Samsung Galaxy F05 ಸ್ಮಾರ್ಟ್‌ಫೋನ್ 50MP ಕ್ಯಾಮೆರಾದೊಂದಿಗೆ 7999 ರೂಗಳಿಗೆ ಬಿಡುಗಡೆ! ಮೊದಲ ಮಾರಾಟ ಯಾವಾಗ?

Updated on 18-Sep-2024
HIGHLIGHTS

ಭಾರತದಲ್ಲಿ ಸ್ಯಾಮ್‌ಸಂಗ್ ಹೊಸ ಬಜೆಟ್ Samsung Galaxy F05 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ.

5000mAh ಬ್ಯಾಟರಿಯೊಂದಿಗೆ HD+ ಡಿಸ್ಪ್ಲೇ ಮತ್ತು 50MP ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾ ಯೂನಿಟ್ ಹೊಂದಿದೆ.

ಆರಂಭಿಕ 4GB RAM ಮತ್ತು 64GB ಸ್ಟೋರೇಜ್ ರೂಪಾಂತರವನ್ನು 7,999 ರೂಗಳಿಗೆ ಬಿಡುಗಡೆಗೊಳಿಸಿದೆ.

ಭಾರತದಲ್ಲಿ ಸ್ಯಾಮ್‌ಸಂಗ್ ತನ್ನ F ಸರಣಿಯಡಿಯಲ್ಲಿ ಹೊಸ ಬಜೆಟ್ Samsung Galaxy F05 ಸ್ಮಾರ್ಟ್‌ಫೋನ್ ಅನ್ನು ಸದ್ದಿಲ್ಲದೆ ಬಿಡುಗಡೆ ಮಾಡಿದೆ. ಹೊಸದಾಗಿ ಬಿಡುಗಡೆಯಾದ ಈ ಫೋನ್ ದೇಶದಲ್ಲಿ ಕಂಪನಿಯ F ಸರಣಿಗೆ ಹೊಸ ಸೇರ್ಪಡೆಗೊಳಿಸಿದೆ. ಸ್ಮಾರ್ಟ್‌ಫೋನ್‌ನ ಕೆಲವು ಪ್ರಮುಖ ಮುಖ್ಯಾಂಶಗಳನ್ನು ನೋಡುವುದಾದರೆ Samsung Galaxy F05 ಸ್ಮಾರ್ಟ್ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಚಿಪ್‌ಸೆಟ್, 5000mAh ಬ್ಯಾಟರಿಯೊಂದಿಗೆ HD+ ಡಿಸ್ಪ್ಲೇ ಮತ್ತು 50MP ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾ ಯೂನಿಟ್ ಹೊಂದಿದೆ. ನೀವು ಈ ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಈ Samsung Galaxy F05 ಸ್ಮಾರ್ಟ್ಫೋನ್ ಕುರಿತು ಬೆಲೆ ಮತ್ತು ಫೀಚರ್ ವಿವರಗಳನ್ನು ಒಮ್ಮೆ ತಿಳಿದುಕೊಳ್ಳಿ.

Also Read: Hezbollah ಪೇಜರ್‌ಗಳನ್ನೇ ಬಳಸಲು ಕಾರಣವೇನು? ಇಸ್ರೇಲ್‌ Pager Device ಸ್ಫೋಟಗೊಳಿಸಿದ್ದು ಹೇಗೆ ಗೊತ್ತಾ?

