ಸ್ಯಾಮ್‌ಸಂಗ್‌ನಿಂದ 50MP ಕ್ಯಾಮೆರಾದ Galaxy A25 5G ಲಾಂಚ್! ಬೆಲೆ ಮತ್ತು ಟಾಪ್ 5 ಫೀಚರ್ ತಿಳಿಯಿರಿ | Tech News

ಸ್ಯಾಮ್‌ಸಂಗ್‌ನಿಂದ 50MP ಕ್ಯಾಮೆರಾದ Galaxy A25 5G ಲಾಂಚ್! ಬೆಲೆ ಮತ್ತು ಟಾಪ್ 5 ಫೀಚರ್ ತಿಳಿಯಿರಿ | Tech News
HIGHLIGHTS

ಸ್ಯಾಮ್‌ಸಂಗ್ ಭಾರತದಲ್ಲಿ Samsung Galaxy A25 5G ಮತ್ತು Samsung Galaxy A15 5G ಬಿಡುಗಡೆಗೊಳಿಸಿದೆ.

ಸ್ಮಾರ್ಟ್ಫೋನ್ 5000mAh ಬ್ಯಾಟರಿ, 50MP ಪ್ರೈಮರಿ ಕ್ಯಾಮೆರಾ ಮತ್ತು AMOLED ಡಿಸ್ಪ್ಲೇಯಂತಹ ಹೊಸ ಫೀಚರ್ಗಳನ್ನು ಹೊಂದಿದೆ.

ಸುಮಾರು 25,000 ರಿಂದ 30,000 ರೂಗಳಲ್ಲಿ ಲೇಟೆಸ್ಟ್ ಫೀಚರ್‌ಗಳೊಂದಿಗೆ ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

ದಕ್ಷಿಣ ಕೊರಿಯಾದ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ಸ್ಯಾಮ್‌ಸಂಗ್ ಭಾರತದಲ್ಲಿ Samsung Galaxy A25 5G ಮತ್ತು Samsung Galaxy A15 5G ಬಿಡುಗಡೆಗೊಳಿಸಿದೆ. ಸ್ಯಾಮ್‌ಸಂಗ್‌ ತನ್ನ A ಸರಣಿಯನ್ನು ಮತ್ತಷ್ಟು ವಿಸ್ತರಿಸಲು ಈ ಎರಡು 5G ಸ್ಮಾರ್ಟ್‌ಫೋನ್‌ಗಳನ್ನು ಸುಮಾರು 25,000 ರಿಂದ 30,000 ರೂಗಳಲ್ಲಿ ಲೇಟೆಸ್ಟ್ ಫೀಚರ್‌ಗಳೊಂದಿಗೆ ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಆದರೆ ಇಲ್ಲಿ ನಾವು ಕೇವಲ Samsung Galaxy A25 5G ಬಗ್ಗೆ ಮಾತ್ರ ವಿವರಿಸಲಿದ್ದು 5000mAh ಬ್ಯಾಟರಿ, 50MP ಪ್ರೈಮರಿ ಕ್ಯಾಮೆರಾ ಮತ್ತು AMOLED ಡಿಸ್ಪ್ಲೇಯಂತಹ ಹೊಸ ಫೀಚರ್ಗಳನ್ನು ಹೊಂದಿದ್ದು ಇದನ್ನು ಖರೀದಿಸಲು ಯೋಚಿಸುತ್ತಿದ್ದರೆ ಒಮ್ಮೆ ಇದರ ಟಾಪ್ 5 ಫೀಚರ್ಗಳನ್ನು ತಿಳಿಯಿರಿ.

Also Read: 5G Phones Under 15000: ಲೇಟೆಸ್ಟ್ 5G ಫೋನ್ ಬೇಕಾ? ಹಾಗಾದ್ರೆ ಇವೇ ನೋಡಿ Affordable ಸ್ಮಾರ್ಟ್‌ಫೋನ್‌ಗಳು

Samsung Galaxy A25 5G ಬೆಲೆ ಮತ್ತು ಲಭ್ಯತೆ

ಈ ಸ್ಯಾಮ್‌ಸಂಗ್ ಬೆಲೆಯ ಬಗ್ಗೆ ನೋಡುವುದಾದರೆ ಫೋನ್ ಭಾರಿ ರಿಯಾಯಿತಿಯೊಂದಿಗೆ ಬರುತ್ತದೆ. ಸ್ಮಾರ್ಟ್ಫೋನ್ ನಿಮಗೆ ಒಟ್ಟಾರೆಯಾಗಿ ಎರಡು ವೇರಿಯೆಂಟ್ಗಳಲ್ಲಿ ಲಭ್ಯವಿದ್ದು ಖರೀದಿಯ ಸಮಯದಲ್ಲಿ SBI ಕಾರ್ಡ್‌ಗಳನ್ನು ಬಳಸುವ ಗ್ರಾಹಕರಿಗೆ ಸ್ಯಾಮ್‌ಸಂಗ್ ₹3,000 ರಿಯಾಯಿತಿಯನ್ನು ನೀಡುತ್ತದೆ. ಫೋನ್ ಲೈಟ್ ಬ್ಲೂ, ಲೈಟ್ ಬ್ಲೂ ಬ್ಲಾಕ್ ಮತ್ತು ಲೈಟ್ ಯಲ್ಲೋ ಬಣ್ಣಗಳಲ್ಲಿ ಲಭ್ಯವಿದೆ. ಇದರ ಮೊದಲ 8GB RAM – 128GB ಸ್ಟೋರೇಜ್ ₹26,999 ರೂಗಳಾಗಿವೆ. ಇದರ ಕ್ರಮವಾಗಿ 8GB RAM – 256GB ಸ್ಟೋರೇಜ್ ₹29,999 ರೂಗಳಾಗಿವೆ. ಸ್ಮಾರ್ಟ್ಫೋನ್ ಮಾರಾಟವನ್ನು ಕಂಪನಿ ಇನ್ನು ಅಧಿಕೃತವಾಗಿ ಘೋಷಿಸಿಲ್ಲ ಅಲ್ಲದೆ ಕಂಪನಿಯ ವೆಬ್‍ಸೈಟ್‍ನಲ್ಲೂ ಇನ್ನೂ ಪಟ್ಟಿ ಮಾಡಿಲ್ಲ.

Samsung Galaxy A25 5G

ಸ್ಯಾಮ್‌ಸಂಗ್‌ Galaxy A25 5G ಕ್ಯಾಮೆರಾ ವಿವರ

ಇದರ ಕ್ಯಾಮೆರಾ ಸಾಮರ್ಥ್ಯಗಳನ್ನು ನೋಡುವುದಾದರೆ ಫೋನ್ 50MP ಪ್ರೈಮರಿ ಲೆನ್ಸ್ ಜೊತೆಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಫೀಚರ್ನೊಂದಿಗೆ ನಿಮಗೆ ಉತ್ತಮ ಇಮೇಜ್ ಮತ್ತು ವಿಡಿಯೋಗಳನ್ನು ಪಡೆಯಲು ಹೆಚ್ಚು ಅನುಕೂಲಕರವಾಗಿಸುತ್ತದೆ. ಎರಡನೇಯದಾಗಿ ಇದರಲ್ಲಿ ನಿಮಗೆ 8MP ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಮತ್ತು ಕೊನೆಯದಾಗಿ 2MP ಮ್ಯಾಕ್ರೋ ಸೆನ್ಸರ್ ಒಳಗೊಂಡಿದೆ. ಫೋನ್ ನಾಚ್ ಡಿಸ್ಪ್ಲೇಯೊಳಗೆ ಸೆಲ್ಫಿಗಳಿಗಾಗಿ 13MP ಕ್ಯಾಮೆರಾ ಸೆನ್ಸರ್ ಅನ್ನು ನೀಡಿದೆ.

ಸ್ಯಾಮ್‌ಸಂಗ್‌ Galaxy A25 5G ಡಿಸ್ಪ್ಲೇ ವಿವರ

ಇದರ ಡಿಸ್ಪ್ಲೇ ಮತ್ತು ಡಿಸೈನಿಂಗ್ ನೋಡುವುದಾದರೆ 6.5 ಇಂಚಿನ FHD+ ಸೂಪರ್ AMOLED ಡಿಸ್ಪ್ಲೇಯನ್ನು 120Hz ರಿಫ್ರೆಶ್ ದರ ಮತ್ತು 1000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ 1080 x 2340 ಪಿಕ್ಸೆಲ್ ರೆಸುಲ್ಯೂಷನ್ ಅನ್ನು ಹೊಂದಿದೆ. ಡಿಸ್ಪ್ಲೇಯಲ್ಲಿ ಹೆಚ್ಚು ಶಾರ್ಪ್ ಮತ್ತು ಕ್ಲಿಯರ್ ವೀಕ್ಷಣೆಯನ್ನು ನೀಡಲು 396ppi ಡೆನ್ಸಿಟಿಯನ್ನು ಹೊಂದಿದೆ. ಅಲ್ಲದೆ ಫೋನ್ ನಿಮಗೆ ಕಣ್ಣುಗಳನ್ನು ಬ್ಲೂ ಲೈಟ್‌ನಿಂದ ರಕ್ಷಿಸಲು Eye Comfort Shield ಟೆಕ್ನಾಲಜಿಯನ್ನು ಸಹ ಹೊಂದಿದೆ. ವಾಟರ್‌ಡ್ರಾಪ್ ಶೈಲಿಯ ಡಿಸ್‌ಪ್ಲೇ ನಾಚ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A25 5G ಹಾರ್ಡ್ವೇರ್ ವಿವರ

ಇದರ ಕಾರ್ಯಕ್ಷಮತೆ ಮತ್ತು ಸ್ಟೋರೇಜ್ Galaxy A25 5G ಆಕ್ಟಾ-ಕೋರ್ Exynos 1280 ಚಿಪ್ 5 ನ್ಯಾನೋ ಮೀಟರ್ ಪ್ರೊಸೆಸರ್‌ನೊಂದಿಗೆ ಇದರ ಸಿಪಿಯು 2.4GHz ಜೊತೆಗೆ Mali-G68 ಜಿಪಿಯು ಮೂಲಕ ಚಾಲಿತವಾಗಿದೆ. ಅಂದ್ರೆ ನಿಮಗೆ ಅತ್ಯುತ್ತಮ ಪರ್ಫಾರ್ಮೆನ್ಸ್ ನೀಡಲು ಪೂರ್ತಿಯಾಗಿದೆ ತಯಾರಿದೆ. ಫೋನ್ 8GB RAM ಮತ್ತು 256GB ವರೆಗಿನ ಇಂಟರ್ನಲ್ ಸ್ಟೋರೇಜ್ ಅನ್ನು ಫೋನ್ ಹೊಂದಿದೆ. ಈ ಸ್ಮಾರ್ಟ್ಫೋನ್ ನಿಮಗೆ 8GB RAM ಮತ್ತು 128GB ಸ್ಟೋರೇಜ್ ಕ್ರಮವಾಗಿ 8GB RAM ಮತ್ತು 256GB ಸ್ಟೋರೇಜ್ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ 14 ಆಧಾರಿತ One UI6 ನಲ್ಲಿ ಕಾರ್ಯನಿರ್ವಹಿಸುತ್ತವೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A25 5G ಬ್ಯಾಟರಿ ಮತ್ತು ಸೆನ್ಸರ್ ವಿವರ

ಸ್ಮಾರ್ಟ್ಫೋನ್ 5G ಬೆಂಬಲದೊಂದಿಗೆ Wi-Fi, ಬ್ಲೂಟೂತ್, GPS, 3.5mm ಹೆಡ್‌ಫೋನ್ ಜ್ಯಾಕ್ ಮತ್ತು USB ಟೈಪ್-ಸಿ ಪೋರ್ಟ್ ಅನ್ನು ಒಳಗೊಂಡಿವೆ. ಅಲ್ಲದೆ Dolby Atmos ಟೆಕ್ನಾಲಜಿಯನ್ನು ಸಹ ಒಳಗೊಂಡಿರುವ ಸ್ಪೀಕರ್‌ಗಳೊಂದಿಗೆ ಆಡಿಯೊ ಅನುಭವವನ್ನು ಹೆಚ್ಚಿಸುತ್ತದೆ. ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಹೊಂದಿದ್ದು ಬೃಹತ್ 5000mAh ಬ್ಯಾಟರಿಯಿಂದ 25W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಒಂದೇ ಚಾರ್ಜ್‌ನಲ್ಲಿ ಬ್ಯಾಟರಿಗಳು 21 ಗಂಟೆಗಳವರೆಗೆ ವೀಡಿಯೊ ಪ್ಲೇಬ್ಯಾಕ್ ಅನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo