6550mAh ಬ್ಯಾಟರಿಯೊಂದಿಗೆ Redmi Turbo 4 ಸ್ಮಾರ್ಟ್‌ಫೋನ್ ಲಾಂಚ್! ಟಾಪ್ ಫೀಚರ್ ಮತ್ತು ಬೆಲೆ ಎಷ್ಟು?

Updated on 02-Jan-2025
HIGHLIGHTS

Redmi Turbo 4 ಸ್ಮಾರ್ಟ್ಫೋನ್ ಚೀನಾದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದೆ.

Redmi Turbo 4 ಬರೋಬ್ಬರಿ 6550 mAh ಬ್ಯಾಟರಿ 90W ಫಾಸ್ಟ್ ಚಾರ್ಜರ್ನೊಂದಿಗೆ ಬರುತ್ತದೆ.

Redmi Turbo 4 ಸ್ಮಾರ್ಟ್ಫೋನ್ ಚೀನಾದಲ್ಲಿ ಒಟ್ಟು 4 ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ.

Redmi Turbo 4 Launched in China: ಚೀನಾದಲ್ಲಿ ಜನಪ್ರಿಯ ಸ್ಮಾರ್ಟ್ಫೋನ್ ತಯಾರಕ ಕಂಪನಿ ತನ್ನ ಲೇಟೆಸ್ಟ್ Redmi Turbo 4 ಎಂಬ ಹೊಸ ಸ್ಮಾರ್ಟ್ ಫೋನ್ ಅನ್ನು ಸದ್ದಿಲ್ಲದೆ ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಈ ಸ್ಮಾರ್ಟ್ಫೋನ್ MediaTek Dimensity 8400 Ultra ಮತ್ತು ಬರೋಬ್ಬರಿ 6550 mAh ಬ್ಯಾಟರಿಯನ್ನು 90W ಫಾಸ್ಟ್ ಚಾರ್ಜ್ ಬೆಂಬಲದೊಂದಿಗೆ ಬರುತ್ತದೆ. ಲೇಟೆಸ್ಟ್ Redmi Turbo 4 ಸ್ಮಾರ್ಟ್ಫೋನ್ ಬೆಲೆ ಮತ್ತು ಟಾಪ್ ಹೈಲೈಟ್ ಫೀಚರ್ ಮತ್ತು ವಿಶೇಷತೆಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ಪಡೆಯಬಹುದು.

ಚೀನಾದ Redmi Turbo 4 ಬೆಲೆ ಮತ್ತು ಲಭ್ಯತೆಯ ಮಾಹಿತಿ:

ಸ್ಮಾರ್ಟ್ಫೋನ್ ಅನ್ನು ಕಂಪನಿ ಈಗಾಗಲೇ ಮೇಲೆ ತಿಳಿಸಿರುವಂತೆ ಒಟ್ಟು 4 ರೂಪಾಂತರಗಳಲ್ಲಿ ಪರಿಚಯಿಸಿದ್ದು ಆರಂಭಿಕ 12GB RAM ಮತ್ತು 256GB ಸ್ಟೋರೇಜ್ ಅನ್ನು CNY 1999 (ಸುಮಾರು 23,488 ರೂಗಳು) ಮತ್ತು ಇದರ 16GB RAM ಮತ್ತು 256GB ಸ್ಟೋರೇಜ್ ಅನ್ನು CNY 2199 (ಸುಮಾರು 25,838 ರೂಗಳು) ಆಗಿದೆ.

Redmi Turbo 4 Launched in China

ಮತ್ತೊಂದು 12GB RAM ಮತ್ತು 512GB ಸ್ಟೋರೇಜ್ ಅನ್ನು CNY 2299 (ಸುಮಾರು 27,013 ರೂಗಳು) ಮತ್ತು ಕೊನೆಯದಾಗಿ ಇದರ 16GB RAM ಮತ್ತು 512GB ಸ್ಟೋರೇಜ್ ಅನ್ನು CNY 2499 (ಸುಮಾರು 29,363 ರೂಗಳು) ಆಗಿದೆ. ಇದನ್ನು ಆಸಕ್ತರು ಚೀನಾದಲ್ಲಿ Shadow Black, Shallow Sea Blue ಮತ್ತು Lucky Cloud White ಎಂಬ ಮೂರು ಆಕರ್ಷಕ ಬಣ್ಣಗಳಲ್ಲಿ ಖರೀದಿಸಬಹುದು.

Also Read: Reliance Jio 2025 Plan: ಸುಮಾರು 11 ತಿಂಗಳಿಗೆ ಅನ್ಲಿಮಿಟೆಡ್ ಕರೆ ಮತ್ತು ಡೇಟಾ ಕೇವಲ 895 ರೂಗಳಿಗೆ ಲಭ್ಯ!

ಚೀನಾದ Redmi Turbo 4 ಫೀಚರ್ ಮತ್ತು ವಿಶೇಷತೆಗಳೇನು?

Redmi Turbo 4 ಸ್ಮಾರ್ಟ್ಫೋನ್ 6.67 ಇಂಚಿನ TCL Huaxing 1.5K ಫ್ಲಾಟ್ OLED ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್, 3200nits nits ಪೀಕ್ ಬ್ರೈಟ್‌ನೆಸ್, 1920Hz PWM ಡಿಮ್ಮಿಂಗ್, HDR10+, ಮತ್ತು ಡಾಲ್ಬಿ ವಿಷನ್ ಬೆಂಬಲವನ್ನು ಹೊಂದಿದೆ. Redmi Turbo 4 ಸ್ಮಾರ್ಟ್ಫೋನ್ OIS ನೊಂದಿಗೆ 50MP ಸೋನಿ LYT-600 ಪ್ರೈಮರಿ ಕ್ಯಾಮೆರಾವನ್ನು ಮತ್ತೊಂದು 8MP ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ ಸೆಲ್ಫಿಗಾಗಿ ಸ್ಮಾರ್ಟ್ಫೋನ್ 20MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.

Redmi Turbo 4 Launched in China

ಈ Redmi Turbo 4 ಸ್ಮಾರ್ಟ್ಫೋನ್ ಹೊಸ MediaTek Dimensity 8400 Ultra ಚಿಪ್ಸೆಟ್ನಿಂದ ಚಾಲಿತವಾಗಿದೆ. ಈ ಸ್ಮಾರ್ಟ್ಫೋನ್ 90W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 6550 mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಈ Redmi Turbo 4 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಆಧಾರಿತ HyperOS 2 ಅನ್ನು ರನ್ ಮಾಡುತ್ತದೆ. Redmi Turbo 4 ಸ್ಮಾರ್ಟ್ಫೋನ್ ಸಹ IP66/IP67/IP68 ರೇಟಿಂಗ್, ಡ್ಯುಯಲ್-ಫ್ರೀಕ್ವೆನ್ಸಿ GPS ಮತ್ತು ಬಹು-ಕಾರ್ಯ NFC ನೊಂದಿಗೆ ಬರುತ್ತದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :