Samsung Galaxy C55 officially launched in China: ಜನಪ್ರಿಯ ಮತ್ತು ಅತಿ ಹೆಚ್ಚು ಭರವಸೆಯ ಬ್ರಾಂಡ್ ಆಗಿರುವ ಸ್ಯಾಮ್ಸಂಗ್ ಸದ್ದಿಲ್ಲದೇ ಹೊಸ C ಸರಣಿಯ ವಿಭಾಗದಲ್ಲಿ Samsung Galaxy C55 5G ಅನ್ನು ಚೀನಾದಲ್ಲಿ ಬಿಡುಗಡೆಗೊಳಿಸಿದೆ. ಸ್ಯಾಮ್ಸಂಗ್ ಕಂಪನಿ ಈಗಾಗಲೇ ತನ್ನ ವೆಬ್ಸೈಟ್ ಮೂಲಕ ಈ Samsung Galaxy C55 5G ಅನ್ನು ಪಟ್ಟಿ ಮಾಡಿ ಇದರ ಮಾರಾಟವನ್ನು ಸಹ ಆರಂಭಿಸಿದೆ. ಇದರ ಫೀಚರ್ ಮತ್ತು ವಿಶೇಷಣಗಳನ್ನು ನೋಡುವುದಾದರೆ ಈಗಾಗಲೇ ಭಾರತದಲ್ಲಿ ಬಿಡುಗಡೆಯಾಗಿರುವ Galaxy M55 ಸ್ಮಾರ್ಟ್ಫೋನ್ ಹೋಲಿಕೆಯಲ್ಲಿ ಸರಿಯಾಗಿ ಹೊಂದಿಕೆಯಾಗುತ್ತದೆ. Samsung Galaxy C55 5G ಸ್ಮಾರ್ಟ್ಫೋನ್ AMOLED ಡಿಸ್ಪ್ಲೇ, 50MP ಸೆಲ್ಫಿ ಕ್ಯಾಮೆರಾದೊಂದಿಗೆ Qualcomm Snapdragon 7 Gen 1 ಚಿಪ್ಸೆಟ್ ಹೊಂದಿದೆ.
ಸ್ಯಾಮ್ಸಂಗ್ನ ಇತ್ತೀಚಿನ C-ಸರಣಿ ಸ್ಮಾರ್ಟ್ಫೋನ್ ಗ್ಯಾಲಕ್ಸಿ M55 ನಂತೆಯೇ ವಿಶೇಷತೆಗಳೊಂದಿಗೆ ಬರುತ್ತದೆ. ಚೀನಾದ Samsung Galaxy C55 5G ಸ್ಮಾರ್ಟ್ಫೋನ್ 6.7 ಇಂಚಿನ FHD+ ಸೂಪರ್ AMOLED+ ಇನ್ಫಿನಿಟಿ O ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ದರವನ್ನು 1080 x 2400 (FHD+) ಪಿಕ್ಸೆಲ್ ರೆಸುಲ್ಯೂಷನ್ನೊಂದಿಗೆ ಬಿಡುಗಡೆಯಾಗಿದೆ. 1000 nits ಹೈ ಬ್ರೈಟ್ನೆಸ್ ಮೋಡ್ ಮತ್ತು ವಿಷನ್ ಬೂಸ್ಟರ್ ತಂತ್ರಜ್ಞಾನವನ್ನು ಹೊಂದಿದೆ. ಹೆಚ್ಚುವರಿಯಾಗಿ ಸ್ಮಾರ್ಟ್ಫೋನ್ ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್ ನೀಡುತ್ತದೆ ಮತ್ತು ಸುರಕ್ಷತೆಗಾಗಿ ಸ್ಯಾಮ್ಸಂಗ್ ನಾಕ್ಸ್ ವಾಲ್ಟ್ ವೈಶಿಷ್ಟ್ಯದೊಂದಿಗೆ ಬರುತ್ತದೆ.
Also Read: 70 ದಿನಗಳ ವ್ಯಾಲಿಡಿಟಿಯ ಈ BSNL ಸೂಪರ್ ಹಿಟ್ ಪ್ಲಾನ್ ಕೇವಲ 197 ರೂಗಳಿಗೆ ಲಭ್ಯ! ಪ್ರಯೋಜನಗಳೇನು?
ಈ ಸ್ಯಾಮ್ಸಂಗ್ ಸ್ಮಾರ್ಟ್ಫೋನ್ ಕ್ಯಾಮೆರಾದ ಬಗ್ಗೆ ಮಾತನಾಡುವುದಾದರೆ ಟ್ರಿಪಲ್ ಕ್ಯಾಮೆರಾ ಸೆಟಪ್ನೊಂದಿಗೆ ಬಿಡುಗಡೆಯಾಗಿದ್ದು 50MP ಪ್ರೈಮರಿ ಕ್ಯಾಮೆರಾ ಸೆನ್ಸರ್ OIS ಜೊತೆಗೆ F1.8 ಅಪರ್ಚರ್ನೊಂದಿಗೆ ಸುಮಾರು 10x ಡಿಜಿಟಲ್ ಜೂಮ್ ಅನ್ನು ಸಪೋರ್ಟ್ ಮಾಡುತ್ತದೆ. ಇದರ ಮತ್ತೊಂದು 8MP ಅಲ್ಟ್ರಾ ವೈಡ್ ಕ್ಯಾಮೆರಾ ಸೆನ್ಸರ್ F2.2 ಅಪರ್ಚರ್ನೊಂದಿಗೆ ಬಂದ್ರೆ ಕೊನೆಯದಾಗಿ 2MP ಮ್ಯಾಕ್ರೋ ಕ್ಯಾಮೆರಾ ಸೆನ್ಸರ್ F2.4 ಅಪರ್ಚರ್ನೊಂದಿಗೆ ಬರುತ್ತದೆ. ಕೊನೆಯದಾಗಿ ಇದರ ಪಂಚ್ ಹೋಲ್ ಡಿಸ್ಪ್ಲೇಯಲ್ಲಿ 50MP ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ ಫ್ರಂಟ್ ಕ್ಯಾಮೆರಾ ಸೆನ್ಸರ್ F2.4 ಅಪರ್ಚರ್ನೊಂದಿಗೆ ನೀಡಲಾಗಿದೆ.
ಇದರ ಹಾರ್ಡ್ವೇರ್ ಬಗ್ಗೆ ಮಾತನಾಡುವುದಾದರೆ ಇದರಲ್ಲಿ ನಿಮಗೆ Qualcomm Snapdragon 7 Gen 1 ಚಿಪ್ಸೆಟ್ ಓಕ್ಟಾ ಕೋರ್ 2.4GHz ವೇಗದಲ್ಲಿ ಆಂಡ್ರಾಯ್ಡ್ 14 ತನ್ನದೇಯಾದ ಸ್ಯಾಮ್ಸಂಗ್ One UI ಲೇಯರ್ನೊಂದಿಗೆ ಸಪೋರ್ಟ್ ಮಾಡುತ್ತದೆ. ಸ್ಮಾರ್ಟ್ಫೋನ್ ಒಂದೇ ಒಂದು ಸ್ಟೋರೇಜ್ ರೂಪಾಂತರದಲ್ಲಿ ಬಿಡುಗಡೆಗೊಳಿಸಿದ್ದು 8GB RAM ಮತ್ತು 128GB ಸ್ಟೋರೇಜ್ ಮತ್ತೊಂದು 12GB RAM ಮತ್ತು 256GB ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಅಲ್ಲದೆ ಸುಮಾರು 1TB ವರೆಗೆ ಇದರಲ್ಲಿನ ಸ್ಟೋರೇಜ್ ಅನ್ನು SD ಕಾರ್ಡ್ ಸೇರಿಸುವ ಮೂಲಕ ವಿಸ್ತರಿಸಬಹುದು. ಸ್ಮಾರ್ಟ್ಫೋನ್ 5G, NFC, Wi-Fi 802.11a/b/g/n/ac/ax, Bluetooth 5.2, GPS, Glonass, Beidou, Galileo, QZSS ಮತ್ತು USB ಟೈಪ್-ಸಿ ಪೋರ್ಟ್ನೊಂದಿಗೆ ಬರುತ್ತಿದೆ.
Galaxy C55 5G 4nm ಆಧಾರಿತ Qualcomm Snapdragon 7 Gen1 ಪ್ರೊಸೆಸರ್ನೊಂದಿಗೆ ಪ್ಯಾಕ್ ಆಗಿದೆ. ಸ್ಮಾರ್ಟ್ಫೋನ್ 45W ಸೂಪರ್-ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ದೊಡ್ಡ 5000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಸ್ಮಾರ್ಟ್ಫೋನ್ ಪ್ರಸ್ತುತ ಕಿತ್ತಳೆ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿದ್ದು ಸ್ಮಾರ್ಟ್ಫೋನ್ ಹಿಂಭಾಗದಲ್ಲಿ ವೆಜಿಟೇರಿಯನ್ ಸ್ಕಿನ್ ಫಿನಿಷ್ನೊಂದಿಗೆ ಬರುತ್ತದೆ. ಇದು ಡಾಲ್ಬಿ ಅಟ್ಮಾಸ್ ತಂತ್ರಜ್ಞಾನದೊಂದಿಗೆ ಸ್ಪೀಕರ್ಗಳನ್ನು ಸಹ ನೀಡುತ್ತಿದೆ.
ಚೀನಾದಲ್ಲಿ ಬಿಡುಗಡೆಯಾಗಿರುವ ಈ Samsung Galaxy C55 ಸ್ಮಾರ್ಟ್ಫೋನ್ ಬೆಲೆ ಬಗ್ಗೆ ಮಾತನಾಡುವುದಾದರೆ ಇದರ 8GB RAM ಮತ್ತು 256GB ಸ್ಟೋರೇಜ್ ಆವೃತ್ತಿಗೆ ¥1999 ಯುವಾನ್ನಲ್ಲಿ (ಸುಮಾರು 24,999 ರೂಗಳು) ಮತ್ತು ಇದರ 12GB RAM ಮತ್ತು 256GB ಸ್ಟೋರೇಜ್ ಆವೃತ್ತಿಯ ಬೆಲೆ ¥2299 ಯುವಾನ್ (ಸುಮಾರು 27,000 ರೂಗಳು) ಆಗಿದೆ. ಸ್ಮಾರ್ಟ್ಫೋನ್ ಚೀನಾದಲ್ಲಿನ ಆಫ್ಲೈನ್ ಸ್ಟೋರ್ಗಳನ್ನು ಮತ್ತು ಆಧರಿಸಿದೆ. ಇದು ಈ ವಾರದಿಂದ ಚೀನಾದಲ್ಲಿ ಸ್ಯಾಮ್ಸಂಗ್ ಆನ್ಲೈನ್ ಸ್ಟೋರ್ ಮತ್ತು ಆಫ್ಲೈನ್ ಸ್ಟೋರ್ಗಳಲ್ಲಿ ಲಭ್ಯವಿರುತ್ತದೆ.