ಭಾರತದಲ್ಲಿ ಈ ವರ್ಷ 2020 ರ ಮಾರ್ಚ್ 12 ರಂದು ಭಾರತದ ನಂಬರ್ 1 ಸ್ಮಾರ್ಟ್ಫೋನ್ ಬ್ರಾಂಡ್ ಆಗಿರುವ Xiaomi ತನ್ನ ಮತ್ತೊಂದು Redmi Note 9 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈವರೆಗಿನ ಸೋರಿಕೆಯಲ್ಲಿ ಈ ಸರಣಿಯಲ್ಲಿ ಎರಡು ಫೋನ್‌ಗಳಿದ್ದು ಒಂದು Redmi Note 9 ಮತ್ತೊಂದು Redmi Note 9 Pro Max ಆಗಿರುವುದಾಗಿ ಹೇಳಲಾಗಿದೆ. ಆದರೆ ಈ Redmi Note 9 Pro ಸ್ಮಾರ್ಟ್ಫೋನಿನ ಒಂದೆರಡು ವಿಶೇಷಣಗಳು ಈಗಾಗಲೇ ಸೋರಿಕೆಯಾಗಿದ್ದರೆ ಮುಂಬರುವ ಸ್ಮಾರ್ಟ್ಫೋನ್ಗಳ ಮಾಹಿತಿಯನ್ನು ಸೋರಿಕೆಯ ಆಧಾರದ ಮೇರೆಗೆ ನಿಮಗೆ ಇಲ್ಲಿ ತಿಳಿಸಲಾಯಿದ್ದೇನೆ.
ಈ Redmi Note 9 Pro ಸ್ಮಾರ್ಟ್ಫೋನ್ 6.67 ಇಂಚಿನ LCD ಪ್ಯಾನಲ್ ಜೊತೆಗೆ FHD+ ರೆಸಲ್ಯೂಶನ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್ ಹೊಂದಿದೆ. ಸ್ಮಾರ್ಟ್‌ಫೋನ್‌ನ ಹಿಂದಿನ ಕ್ಯಾಮೆರಾ ಸೆಟಪ್‌ನಲ್ಲಿ 48MP ಪ್ರೈಮರಿ ಕ್ಯಾಮೆರಾ 8MP ಅಲ್ಟ್ರಾವೈಡ್ ಕ್ಯಾಮೆರಾ 5MP ಮ್ಯಾಕ್ರೋ ಕ್ಯಾಮೆರಾ ಮತ್ತು 5MP ಡೆಪ್ತ್ ಸೆನ್ಸಾರ್ ಇರುತ್ತದೆ. ಸೆಲ್ಫಿ ಕ್ಯಾಮೆರಾದಲ್ಲಿ 16MP ಯುನಿಟ್ ಎಂದು ಹೇಳಲಾಗಿದೆ. ಫೋನಿನ ಪವರ್ ವಿಷಯದಲ್ಲಿ ಇದು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 720G ಚಿಪ್ಸೆಟ್ 2.23Ghz ಜೊತೆಗೆ ರನ್ ಮಾಡುತ್ತದೆ ಎಂದು ಹೇಳಲಾಗಿದೆ.
ಈ ಸ್ಮಾರ್ಟ್ಫೋನ್ ಆಯ್ಕೆ ಮಾಡಲು ನಿಮಗೆ ಎರಡು ಮೆಮೊರಿ ಸಂರಚನೆಗಳಲ್ಲಿ ಬರಲಿವೆಯಂತೆ. 4GB RAM + 64GB ಸ್ಟೋರೇಜ್ ಮತ್ತೊಂದು 6GB RAM + 128GB ಸ್ಟೋರೇಜ್ ರೇ RAM LPDDR4x ಆಗಿದ್ದು ಸ್ಟೋರೇಜ್ USF 2.1 ಆಗುವ ನಿರೀಕ್ಷೆಯಿದೆ. ಕೊನೆಯದಾಗಿ ಅದರ ಬ್ಯಾಟರಿ 18W ಚಾರ್ಜಿಂಗ್ ವೇಗದೊಂದಿಗೆ 5020mAh ಯುನಿಟ್ ಆಗಿರುತ್ತದೆ. ಈ ಎಲ್ಲಾ ವಿಶೇಷಣಗಳ ಜೊತೆಗೆ ಅರೋರಾ ಬ್ಲೂ, ಗ್ಲೇಸಿಯರ್ ವೈಟ್ ಮತ್ತು ಇಂಟರ್ ಸ್ಟೆಲ್ಲಾರ್ ಬ್ಲ್ಯಾಕ್ ಕಲರ್ ರೂಪಾಂತರಗಳಲ್ಲಿ Redmi Note 9 Pro ಲಭ್ಯವಿರುತ್ತದೆ ಎಂದು leakster ಬಹಿರಂಗಪಡಿಸುತ್ತದೆ.