Samsung Galaxy A70 ಫೋನ್ 32MP ಸೆಲ್ಫಿ ಕ್ಯಾಮೆರಾ ಮತ್ತು 4500mAh ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ.

Updated on 26-Mar-2019
HIGHLIGHTS

Samsung Galaxy A70 ಸ್ಮಾರ್ಟ್ಫೋನ್ ಬೆಲೆ, ಲಭ್ಯತೆ ಮತ್ತು ಇದರ ಈ ಸ್ಪೆಸಿಫಿಕೇಷನ್ ಮಾಹಿತಿಯನ್ನು ಪಡೆಯಿರಿ.

ಸ್ಯಾಮ್ಸಂಗ್ ಮಂಗಳವಾರ ಸದ್ದಿಲ್ಲದೆ ಒಂದು ಹೊಸ Galaxy A ಸರಣಿಯ ಮತ್ತೋಂದು ಹೊಸ ಸ್ಮಾರ್ಟ್ಫೋನನ್ನು ಬಿಡುಗಡೆಗೊಳಿಸಿದೆ. ಇದು ಏಪ್ರಿಲ್ 10 ರಂದು ನಡೆಯಬೇಕಿದೆ ಅಧಿಕೃತ ಬಿಡುಗಡೆ ಕಾರ್ಯಕ್ರಮದ ಮುಂಚೆಯೇ Samsung Galaxy A70 ಸ್ಮಾರ್ಟ್ಫೋನ್ ಅನ್ನು ಅನಾವರಣಗೊಳಿಸಲಾಗಿದೆ. ಈ ನವೀಕರಿಸಿದ Samsung Galaxy A70 ಸರಣಿಯಲ್ಲಿನ ನಾಲ್ಕನೇ ಸ್ಮಾರ್ಟ್ಫೋನ್ ಆಗಿದ್ದು ಇನ್ಫಿನಿಟಿ U ಆಕಾರದ ನಾಚ್ ಡಿಸ್ಪ್ಲೇಯನ್ನು ಹೊಂದಿದೆ. ಅಲ್ಲದೆ ಟ್ರಿಪಲ್ ಕ್ಯಾಮೆರಾ ಹಿಂಬದಿಯಲ್ಲಿ ಮತ್ತು ಇನ್ ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರೊಂದಿಗೆ Black, Blue, Coral ಮತ್ತು White ಬಣ್ಣಗಳಲ್ಲಿ '3D Glasstic' ಗ್ಲಾಸ್ ಬಾಡಿಯೊಂದಿಗೆ ಬರುತ್ತದೆ. 

ಈ Samsung Galaxy A70 ಸ್ಮಾರ್ಟ್ಫೋನ್ 6.7 ಇಂಚಿನ ಪೂರ್ಣ ಎಚ್ಡಿ + ಸೂಪರ್ AMOLED ಡಿಸ್ಪ್ಲೇಯನ್ನು 20: 9 ಆಕಾರದ ಅನುಪಾತವನ್ನು ಹೊಂದಿದ್ದು ಇನ್ ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರೊಂದಿಗೆಬರಿತ್ತದೆ. ಇದು GB ಮತ್ತು 8GB ಯ RAMನೊಂದಿಗೆ ಜೋಡಿಸಲಾದ ಒಂದು ಒಕ್ಟಾ-ಕೋರ್ ಪ್ರೊಸೆಸರ್ ಸ್ಮಾರ್ಟ್ಫೋನ್ ಅನ್ನು ಹೊಂದಿದೆ. 128GB ಯಷ್ಟು ಇಂಟರ್ನಲ್ ಸ್ಟೋರೇಜ್ ಜೋತೆಗೆ ಇದು ಮೈಕ್ರೊ SD ಕಾರ್ಡ್ ಮೂಲಕ 512GB ವರೆಗೆ ವಿಸ್ತರಿಸಬಲ್ಲದು. 

ಈ Samsung Galaxy A70 ಸ್ಮಾರ್ಟ್ಫೋನ್  ಛಾಯಾಗ್ರಹಣ ವಿಭಾಗದಲ್ಲಿ 32MP ಮೆಗಾಪಿಕ್ಸೆಲ್ ಸಂವೇದಕ + 8MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು 5MP ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಸ್ಪೋರ್ಟ್ ಮಾಡುತ್ತದೆ. ಇದು ಸ್ವಾಭಾವಿಕವಾಗಿ ಇದು 32MP ಮೆಗಾಪಿಕ್ಸೆಲ್ ಕ್ಯಾಮರಾವನ್ನು f / 2.0 ಅಪೆರ್ಚರ್ದೊಂದಿಗೆ ಬರುತ್ತದೆ. ಸೂಪರ್ ಫಾಸ್ಟ್ ಚಾರ್ಜಿಂಗ್ ಜೊತೆಗೆ 4500mAh ಬ್ಯಾಟರಿಯನ್ನು ಇದು ಒಳಗೊಂಡಿದೆ. 

ಈ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 9 ಪೈ ಆಧರಿಸಿ ಒನ್ UI ಅನ್ನು ನಡೆಸುತ್ತದೆ. ಪ್ರದರ್ಶನದ ಫಿಂಗರ್ಪ್ರಿಂಟ್ ಸೆನ್ಸರ್ ಜೊತೆಗೆ Samsung Galaxy A70 ಫೇಸ್ ಗುರುತಿಸುವಿಕೆ ಫೀಚರೊಂದಿಗೆ ಬರುತ್ತದೆ. Samsung Galaxy A70 ಬೆಲೆ ಮತ್ತು ಲಭ್ಯತೆ ವಿವರಗಳನ್ನು ನಂತರ ಬಿಡುಗಡೆ ಸಮಾರಂಭದಲ್ಲಿ ಘೋಷಿಸಲಾಗುವುದೆಂದು ತಿಳಿಸಿದೆ. ಬರುವ 10ನೇ ಏಪ್ರಿಲ್ ರಂದು ಸ್ಯಾಮ್ಸಂಗ್ "A Galaxy Event" ಮೂರು ವಿಭಿನ್ನ ಖಂಡಗಳಲ್ಲಿ ನಡೆಯಲಿದೆ. ಈ Samsung Galaxy A70 ಜೊತೆಗೆ ಸ್ಯಾಮ್ಸಂಗ್ ಹೆಚ್ಚು Galaxy A ಸರಣಿ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :