ಭಾರತದಲ್ಲಿ ಇಂದು ಹೊಸ ಸ್ಯಾಮ್‌ಸಂಗ್ ತನ್ನ Samsung Galaxy A71 ಫೋನ್ ಅನ್ನು ಇನ್ಫಿನಿಟಿ-ಒ ಡಿಸ್ಪ್ಲೇಯೊಂದಿಗೆ ಬಿಡುಗಡೆಗೊಳಿಸಿದೆ. ಈ ಸ್ಮಾರ್ಟ್ಫೋನ್ ಕ್ವಾಡ್ ರೇರ್ ಕ್ಯಾಮೆರಾ ಸೆಟಪ್ ಜೊತೆಗೆ ಬರುತ್ತದೆ. Samsung ತನ್ನದೇ ಸ್ವಾಮ್ಯದ OneUI ಜೊತೆಗೆ ಈ Galaxy A71 ನಲ್ಲಿ ಆಂಡ್ರಾಯ್ಡ್ 10 ಅನ್ನು ಸಹ ಒದಗಿಸಿದೆ. Galaxy A71 ಅನ್ನು ಕಳೆದ ಡಿಸೆಂಬರ್ ತಿಂಗಳಲ್ಲಿ ವಿಯೆಟ್ನಾಂನಲ್ಲಿ ಎರಡು ವಿಭಿನ್ನ ಸಂರಚನೆಗಳಲ್ಲಿ ಬಿಡುಗಡೆ ಮಾಡಲಾಯಿತು. ಆದರೆ ಭಾರತದಲ್ಲಿ ಈ ಸ್ಮಾರ್ಟ್ಫೋನ್ ಕೇವಲ ಒಂದೇ 8GB RAM ಮತ್ತು 128GB ರೂಪಾಂತರದಲ್ಲಿ ಬಿಡುಗಡೆಯಾಗಿದೆ.ಈ ರೂಪಾಂತರಕ್ಕೆ 29,999 ರೂಗಳಿಂದ ಶುರು ಮಾಡಿದೆ. ಇದು 24ನೇ ಫೆಬ್ರವರಿ 2020 ರಿಂದ ಮೊದಲ ಮಾರಾಟ ಶುರುವಾಗಲಿದೆ.
ಈ Samsung Galaxy A71 ಸ್ಮಾರ್ಟ್ಫೋನ್ ಡ್ಯುಯಲ್ ಸಿಮ್ (ನ್ಯಾನೋ) ಆಂಡ್ರಾಯ್ಡ್ 10 ಅನ್ನು ಒನ್ ಯುಐ 2.0 ನೊಂದಿಗೆ ಚಾಲನೆ ಮಾಡುತ್ತದೆ. ಈ ಫೋನ್ ದೊಡ್ಡ ಅಂದ್ರೆ 6.7 ಇಂಚಿನ FHD+ ಜೊತೆಗೆ 1080×2400 ಪಿಕ್ಸೆಲ್‌ಗಳ ರೆಸುಲ್ಯೂಷನ್ ನೀಡುತ್ತದೆ. ಇದು ಸೂಪರ್ ಅಮೋಲೆಡ್ ಇನ್ಫಿನಿಟಿ-ಒ ಡಿಸ್ಪ್ಲೇ ಹೊಂದಿದೆ. ಇದರ ಅಡಿಯಲ್ಲಿ ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 730 ಆಕ್ಟಾ-ಕೋರ್ 2.2GHz ಕ್ಲಾಕ್ ಸ್ಪೀಡ್ SoC ಅನ್ನು ಹೊಂದಿದೆ. ಈಗಾಗಲೇ ಹೇಳಿರುವಂತೆ ಭಾರತದಲ್ಲಿ ಈ ಸ್ಮಾರ್ಟ್ಫೋನ್ ಕೇವಲ ಒಂದೇ 8GB RAM ಮತ್ತು 128GB ರೂಪಾಂತರದಲ್ಲಿ ಬಿಡುಗಡೆಯಾಗಿದೆ.
ಇದರಲ್ಲಿ ಕ್ವಾಡ್ ಕ್ಯಾಮೆರಾ ಸೆಟಪ್ ಹೊಂದಿದ್ದು ಪ್ರೈಮರಿ 64MP ವೈಡ್ ಕ್ಯಾಮೆರಾವನ್ನು ಒಳಗೊಂಡಿದ್ದು ಇದು f/1.8 ಅಪರ್ಚರ್ ಲೆನ್ಸ್‌ನೊಂದಿಗೆ ಜೋಡಿಸಲ್ಪಟ್ಟಿದೆ. ಎರಡನೇಯದಾಗಿ 12MP ಒಳಗೊಂಡಿದ್ದು ಇದು f/2.2 ಅಪರ್ಚರ್ ಜೋಡಿಸಲ್ಪಟ್ಟಿದೆ. ನಂತರ 5MP + 5MP ಮ್ಯಾಕ್ರೋ ಮತ್ತು ಡೆಪ್ತ್ ಸೆನ್ಸರ್ f/2.4 ಅಪರ್ಚರ್ ಲೆನ್ಸ್‌ನೊಂದಿಗೆ ಜೋಡಿಸಲ್ಪಟ್ಟಿದೆ. ಇದು ಉತ್ತಮವಾದ ಸ್ಲೋ-ಮೋಷನ್ ವಿಡಿಯೋ ರೆಕಾರ್ಡಿಂಗ್ ಮತ್ತು ಫುಲ್ HD ವಿಡಿಯೋ ರೆಕಾರ್ಡಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಇದರ ಮುಂಭಾಗದಲ್ಲಿ 32MP ಕ್ಯಾಮೆರಾ ಇದ್ದು ಅದು AI ಪೋಟ್ರೇಟ್ ಶಾಟ್ ಸೆರೆಹಿಡಿಯಬಲ್ಲದು.
ಸ್ಟೋರೇಜ್ ವಿಷಯದಲ್ಲಿ Samsung Galaxy A71 ಸ್ಮಾರ್ಟ್ಫೋನ್ 128GB ಆನ್‌ಬೋರ್ಡ್ ಸಂಗ್ರಹವನ್ನು ಹೊಂದಿದೆ. ಇದನ್ನು ಮೈಕ್ರೊ SD ಕಾರ್ಡ್ ಮೂಲಕ 512GB ವರೆಗೆ ವಿಸ್ತರಿಸಬಹುದಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G ವೋಲ್ಟಿಇ, ವೈ-ಫೈ, ಬ್ಲೂಟೂತ್, GSP ಮತ್ತು USB ಟೈಪ್ ಸಿ ಪೋರ್ಟ್ ಸೇರಿವೆ. ಫೋನ್‌ನಲ್ಲಿ ಪ್ರದರ್ಶನದಲ್ಲಿರುವ ಫಿಂಗರ್‌ಪ್ರಿಂಟ್ ಸಂವೇದಕವೂ ಇದೆ. ಇದಲ್ಲದೆ 25W ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 4500mAh ಬ್ಯಾಟರಿಯನ್ನು ಒಳಗೊಂಡಿದೆ.