Samsung Galaxy F04: ಸ್ಯಾಮ್‌ಸಂಗ್ ಭಾರತದಲ್ಲಿ ತನ್ನ ಅಹೊಚ್ಚ ಹೊಸ ಬಜೆಟ್ ಸ್ಮಾರ್ಟ್‌ಫೋನ್ Samsung Galaxy F04 ಅನ್ನು ಬುಧವಾರ ಬಿಡುಗಡೆಗೊಳಿಸಿದೆ. ಈ ಸ್ಮಾರ್ಟ್ಫೋನ್ 6.5 ಇಂಚಿನ HD+ ಡಿಸ್ಪ್ಲೇ ಮತ್ತು MediaTek P35 ಪ್ರೊಸೆಸರ್ ಈ ಫೋನ್ ಖರೀದಿಸಲು ನಿಮಗೆ ವಿಶೇಷತೆಗಳಾಗಿವೆ. ಇದರ ಡಿಸ್ಪ್ಲೇ 720×1600 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಹೊಂದಿದ್ದು PowerVR GE8320 GPU ಅನ್ನು MediaTek P35 ಪ್ರೊಸೆಸರ್‌ನೊಂದಿಗೆ ನಡೆಸುತ್ತದೆ. Samsung Galaxy F04 ಅನ್ನು 12 ನ್ಯಾನೋ ಮೀಟರ್ ಪ್ರೊಡಕ್ಷನ್ ನೋಡ್‌ನಲ್ಲಿ ತಯಾರಿಸಲಾಗುತ್ತದೆ. ಇದರಲ್ಲಿ 5000mAh ಸಾಮರ್ಥ್ಯದ ಬ್ಯಾಟರಿಯು ಪ್ರೊಸೆಸರ್‌ಗೆ ಪವರ್ ನೀಡುತ್ತದೆ. ಈ ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಒಮ್ಮೆ ಇದರ ಸಂಪೂರ್ಣ ಮಾಹಿತಿ ತಿಳಿಯಿರಿ.
Samsung Galaxy F04 ಸ್ಮಾರ್ಟ್ಫೋನ್ ಗಮನಾರ್ಹವಾಗಿ ಫಾಸ್ಟ್ ಸ್ಪೀಡ್ ಟೆಕ್ನಾಲಜಿಯನ್ನು ಬಳಸಿ ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡುತ್ತದೆ. ಸ್ಮಾರ್ಟ್‌ಫೋನ್‌ನ ಕ್ಯಾಮೆರಾದ ಬಗ್ಗೆ ಮಾತನಾಡುವುದಾದರೆ ಇದು ಡುಯಲ್ ಕ್ಯಾಮೆರಾ ಸೆಟಪ್ ಜೊತೆಗೆ ಬರುತ್ತದೆ. ಇದರ ಪ್ರೈಮರಿ ಕ್ಯಾಮೆರಾ 12MP ಸೆನ್ಸರ್ ಹೊಂದಿದ್ದು ಮತ್ತೊಂದು ಕ್ಯಾಮೆರಾ ಮತ್ತು 2MP ಸೆಕೆಂಡರಿ ಸೆನ್ಸರ್ ಒಳಗೊಂಡಿದೆ. ಅಂದ್ರೆ ಇದರಲ್ಲಿನ ಫೋಟೋಗ್ರಫಿಗಾಗಿ ನೀವು ಡ್ಯುಯಲ್ ಬ್ಯಾಕ್ ಕ್ಯಾಮರಾ ಕಾನ್ಫಿಗರೇಶನ್ ಅನ್ನು ಪಡೆಯುತ್ತೀರಿ. ಸೆಲ್ಫಿಗಳನ್ನು 5MP ಶೂಟರ್ ಅನ್ನು ವಾಟರ್‌ಡ್ರಾಪ್ ನಾಚ್ ಒಳಗೆ ನೀಡಲಾಗಿದೆ.
https://twitter.com/SamsungIndia/status/1611584779408883716?ref_src=twsrc%5Etfw
ಬಾಕ್ಸ್ ಹೊರಗೆ ಫೋನ್ Android 12 OS ಗೆ ಬೂಟ್ ಆಗುತ್ತದೆ. ಆಂಡ್ರಾಯ್ಡ್ 13 ಅನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದರೂ ಅದು ಇತ್ತೀಚಿನದಲ್ಲ ಆದರೆ ಸ್ಯಾಮ್‌ಸಂಗ್ 2 ಬಾರಿ OS ಅಪ್‌ಗ್ರೇಡ್" ಆಗಲಿದೆ ಎಂದು ಭರವಸೆ ನೀಡುತ್ತದೆ. ಆದ್ದರಿಂದ ಇದನ್ನು ಆಂಡ್ರಾಯ್ಡ್ 14 ವರೆಗೆ ಅಪ್ಡೇಟ್ ಮಾಡಬಹುದು. ಸ್ಮಾರ್ಟ್‌ಫೋನ್‌ನ ತಯಾರಿಕೆ ನೋಡೋದಾದರೆ ಪ್ಲಾಸ್ಟಿಕ್ ಬ್ಯಾಕ್ ಮತ್ತು ಪ್ಲಾಸ್ಟಿಕ್ ಫ್ರೇಮ್‌ನೊಂದಿಗೆ ಲಭ್ಯವಿದೆ. ಆದರೂ ಸ್ಯಾಮ್‌ಸಂಗ್ ಫೋನ್‌ನ ಹಿಂಭಾಗವನ್ನು ಸ್ಟೈಲಿಶ್ ಗ್ಲೋಸ್ ಡಿಸೈನ್ ಅನ್ನು ಈ Samsung Galaxy F04 ಸ್ಮಾರ್ಟ್ಫೋನ್ ಹೊಂದಿದೆ.
Samsung Galaxy F04 ಸ್ಮಾರ್ಟ್ಫೋನ್ ಕೇವಲ ಒಂದೇ ಒಂದು ಸ್ಟೋರೇಜ್ ಆಯ್ಕೆಯಲ್ಲಿ ಮಾತ್ರ ಲಭ್ಯವಿದ್ದು 4GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ಇದರ ಬೆಲೆ ರೂ 7,499 ರೂಗಳಾಗಿದೆ. ಇದರ RAM ಪ್ಲಸ್‌ನೊಂದಿಗೆ ಇದನ್ನು 8GB ವರೆಗೆ ವಿಸ್ತರಿಸಬಹುದು. ಈ ಸ್ಮಾರ್ಟ್ಫೋನ್ ಓಪಲ್ ಗ್ರೀನ್ ಮತ್ತು ಜೇಡ್ ಪರ್ಪಲ್ ಲಭ್ಯವಿರುವ ಬಣ್ಣಗಳಳಲ್ಲಿ ಲಭ್ಯವಿದೆ. ಅಲ್ಲದೆ ಇದೇ 12ನೇ ಜನವರಿ ರಂದು ಮಧ್ಯಾಹ್ನ 12:00 ಗಂಟೆಗೆ Flipkart ನಲ್ಲಿ ಈ ಫೋನ್ ಮೊದಲ ಮಾರಾಟಕ್ಕೆ ಲಭ್ಯವಾಗಲಿದೆ. ಖರೀದಿ ಮಾಡಲು ತಮ್ಮ ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಖರೀದಿಸಿದ ನಂತರ ಖರೀದಿದಾರರು ರೂ 1,000 ರಿಯಾಯಿತಿಯನ್ನು ಸಹ ಪಡೆಯಬಹುದು.