Samsung Galaxy M10 & M20 ಸ್ಮಾರ್ಟ್ಫೋನ್ಗಳ ಈ ಟಾಪ್ 5 ಫೀಚರ್ಗಳು ನಿಮಗೋತ್ತಾ.

Samsung Galaxy M10 & M20 ಸ್ಮಾರ್ಟ್ಫೋನ್ಗಳ ಈ ಟಾಪ್ 5 ಫೀಚರ್ಗಳು ನಿಮಗೋತ್ತಾ.
HIGHLIGHTS

ಮಿಡ್ ರೇಂಜ್ ಮತ್ತು ಹೈ ಎಂಡ್ ಡಿವೈಸ್ಗಳಲ್ಲಿ ನೀಡುವುದು ಒಂದು ರೀತಿಯ ಹೊಸ ಸ್ಟೇಟರ್ಜಿಯನ್ನು ಪರಿಚಯಿಸಿದೆ.

ಸ್ಯಾಮ್ಸಂಗ್ Samsung Galaxy M10 & M20 ಭಾರತದಲ್ಲಿ ಮುಖ್ಯವಾಗಿ ಯುಂಗ್ ಅಂದ್ರೆ ಯುವ ಪೀಳಿಗೆಯನ್ನು ಗುರಿಯನ್ನಾಗಿಸಿಕೊಂಡು ತಲೆ ಎತ್ತಿದೆ. ಈ M10 & M20 ಸ್ಯಾಮ್ಸಂಗ್ ಕಂಪನಿಯ M ಸರಣಿಯ ಮೊದಲ ಎರಡು ಫೋನ್ಗಳಾಗಿವೆ. ಈ ಫೋನ್ಗಳು ಹೊಸ ಡಿಸೈನ್ ಮತ್ತು ಹೊಸ ಅಪ್ಡೇಟ್ಗಳೊಂದಿಗೆ ಹೊರ ಬರುತ್ತದೆ. ಹಿಂಭಾಗದಿಂದ ಎರಡು ಫೋನ್ಗಳು ಒಂದೇ ರೀತಿ ಕಾಣುತ್ತವೆ.

ಮೊದಲಿಗೆ Galaxy M10 ಒಂದು ಅತ್ಯುತ್ತಮವಾದ ಬಜೆಟ್ ವಿಭಾಗದಲ್ಲಿ ಬರುವ ಹಳೆಯ ಫೋನ್ಗಳಂತೆ ಒಂದಾಗಿದ್ದು ಕೆಲ ಹೊಸ ಸ್ಟೈಲ್ ಮತ್ತು ಫೀಚರ್ಗಳೊಂದಿಗೆ ಬರುತ್ತದೆ. Galaxy M20 ನಿಮಗೆ ಹೊಸ ರೀತಿಯ ಡಿಸೈನ್ ಮತ್ತು ಹೊಸ ಚಿಪ್ಸೆಟ್ ನೊಂದಿಗೆ Xiaomi, Honor ಮತ್ತು Realme ಫೋನ್ಗಳಿಗೆ ಸರಿಸಮನಾದ ಸ್ಪರ್ಧೆಯನ್ನು ನೀಡುತ್ತದೆ. ಹಾಗಾದ್ರೆ ಈ ಫೋನ್ಗಳ ಐದು ಬೆಸ್ಟ್ ಫೀಚರ್ಗಳನ್ನು ನೋಡೋಣ.

Samsung Galaxy M10 & M20 ಈ ಎರಡು ಫೋನ್ಗಳ ಮೂಲಕ Samsung ಹೊಸ ಫೀಚರ್ಗಳನ್ನು ಮಿಡ್ ರೇಂಜ್ ಮತ್ತು ಹೈ ಎಂಡ್ ಡಿವೈಸ್ಗಳಲ್ಲಿ ನೀಡುವುದು ಒಂದು ರೀತಿಯ ಹೊಸ ಸ್ಟೇಟರ್ಜಿಯನ್ನು ಪರಿಚಯಿಸಿದೆ. ಈ ರೀತಿಯನ್ನು ನಾವು Galaxy A7 & A9 ಫೋನ್ಗಳಲ್ಲಿ ನೋಡಿದ್ದೇವೆ. ಈಗ Galaxy M20 ನೋಡಿದರೆ ಈ ಫೋನ್ ನಿಮಗೆ 5000mAh ಮೆಸ್ಸಿವ್ ಬ್ಯಾಟರಿಯನ್ನು ಹೊಂದಿದ್ದು 15W ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಈ ರೀತಿಯ ಬ್ಯಾಟರಿಯನ್ನು ಸ್ಯಾಮ್ಸಂಗ್ ತನ್ನ ಫೋನ್ಗಳಲ್ಲಿ ಮೊತ್ತ ಮೊದಲ ಬಾರಿಗೆ ಬಿಡುಗಡೆ ಮಾಡಿದೆ.

Samsung Galaxy M10 ನಿಮಗೆ ಕೆಲ ಹಳೆಯ ಫೋನ್ಗಳಲ್ಲಿ ಬರುವಂತೆ 3400mAH ಬ್ಯಾಟರಿಯೊಂದಿಗೆ ಅದೇ ಹಳೆಯ Exynos 7870 ಸರಣಿಯ ಚಿಪ್ಸೆಟ್ನೊಂದಿಗೆ ಬರುತ್ತದೆ. Galaxy M20 ನಿಮಗೆ ಹೊಸ Exynos 7904 SoC ಹೊಂದಿದ್ದು ಇದು ಹೊಸ ರೀತಿಯ ISP ಯನ್ನು ಸಪೋರ್ಟ್ ಮಾಡುತ್ತದೆ. ಇದರಿಂದಾಗಿ ಮೂರು ಕ್ಯಾಮೆರಾ ಮತ್ತು A73 ಕೊಡ್ಸ್ ಹಾಗು ಆರು A53 ಕೋಡ್ಗಳೊಂದಿಗೆ ಲಭ್ಯವಿರುತ್ತದೆ. ಇದರ ಪೇಪರಲ್ಲಿ Realem 2 Pro ನಲ್ಲಿರುವ ಸ್ನ್ಯಾಪ್ಡ್ರಾಗನ್ 660 ಮತ್ತು Honor 10 ರಲ್ಲಿನ ಕಿರಣ್ 710 ಪ್ರೊಸೆಸರ್ಗಿಂತ ಉನ್ನತವಾಗಿದಿಯೆಂದು ಹೇಳಿದೆ. 

ಇದನ್ನು ಹೊರತುಪಡಿಸಿ ಇದರ ಡಿಸೈನ್ ಬಗ್ಗೆ ಹೇಳಬೇಕಂದ್ರೆ ಈ ಎರಡು ಫೋನ್ಗಳು ಹೊಸ ಇನ್ಫಿನಿಟಿ ವಿ ಡಿಸ್ಪ್ಲೇ ಇದು V ಆಕಾರದ ವಾಟರ್ಡ್ರಾಪ್ ನಾಚ್ ಒಳಗೊಂಡಿದೆ. ಈ ನಾಚ್ ಒಳಗೆ ಸಣ್ಣ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. Samsung Galaxy M10 & M20 ಎರಡು ಫೋನ್ಗಳು 90% ಬಾಡಿ ರೇಷು ಹೊಂದಿದ್ದರು ಇದರ ಪ್ಯಾನಲ್ ಕೋನಗಳಲ್ಲಿ ಬೆಝಲ್ಗಳನ್ನು ನೋಡಬವುದು.

Samsung Galaxy M10 & M20 ಭಾರತದಲ್ಲಿ ಬಿಡುಗಡೆಯಾದ ಸ್ಯಾಮ್ಸಂಗ್ ಮೊಟ್ಟ ಮೊದಲ ನಾಚ್ ಹೊಂದಿರುವ ಸ್ಮಾರ್ಟ್ಫೋನ್ಗಳಾಗಿವೆ. ಅಲ್ಲದೆ ಸ್ಯಾಮ್ಸಂಗ್ ಹಳೆಯ ಆಯತಾಕಾರದ ನಾಚ್ ನೀಡದೆ ಇಂದು ಜನರಿಗೆ ಹೆಚ್ಚು ಇಷ್ಟವಾಗುತ್ತಿರುವ V ಆಕಾರದ ವಾಟರ್ಡ್ರಾಪ್ ನಾಚ್ ನೀಡಿ ಇನ್ನು ಹೆಚ್ಚು ಆಕರ್ಷಣೆಗೆ ಕಾರಣವಾಗಿದೆ.

Galaxy M10 & M20 ಈ ಎರಡು ಫೋನ್ಗಳ ಹಿಂಭಾಗದಲ್ಲಿ ನಿಮಗೆ ನೋಡಲು ಗ್ಲಾಸಿ ಲುಕ್ ನೀಡಿ ಪ್ರೀಮಿಯಂ ಫೋನ್ ಅಂತ ತೋರುತದಷ್ಟೇ… ಇದರ ಬಗ್ಗೆ ನಾನು ನಿಮಗೆ ಹೇಳುತ್ತೇನೆ ಇದು ಆರಾಮಾಗಿ ಸ್ಕ್ಯಾರ್ಚ್ ಮಾಡಬವುದಾದ ಬಾಡಿ ಫಿನಿಷ್ ಹೊಂದಿದ್ದು ಇದು ಹಾರ್ಡ್ ಪ್ಲಾಸ್ಟಿಕ್  ನಿಂದ ತಯಾರಿಸಲ್ಪಟ್ಟಿದೆ. ಇದರ ಹಿಂಭಾಗದಲ್ಲಿ ಮೆಟಲ್ ಬಾಡಿ ಇದ್ದರೆ ಚೆನ್ನಾಗಿರುತ್ತಿತ್ತು ಆದರೂ ಈ ಹೊಸ ಡಿಸೈನ್ ಮತ್ತು ಲುಕ್ ಸಹ ಅದ್ದೂರಿಯಾಗಿದೆ. 

ಈಗ Samsung Galaxy M10 & M20 ಫೋನ್ಗಳ ಕ್ಯಾಮೆರಾದ ಬಗ್ಗೆ ಮಾತನಾಡಬೇಕೆಂದರೆ ಈ ಬಜೆಟಲ್ಲಿ ನಿಮ್ಮ ಊಹೆಗಳು ಸುಳ್ಳಲ್ಲ. ಈ ಎರಡು ಫೋನ್ಗಳು ನಿಮಗೆ ಡುಯಲ್ ಕ್ಯಾಮೆರಾ ಸೆಟಪ್ ಹೊಂದಿವೆ. ಇದು ಈಗ ಬರುವ ಎಲ್ಲ ಫೋನ್ಗಳಲ್ಲಿ ಸಾಮಾನ್ಯವಾಗಿ ನೋಡಬವುದು. Galaxy M10 & M20 ಈ ಬಜೆಟ್ ಒಳಗೆ ಅಲ್ಟ್ರಾ ವೈಡ್ ಲೆನ್ಸ್ ಸೆನ್ಸರ್ ನೀಡುವ ಮೊಟ್ಟ ಮೊದಲ ಸ್ಮಾರ್ಟ್ಫೋಗಳಾಗಿವೆ. ಈ ಎರಡು ಫೋನ್ಗಳು ಹಿಂಭಾಗದಲ್ಲಿ 5MP F/2.2 ಅಪೆರ್ಚರೊಂದಿಗೆ ಫಿಕ್ಸ್ ಫೋಕಸ್ ಸಹ ಹೊಂದಿದೆ. ಇಲ್ಲಿ ನೀವು ಬೇರೆ ಫೋನ್ಗಳಿಗೆ ಹೋಲಿಸಿ ನೋಡಿದರೆ ನಿಮಗೆ ಹೆಚ್ಚುವರಿಯ ಡೆಪ್ತ್ ಸೆನ್ಸರ್ ಫೀಚರ್ ಬರುವುದು ಸಾಮಾನ್ಯವಾಗಿರುತ್ತದೆ.

ಎರಡು ಫೋನ್ಗಳ ರೇರ್ ಕ್ಯಾಮೆರಾದಲ್ಲಿ 13MP F/1.9 ಕ್ಯಾಮೆರಾ ಪ್ರೋಟ್ರೇಟ್ ಮೂಡ್ನೊಂದಿಗೆ ಹೊಂದಿದೆ. ಇದರ ಫ್ರಂಟ್ ಕ್ಯಾಮೆರಾದಲ್ಲಿ ನಮಗೆ Galaxy M10 ಫೋನ್ 5MP ನೀಡಿದರೆ Galaxy M20 ನಿಮಗೆ 8MP ನೀಡುತ್ತದೆ. ಒಟ್ಟಾರೆಯಾಗಿ ಸ್ಯಾಮ್ಸಂಗ್  ಕಡಿಮೆ ಬಜೆಟಲ್ಲಿ ಹೆಚ್ಚಿನ ಫೀಚರ್ಗಳನ್ನು ನೀಡಿ ಚೀನಿ ಕಂಪನಿಯನ್ನು ಬಗ್ಗು ಬಡಿಯಲು ಸಜ್ಜುಗೊಳಿಸುತ್ತಿದೆ. Xiaomi ನಡೆಸಿದ ಸೇರ್ವೆ ಪ್ರಕಾರ Xiaomi ಭಾರತದ ನಂಬರ್ 1 ಸ್ಮಾರ್ಟ್ಫೋನ್ ಬ್ರಾಂಡ್ ಆಗಿ ಹೊರ ಬಂದಿದೆ. ಕಳೆದ 2018 ರಲ್ಲಿ Xiaomi ಸುಮಾರು 27% ಮಾರ್ಕೆಟ್ ಶೇರ್ ಹೊಂದಿತ್ತು ಅದಕ್ಕೆ ಸರಿಯಾಗಿ Samsung ಕಳೆದ 2018 ರಲ್ಲಿ Samsung ಸುಮಾರು 23% ಮಾರ್ಕೆಟ್ ಶೇರ್ ಹೊಂದಿತ್ತು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo