Xiaomi ಕ್ವಾಡ್ ಕ್ಯಾಮೆರಾದೊಂದಿಗೆ ಈ ಸ್ಮಾರ್ಟ್ಫೋನ್ ಸರಣಿಯನ್ನು ಬಿಡುಗಡೆಗೊಳಿಸಲಿದೆ
Redmi Note 9 ಬಗ್ಗೆ ಮಾತನಾಡಿ ತಮ್ಮ ಪೋಸ್ಟ್ ನಲ್ಲಿ ಮತ್ತಷ್ಟು ಕುತೂಹಲ ಕೆರಳಿಸಲು 9ನೇ ಸಂಖ್ಯೆಯನ್ನು ಹಂಚಿಕೊಂಡಿದ್ದಾರೆ
ಸ್ನೇಹಿತರೇ ದೇಶದಲ್ಲಿ ಸದ್ಯಕ್ಕೆ ನಂಬರ್ 1 ಸ್ಮಾರ್ಟ್ಫೋನ್ ಬ್ರಾಂಡ್ ಆಗಿರುವ Xiaomi ಭಾರತದಲ್ಲಿ ನೋಟ್ ಫೋನ್ ಸರಣಿಯನ್ನು ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದೆ. ಕಂಪನಿಯು ಟ್ವಿಟರ್‌ನಲ್ಲಿ Redmi Note 9 ಸರಣಿ ಫೋನ್‌ಗಳನ್ನು ಶೀಘ್ರದಲ್ಲೇ ತರಲಿದೆ. ಈ ಹೊಸ Redmi Note 9 ಸರಣಿಯ ಫೋನ್ ಇದೇ ಮಾರ್ಚ್ 12 ರಂದು ಬಿಡುಗಡೆಯಾಗಲಿದೆ ಎಂದು Xiaomi ಇಂಡಿಯಾ ಮ್ಯಾನೆಜಿಂಗ್ ಡೈರೆಕ್ಟರ್ ಆಗಿರುವ ಮನು ಕುಮಾರ್ ಜೈನ್ ಟ್ವಿಟರ್‌ನಲ್ಲಿ ಪೋಸ್ಟ್ ಮೂಲಕ ತಿಳಿಸಿದ್ದಾರೆ. ಮನು Redmi Note 9 ಬಗ್ಗೆ ಮಾತನಾಡಿ ತಮ್ಮ ಪೋಸ್ಟ್ ನಲ್ಲಿ ಮತ್ತಷ್ಟು ಕುತೂಹಲ ಕೆರಳಿಸಲು 9ನೇ ಸಂಖ್ಯೆಯನ್ನು ಹಂಚಿಕೊಂಡಿದ್ದಾರೆ.
ಈ ಪೋಸ್ಟ್ನಲ್ಲಿ ಹಂಚಲಾದ 9ನೇ ಸಂಖ್ಯೆಯಲ್ಲಿ 4 ಕ್ಯಾಮೆರಾಗಳು ಗೋಚರಿಸುತ್ತವೆ. ಇದು Redmi Note 9 ನಲ್ಲಿ ಕ್ವಾಡ್ ಕ್ಯಾಮೆರಾ ಸೆಟಪ್ ಇರಬಹುದು ಎಂದು ಸೂಚಿಸುತ್ತದೆ. ಈ ಫೋನ್ Redmi Note 8 ಫೋನಿನ ಯಶಸ್ಸಿನ ದೊಡ್ಡಣ್ಣ ಆಗಿರುತ್ತದೆ.
Behold the answer to the most awaited question of 2020. Yes, the next #RedmiNote launches on March 12!
Brace yourselves because #ProCamerasMaxPerformance is going to be nothing like you've ever seen before!
RT with #ILoveRedmiNote to share this EPIC moment.#Xiaomi pic.twitter.com/NDwPjW9Wwh
— Manu Kumar Jain (@manukumarjain) March 2, 2020
ಈಗ Redmi Note 8 ಬಗ್ಗೆ ನೋಡುವುದಾದರೆ 6GB RAM ನೊಂದಿಗೆ ಬರುವ ಈ ಫೋನ್‌ನಲ್ಲಿ ಸ್ನಾಪ್‌ಡ್ರಾಗನ್ 665 ಪ್ರೊಸೆಸರ್ ಜೊತೆಗೆ ಆಂಡ್ರಾಯ್ಡ್ 9 ಪೈ ಆಧಾರಿತ MIUI 10 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. 6.39 ಇಂಚಿನ FHD+ ಡಿಸ್ಪ್ಲೇಯನ್ನು ಹೊಂದಿದೆ. ಇದು ಫೋಟೋಗ್ರಾಫಿಗಾಗಿ ಇದರಲ್ಲಿ ಕ್ವಾಡ್ ರೇರ್ ಕ್ಯಾಮೆರಾ ಸೆಟಪ್ ನೀಡಲಾಗಿದ್ದು 48MP ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಹೊಂದಿದ್ದು 8MP ಸೆಕೆಂಡರಿ ಸೆನ್ಸರ್ ಹೊಂದಿದ್ದು 2MP + 2MP ಡೆಪ್ತ್ ಮತ್ತು ಮ್ಯಾಕ್ರೋ ಸೆನ್ಸರ್ ಒಳಗೊಂಡಿದೆ. ಅಲ್ಲದೆ ಈ ಫೋನ್ ಸೆಲ್ಫಿಗಾಗಿ 13MP ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ.ಇದರಲ್ಲಿ 4000mAh ಬ್ಯಾಟರಿ ನೀಡಲಾಗಿದೆ. ಸದ್ಯಕ್ಕೆ ಈ ಸ್ಮಾರ್ಟ್ಫೋನ್ ಆರಂಭಿಕ ಬೆಲೆ ಕೇವಲ 10,499 ರೂಗಳಲ್ಲಿ ಲಭ್ಯವಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile