಿಡಿ ಪ್ಯಾನಲ್ 1080 × 2340 ಪಿಕ್ಸೆಲ್ ರೆಸೆಲ್ಯೂಷನ್ ಹೊಂದಿದೆ. ಸ್ಯಾಮ್ಸಂಗ್ನ Exynos 7885 ಚಿಪ್ಸೆಟ್ನಿಂದ 3GB ಯ RAM ಮತ್ತು 32GB / 64GB ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯದೊಂದಿಗೆ ಫೋನ್ ಚಾಲಿತವಾಗಬಹುದು. ಫೋನ್ನ ಟೀಸರ್ ಚಿತ್ರಗಳನ್ನು ಆಧರಿಸಿ ಇದು ಪಾಲಿಕಾರ್ಬೊನೇಟ್ ಬಾಡಿಯಲ್ಲಿ ಬರುತ್ತದೆ. ಮತ್ತು ಹಿಂಭಾಗದ ಪ್ಯಾನಲಲ್ಲಿ ಫಿಂಗರ್ಪ್ರಿಂಟ್ ಸೆನ್ಸರ್ ಹೊಂದಿರುವ ನಿರೀಕ್ಷೆಯಿದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :