Samsung Galaxy A51: ಈ ಸ್ಮಾರ್ಟ್ಫೋನಲ್ಲಿರುವ ಐದು ಅತ್ಯುತ್ತಮ ಫೀಚರ್ಗಳನೊಮ್ಮೆ ನೋಡ್ಕೊಳಿ
Samsung Galaxy A51 ಕ್ವಾಡ್ ಕ್ಯಾಮೆರಾ ಸೆಟಪ್ 48MP + 12MP + 5MP + 5MP ಹೊಂದಿದೆ
ಭಾರತದಲ್ಲಿ 29ನೇ ಜನವರಿ 2020 ರಂದು ಬಿಡುಗಡೆಯಾಗಿರುವ Samsung ಕಂಪನಿಯ ಹೊಚ್ಚ ಹೊಸ Samsung Galaxy A51 ಸ್ಮಾರ್ಟ್ಫೋನ್ ಬಗ್ಗೆ ನೋಡುವಿರಿ. ಇದು 6.5 ಇಂಚಿನ FHD+ ಸೂಪರ್ ಅಮೋಲೆಡ್ ಡಿಸ್ಪ್ಲೇಯೊಂದಿಗೆ ಉತ್ತಮ ರೆಸುಲ್ಯೂಷನ್ ನೀಡುತ್ತದೆ. ಈ ಫೋನ್ Exynos 9611 ಪ್ರೊಸೆಸರ್ ಜೊತೆಗೆ OneUI ಆಂಡ್ರಾಯ್ಡ್ 10.0 ಆಧಾರಿತ ನಡೆಯುತ್ತದೆ. ಇದು ಕ್ವಾಡ್ ಕ್ಯಾಮೆರಾ ಸೆಟಪ್ 48MP + 12MP + 5MP + 5MP ಹೊಂದಿದೆ. ಇದರಲ್ಲಿ ಮ್ಯಾಕ್ರೋ ಮತ್ತು ಡೆಪ್ತ್ ಸೆನ್ಸರ್ ಲೆನ್ಸ್ ಸಹ ನೀಡಲಾಗಿದೆ. ಇದರಲ್ಲಿ ದೊಡ್ಡದಾದ 4000mAh ಬ್ಯಾಟರಿಯನ್ನು ನೀಡಲಾಗಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ51 ಡಿಸ್ಪ್ಲೇ
ಈ Samsung Galaxy A51 ಸ್ಮಾರ್ಟ್‌ಫೋನ್ 6.5 ಇಂಚಿನ FHD+ ಸೂಪರ್ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದರೊಂದಿಗೆ ಈ ಫೋನ್ 1080 x 2340 ಪಿಕ್ಸೆಲ್ ರೆಸೊಲ್ಯೂಷನ್ ನೀಡುವುದರೊಂದಿಗೆ 396ppi ಪಿಕ್ಸೆಲ್ ಡೆನ್ಸಿಟಿ ಒಳಗೊಂಡಿದೆ. ಅಂದ್ರೆ ಕಂಪನಿ ಫೋನಿನ ಫ್ರಂಟ್ ಸೈಡ್ ಅಲ್ಲಿ ಸಾದ್ಯವಾದ ಮಟ್ಟಕ್ಕೆ ಕಡಿಮೆ ಅಂಚಿನ ಬೇಜಲ್ಗಳನ್ನು ನೀಡಿದೆ. ಇದರ ವೈಡ್ ಯಾವುದೇ ವಿಡಿಯೋಗಳನ್ನು ನೋಡಲು ಮತ್ತು ಫುಲ್ ವ್ಯೂ ಡಿಸ್ಪ್ಲೇಯಲ್ಲಿ ಇಮೇಜ್, ವಿಡಿಯೋಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಆದರೆ ಗಮನದಲ್ಲಿಡಿ ಈ ಸ್ಮಾರ್ಟ್ಫೋನಲ್ಲಿ ಪ್ರೊಟೆಕ್ಷನ್ಗಾಗಿ ಯಾವುದೇ ರೀತಿಯ ಪ್ರೊಟೆಕ್ಷನ್ ಸ್ಕ್ರೀನ್ ಅಳವಡಿಸಿಲ್ಲ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ51 ಕ್ಯಾಮೆರಾ
ಈ ಫೋನಿನ ಕ್ಯಾಮೆರಾ ವಿಭಾಗದಲ್ಲಿ ಕ್ವಾಡ್ ಕ್ಯಾಮೆರಾ ಸೆಟಪ್ ನೋಡಬವುದು. ಅಂದ್ರೆ 48MP + 12MP + 5MP + 5MP ಮಾದರಿಯಲ್ಲಿ ಅಳವಡಿಸಲಾಗಿದೆ. ಇದರ ಕಾರ್ಯಕ್ಷಮತೆ ನೋಡುವುದಾದರೆ 48MP ಪ್ರೈಮರಿ ಸೆನ್ಸರ್ ಆಗಿದ್ದು ಇದು OIS ಆಪ್ಟಿಕಲ್ ಇಮೇಜ್ ಸ್ಟೇಬಿಲೈಸರ್ ಹೊಂದಿದೆ. ನಂತರ 12MP ಅಲ್ಟ್ರಾ ವೈಡ್ ಕ್ಯಾಮೆರಾ 123° ವೀವಿಂಗ್ ಆಂಗಲ್ ಸಪೋರ್ಟ್ ಮಾಡುತ್ತದೆ. ಇದರ ನಂತರ 5MP ಮ್ಯಾಕ್ರೋ ಶಾಟ್ಗಳಿಗಾಗಲಿ ನೀಡಲಾಗಿದ್ದು ಸುಮಾರು 3cm ರಿಂದ 5cm ಹತ್ತಿರದಿಂದ ಉತ್ತಮ ಕ್ಲೋಸರ್ ಶಾಟ್ ತೆಗೆಯಬವುದು. ಕೊನೆಯದಾಗಿ 5MP ಡೆಪ್ತ್ ಸೆನ್ಸರ್ ಸಪೋರ್ಟ್ ಮಾಡುತ್ತದೆ. ಇದರ ಇನ್ಫಿನಿಟಿ ಡಿಸ್ಪ್ಲೇಯಲ್ಲಿ ಡಿಸೆಂಟ್ ಮಟ್ಟದ 32MP ಫ್ರಂಟ್ ಕ್ಯಾಮೆರಾ ನೀಡಲಾಗಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ51 ಪ್ರೊಸೆಸರ್ ಮತ್ತು ಸ್ಟೋರೇಜ್
ಈ ಫೋನಿನ ಪ್ರೊಸೆಸರ್ ಬಗ್ಗೆ ಮಾತನಾಡಬೇಕೆಂದರೆ ಇದು ತಮ್ಮದೇಯಾದ Exynos 9611 ಓಕ್ಟಾ ಕೋರ್ 2.3GHz ಪ್ರೊಸೆಸರ್ ಅನ್ನು ಆಧರಿಸಿ ಆಂಡ್ರಾಯ್ಡ್ 10.0 ಆಪರೇಟಿಂಗ್ ಸಿಸ್ಟಮ್ OneUI 2.0 ಮೇಲೆ ರನ್ ಮಾಡುತ್ತದೆ. ಈ ಫೋನ್ 6GB ಮತ್ತು 8GB ಯ RAM ಒಳಗೊಂಡಿದೆ. ಇದರ ಇದರ ಕ್ರಮವಾಗಿ 128GB ಸ್ಟೋರೇಜ್ ನೀಡಲಾಗಿದೆ. ಇದರಲ್ಲಿ ಮೈಕ್ರೊ SD ಕಾರ್ಡ್ ಸಹಾಯದಿಂದ 512GB ವರೆಗೆ ಇದರ ಸ್ಟೋರೇಜನ್ನು ವಿಸ್ತರಿಸಬವುದು. ಜೊತೆಗೆ ಈ ಸ್ಮಾರ್ಟ್ಫೋನ್ ಗೇಮರ್ಗಳನ್ನು ಗಮನದಲ್ಲಿಟ್ಟುಕೊಂಡು ಗೇಮ್ ಬೋಸ್ಟರ್ 2.0 ಸಹ ಅವಲಂಭಿಸಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ51 ಬ್ಯಾಟರಿ ಮತ್ತು ಕನೆಕ್ಟಿವಿಟಿ
