Samsung Galaxy F04: ಸ್ಯಾಮ್‌ಸಂಗ್‌ನ 8GB RAM ಹೊಂದಿರುವ ಈ ಫೋನ್ ಕೇವಲ 6000 ರೂಗಳಿಗೆ ಮಾರಾಟ!
ಸ್ಯಾಮ್‌ಸಂಗ್‌ನ ಈ Samsung Galaxy F04 ಫೋನ್ ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಬರುವ ಲೇಟೆಸ್ಟ್ ಸ್ಮಾರ್ಟ್ಫೋನ್ಗಳ ಪಟ್ಟಿಯಲ್ಲಿ ಒಂದಾಗಿದೆ.
ಸ್ಯಾಮ್‌ಸಂಗ್ ಪ್ರತಿ ಶ್ರೇಣಿಯ ಸ್ಮಾರ್ಟ್ಫೋನ್ಗಳನ್ನು ನೀಡುವುದು ರೂಢಿಯಲ್ಲಿದ್ದು ಸಖತ್ ಡೀಲ್ ಮತ್ತು ಡಿಸ್ಕೌಂಟ್ ಪಡೆಯುತ್ತಿದೆ.
Samsung Galaxy F04 ಸ್ಮಾರ್ಟ್ಫೋನ್ ಕೇವಲ ₹5,999 ರೂಗಳಿಗೆ ಮಾರಾಟ ಮಾಡುತ್ತಿದೆ.
Samsung Galaxy F04 biggest price cut in India 2024: ಸ್ಯಾಮ್‌ಸಂಗ್‌ನ ಈ ಫೋನ್ ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಬರುವ ಲೇಟೆಸ್ಟ್ ಸ್ಮಾರ್ಟ್ಫೋನ್ಗಳ ಪಟ್ಟಿಯಲ್ಲಿ ಒಂದಾಗಿದ್ದು ಸ್ಯಾಮ್‌ಸಂಗ್ ಪ್ರಿಯರಿಗೆ ಇದೊಂದು ಬೆಸ್ಟ್ ಡೀಲ್ ಅಂದರೆ ತಪ್ಪೇನಿಲ್ಲ. ಯಾಕಂದ್ರೆ ಸ್ಯಾಮ್‌ಸಂಗ್ ಪ್ರತಿ ಶ್ರೇಣಿಯ ಸ್ಮಾರ್ಟ್ಫೋನ್ಗಳನ್ನು ನೀಡುವುದು ರೂಢಿಯಲ್ಲಿದ್ದು Samsung Galaxy F04 ಇದೀಗ ಸಖತ್ ಡೀಲ್ ಮತ್ತು ದಿಸ್ಕೌಂಟ್ ಪಡೆಯುತ್ತಿದೆ.
Also Read: ಸ್ಮಾರ್ಟ್ ಟಿವಿಯಲ್ಲಿ ಉಚಿತವಾಗಿ Amazon Prime ವೀಕ್ಷಿಸಿ! 20 ಕ್ಕೂ ಅಧಿಕ OTT ಮಜಾ ಪಡೆಯಲು ಬೆಸ್ಟ್ ಪ್ಲಾನ್!
ನೀವು ನೇರವಾಗಿ ಫ್ಲಿಪ್ಕಾರ್ಟ್ ಮೂಲಕ ಫೋನ್ ಅನ್ನು ಸುಮಾರು 47% ರಷ್ಟು ಡಿಸ್ಕೌಂಟ್ಗಳೊಂದಿಗೆ ಈ ಸ್ಮಾರ್ಟ್ಫೋನ್ ಬೆಲೆಯಲ್ಲಿ ಭಾರಿ ಇಳಿಕೆ ಮಾಡಿದೆ. Samsung Galaxy F04 ಸ್ಮಾರ್ಟ್ಫೋನ್ ಕೇವಲ ₹5,999 ರೂಗಳಿಗೆ ಮಾರಾಟ ಮಾಡುತ್ತಿದೆ. ಇದರ ಹೈಲೈಟ್ ನೋಡುವುದುದಾದರೆ 8GB RAM ಮತ್ತು 5000mAh ಬ್ಯಾಟರಿಯೊಂದಿಗೆ ಬರುತ್ತದೆ.
Samsung Galaxy F04 ಬೆಲೆ ಮತ್ತು ಆಫರ್‌ಗಳು
ಭಾರತದಲ್ಲಿ ಈ ಸ್ಯಾಮ್‌ಸಂಗ್ ಸ್ಮಾರ್ಟ್ಫೋನ್ Samsung Galaxy F04 ಬಜೆಟ್ ಸ್ಮಾರ್ಟ್‌ಫೋನ್ ಮೊದಲಿಗೆ ಭಾರತದಲ್ಲಿ ₹9,499 ಬೆಲೆಯಲ್ಲಿ ಬಿಡುಗಡೆಯಾಗಿತ್ತು ಅಲ್ಲದೆ ಫೋನ್ ಕೇವಲ ಒಂದೇ ಒಂದು ರೂಪಾಂತರಗಳಲ್ಲಿ ಬಿಡುಗಡೆಯಾಗಿದ್ದು ಪ್ರಸ್ತುತ ಇದರ 4GB + 4GB RAM ಮತ್ತು 64GB ಸ್ಟೋರೇಜ್ ವೇರಿಯೆಂಟ್ ಬೆಲೆ ಕೇವಲ 5,999 ರೂಗಳಾಗಿವೆ. Samsung Galaxy F04 ಆಸಕ್ತರು ಫ್ಲಿಪ್ಕಾರ್ಟ್ ಮತ್ತು ಸ್ಯಾಮ್‌ಸಂಗ್ ವೆಬ್‌ಸೈಟ್‌ಗಳ ಮೂಲಕ ಖರೀದಿಸಬಹುದು. ಅಲ್ಲದೆ ಕಂಪನಿ ಇದರ ಮೇಲೆ ಬ್ಯಾಂಕ್ ಆಫರ್ ಅನ್ನು ಸಹ ನೀಡುತ್ತಿದ್ದು Flipkart Axis ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಗ್ರಾಹಕರು 5% ತ್ವರಿತ ರಿಯಾಯಿತಿಯನ್ನು ಪಡೆಯಬಹುದು.
ಸ್ಯಾಮ್‌ಸಂಗ್ Galaxy F04 ವಿಶೇಷಣ ಮತ್ತು ಫೀಚರ್ಗಳು
ಸ್ಯಾಮ್‌ಸಂಗ್‌ನ ಈ Samsung Galaxy F04 ಫೋನ್ 6.5 ಇಂಚಿನ HD+ ಡಿಸ್ಪ್ಲೇ ಜೊತೆಗೆ 720×1560 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಇದು ಆಕ್ಟಾ-ಕೋರ್ MediaTek Helio P35 ಪ್ರೊಸೆಸರ್ ಜೊತೆಗೆ 4GB RAM ನೊಂದಿಗೆ ಚಾಲಿತವಾಗಿದೆ. ಈ ಹ್ಯಾಂಡ್‌ಸೆಟ್ 64GB ಇಂಟರ್ನಲ್ ಸ್ಟೋರೇಜ್‌ನೊಂದಿಗೆ ಮೈಕ್ರೊ SD ಕಾರ್ಡ್ ಅನ್ನು ಸೇರಿಸುವ ಮೂಲಕ ಇದನ್ನು 1TB ವರೆಗೆ ವಿಸ್ತರಿಸಬಹುದು. Samsung Galaxy F04 ಫೋನ್ ಆಂಡ್ರಾಯ್ಡ್ 12 ಆಪರೇಟಿಂಗ್ ಸಿಸ್ಟಮ್‌ನಲ್ಲಿ ರನ್ ಆಗುತ್ತದೆ. Samsung.s ಸ್ವಂತ ಲೇಯರ್ ಒನ್ UI ನೊಂದಿಗೆ ಅಗ್ರಸ್ಥಾನದಲ್ಲಿದೆ.
ಈ Samsung Galaxy F04 ಸ್ಮಾರ್ಟ್ಫೋನ್ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ 13MP ಪ್ರೈಮರಿ ಸೆನ್ಸರ್ನೊಂದಿಗೆ f/2.2 ಅಪರ್ಚರ್‌ನೊಂದಿಗೆ ಮತ್ತು 2MP ಡೀಫ್ತ್ ಸೆನ್ಸರ್ನೊಂದಿಗೆ ಡ್ಯುಯಲ್ ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ. ಫೋನ್ ಸೆಲ್ಫಿಗಳು ಮತ್ತು ವೀಡಿಯೊ ಕರೆಗಾಗಿ ಇದು f/2.2 ಅಪರ್ಚರ್‌ನೊಂದಿಗೆ 5MP ಕ್ಯಾಮೆರಾ ಸೆನ್ಸರ್ನೊಂದಿಗೆ ಬಿಡುಗಡೆಗೊಳಿಸಿದೆ. ಸ್ಯಾಮ್‌ಸಂಗ್‌ನ ಈ ಸ್ಮಾರ್ಟ್‌ಫೋನ್ 5,000mAh ಬ್ಯಾಟರಿಯನ್ನು 15W ಫಾಸ್ಟ್ ಚಾರ್ಜಿಂಗ್ ಸುಯೊಂದಿಗೆ ಪ್ಯಾಕ್ ಮಾಡುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile