Samsung Galaxy F13 vs Redmi 10 ಫೋನ್‌ಗಳ ಟಾಪ್ 5 ಫೀಚರ್‌ಗಳ ಹೋಲಿಕೆ! ಯಾವುದು ಬೆಸ್ಟ್?
ವಿಶೇಷವೆಂದರೆ ಈ ಎರಡು Samsung Galaxy F13 vs Redmi 10 ಫೋನ್‌ಗಳು 6000mAh ಬ್ಯಾಟರಿಯನ್ನು ಒಳಗೊಂಡಿದೆ
ಈ Samsung Galaxy F13 vs Redmi 10 ಎರಡು ಫೋನ್‌ಗಳು ಇತ್ತೀಚಿಗೆ 10 ಸಾವಿರಕ್ಕೂ ಕಡಿಮೆ ಬೆಲೆಯಲ್ಲಿ ಬಿಡುಗಡೆ
ಬಜೆಟ್ ಸ್ನೇಹಿ ಫೋನ್‌ಗಳಿಗೆ ಹೆಸರುವಾಸಿಯಾದ ಈ ಎರಡು ಫೋನ್ ಗಳ ಫೀಚರ್‌ಗಳು ಇಲ್ಲಿದೆ.
Samsung Galaxy F13 vs Redmi 10: ಈ ಎರಡು ಫೋನ್‌ಗಳು ಇತ್ತೀಚಿಗೆ ಸುಮಾರು 10 ಸಾವಿರಕ್ಕೂ ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡಲಾದ ಅತ್ಯುತ್ತಮ 4G ಸ್ಮಾರ್ಟ್‌ಫೋನ್‌ಗಳಾಗಿವೆ. ಮೊದಲಿಗೆ ಈ Xiaomi Redmi 10 ಅನ್ನು ಕಳೆದ ವರ್ಷದ ಇದೆ ತಿಂಗಳ 17ನೇ ಮಾರ್ಚ್ 2022 ರಂದು ಬಿಡುಗಡೆಗಳಿಸಲಾಗಿತ್ತು ಇದರ ಕ್ರಮವಾಗಿ Samsung Galaxy F13 ಸಹ ಕಳೆದ 22ನೇ ಜೂನ್ 2022 ರಂದು ಬಿಡುಗಡೆಗೊಳಿಸಲಾಯಿತು. ಇವೇರಡರ ವಿಶೇಷವೆಂದರೆ ಈ ಎರಡು ಫೋನ್‌ಗಳು 6000mAh ಬ್ಯಾಟರಿಯೊಂದಿಗೆ ಕೈಗೆಟಕುವ ಬೆಲೆಯಲ್ಲಿ ಬಜೆಟ್ ಸ್ನೇಹಿ ಫೋನ್‌ಗಳಿಗೆ ಹೆಸರುವಾಸಿಯಾದ ಈ ಎರಡು ಫೋನ್ ಗಳ ಫೀಚರ್‌ಗಳೇನು ಮತ್ತು ಇವುಗಳಲ್ಲಿ ಯಾವುದು ಬೆಸ್ಟ್ ನೀವೇ ನೋಡಿ.