ಇದರಲ್ಲಿ ಲಿ-ಐಯಾನ್ ಬ್ಯಾಟರಿಯಿಂದ ನಿಯಂತ್ರಿಸಲ್ಪಡುವ 4000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದೆ. ಇದು ಬಳಕೆದಾರರಿಗೆ ಹೆಚ್ಚು ಗಂಟೆಗಳ ಕಾಲ ಗೇಮಿಂಗ್ ಮತ್ತು ಸೋಶಿಯಲ್ ಮೀಡಿಯಾ ಬ್ರೌಸ್ ಮಾಡಲು ಅನುವು ಮಾಡಿಕೊಡುತ್ತದೆ. ಇದು 15w ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದ್ದು ಅದು ಕಡಿಮೆ ಸಮಯದಲ್ಲಿ ಬ್ಯಾಟರಿಯನ್ನು ವೇಗವಾಗಿ ಪುನಃ ತುಂಬಿಸುತ್ತದೆ. ಈ ಸ್ಮಾರ್ಟ್ಫೋನ್ USB ಟೈಪ್-ಸಿ ಮತ್ತು 3.5mm ಆಡಿಯೋ ಜಾಕನ್ನು ಒಳಗೊಂಡಿರುವುದರೊಂದಿಗೆ ಇನ್ನು ಮುಂತಾದ ಹಲವು ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ51 ಬೆಲೆ ಮತ್ತು ಲಭ್ಯತೆ
ಕೊನೆಯದಾಗಿ ಈ Samsung Galaxy A51 ಮಿಡ್ ರೆಂಜಿನ ಸ್ಮಾರ್ಟ್‌ಫೋನ್ ಆಗಿದ್ದು ಉತ್ತಮವಾದ ಸ್ಪೆಕ್ಸ್ ಜೊತೆಗೆ ಬರುತ್ತದೆ. ಇದರ ಕ್ಯಾಮೆರಾ ಅತ್ಯುತ್ತಮವಾದ ಇಮೇಜ್ಗಳನ್ನು ಸೆರೆಹಿಡಿಯಲು ಹೆಚ್ಚು ಸಹಕರಿಸುತ್ತದೆ. ಇದರಲ್ಲಿನ ಉತ್ತಮ ಗೇಮಿಂಗ್ ಅನುಭವಕ್ಕಾಗಿ ಒಮ್ಮೆ ಕೈ ತಟ್ಟಬವುದು. ಅಲ್ಲದೆ ಎದರಲ್ಲಿಂಜ ಧೀರ್ಘಕಾಲದ ಪವರ್ ಸಪ್ಲೈ ಒದಗಿಸಿ ವೇಗವಾಗಿ ಫೋನ್ ಚಾರ್ಜ್ ಮಾಡಲು ಬೆಂಬಲಿಸುತ್ತದೆ. ಅಲ್ಲೆಲ್ಲ ಒಳಗೊಂಡಿರುವ Samsung Galaxy A51 ಸರಿ ಸುಮಾರು 23,999 ರೂಗಳಿಂದ ಇದರ ಬೆಲೆಯನ್ನು ಶುರು ಮಾಡುತ್ತದೆ. ನಾಳೆ ಅಂದ್ರೆ 31ನೇ ಜನವರಿ 2020 ರಂದು ಇದರ ಮೊದಲ ಸೇಲ್ ಶುರುವಾಗಲಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile