Samsung Galaxy A51 ಫೋನ್ ಬಿಡುಗಡೆ, ಇದರ ನಿರೀಕ್ಷಿತ ಬೆಲೆ ಎಷ್ಟಾಗಿರಬವುದು!

Updated on 29-Jan-2020
HIGHLIGHTS

ಭಾರತದಲ್ಲಿ ಹೊಸ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಇಂದು ಬಿಡುಗಡೆಯಾಗುತ್ತಿದೆ. ಈ ಸ್ಮಾರ್ಟ್‌ಫೋನ್ Samsung Galaxy A51 ಆಗಿದೆ. ಇದು ಸ್ಯಾಮ್‌ಸಂಗ್‌ನ A ಸರಣಿಯ ಇತ್ತೀಚಿನ ಸ್ಮಾರ್ಟ್‌ಫೋನ್ ಆಗಿರುತ್ತದೆ. Samsung Galaxy A51 ಸ್ಮಾರ್ಟ್ಫೋನ್ ಅನ್ನು ಕಳೆದ ತಿಂಗಳು ಈ ಸ್ಮಾರ್ಟ್ಫೋನ್ ವಿಯೆಟ್ನಾಂನಲ್ಲಿ ಬಿಡುಗಡೆ ಮಾಡಿತು. ಈ ಸ್ಮಾರ್ಟ್‌ಫೋನ್ ಈ ಹಿಂದೆ ಬಿಡುಗಡೆಯಾದ Galaxy A50 ಫೋನಿನ ಯಶಸ್ಸಿನ ಮತ್ತೊಂದು ಹೆಜ್ಜೆಯಾಗಿದೆ. ಈ ಸ್ಮಾರ್ಟ್‌ಫೋನ್ ಇನ್ಫಿನಿಟಿ ಒ ಡಿಸ್ಪ್ಲೇ ಮತ್ತು ಪಂಚ್ ಹೋಲ್ ಫ್ರಂಟ್ ಕ್ಯಾಮೆರಾದೊಂದಿಗೆ ಬರಬಹುದು.

ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 10 ಆಪರೇಟಿಂಗ್ ಸಿಸ್ಟಮ್ ಆಧಾರಿತ ಕಂಪನಿಯ ಒನ್ UI 2.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ Samsung Galaxy A51 ಸ್ಮಾರ್ಟ್‌ಫೋನ್‌ಗೆ 6GB / 8GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ಗಳಲ್ಲಿ ಬರುವ ನಿರೀಕ್ಷೆಯಿದೆ. ಅಲ್ಲದೆ ಬಳಕೆದಾರರು ಮೈಕ್ರೊ ಎಸ್ಡಿ ಕಾರ್ಡ್ ಮೂಲಕ ಫೋನ್ ಸುಮಾರು 512GB ವರೆಗೆ ಹೆಚ್ಚಿಸುವ ಅವಕಾಶ ಒಳಗೊಂಡಿರಬವುದು. ಈ ಸ್ಮಾರ್ಟ್ಫೋನ್ ಹಿಂಭಾಗದಲ್ಲಿ ಕ್ವಾಡ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಇದರ ಫೋನ್‌ನ ಹಿಂಭಾಗದಲ್ಲಿ 48MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾವನ್ನು ನೀಡಲಾಗಿದೆ.

https://twitter.com/SamsungIndia/status/1214913209217490945?ref_src=twsrc%5Etfw

ಇದಲ್ಲದೆ ಈ ಫೋನ್‌ ಹಿಂಭಾಗದಲ್ಲಿ 5MP ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು 5MP ಮೆಗಾಪಿಕ್ಸೆಲ್ ಡೆಪ್ತ್ ಲೆನ್ಸ್ ಮತ್ತು 12MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ನಿರೀಕ್ಷಿಸಬವುದು. ಇದರಲ್ಲಿ ಸೆಲ್ಫಿಗಾಗಿ ಮುಂಭಾಗದಲ್ಲಿ 32MP ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಒದಗಿಸುವ ಗುರಿ ಹೊಂದಿರಬವುದು. ಈ ಸ್ಮಾರ್ಟ್‌ಫೋನ್ 4000mAh ಬ್ಯಾಟರಿಯನ್ನು ಹೊಂದಿದ್ದು 15w ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. 

ಈ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ನೀಲಿ, ಪಿಂಕ್, ಪ್ರಿಸ್ಮ್ ಕ್ರಷ್ ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಬರಬಹುದು. ಈ ಸ್ಮಾರ್ಟ್‌ಫೋನ್‌ನೊಂದಿಗೆ Samsung Galaxy A71 ಅನ್ನು ಸಹ ಬಿಡುಗಡೆ ಮಾಡಬಹುದು ಎಂದು ವರದಿಯಾಗಿದೆ. ಆದರೆ ಈ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವುದನ್ನು ಕಂಪನಿಯು ಇನ್ನೂ ಖಚಿತಪಡಿಸಿಲ್ಲ. ಇವೇಲ್ಲಾ Samsung Galaxy A51 ಸ್ಮಾರ್ಟ್‌ಫೋನಿನ ನಿರೀಕ್ಷಿತ ಫೀಚರ್ ಮತ್ತು ಸ್ಪೆಸಿಫಿಕೇಷನ್ ಆಗಿದೆ. ಇಂದು ಬಿಡುಗಡೆಯಾದ ನಂತರ ಇದರ ಖಚಿತ ಮಾಹಿತಿ ನಿಮಗೆ ತಿಳಿಸಲಿದ್ದೇನೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :