ದಕ್ಷಿಣ ಕೊರಿಯಾದ ಜನಪ್ರಿಯ ಮತ್ತು ಹೆಚ್ಚು ಭಾರತಿಯಾದ ಭರವಸೆಯ ಸ್ಮಾರ್ಟ್ಫೋನ್ ಬ್ರಾಂಡ್ ಸ್ಯಾಮ್‌ಸಂಗ್ (Samsung) ತನ್ನ ಮುಂಬರಲಿರುವ ಲೇಟೆಸ್ಟ್ Samsung Galaxy F55 5G ಅನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಿಸಲು ಸಜ್ಜಾಗಿದೆ. ಈ 5G ಸ್ಮಾರ್ಟ್‌ಫೋನ್‌ನ ಹಿಂಭಾಗದ ಪ್ಯಾನೆಲ್‌ನಲ್ಲಿ ವೆಗಾನ್ ಲೆದರ್ ಫಿನಿಶ್ ಅನ್ನು ಬಳಸಲಾಗುವುದು. Samsung Galaxy F55 5G ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುವುದಾಗಿ ಟ್ವಿಟ್ಟರ್ ಮೂಲಕ ತಿಳಿಸಿದೆ. ಈ Samsung Galaxy F55 5G ಸ್ಮಾರ್ಟ್ಫೋನ್ ಈಗಾಗಲೇ ಚೀನಾದಲ್ಲಿ ಬಿಡುಗಡೆ ಮಾಡಲಾಗಿದೆ ಈಗ ಭಾರತದಲ್ಲಿ ತಲೆ ಎತ್ತಲಿದೆ.
ಇದರಲ್ಲಿ 50MP ಪ್ರೈಮರಿ ಕ್ಯಾಮೆರಾದೊಂದಿಗೆ 8MP ಅಲ್ಟ್ರಾ ವೈಡ್ ಮತ್ತು 2MP ಮ್ಯಾಕ್ರೋ ಕ್ಯಾಮೆರಾ ಸೆನ್ಸರ್ ಹೊಂದಿರುವ ನಿರೀಕ್ಷೆಗಳಿವೆ. Samsung Galaxy F55 5G ಫ್ಲಿಪ್‌ಕಾರ್ಟ್‌ನಲ್ಲಿ ಬಿಡುಗಡೆಯಾಗಿ ಮಾರಾಟವಾಗುವುದು ಖಚಿತವಾಗಿದೆ ಇದರ ಬಗ್ಗೆ ಈವರೆಗೆ ತಿಳಿದಿರುವ ಒಂದಿಷ್ಟು ಮಾಹಿತಿಯನ್ನು ತಿಳಿಯೋಣ. ಈ Samsung Galaxy F55 5G ಸ್ಮಾರ್ಟ್‌ಫೋನ್ ವಿನ್ಯಾಸವು ಸ್ಯಾಮ್‌ಸಂಗ್ C55 5G ನಿಂದ ಪ್ರೇರಿತವಾಗಿದೆ. ಇದಲ್ಲದೆ ಇದರ ವಿನ್ಯಾಸವು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಯಾದ Galaxy M55 ಸಮನಾಗಿ ಹೊಂದಿಕೆಯಾಗುತ್ತದೆ.
ಈ ಮುಂಬರಲಿರುವ Samsung Galaxy F55 5G ಗಮನಾರ್ಹ ವೈಶಿಷ್ಟ್ಯವೆಂದರೆ ಅದರ ವಿಶಿಷ್ಟವಾದ ವೆಗಾನ್ ಲೆದರ್ ಫಿನಿಶ್ ಮುಕ್ತಾಯವಾಗಿದ್ದು ಇದು ಈಗಾಗಲೇ ಬಿಡುಗಡೆಯಾಗಿರುವ Galaxy C55 ವಿನ್ಯಾಸವನ್ನು ಹೋಲುತ್ತದೆ. ಈ ಮೂಲಕ 6GB RAM ಮತ್ತು 128GB ವರೆಗಿನ ಆರಂಭಿಕ 24,999 ರೂಗಳಿಂದ ಶುರುವಾಗುವ ನಿರೀಕ್ಷೆಗಳಿವೆ. ಕಂಪನಿ Samsung Galaxy F55 5G ಸ್ಮಾರ್ಟ್‌ಫೋನ್ ಬಗ್ಗೆ ಈಗಾಗಲೇ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಇದರ ಫಸ್ಟ್ ಪ್ರಾಡಕ್ಟ್ ಗ್ರಾಫಿಕ್ ಡಿಸೈನಿಂಗ್ ಲುಕ್ ಅನ್ನು ಹಂಚಿಕೊಂಡಿದೆ.
Also Read: WhatsApp Message Pin: ಇನ್ಮೇಲೆ ವಾಟ್ಸಾಪ್‌ನಲ್ಲಿ ಒಂದಕ್ಕಿಂತ ಅಧಿಕ ಮೆಸೇಜ್‌ಗಳನ್ನು ಪಿನ್ 📌 ಮಾಡಬಹುದು!
Samsung Galaxy F55 5G ಸ್ಮಾರ್ಟ್ಫೋನ್ 6.7 ಇಂಚಿನ ಪೂರ್ಣ HD+ ಸೂಪರ್ AMOLED ಪ್ಲಸ್ ಡಿಸ್ಪ್ಲೇಯನ್ನು 120Hz ರಿಫ್ರೆಶ್ ದರ ಮತ್ತು 1000 nits ವರೆಗಿನ ಗರಿಷ್ಠ ಹೊಳಪನ್ನು ಹೊಂದಿದೆ ಎಂದು ವದಂತಿಗಳಿವೆ. ಹುಡ್ ಅಡಿಯಲ್ಲಿ ಸ್ಮಾರ್ಟ್ಫೋನ್ 6GB RAM ಮತ್ತು 128GB ವರೆಗಿನ ಆರಂಭಿಕ ಇಂಟರ್ನಲ್ ಸ್ಟೋರೇಜ್‌ನೊಂದಿಗೆ Snapdragon 7 Gen 1 ಪ್ರೊಸೆಸರ್‌ನಲ್ಲಿ ರನ್ ಆಗುವ ನಿರೀಕ್ಷೆಯಿದೆ. ಇದರೊಂದಿಗೆ ಫೋನ್ Samsung Galaxy F55 5G ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಅನ್ನು ಆಧರಿಸಿ Samsung ತನ್ನದೆಯಾದ One UI 6.0 ಅನ್ನು ರನ್ ಮಾಡುತ್ತದೆ.
Samsung Galaxy F55 5G ಸ್ಮಾರ್ಟ್‌ಫೋನ್ ಕ್ಯಾಮೆರಾ ಸೆಟಪ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) 8MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 2MP ಮ್ಯಾಕ್ರೋ ಲೆನ್ಸ್‌ನೊಂದಿಗೆ 50MP ಪ್ರೈಮರಿ ಕ್ಯಾಮೆರಾವನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೆ ಕಂಪನಿ ಇದರಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳ ಉತ್ಸಾಹಿಗಳಿಗೆ ಮುಂಭಾಗದ ಕ್ಯಾಮರಾ 50MP ಶೂಟರ್ ನೀಡುವುದಾಗಿ ನಿರೀಕ್ಷಿಸಲಾಗಿದೆ. ಅಲ್ಲದೆ ಕೊನೆಯದಾಗಿ ಈ Samsung Galaxy F55 5G ಸ್ಮಾರ್ಟ್‌ಫೋನ್ 25W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುವ 5000mAh ಬ್ಯಾಟರಿಯೊಂದಿಗೆ ಸಜ್ಜುಗೊಂಡಿದೆ ಎಂದು ವದಂತಿಗಳಿವೆ.