ಭಾರತದಲ್ಲಿ ಸ್ಯಾಮ್ಸಂಗ್ ಹಲವಾರು ಸ್ಮಾರ್ಟ್ಫೋನಳನ್ನು ಒಂದರ ಹಿಂದೆ ಮತ್ತೋಂದು ಬಿಡುಗಡೆಗೊಳಿಸುತ್ತಿದೆ. ಕೊನೆಯ ಎರಡು ತಿಂಗಳುಗಳಲ್ಲಿ ಸ್ಯಾಮ್ಸಂಗ್ M ಮತ್ತು A ಸರಣಿಯ ಹಲವಾರು ರೂಪಾಂತರಗಳನ್ನು ಹೊರ ತಂದಿದೆ. ಅವುಗಳಂತೆ ಇಂದು ಸ್ಯಾಮ್ಸಂಗ್ Samsung Galaxy A70 ಸಹ ಅಧಿಕೃತವಾಗಿ ಬಿಡುಗಡೆಯಾಗುವ ಮುನ್ನವೇ ಇದನ್ನು Samsung Newsroom ಅಲ್ಲಿ ಇದರ ಸ್ಪೆಕ್ ಮಾಹಿತಿ ಇಂದು ಹೊರತಂದಿದೆ. ಆದರೆ ಇಂದು ಇದರ ಬೆಲೆ ಅಥವಾ ಲಭ್ಯತೆಯ ಮಾಹಿತಿಯನ್ನು ಬಿಡುಗಡೆಗೊಳಿಸಿಲ್ಲ. ಅದನ್ನು ಬರುವ 10ನೇ ಏಪ್ರಿಲ್ 2019 ರಂದು ಹಮ್ಮಿಕೊಂಡಿರುವ A Galaxy Event ಕ್ರಾಯಕ್ರಮದಲ್ಲಿ ಸ್ಯಾಮ್ಸಂಗ್ ಘೋಷಿಸಲಿದೆ.
ಮೊದಲಿಗೆ ಇದರ ಕ್ಯಾಮೆರಾದಲ್ಲಿ Galaxy A70 ಹಿಂಭಾಗದಲ್ಲಿ ಒಟ್ಟಾರೆಯಾಗಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಅಂದ್ರೆ ಪ್ರೈಮರಿ 32MP f/1.7 ಅಪೆರ್ಚರೊಂದಿಗೆ ಬರುತ್ತದೆ. ಮತ್ತೋಂದು 8MP f/2.2 ಅಪೆರ್ಚರೊಂದಿಗೆ 123 ಡಿಗ್ರಿ ಅಲ್ಟ್ರಾ ವೈಡ್ ಆಂಗಲ್ ಹಾಗು ಕೊನೆಯದಾಗಿ 5MP f/2.2 ಅಪೆರ್ಚರೊಂದಿಗೆ ಡೆಪ್ತ್ ಸೆನ್ಸರ್ ಮತ್ತು ಒಂದು LED ಫ್ಲಾಶ್ ಲೈಟ್ ಹಿಂಭಾಗದಲ್ಲಿ ನೀಡಲಾಗಿದೆ.
ಎರಡನೇಯದಾಗಿ ಇದರ ಸೆಲ್ಫಿ ಕ್ಯಾಮೆರಾದ ಬಗ್ಗೆ ಹೇಳಬೇಕೆಂದರೆ ಇದರ ನಾಚ್ ಡಿಸ್ಪ್ಲೇಯಲ್ಲಿ 32MP f/1.7 ಅಪೆರ್ಚರೊಂದಿಗೆ ಸೆಲ್ಫಿ ಅಥವಾ ವಿಡಿಯೋ ಕರೆಗಳಿಗಾಗಿ ನೀಡಲಾಗಿದೆ. ಇದರಲ್ಲಿ ನಿಮಗೆ ಫ್ರಂಟ್ ಪೋಟ್ರೇಟ್ ಮತ್ತು HDR ಮೂಡ್ ಸಹ ನೀಡಲಾಗಿದ್ದು ಅದ್ದೂರಿಯ ಸೆಲ್ಫಿ ಇಮೇಜ್ಗಳನ್ನು ನೀಡುವಲ್ಲಿ ಸಹಕರಿಸುತ್ತದೆ. ಅಲ್ಲದೆ ಇದರ ಫ್ರಂಟ್ ಕ್ಯಾಮೆರಾ ಫೇಸ್ ರೆಕಗ್ನಿಷನ್ ಸಹ ಸಪೋರ್ಟ್ ಮಾಡುತ್ತದೆ.
