ಭಾರತದಲ್ಲಿ Xiaomi ಹೊಸ Redmi Note 7 Pro ಸ್ಮಾರ್ಟ್ಫೋನ್ ಅನ್ನು 13ನೇ ಮಾರ್ಚ್ 2019 ರಂದು ಮೊದಲ ಬಾರಿಗೆ ಮಾರಾಟ ಮಧ್ಯಾಹ್ನ 12:00 ಗಂಟೆಯಿಂದ ಪ್ರಾರಂಭವಾಗಿತ್ತು. ಇದನ್ನು ಗ್ರಾಹಕರು ಫ್ಲಿಪ್ಕಾರ್ಟ್ ನಲ್ಲಿ ಮೈಕಾರ್ಡ್ನಿಂದ ಖರೀದಿಸಬಹುದು. ಇದರ ಬೆಲೆ ಹೇಳಬೇಕೆಂದರೆ Redmi Note 7 ಫೋನ್ 3GB-32GB ಕೇವಲ 9999 ರೂಗಳಲ್ಲಿ ಬಂದ್ರೆ ಇದರ 4GB-64GB ರೂಪಾಂತರ 11,999 ರೂಗಳಲ್ಲಿ ಲಭ್ಯವಿದೆ. ಈಗ Redmi Note 7 Pro ಫೋನ್ 13,999 ಕ್ಕೆ ನಿಗದಿಪಡಿಸಿದೆ.
ಇದರ 4GB RAM + 64GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಅದೇ ಸಮಯದಲ್ಲಿ ಇದರ 6GB ಯ RAM ಮತ್ತು 128GB ರೂಪಾಂತರ ಕೇವಲ 16,999 ರೂಗಗಳೊಂದಿಗೆ ಈ ಎರಡು ಫೋನ್ಗಳು ಅನೇಕ ಕೊಡುಗೆಗಳನ್ನು ಸಹ ನೀಡಲಾಗುತ್ತಿವೆ. Redmi Note 7 ಮತ್ತು Redmi Note 7 Pro ಸ್ಮಾರ್ಟ್ಫೋನ್ಗಳ ಮುಂದಿನ ಸೇಲ್ 20ನೇ ಮಾರ್ಚ್ 2019 ರಂದು ನಡೆಯಲಿದೆ. ಜಿಯೋ ಮುಖ್ಯವಾಗಿ ಭಾರತದ ನಂಬರ್ 1 ಸ್ಮಾರ್ಟ್ಫೋನ್ ಬ್ರಾಂಡ್ ಆಗಿರುವ Xiaomi ಕಂಪನಿಯೊಂದಿಗೆ ಕೈ ಜೋಡಿಸಿದ್ದು ಗ್ರಾಹಕರು ಈ ಫೋನ್ ಖರೀದಿಯಲ್ಲಿ ಜಿಯೋ ಕೊಡುಗೆಗಳನ್ನು ಲಾಭ ಮಾಡಬಹುದು.
ಜಿಯೋ ಬಳಕೆದಾರರು 398, 299 ಮತ್ತು 198 ರೂಗಳ ರೀಚಾರ್ಜ್ ನಿಮಗೆ ಡಬಲ್ ಡೇಟಾವನ್ನು ನೀಡಲಾಗುವುದು. ಇದರಲ್ಲಿ ದಿನಕ್ಕೆ 4GB ಡೇಟಾವನ್ನು 70 ದಿನಗಳವರೆಗೆ ನೀಡುತ್ತದೆ. ಮತ್ತು 280 ದಿನಗಳವರೆಗೆ ಡಬಲ್ ಡೇಟಾ ಯೋಜನೆ ಮಾನ್ಯವಾಗಲಿದೆ. ಇದರಲ್ಲಿ 1592 ರೂಗಳನ್ನು 280 ದಿನಗಳವರೆಗೆ ಎರಡು ಡೇಟಾ ಪ್ಲಾನ್ಗಳನ್ನು ಪಡೆಯುತ್ತೀರಿ. ಒಟ್ಟಾರೆಯಾಗಿ ಹೇಳಬೇಕೆಂದರೆ 2400 ರೂಗಳ ಕ್ಯಾಶ್ ಬ್ಯಾಕ್ ಮತ್ತು 1120GB ಡೇಟಾವನ್ನು ಉಚಿತವಾಗಿ ಪಡೆಯಬವುದು.
ಈ ಎರಡು ಸ್ಮಾರ್ಟ್ಫೋನ್ ಕೇವಲ ಬಜೆಟ್ ಫೋನ್ ಮಾತ್ರವಲ್ಲದೆ Redmi Note 7 ಮತ್ತು Redmi Note 7 Pro ಫೋನಲ್ಲಿ ಸುಪೀರಿಯರ್ ಗ್ಲಾಸ್ ಡಿಸೈನ್ ಸಹ ಹೊಂದಿದೆ. ಇವು 2.5D ಕರ್ವ್ ಗೋರಿಲ್ಲಾ ಗ್ಲಾಸ್ v5 ಅನ್ನು ಹಿಂದೆ ಮತ್ತು ಮುಂದೆ ಎರಡು ಕಡೆಯಲ್ಲಿ ನೀಡಲಾಗಿದೆ. ಇವುಗಳ ಡಿಸ್ಪ್ಲೇ 6.3 ಇಂಚಿನ ಫುಲ್ HD+ LTPS ಡಾಟ್ ನಾಚ್ ಡಿಸ್ಪ್ಲೇಯನ್ನು ಹೊಂದಿದೆ. ಅಲ್ಲದೆ ಇದು 1.95 ಸಣ್ಣದಾದ ಬೆಝಲ್ಗಳೊಂದಿಗೆ ಬರುತ್ತದೆ. ಈಗಾಗಲೇ ಹೇಳಿರುವಂತೆ ಇದರ ಮೇಲ್ಭಾಗದಲ್ಲಿ ಡಾಟ್ ನಾಚ್ ಡಿಸ್ಪ್ಲೇಯನ್ನು ನೀಡಲಾಗಿದ್ದು ಇವೇರಡಲ್ಲಿ 13MP ಫ್ರಂಟ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ಈ Redmi Note 7 Pro ಹೊಸ ಕ್ವಾಲ್ಕಾಮ್ ಸ್ನ್ಯಾಪ್ಡ್ರಾಗನ್ 675 SoC ಓಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ. ಅಲ್ಲದೆ ಇದು ಇದರ ಹೈಯರ್ ಪ್ರೊಸೆಸರ್ ಆಗಿರುವ 710 ನಂತೆ ಕಾರ್ಯ ನಿರ್ವಯಿಸಲಿದೆಯಂತೆ. ಇದರಲ್ಲಿ ISP ಸಹ ಹೊಂದಿದ್ದು 48MP ಸಪೋರ್ಟ್ ಮಾಡುತ್ತದೆ. ಇದು 4GB-6GB ಯ RAM ಮತ್ತು 64GB-128GB ಸ್ಟೋರೇಜ್ ವೇರಿಯಂಟ್ಗಳಲ್ಲಿ ಬರುತ್ತದೆ.
Redmi Note 7 Pro ಸ್ಮಾರ್ಟ್ಫೋನ್ ರೆಡ್ಮಿಯ ಮೊಟ್ಟ ಮೊದಲ ಸ್ಮಾರ್ಟ್ಫೋನ್ ಸರಣಿಯಾಗಿದ್ದು ಟೈಪ್ ಸಿ ಪೋರ್ಟ್ ಅನ್ನು ಹೊಂದಿದ್ದು 18W ಕ್ವಿಕ್ ಚಾರ್ಜ್ 4.0 ಸಪೋರ್ಟ್ ಮಾಡುತ್ತದೆ. ಇದರ ಕ್ಯಾಮೆರಾದ ಬಗ್ಗೆ ಹೇಳಬೇಕೆಂದರೆ ಇದು 48MP + 5MP ಕ್ಯಾಮೆರಾದಲ್ಲಿ ಸೋನಿ IMX586 ಸೆನ್ಸರೊಂದಿಗೆ ಬರುತ್ತದೆ. ಇದೇ ರೀತಿಯ ಸೆನ್ಸರ್ Honor View 20 ಸಹ ನೀಡಲಾಗಿದೆ. ಇದು iPhone 10s ಮತ್ತು OnePlus 6T ಯಂತಹ ಕ್ಯಾಮೆರಾವನ್ನು ಹೊಂದಿದೆ.
ಆದರೆ Redmi Note 7 ನಿಮಗೆ 12MP + 2MP ಡುಯಲ್ ಕ್ಯಾಮೆರಾ ಸೆಪಟ್ ನೀಡಿದ್ದು ಗೈರೊ ಮತ್ತು EIS ಸೆನ್ಸರ್ ಆಯ್ಕೆಗಳನ್ನು ನೀಡುತ್ತದೆ.
ಟೈಪ್ ಸಿ ಪೋರ್ಟ್ ಅನ್ನು ಹೊಂದಿದ್ದು ಫಾಸ್ಟ್ 18W ಕ್ವಿಕ್ ಚಾರ್ಜ್ 4.0 ಸಪೋರ್ಟ್ ಮಾಡುತ್ತದೆ. ಇದರಲ್ಲಿ ನೈಟ್ ಫೋಟೋಗ್ರಫಿ ಮೂಡ್ ಸಹ ಹೊಂದಿದೆ. ಇದರಲ್ಲಿ ನೈಟ್ ಅಥವಾ ಲೋ ಲೈಟ್ ಶಾಟ್ಗಳನ್ನು ಅದ್ದೂರಿಯ ತೆಗೆಯಬವುದು. ಇದರಲ್ಲಿ ರಾತ್ರಿಯಲ್ಲಿ ತೆಗೆಯುವ ಶಾಟ್ಗಳಿಗಾಗಿ ಇಮೇಜ್ ಸ್ಟಬಿಲೈಝಷನ್ ನೀಡಿದ್ದು ಅದ್ದೂರಿಯ ಶಾಟ್ಗಳನ್ನು ಪಡೆಯಬವುದು.
ಈ Redmi Note 7 Pro ಸ್ಮಾರ್ಟ್ಫೋನಲ್ಲಿನ 48MP ತೆಗೆದ ನಾಲ್ಕು ಪಿಕ್ಸೆಲ್ಗಳಿಂದ ತೆಗೆದ ಪಿಕ್ಚರನ್ನು ಒಂದೇ ಇಮೇಜಾಗಿ ಹೊರ ತರುತ್ತದೆ. ಕೊನೆಯದಾಗಿ ಇದರ 5MP ಸೆನ್ಸರಲ್ಲಿ ಡೆಪ್ತ್ ಮೂಡಲ್ಲಿ ಪೋಟ್ರೇಟ್ ಶಾಟ್ಗಳನ್ನು ಪಡೆಯಬವುದು. ಇದರ ಫ್ರಂಟಲ್ಲು ಸಹ 16MP AI ಕ್ಯಾಮೆರಾ ಸಾಫ್ಟ್ವೇರ್ ಬೊಕೆ ಶಾಟ್ಗಳನ್ನು ತೆಗೆಯಲು ಸಹಕರಿಸುತ್ತದೆ. ಕೊನೆಯದಾಗಿ Redmi Note 7 ಮತ್ತು Redmi Note 7 Pro ನಿಮಗೆ 4000mAH ಬ್ಯಾಟರಿಯನ್ನು ಹೊಂದಿದೆ. ಇವು 8 ಘಂಟೆಯ ನಿಮ್ಮ ಗೇಮಿಂಗ್ ಸಮಯವನ್ನು ನೀಡುವುದಾಗಿ ಕಂಪನಿ ಭರವಸೆಯನ್ನು ನೀಡಿದೆ.