ಭಾರತದಲ್ಲಿ Samsung Galaxy F05 ಬೆಲೆ ಮತ್ತು ಲಭ್ಯತೆ

Samsung Galaxy F05 ಸ್ಮಾರ್ಟ್ಫೋನ್ ಭಾರತದಲ್ಲಿ ಇಂದು ಬಿಡುಗಡೆಯಾಗಿದ್ದು ಇದರ ಮೊದಲ ಮಾರಾಟವನ್ನು 20ನೇ ಸೆಪ್ಟೆಂಬರ್ 2024 ರಂದು ಸಂಜೆ 7:00 ಗಂಟೆಗೆ ಫ್ಲಿಪ್ಕಾರ್ಟ್ ಮತ್ತು ಸ್ಯಾಮ್‌ಸಂಗ್ ಇಂಡಿಯಾ ವೆಬ್‌ಸೈಟ್ ಮತ್ತು ಆಯ್ದ ಆಫ್‌ಲೈನ್ ರಿಟೇಲ್ ಸ್ಟೋರ್‌ಗಳ ಮೂಲಕ ಟ್ವಿಲೈಟ್ ಬ್ಲೂ ಎಂಬ ಆಕರ್ಷಕ ಬಣ್ಣಗಳಲ್ಲಿ ಲಭ್ಯವಾಗಲಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಕೇವಲ ಒಂದೇ ಒಂದು ರೂಪಾಂತರದಲ್ಲಿ ಲಭ್ಯವಾಗಲಿದ್ದು ಆರಂಭಿಕ 4GB RAM ಮತ್ತು 64GB ಸ್ಟೋರೇಜ್ ರೂಪಾಂತರವನ್ನು 7,999 ರೂಗಳಿಗೆ ಬಿಡುಗಡೆಗೊಳಿಸಿದೆ.

Samsung Galaxy F05 launched in India

Samsung Galaxy F05 ವಿಶೇಷಣಗಳು

ಅಲ್ಲದೆ ಈ ಸ್ಮಾರ್ಟ್ಫೋನ್ 6.7 ಇಂಚಿನ HD+ ಸ್ಕ್ರೀನ್ ಮತ್ತು ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು 50MP ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಮತ್ತು 2MP ಮೆಗಾಪಿಕ್ಸೆಲ್ ಡೆಪ್ತ್ ಡೆನ್ಸೋರ್ ಅನ್ನು ಒಳಗೊಂಡಿರುತ್ತದೆ. ಇದು 8MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ವಾಟರ್‌ಡ್ರಾಪ್ ನಾಚ್‌ನಲ್ಲಿ ಇರಿಸಲಾಗಿದೆ. ಹೆಚ್ಚುವರಿಯಾಗಿ ಇದು ಭದ್ರತೆಗಾಗಿ ಫೇಸ್ ಅನ್‌ಲಾಕ್ ವೈಶಿಷ್ಟ್ಯ ಮತ್ತು ಹಿಂಭಾಗದ ಪ್ಯಾನೆಲ್‌ನಲ್ಲಿ ಚರ್ಮದ ಮಾದರಿಯೊಂದಿಗೆ ಬರುತ್ತದೆ.

Samsung Galaxy F05 ಸ್ಮಾರ್ಟ್ಫೋನ್ MediaTek Helio G85 ಚಿಪ್‌ಸೆಟ್ 4GB RAM ಮತ್ತು 64GB ಆನ್‌ಬೋರ್ಡ್ ಸ್ಟೋರೇಜ್ ಅಳವಡಿಸಲಾಗಿದೆ. ಇದು ಹೆಚ್ಚುವರಿ 4GB ಯ RAM ಅನ್ನು ವಿಸ್ತರಿಸುವುದನ್ನು ಮತ್ತು ಮೈಕ್ರೋ SD ಕಾರ್ಡ್ ಮೂಲಕ 1TB ವರೆಗೆ ಸ್ಟೋರೇಜ್ ಅನ್ನು ವಿಸ್ತರಿಸುವುದನ್ನು ಸಹ ಬೆಂಬಲಿಸುತ್ತದೆ. ಫೋನ್ ಆಂಡ್ರಾಯ್ಡ್ 14-ಆಧಾರಿತ One UI 5 ನಲ್ಲಿ ಕಾರ್ಯನಿರ್ವಹಿಸುತ್ತದೆ. ಎರಡು ಆಪರೇಟಿಂಗ್ ಸಿಸ್ಟಮ್ ಅಪ್ಡೇಟ್ ಮತ್ತು 4 ವರ್ಷಗಳ ಸೆಕ್ಯೂರಿಟಿ ಅಪ್ಡೇಟ್ಗಳನ್ನು ನೀಡುವುದಾಗಿ ಕಂಪನಿ ದೃಢೀಕರಿಸಲಾಗಿದೆ. Samsung Galaxy F05 ಯುಎಸ್‌ಬಿ ಟೈಪ್-ಸಿ ಪೋರ್ಟ್ ಮೂಲಕ 25W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯಿಂದ ಚಾಲಿತವಾಗಿದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :