ಸ್ಯಾಮ್‌ಸಂಗ್ ಭಾರತದಲ್ಲಿ ನೆನ್ನೆ ಅಂದ್ರೆ 4ನೇ ಮಾರ್ಚ್ 2024 ರಂದು ತನ್ನ ಬಹುನಿರೀಕ್ಷಿತ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್15 5ಜಿ (Samsung Galaxy F15 5G) ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆಗೊಳಿಸಿದೆ. ಈ ಸ್ಮಾರ್ಟ್ಫೋನ್ ನಿಜಕ್ಕೂ ಕೈಗೆಟಕುವ ಬೆಲೆಗೆ ಭರ್ಜರಿಯ ಬಜೆಟ್ ಸ್ಮಾರ್ಟ್‌ಫೋನ್ ಆಗಿದ್ದು ಇದರ ಆರಂಭಿಕ ಬೆಲೆ 12,999 ರೂಗಳಿಗೆ ಮಾರಾಟವಾಗುತ್ತಿದೆ. ಇದರ ವಿಶೇಷತೆಗಳ ಬಗ್ಗೆ ನೋಡುವುದಾದರೆ ಸ್ಮಾರ್ಟ್ಫೋನ್ ಬರೋಬ್ಬರಿ 6000mAh ಬ್ಯಾಟರಿಯೊಂದಿಗೆ MediaTek Dimensity 6100+ ಚಿಪ್‌ಸೆಟ್ ಮತ್ತು 4 ವರ್ಷಗಳ ಆಂಡ್ರಾಯ್ಡ್ ಅಪ್‌ಡೇಟ್‌ಗಳೊಂದಿಗೆ ಅನಾವರಣಗೊಂಡಿದೆ. ಈ ಸ್ಮಾರ್ಟ್ಫೋನ್ ಅನ್ನು ನೀವು ಖರೀದಿಸಲು ಯೋಚಿಸುತ್ತಿದ್ದರೆ ಒಮ್ಮೆ ಇದರ ಈ ಟಾಪ್ 5 ಫೀಚರ್‌ಗಳನೊಮ್ಮೆ ಪರಿಶೀಲಿಸಿ ನಿರ್ಧರಿಸಬಹುದು.
ಸ್ಮಾರ್ಟ್ಫೋನ್ ಪ್ರೀಮಿಯಂ ಸಿಗ್ನೇಚರ್ ಗ್ಯಾಲಕ್ಸಿ ಲುಕ್ ಅನ್ನು ಹೊಂದಿದ್ದು ಇದರ ಡಿಸ್ಪ್ಲೇ ಭಾಗವಾಗಿ 6.5 ಇಂಚಿನ FHD+ sAMOLED ಡಿಸ್ಪ್ಲೇಯೊಂದಿಗೆ 1080 x 2340 (FHD+) ರೆಸುಲ್ಯೂಷನ್ 90Hz ಡಿಸ್ಪ್ಲೇ ರಿಫ್ರೆಶ್ ರೇಟ್‌ನೊಂದಿಗೆ ಬರುತ್ತದೆ. ಆಸಕ್ತರು ಸ್ಮಾರ್ಟ್ಫೋನ್ ಅನ್ನು ಮೂರು ಆಶ್ ಬ್ಲಾಕ್, ಗ್ರೂವಿ ವೈಲೆಟ್ ಮತ್ತು ಜಾಝಿ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು. ಫೋನ್ 390 ಪಿಪಿಐ ಪಿಕ್ಸೆಲ್ ಡೆನ್ಸಿಟಿ ಹೊಂದಿದ್ದು ದಿನದಲ್ಲಿ ಸೂರ್ಯನ ಬೆಳಕಿನಲ್ಲೂ ಉತ್ತಮವಾಗಿ ಬಳಸಲು ಅನುವು ಮಾಡಿಕೊಡುತ್ತದೆ.
ಸ್ಮಾರ್ಟ್ಫೋನ್ (VDIS) ಜೊತೆಗೆ 50MP ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು ಇದು ಅಸ್ಥಿರವಾದ ಅಥವಾ ಅಲುಗಾಡುವ ಚಲನೆಗಳಿಂದ ಉಂಟಾಗುವ ವೀಡಿಯೊಗಳಲ್ಲಿನ ಸ್ಪಷ್ಟತೆಯನ್ನು ನೀಡಲು ವೀಡಿಯೊ ಡಿಜಿಟಲ್ ಇಮೇಜ್ ಸ್ಟೆಬಿಲೈಸೇಶನ್ ನೀಡುತ್ತದೆ. ಅಲ್ಲದೆ ಮತ್ತೊಂದು 5MP ಅಲ್ಟ್ರಾ ವೈಡ್ ಆಂಗಲ್ ಮತ್ತು ಕೊನೆಯದಾಗಿ 2MP ಮ್ಯಾಕ್ರೋ ಸೆನ್ಸರ್ ಅನ್ನು ಹೊಂದಿದೆ. ಅಲ್ಲದೆ ಡಿಸ್ಪ್ಲೇಯಲ್ಲಿ ಸ್ಪಷ್ಟವಾದ ಸೆಲ್ಫಿಗಳಿಗಾಗಿ 13MP ಮುಂಭಾಗದ ಕ್ಯಾಮೆರಾವನ್ನು ಸಹ ಹೊಂದಿದೆ.
ಬಜೆಟ್ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್‌ನಿಂದ ಚಾಲಿತವಾಗಿದೆ ಮತ್ತು 6GB RAM ಮತ್ತು 128GB ವರೆಗೆ ಸ್ಟೋರೇಜ್ ಬೆಂಬಲಿಸುತ್ತದೆ. Galaxy F15 5G ಮೈಕ್ರೊ SD ಕಾರ್ಡ್ ಮೂಲಕ 1TB ವರೆಗೆ ಸ್ಟೋರೇಜ್ ವಿಸ್ತರಣೆಗೆ ಬೆಂಬಲದೊಂದಿಗೆ ಬರುತ್ತದೆ. Galaxy F15 5G ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್ ಆಧಾರಿತ One UI 6 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು Samsung ಈ ಫೋನ್‌ನೊಂದಿಗೆ 4 ವರ್ಷಗಳ OS ಅಪ್ಡೇಟ್ಗಳ ಭರವಸೆ ನೀಡುತ್ತಿದೆ. ಅಂದರೆ Galaxy F15 5G ಕನಿಷ್ಠ Android 18 ರವರೆಗೆ OS ನವೀಕರಣಗಳನ್ನು ಸ್ವೀಕರಿಸುತ್ತದೆ.
ಈ ಬಜೆಟ್ ಸ್ಮಾರ್ಟ್‌ಫೋನ್ 25W ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಬೃಹತ್ 6000mAh ಬ್ಯಾಟರಿಯನ್ನು ಹೊಂದಿದೆ. ಆದಾಗ್ಯೂ ಚಾರ್ಜಿಂಗ್ ಅಡಾಪ್ಟರ್ ಅನ್ನು ಬಾಕ್ಸ್‌ನಲ್ಲಿ ಸೇರಿಸಲಾಗಿಲ್ಲ ಮತ್ತು ಈ ಸ್ಮಾರ್ಟ್ಫೋನ್ ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯಗಳನ್ನು ಆನಂದಿಸಲು ಬಳಕೆದಾರರು ಹೆಚ್ಚುವರಿ ಹಣವನ್ನು ಪಾವತಿಸಬೇಕಾಗುತ್ತದೆ.
Samsung Galaxy Galaxy F15 5G ಬೆಲೆಯ ಬಗ್ಗೆ ಮಾತನಾಡುವುದಾದರೆ 4GB RAM ಮತ್ತು 128GB ಸ್ಟೋರೇಜ್ ರೂಪಾಂತರಕ್ಕೆ ₹11,999 ರೂಗಳಾಗಿದ್ದು ಇದರ ಕ್ರಮವಾಗಿ 6GB RAM ಮತ್ತು 128GB ಸ್ಟೋರೇಜ್ ರೂಪಾಂತರಕ್ಕೆ ₹13,490 ರೂಗಳಿಗೆ ಖರೀದಿಸಬಹುದು. ಆದರೆ ನೀವು HDFC ಬ್ಯಾಂಕ್ ಕಾರ್ಡ್ ಬಳಸಿ 1000 ರೂಗಳ ತ್ವರಿತ ಡಿಸ್ಕೌಂಟ್ ಸಹ ಪಡೆಯಬಹುದು. ಫ್ಲಿಪ್‌ಕಾರ್ಟ್‌ನಲ್ಲಿ ಬಿಡುಗಡೆಯಾದ ತಕ್ಷಣ ಇದರ ಮಾರಾಟ ಶುರುವಾಗಿದ್ದು ಆರಂಭಿಕ ಮಾರಾಟದ ಗ್ರಾಹಕರು ₹1,299 ಮೌಲ್ಯದ ಸ್ಯಾಮ್‌ಸಂಗ್ ಟ್ರಾವೆಲ್ ಅಡಾಪ್ಟರ್ ಅನ್ನು ಕೇವಲ ₹299 ಗೆ ಖರೀದಿಸುವ ಅವಕಾಶವನ್ನು ಹೊಂದಿರುತ್ತಾರೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ ವಾಟ್ಸಾಪ್ Channel View ಮಾಡಿ ಸೇರಿಕೊಳ್ಳಿ!