ಸ್ಯಾಮ್‌ಸಂಗ್ ಕಂಪನಿ ತನ್ನ ಹೊಚ್ಚ ಹೊಸ ಸ್ಮಾರ್ಟ್ಫೋನ್ Samsung Galaxy F54 5G ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ಫೋನ್ ಬೆಲೆಯನ್ನು ₹30,000 ರೂಗಳೊಳಗೆ ನೀಡಲಾಗಿದ್ದು ಈ ಸ್ಮಾರ್ಟ್ಫೋನ್ ಈಗಾಗಲೇ ಬಿಡುಗಡೆಯಾಗಿರುವ Samsung Galaxy A34 ಫೋನಿನಂತೆ ಕಾಣುತ್ತದೆ. ಸ್ಯಾಮ್‌ಸಂಗ್ ಪ್ರಕಾರ ಈ ಹೊಸ ಸ್ಮಾರ್ಟ್ಫೋನ್ ಆಲ್ ರೌಂಡರ್ ಆಗಿದ್ದು ಅತಿ ಹೆಚ್ಚಾಗಿ ಕ್ಯಾಮೆರಾ ಪ್ರೀಯರಿಗೆ ತನ್ನ ಸೆಳೆಯಲಿದೆ ಎಂದು ಹೇಳಲಾಗಿದೆ. ಏಕೆಂದರೆ ಇದರಲ್ಲಿನ ಕ್ಯಾಮೆರಾ ಸೆನ್ಸರ್ ಸಾಮಾನ್ಯ ಫೋನ್ಗಳಿಗಿಂತ ಅತ್ಯುತ್ತಮವಾಗಿರುವುದೇ ಕಾರಣ. Samsung Galaxy F54 5G ಸ್ಮಾರ್ಟ್ಫೋನ್ ದೊಡ್ಡ ಬ್ಯಾಟರಿ, ಡಿಸ್ಪ್ಲೇ, Exynos ಚಿಪ್, ಫಾಸ್ಟ್ ಚಾರ್ಜಿಂಗ್‌ನೊಂದಿಗೆ ಎಡಿಆರ್ ಸಂಪೂರ್ಣ ವಿವರಣೆ ತಿಳಿಯಿರಿ.
ಭಾರತದಲ್ಲಿ Samsung Galaxy F54 5G ಆರಂಭಿಕ ಬೆಲೆಯನ್ನು ತ್ವರಿತ 2000 ರೂಗಳ ಬ್ಯಾಂಕ್ ಆಫರ್ ನಂತರ ನಿಮಗೆ ಕೇವಲ ₹27,999/- ರೂಗಳಿಂದ ಶುರು ಮಾಡಿದೆ. ಇದರ ಆರಂಭಿಕ 128GB ಸ್ಟೋರೇಜ್ ವೇರಿಯಂಟ್ ಆಗಿದೆ. ಸ್ಮಾರ್ಟ್ಫೋನ್ ಪರಿಚಯಾತ್ಮಕ ಬಿಡುಗಡೆಯ ಕೊಡುಗೆಯಾಗಿ ಇದರ ಬೆಲೆಯನ್ನು ಮತ್ತು ನಿಮ್ಮ ಹತ್ತಿರದ ಚಿಲ್ಲರೆ ಅಂಗಡಿಗಳಲ್ಲಿ ಶೀಘ್ರದಲ್ಲೇ ತಿಳಿಸಲಾಗುವುದು. ಈ ಸ್ಮಾರ್ಟ್ಫೋನ್ ಬಿಡುಗಡೆಯಾದ ಕೆಲವೇ ಘಂಟೆಗಳಲ್ಲಿ ಜನಪ್ರಿಯ ಇ-ಕಾಮರ್ಸ್ ವೇದಿಕೆ ಫ್ಲಿಪ್ಕಾರ್ಟ್ ಮೂಲಕ ಬಿಡುಗಡೆಯ ದಿನದಿಂದಲೇ ಮಧ್ಯಾಹ್ನ 3:00 ಗಂಟೆಯಿಂದ ನಿಮಗೆ ಪೂರ್ವ-ಆರ್ಡರ್‌ಗಳಿಗೆ ಲಭ್ಯವಿದೆ. ಇದರೊಂದಿಗೆ ಅತಿ ಶೀಘ್ರದಲ್ಲೇ ಭಾರತದ ಆಯ್ದ ಚಿಲ್ಲರೆ ಅಂಗಡಿಗಳ ಮೂಲಕವೂ ಸಹ ಈ ಸ್ಮಾರ್ಟ್ರ್ಫೋನ್ ಲಭ್ಯವಾಗಲಿದೆ.
https://twitter.com/SamsungIndia/status/1666022267225092101?ref_src=twsrc%5Etfw
ಹೊಸ Samsung Galaxy F54 5G ಸ್ಮಾರ್ಟ್ಫೋನ್ 120Hz ರಿಫ್ರೆಶ್ ರೇಟ್‌ಗೆ ಬೆಂಬಲದೊಂದಿಗೆ 6.7 ಇಂಚಿನ HD+ ರೆಸಲ್ಯೂಶನ್ AMOLED ಪ್ಯಾನೆಲ್ ಸ್ಕ್ರೀನ್ ಹೊಂದಿದೆ. ಇದರ ಅತ್ಯುತ್ತಮ ಡಿಸ್ಪ್ಲೇಯ ಪ್ರೊಟೆಕ್ಷನ್ ನೀಡಲು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಲೇಯರ್ ಅನ್ನು ಈ ಫೋನ್ ಹೊಂದಿದೆ. ಸ್ಮಾರ್ಟ್ಫೋನ್ Exynos 1380 ಚಿಪ್‌ಸೆಟ್‌ನಿಂದ ನಡೆಯಲಿದ್ದು 5G ಫೋನ್ ಇತ್ತೀಚಿನ Android 13 ಪ್ರೊಸೆಸರ್ ಅನ್ನು ನಡೆಸುತ್ತದೆ. ಇದರ ಮತ್ತೊಂದು ವಿಶೇಷತೆ ಅಂದ್ರೆ ಸ್ಯಾಮ್‌ಸಂಗ್ 4 ವರ್ಷಗಳ ಆಂಡ್ರಾಯ್ಡ್ ಓಎಸ್ ಅಪ್‌ಗ್ರೇಡ್‌ಗಳನ್ನು ಮತ್ತು 5 ವರ್ಷಗಳ ಸೆಕ್ಯುರಿಟಿ ಪ್ಯಾಚ್‌ಗಳನ್ನು ನೀಡುವುದಾಗಿ ಭರವಸೆ ನೀಡಿದೆ.
Samsung Galaxy F54 5G ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದ್ದು ಪ್ರೈಮರಿ 108MP ಮೆಗಾಪಿಕ್ಸೆಲ್ ಸೆನ್ಸರ್ ವೀಡಿಯೊಗಳಿಗಾಗಿ OIS ಅನ್ನು ಬೆಂಬಲಿಸುತ್ತದೆ. ಇದರ ನಂತರ 8MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 2MP ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಅನ್ನು ಸ್ಮಾರ್ಟ್ಫೋನ್ ಹಿಂಭಾಗದಲ್ಲಿ ಹೊಂದಿದೆ. ಇದರ ಮುಂಭಾಗದಲ್ಲಿ ಇನ್ಫಿನಿಟಿ ಸೆಲ್ಫಿ ಕ್ಯಾಮೆರಾವನ್ನು 32MP ಮೆಗಾಪಿಕ್ಸೆಲ್ ಸೆನ್ಸರ್ ಅನ್ನು ಒಳಗೊಂಡಿದೆ. ಸ್ಮಾರ್ಟ್ಫೋನ್ 6000mAh ಬ್ಯಾಟರಿಯೊಂದಿಗೆ 25W ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿಯನ್ನು ಬೆಂಬಲಿಸುತ್ತದೆ.