ಮೂರನೇಯದಾಗಿ ಇದರ ಡಿಸ್ಪ್ಲೇಯ ಬಗ್ಗೆ ಹೇಳಬೇಕಂದರೆ Samsung Galaxy A70 ಸ್ಮಾರ್ಟ್ಫೋನ್ 6.7 ಇಂಚಿನ ಫುಲ್ HD+ ಸೂಪರ್ ಅಮೋಲೆಡ್ ಇನ್ಫಿನಿಟಿ U ಆಕಾರದ ನಾಚ್ ಡಿಸ್ಪ್ಲೇಯನ್ನು 1080×2400pರೆಸುಲ್ಯೂಷನ್ ಜೊತೆಗೆ 20:9 ಅಸ್ಪೆಟ್ ರೇಷುವನ್ನು ಹೊಂದಿದೆ. Samsung Galaxy A70 ಇನ್ ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್ ಸಹ ಒಳಗೊಂಡಿದೆ. ಯಾತ ಪ್ರಕಾರ ಇದು IP68 ಸಹ ಆಗಿರುವ ನಿರೀಕ್ಷೇಯಿದೆ. ಒಟ್ಟಾರೆಯಾಗಿ ದೊಡ್ಡ ಸ್ಕ್ರೀನ್ ವೈಡ್ ಆಂಗಲ್ ವೀಕ್ಷಣೆಗಾಗಿ Galaxy A70 ಹೆಚ್ಚು ಅನುಕೂಲಕರವಾಗಿದೆ.
ನಾಲ್ಕನೇಯದಾಗಿ ಇದರ ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ಬಗ್ಗೆ ಹೇಳಬೇಕೆಂದರೆ ಇದು ಕ್ವಾಲ್ಕಾಮ್ ಸ್ನ್ಯಾಪ್ಡ್ರಾಗನ್ 670 ಓಕ್ಟಾ ಕೋರ್ ಡುಯಲ್ 2.0GHz + Hexa 1.7GHz ಪ್ರೊಸೆಸರ್ ಜೊತೆಗೆ 6GB ಮತ್ತು 8GB ಯ RAM ವೇರಿಯಂಟ್ ಕೇವಲ ಒಂದೇ ಒಂದು ಸ್ಟೋರೇಜ್ ಅಂದ್ರೆ 128GB ಯ ಇಂಟರ್ನಲ್ ಸ್ಟೋರೇಜಲ್ಲಿ ಬರುತ್ತದೆ. ಅಲ್ಲದೆ ಅದನ್ನು ಮೈಕ್ರೋ SD ಕಾರ್ಡ್ ಬಳಸುವ ಮೂಲಕ 512GB ವರೆಗೆ ಸ್ಟೋರೇಜ್ ಜಾಗವನ್ನು ವಿಸ್ತರಿಸಬವುದು. ಇದರ ಆಪರೇಟಿಂಗ್ ಸಿಸ್ಟಮ್ ಬಗ್ಗೆ ಹೇಳಬೇಕೆಂದರೆ ಆಂಡ್ರಾಯ್ಡ್ 9.0 ಪೈಯೊಂದಿಗೆ ಈ ಫೋನ್ ರನ್ ಮಾಡುತ್ತದೆ.
ಕೊನೆಯದಾಗಿ ಇದರ ಬ್ಯಾಟರಿ ಮತ್ತು ಡಿಸೈನ್ ನೋಡಬೇಕೆಂದರೆ Samsung Galaxy A70 ಸ್ಮಾರ್ಟ್ಫೋನಲ್ಲಿ 4500mAh ಬ್ಯಾಟರಿಯೊಂದಿಗೆ 25W ಫಾಸ್ಟ್ ಚಾರ್ಜಿಂಗ್ ಒಳಗೊಂಡಿದ್ದು ಕಡಿಮೆ ಸಮಯದಲ್ಲಿ ವೇಗವಾಗಿ ನಿಮ್ಮ ಫೋನನ್ನು ಚಾರ್ಜ್ ಮಾಡಲು ಸಹಕರಿಸುತ್ತದೆ. ಈ ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ನಾಲ್ಕು ಬಣ್ಣ Black, Blue, Coral, White ಆಯ್ಕೆಗಳಲ್ಲಿ ಲಭ್ಯವಿದೆ. ಈ Galaxy A70 ನಿರ್ಮಾಣದಲ್ಲಿ 3D Glasstic ಟೆಕ್ನಾಲಜಿಯನ್ನು ಸೇರಿಸಿ ಹೆಚ್ಚು ಗಟ್ಟಿಮುಟ್ಟಾದ ಮತ್ತು ಆಕರ್ಷಿತ ಬ್ಯಾಕ್ ಲುಕಿಂಗ್ ನೀಡಿದೆ.