Samsung Galaxy F13 vs Redmi 10 ಡಿಸ್ಪ್ಲೇ:
Xiaomi Redmi 10 ಸ್ಮಾರ್ಟ್ಫೋನ್ 6.70 ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇಯನ್ನು ಹೊಂದಿದೆ. ಈ ಫೋನ್ 720×1648 ಪಿಕ್ಸೆಲ್‌ಗಳ (HD+) ರೆಸಲ್ಯೂಶನ್ ಜೊತೆಗೆ 60 Hz ರಿಫ್ರೆಶ್ ರೇಟ್ ಅನ್ನು ನೀಡುತ್ತದೆ. ಡಿಸ್ಪ್ಲೇ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್ ಅನ್ನು ಇದು ಒಳಗೊಂಡಿದೆ. Samsung Galaxy F13 ಸ್ಮಾರ್ಟ್‌ಫೋನ್ ವಾಟರ್‌ಡ್ರಾಪ್ ನಾಚ್‌ನೊಂದಿಗೆ ದೊಡ್ಡ 6.6 ಇಂಚಿನ ಟಚ್‌ಸ್ಕ್ರೀನ್ ಅನ್ನು ಹೊಂದಿದೆ. ಇದು 1080x2408px ರೆಸಲ್ಯೂಶನ್‌ನೊಂದಿಗೆ ಪೂರ್ಣ HD+ ಡಿಸ್ಪ್ಲೇಯನ್ನು ನೀಡುತ್ತದೆ ಮತ್ತು ಉತ್ತಮ ಗುಣಮಟ್ಟದ ವಿಶುಯಲ್ ಗಳಿಗಾಗಿ 401 PPI ನ ಪಿಕ್ಸೆಲ್ ಡೆನ್ಸಿಟಿಯನ್ನು ಹೊಂದಿದೆ. ಡಿಸ್ಪ್ಲೇ ರಕ್ಷಣೆಗಾಗಿ ಫೋನ್ ಗೊರಿಲ್ಲಾ ಗ್ಲಾಸ್ 5 ಅನ್ನು ಹೊಂದಿದೆ.
Samsung Galaxy F13 vs Redmi 10 ಕ್ಯಾಮೆರಾ:
Xiaomi Redmi 10 ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ (f/1.8) ಪ್ರೈಮರಿ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಒಳಗೊಂಡ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಇದು ಹೊಂದಿದೆ. ಬ್ಯಾಕ್ ಕ್ಯಾಮರಾ ಸೆಟಪ್ ಆಟೋಫೋಕಸ್ ಅನ್ನು ಹೊಂದಿದ್ದು ಸೆಲ್ಫಿಗಳಿಗಾಗಿ ಫ್ರಂಟ್ ಕ್ಯಾಮರಾ ಸೆಟಪ್ ಅನ್ನು ಒಳಗೊಂಡಿದೆ. f/2.2 ಅಪೆರ್ಚರ್ನೊಂದಿಗೆ 5-ಮೆಗಾಪಿಕ್ಸೆಲ್ ಸೆನ್ಸರ್ ಮತ್ತು 1.12-ಮೈಕ್ರಾನ್ ಪಿಕ್ಸೆಲ್ ಸೈಜ್ ಅನ್ನು ಈ ಫೋನ್ ಒಳಗೊಂಡಿದೆ. Samsung Galaxy F13 ಹಿಂಭಾಗದಲ್ಲಿ 50 MP + 5 MP + 2 MP ಕ್ಯಾಮೆರಾಗಳನ್ನು ಹೊಂದಿರುವ ಸಿಂಗಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ಹೊಂದಿದೆ. ಇದರಿಂದ ನೀವು ಕೆಲವು ಅದ್ಭುತ ಸೆಲ್ಫಿಗಳನ್ನು ಕ್ಲಿಕ್ ಮಾಡಬಹುದು ಮತ್ತು ವೀಡಿಯೊ ಕರೆ ಮಾಡಬಹುದು.
Samsung Galaxy F13 vs Redmi 10 ಪ್ರೊಸೆಸರ್:
Redmi 10 ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಈ ಫೋನ್ 4GB, 6GB RAM ನೊಂದಿಗೆ ಬರುತ್ತದೆ. ಇದು MIUI 13 ಆಂಡ್ರಾಯ್ಡ್ 11 ಅನ್ನು ಆಧರಿಸಿದೆ. ಈ ಫೋನ್ 64GB, 128GB ಇಂಟರ್ನಲ್ ಸ್ಟೋರೇಜ್ ಅನ್ನು ಒಳಗೊಂಡಿದ್ದು ಮೈಕ್ರೊ SD ಕಾರ್ಡ್ ಮೂಲಕ ಮೀಸಲಾದ ಸ್ಲಾಟ್‌ನೊಂದಿಗೆ ವಿಸ್ತರಿಸಬಹುದು. Samsung Galaxy F13 ಆಕ್ಟಾ ಕೋರ್ (2 GHz) Exynos 850 ಪ್ರೊಸೆಸರ್‌ನೊಂದಿಗೆ ಚಾಲಿತವಾಗಿದೆ. ಇದಲ್ಲದೆ ಫೋನ್ ಆಂಡ್ರಾಯ್ಡ್ v12 ಆಪರೇಟಿಂಗ್ ಸಿಸ್ಟಮ್ ಆಧಾರಿತ One UI ಕೋರ್ 4.1 ಸ್ಕಿನ್‌ನಲ್ಲಿ ಕಾರ್ಯನಿರ್ವಹಿಸುವುದರ ಜೊತೆಗೆ v12 ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡುತ್ತದೆ.
Samsung Galaxy F13 vs Redmi 10 ಬ್ಯಾಟರಿ:
Redmi 10 ಫೋನ್ 6000mAH ಬ್ಯಾಟರಿಯಿಂದ ಚಾಲಿತವಾಗಿದೆ. ಇದು ಟೈಪ್-ಸಿ ಚಾರ್ಜಿಂಗ್ ಪೋರ್ಟ್‌ನಲ್ಲಿ 18W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುವುದರ ಜೊತೆಗೆ ಕಂಪನಿಯು ರಿಟೇಲ್ ಬಾಕ್ಸ್‌ನಲ್ಲಿ 10W ಚಾರ್ಜಿಂಗ್ ಅಡಾಪ್ಟರ್ ಅನ್ನು ಬಂಡಲ್ ಮಾಡುತ್ತದೆ. Samsung Galaxy F13 6000 mAh ಬ್ಯಾಟರಿಯನ್ನು ಹೊಂದಿದ್ದು 15W ಫಾಸ್ಟ್ ಚಾರ್ಜರ್‌ನಿಂದ ಬೆಂಬಲಿತವಾಗಿದೆ. ಇದು ಚಲನಚಿತ್ರಗಳನ್ನು ನೋಡುವಾಗ ಹಾಡುಗಳನ್ನು ಕೇಳುವಾಗ, ಗೇಮ್ಗಳನ್ನು ಆಡುವಾಗ ಬ್ಯಾಟರಿ ಖಾಲಿ ಆಗುವ ಬಗ್ಗೆ ಚಿಂತಿಸದೆ ಇತರ ಕೆಲಸಗಳನ್ನು ಮಾಡುವಾಗ ಮೊಬೈಲ್ ಅನ್ನು ಹೆಚ್ಚು ಸಮಯ ಬಳಸಲು ಅನುಮತಿಸುತ್ತದೆ.
Samsung Galaxy F13 vs Redmi 10 ಬೆಲೆ:
Xiaomi Redmi 10 ಕೆರಿಬಿಯನ್ ಗ್ರೀನ್, ಮಿಡ್ನೈಟ್ ಬ್ಲ್ಯಾಕ್ ಮತ್ತು ಪೆಸಿಫಿಕ್ ಬ್ಲೂ ಕಲರ್‌ಗಳ ಆಯ್ಕೆಯಲ್ಲಿ ರೂ 9,299 ರ ಬೆಲೆಯಲ್ಲಿ ಅಮೆಜಾನ್‌ನಲ್ಲಿ ಲಭ್ಯವಿದೆ. Samsung Galaxy F13 ನೈಟ್ ಸ್ಕೈ ಗ್ರೀನ್, ಸನ್ ರೈಸ್ ಕಾಪರ್, ವಾಟರ್ ಫಾಲ್ ಬ್ಲೂ ಕಲರ್‌ಗಳ ಆಯ್ಕೆಯಲ್ಲಿ ರೂ 9,699 ರ ಬೆಲೆಯಲ್ಲಿ ಸ್ಯಾಮ್‌ಸಂಗ್ ವೆಬ್ಸೈಟ್ ಮೂಲಕ ಕಡಿಮೆ ಬೆಲೆಗೆ ಖರೀದಿಸಬಹುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile