Samsung Galaxy F15 5G: ಭಾರತದಲ್ಲಿ 6000mAh ಬ್ಯಾಟರಿ ಮತ್ತು Interesting ಫೀಚರ್ಸ್‌ಗಳೊಂದಿಗೆ ಬಿಡುಗಡೆಗೆ ಸಜ್ಜು!

Samsung Galaxy F15 5G: ಭಾರತದಲ್ಲಿ 6000mAh ಬ್ಯಾಟರಿ ಮತ್ತು Interesting ಫೀಚರ್ಸ್‌ಗಳೊಂದಿಗೆ ಬಿಡುಗಡೆಗೆ ಸಜ್ಜು!
HIGHLIGHTS

ಭಾರತದಲ್ಲಿ ಸ್ಯಾಮ್‌ಸಂಗ್‌ Galaxy F15 5G ತನ್ನ ಮುಂಬರಲಿರುವ 5G ಸ್ಮಾರ್ಟ್ಫೋನ್ ಮುಂದಿನ ತಿಂಗಳು ಬಿಡುಗಡೆಗೆ ಸಜ್ಜು!

6000mAh ಬ್ಯಾಟರಿ ಮತ್ತು Dimensity 6100+ ಪ್ರೊಸೆಸರ್ನೊಂದಿಗೆ ಕೈಗೆಟಕುವ ಬೆಲೆಗೆ ಬಿಡುಗಡೆಯಾಗಲು ಸಿದ್ದ!

Samsung Galaxy F15 5G ಫೋನ್ 6GB RAM 128GB ಸ್ಟೋರೇಜ್ ರೂಪಾಂತರಕ್ಕೆ 17,999 ರೂಗಳಿಗೆ ನಿರೀಕ್ಷಿಸಬಹುದು.

ಭಾರತದಲ್ಲಿ ಸ್ಯಾಮ್‌ಸಂಗ್‌ ತನ್ನ ಮುಂಬರಲಿರುವ ಸ್ಮಾರ್ಟ್ಫೋನ್ Samsung Galaxy F15 5G ಅನ್ನು ಮುಂದಿನ ತಿಂಗಳು ಮೊದಲ ವಾರದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಸ್ಮಾರ್ಟ್ಫೋನ್ ಪ್ರತ್ಯೇಕವಾಗಿ ಫ್ಲಿಪ್‌ಕಾರ್ಟ್‌ ಇಂಡಿಯಾದಲ್ಲಿ ಅನಾವರಣಗೊಳ್ಳಲಿದ್ದು ಈಗಾಗಲೇ ಇದಕ್ಕೆ ಮೀಸಲಾದ ಮೈಕ್ರೊಸೈಟ್ ಅನ್ನು ಸಹ ನೀಡಲಾಗಿದ್ದು ಈ Galaxy F ಸೀರೀಸ್ ಸ್ಮಾರ್ಟ್‌ಫೋನ್‌ನ ಡಿಸೈನಿಂಗ್ ಮತ್ತು ಕೆಲವು ವಿಶೇಷಣಗಳನ್ನು ಬೀಡುಗಡೆಗೂ ಮುಂಚೆಯೇ ಸ್ಯಾಮ್‌ಸಂಗ್‌ ಲೇವಡಿ ಮಾಡಿದೆ. ಈ Samsung Galaxy F15 5G ಸ್ಮಾರ್ಟ್ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್‌ನೊಂದಿಗೆ ಮೂರು ವಿಭಿನ್ನ ಬಣ್ಣ ಆಯ್ಕೆಗಳಲ್ಲಿ ಬಿಡುಗಡೆಯಾಗುವುದಾಗಿ ದೃಢೀಕರಿಸಲಾಗಿದೆ.

Also Read: 84 ದಿನಗಳಿಗೆ ಪ್ರತಿದಿನ 3GB ಡೇಟಾ ಮತ್ತು Unlimited ಕರೆ ನೀಡುವ ಹೊಸ BSNL ಪ್ಲಾನ್‌ಗಳು! ಬೆಲೆ ಎಷ್ಟು?

Samsung Galaxy F15 5G ಹೈಲೈಟ್ ವಿಶೇಷಣಗಳು

ಈ ಮುಂಬರಲಿರುವ ಸ್ಮಾರ್ಟ್ಫೋನ್ Galaxy F15 5G ಅನ್ನು ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಸ್ಮಾರ್ಟ್ಫೋನ್ ಕೆಲವೊಂದು ವಿಶೇಷಗಳನ್ನು ನೋಡುವುದಾದರೆ ಈ ಹೊಸ ಸ್ಯಾಮ್‌ಸಂಗ್‌ Galaxy F15 5G ನಿಮಗೆ 6000mAh ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಇದರೊಂದಿಗೆ ಮುಂಬರಲಿರುವ 4 ಜನರೇಷನ್ ಆಂಡ್ರಾಯ್ಡ್ ಅಪ್ಡೇಟ್ ಮತ್ತು 5 ವರ್ಷಗಳ ಸೆಕ್ಯೂರಿಟಿ ಅಪ್ಡೇಟ್ ಪಡೆಯುವುದರೊಂದಿಗೆ ಸ್ಮಾರ್ಟ್ಫೋನ್ ಕೈಗೆಟುಕುವ ಆವೃತ್ತಿಯಂತೆ ಬರುವುದಾಗಿ ಕಂಪನಿ ತಿಳಿಸಿದೆ. Samsung Galaxy F15 5G ಭಾರತದಲ್ಲಿ 4ನೇ ಮಾರ್ಚ್ 2024 ರಂದು ಮಧ್ಯಾಹ್ನ 12:00pm IST ಸಮಯಕ್ಕೆ ಸರಿಯಾಗಿ ಅಧಿಕೃತವಾಗಿ ಬಿಡುಗಡೆಗೆ ನಿರ್ಧರಿಸಲಾಗಿದೆ. ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್ ಮೂಲಕ ಹ್ಯಾಂಡ್‌ಸೆಟ್ ಮಾರಾಟವಾಗಲಿದೆ.

ಸ್ಯಾಮ್‌ಸಂಗ್‌ Galaxy F15 5G ನಿರೀಕ್ಷಿತ ವಿಶೇಷಣಗಳು

ಈಗಾಗಲೇ ಫ್ಲಿಪ್ಕಾರ್ಟ್ ಇ-ಕಾಮರ್ಸ್ ವೆಬ್‌ಸೈಟ್ ತನ್ನ ವೆಬ್‌ಸೈಟ್‌ನಲ್ಲಿ ಮೀಸಲಾದ ಲ್ಯಾಂಡಿಂಗ್ ಪುಟವನ್ನು ರಚಿಸಿದೆ. ಇದು ಆಶ್ ಬ್ಲ್ಯಾಕ್, ಗ್ರೂವಿ ವೈಲೆಟ್ ಮತ್ತು ಜಾಝಿ ಗ್ರೀನ್ ಬಣ್ಣಗಳಲ್ಲಿ ಲಭ್ಯವಿದೆ ಎಂದು ದೃಢಪಡಿಸಲಾಗಿದೆ. ಈ Samsung Galaxy F15 5G ಸ್ಮಾರ್ಟ್ಫೋನ್ ಸೂಪರ್ AMOLED ಡಿಸ್ಪ್ಲೇಯನ್ನು ಹೊಂದುವ ನಿರೀಕ್ಷೆಗಳಿವೆ. ಇದು ಹುಡ್ ಅಡಿಯಲ್ಲಿ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಚಿಪ್‌ಸೆಟ್‌ನಿಂದ ಚಾಲಿತವಾಗುತ್ತದೆ. ಇದು 6000mAh ಬ್ಯಾಟರಿಯನ್ನು ಹೊಂದಿದೆ ಎಂದು ದೃಢಪಡಿಸಲಾಗಿದೆ, ಇದು ಒಂದೇ ಚಾರ್ಜ್‌ನಲ್ಲಿ ಎರಡು ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಹೇಳಲಾಗಿದೆ.

ಸ್ಯಾಮ್‌ಸಂಗ್‌ Galaxy F15 5G ನಿರೀಕ್ಷಿತ ಕ್ಯಾಮೆರಾ ಮತ್ತು ಬೆಲೆ

Samsung Galaxy F15 5G ಅಧಿಕೃತ ಪೋಸ್ಟರ್‌ಗಳು 64MP ಪ್ರೈಮರಿ ಕ್ಯಾಮೆರಾದೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಯೂನಿಟ್ ಮತ್ತು ಸಿಂಗಲ್ ಸೆಲ್ಫಿ ಶೂಟರ್ ಹೊಂದಿರುವ ನಿರೀಕ್ಷೆಗಳಿವೆ. ಮುಂಭಾಗದಲ್ಲಿ ವಾಟರ್‌ಡ್ರಾಪ್ ನಾಚ್ ಡಿಸೈನಿಂಗ್ ಡಿಸ್ಪ್ಲೇಯಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ನಿಮಗೆ 16MP ಸೆಲ್ಫಿ ಕ್ಯಾಮೆರಾ ನೀಡುವ ನಿರೀಕ್ಷೆಗಳಿವೆ. ಈ ಲೇಟೆಸ್ಟ್ ಫೀಚರ್ ಆಧಾರದ ಮೇರೆಗೆ ಸ್ಮಾರ್ಟ್ಫೋನ್ ಒಟ್ಟು ಎರಡು ರೂಪಾಂತರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆ. ಇದರೊಂದಿಗೆ ಇವುಗಳ ಬೆಲೆಯ ಬಗ್ಗೆ ಮಾತನಾಡುವುದಾದ್ರೆ ಫೋನ್ 6GB RAM 128GB ಸ್ಟೋರೇಜ್ ರೂಪಾಂತರಕ್ಕೆ 17,999 ರೂಗಳಿಗೆ ನಿರೀಕ್ಷಿಸಬಹುದು. ಇದರ ಮತ್ತೊಂದು 8GB RAM ಮತ್ತು 256GB ಸ್ಟೋರೇಜ್ ರೂಪಾಂತರಕ್ಕೆ 18,999 ರೂಗಳಿಗೆ ನಿರೀಕ್ಷಿಸಬಹುದು.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ ವಾಟ್ಸಾಪ್ Channel View ಮಾಡಿ ಸೇರಿಕೊಳ್ಳಿ!

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo